ಸಚಿವರ ಆದೇಶ: ಹೆದ್ದಾರಿ ಹೊಂಡಗಳಿಗೆ ಮುಕ್ತಿ
Team Udayavani, Sep 1, 2018, 12:48 PM IST
ಬೆಳ್ತಂಗಡಿ: ಕನ್ಯಾಡಿಯಲ್ಲಿ ನಡೆಯಲಿರುವ ಧರ್ಮ ಸಂಸದ್ನ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಕನ್ಯಾಡಿಯನ್ನು ಸಂಪರ್ಕಿಸುವ ಬಿ.ಸಿ. ರೋಡ್-ಉಜಿರೆ ಹೆದ್ದಾರಿಯ ಹೊಂಡಗಳಿಗೆ ಮುಕ್ತಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ಆದೇಶಿಸಿದ್ದು, ಪ್ರಸ್ತುತ ಹೊಂಡಗಳಿಗೆ ಜಲ್ಲಿ ಹಾಕಿ ಅದರ ಮೇಲೆ ವೆಟ್ಮಿಕ್ಸ್ ಹಾಕುವ ಕಾಮಗಾರಿ ನಡೆಯುತ್ತಿದೆ.
ಆ. 29ರಂದು ಸಚಿವರು ಧರ್ಮ ಸಂಸದ್ನ ಕುರಿತು ಎಲ್ಲ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ್ದು, ಮಂಗಳೂರಿನಿಂದ ಆಗಮಿಸಿದ ಸಚಿವರಿಗೆ ಹೆದ್ದಾರಿ ಹೊಂಡಗಳ ದುಃಸ್ಥಿತಿಯ ಅರಿವಾಗಿತ್ತು. ಹೀಗಾಗಿ ಸಭೆಯ ಆರಂಭದಲ್ಲೇ ಹೆದ್ದಾರಿ ಇಲಾಖೆಯವರನ್ನು ಹುಡುಕಿದ್ದರು. ಆದರೆ ಅವರು ಸಭೆಗೆ ಬಾರದ ಹಿನ್ನೆಲೆಯಲ್ಲಿ ದೂರವಾಣಿ ಮೂಲಕ ಹೊಂಡ ಮುಚ್ಚುವುದಕ್ಕೆ ಆದೇಶ ನೀಡಿದ್ದರು.
ಜತೆಗೆ ಕಾಟಾಚಾರಕ್ಕೆ ಹೊಂಡ ಮುಚ್ಚಬಾರದು. ಕಾಂಕ್ರೀಟ್ ಮಿಕ್ಸ್ ಮೂಲಕ ಜಲ್ಲಿ ಹಾಕಬೇಕು ಎಂದು ನಿರ್ದೇಶನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯ ಪ್ರವೃತ್ತರಾದ ಅಧಿಕಾರಿಗಳು ಗುತ್ತಿಗೆದಾರರ ಮೂಲಕ ಪ್ರಸ್ತುತ ಹೊಂಡ ಮುಚ್ಚುವ ಕಾರ್ಯ ಕೈಗೆತ್ತಿಕೊಂಡಿದ್ದಾರೆ. ಶುಕ್ರವಾರ ಬೆಳ್ತಂಗಡಿ ಪರಿಸರದಲ್ಲಿ ಹೊಂಡಕ್ಕೆ ವೆಟ್ಮಿಕ್ಸ್ ಹಾಕುವ ಕಾಮಗಾರಿ ನಡೆದಿದೆ. ಮಳೆಗಾಲ ಆರಂಭವಾದ ಬಳಿಕ ಹೆದ್ದಾರಿಯ ಹೊಂಡಗಳಿಗೆ ಇಲಾಖೆಯು ಹಲವು ಬಾರಿ ವೆಟ್ ಮಿಕ್ಸ್ ಹಾಕಿದ್ದರೂ ಮಳೆಯ ರಭಸಕ್ಕೆ ಒಂದೆರಡು ದಿನಗಳಲ್ಲೇ ಎದ್ದು ಹೋಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಹೊಸಪೇಟೆ: ಸ್ಕ್ಯಾನ್ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ
Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ
Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ
Gundlupete:ಮರಿಯಾನೆ ಬೇಟೆಗೆ ಹೊಂಚುಹಾಕುತ್ತಿದ್ದ ಹುಲಿ ಮೇಲೆ ತಾಯಿಯಾನೆ ದಾಳಿ:ವಿಡಿಯೋ ವೈರಲ್
Pakistan: ಪಾಕ್ ಸೇನೆ ಮತ್ತು ಇಮ್ರಾನ್ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್ ಐ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.