ಪೆಂಟ್‌ಹೌಸ್, ಹೆಚ್ಚುತ್ತಿದೆ ಕ್ರೇಝ್
Team Udayavani, Sep 1, 2018, 2:09 PM IST
ಗಾಜಿನ ಮನೆಯಲ್ಲಿ ವಾಸಿಸುವ ಕನಸು ಬಹುತೇಕ ಎಲ್ಲರಲ್ಲೂ ಇರುತ್ತದೆ. ಆದರೆ ನಮ್ಮ ಅನುಕೂಲಕ್ಕೆ ತಕ್ಕಂತೆ ಇದನ್ನು ನಿರ್ಮಿಸುವುದು ಕಷ್ಟ. ಪೆಂಟ್ ಹೌಸ್‌ಗಳು ಒಂದು ರೀತಿಯ ಗಾಜಿನ ಮನೆಗಳೇ. ಎತ್ತರದ ಕಟ್ಟಡದ ಕೊನೆಯ ಫ್ಲೋರ್‌ನಲ್ಲಿ ಪೆಂಟ್‌ಹೌಸ್ ಗಳನ್ನು ನಿರ್ಮಿಸಲಾಗುತ್ತದೆ. ಇದರ ಒಳಗೆ ಮಾತ್ರವಲ್ಲ ಹೊರಗಿನ ವಿನ್ಯಾಸವೂ ಆಕರ್ಷಕ ಹಾಗೂ ವಿಶೇಷವಾಗಿರುತ್ತದೆ. ಇದು ಸಾಮಾನ್ಯ ಮನೆಯಂತಲ್ಲ. ಈ ಮನೆಯೊಳಗೆ ಎಲ್ಲ ಸೌಲಭ್ಯವೂ ಇರುತ್ತದೆ. ಹೀಗಾಗಿ ಇದು ದುಬಾರಿ ಮನೆಯೂ ಹೌದು. ದೈನಂದಿನ ಒತ್ತಡಗಳನ್ನು ಮರೆತು ರಿಲ್ಯಾಕ್ಸ್ ಆಗಿ ಸಮಯ ಕಳೆಯ ಬೇಕು ಎನ್ನುವವರೇ ಹೆಚ್ಚಾಗಿ ಇಂಥ ಮನೆಗಳನ್ನು ಖರೀದಿಸುವುದು ವಿಶೇಷ.
‘ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು’ ಎಂಬ ಗಾದೆ ಮಾತೊಂದು ಪ್ರಚಲಿತದಲ್ಲಿದೆ. ಅದರರ್ಥ ಮನೆ ಮಾಡುವುದು ಹಾಗೂ ಮದುವೆ ಮಾಡುವುದು ತುಂಬಾ ಕಷ್ಟದ ಕೆಲಸ ಎನ್ನುವುದು. ಆದರೆ ಆಧುನಿಕತೆ, ತಂತ್ರಜ್ಞಾನ ಮುಂದುವರಿದ ಪರಿಣಾಮ ಮನೆ ಕಟ್ಟುವುದು ಸಮಸ್ಯೆಯಲ್ಲ ಮನೆಯನ್ನು ಸುಂದರ, ಆಕರ್ಷಕ ಹಾಗೂ ವಿಭಿನ್ನವಾಗಿ ಮಾಡುವುದು ಹೇಗೆ ಎನ್ನುವುದೇ ಹಲವರಿಗೆ ಬಹು ದೊಡ್ಡ ಸಮಸ್ಯೆಯಾಗುತ್ತಿದೆ.
ಮನೆಗಳನ್ನು ವಿಭಿನ್ನ ವಿನ್ಯಾಸಗಳಲ್ಲಿ ಮಾಡಿ ಅದಕ್ಕೆ ಇಂಟಿರಿಯರ್ ಡಿಸೈನರ್‌ಗಳ ಸಹಾಯ ಪಡೆದು ಮತ್ತಷ್ಟು ಸುಂದರಗೊಳಿಸುವ ಹುಮ್ಮಸ್ಸು ಬಹುತೇಕ ಮಂದಿಯಲ್ಲಿ ಇದೆ. ಅದಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುವ ಜನರಿದ್ದಾರೆ. ನಗರ ಮಧ್ಯದಲ್ಲಿ ಗುತ್ತಿನ ಮನೆ, ಕಾಡಲ್ಲಿ ಪುಟ್ಟ ಮನೆ, ವುಡನ್ ಹೌಸ್ ಹೀಗೆ ವಿಭಿನ್ನವಾಗಿ ಮನೆ ನಿರ್ಮಾಣ ಮಾಡುವುದು ಕೂಡ ಈಗಿನ ಟ್ರೆಂಡ್ ಆಗುತ್ತಿದೆ.
ರಿಲಾಕ್ಸ್‌ಗಾಗಿ ವಿಭಿನ್ನ ಮನೆಗಳ ಕಲ್ಪನೆ
ನಗರ ಮಧ್ಯದಲ್ಲಿ ಸುಂದರ ಮನೆ ಇದ್ದರೂ ದೈನಂದಿನ ಒತ್ತಡಗಳಿಂದ ನುಣುಚಿಕೊಳ್ಳುವ ಸಲುವಾಗಿ ಯಾರೂ ಇಲ್ಲದ ಕಡೆ ಮನೆಗಳನ್ನು ಕಟ್ಟಿಕೊಳ್ಳುವುದು, ಖರೀದಿಸುವುದು ನಟ, ನಟಿ ಹಾಗೂ ಉದ್ಯಮಿಗಳ ಹವ್ಯಾಸ. ಪ್ರಸ್ತುತ ಅದೇ ಟ್ರೆಂಡ್. ವಿದೇಶ ಪ್ರಯಾಣಕ್ಕೆ ಸಮಯ ಹೊಂದಿಸಿಕೊಳ್ಳುವುದು ಕಷ್ಟ ಎನ್ನುವ ಕಾರಣಕ್ಕೆ ಸಮೀಪದಲ್ಲೇ ಸುಂದರ ಮನೆಗಳನ್ನು ನಿರ್ಮಿಸಿ ಯಾರ ಸಂಪರ್ಕಕ್ಕೂ ಸಿಗದೆ ರಿಲಾಕ್ಸ್ ಮಾಡಿಕೊಳ್ಳುವ ಅನೇಕ ಮಂದಿಯೂ ಇದ್ದಾರೆ.
ಪೆಂಟ್‌ಹೌಸ್‌ಗಳಿಗೆ ಹೆಚ್ಚಿದ ಬೇಡಿಕೆ
ಪ್ರಸ್ತುತ ಜಾಗ ಖರೀದಿಸಿ ಮನೆ ಮಾಡುವಷ್ಟು ಸಮಯ, ಹಣ, ತಾಳ್ಮೆ ಬಹುತೇಕ ಮಂದಿಗಿಲ್ಲ. ಆ ಹಿನ್ನೆಲೆಯಲ್ಲಿ ರೆಡಿ ಟೂ ಲಿವ್ ಫ್ಲ್ಯಾಟ್‌ಗಳ ಮೊರೆ ಹೋಗುವವರ ಸಂಖ್ಯೆ ಹೆಚ್ಚು. ಫ್ಲ್ಯಾಟ್‌ಗಳಾದರೆ ಯಾವುದೇ ತಲೆ ಬಿಸಿ ಇಲ್ಲದೆ ಬ್ಯಾಂಕ್ ಲೋನ್ ಮಾಡಿ ಖರೀದಿಸಬಹುದು. ಸುತ್ತಮುತ್ತ ನೂರಾರು ಮನೆ ಹಾಗೂ ಸೆಕ್ಯೂರಿಟಿ ಇರುವುದರಿಂದ ಸುರಕ್ಷೆಯ ಬಗ್ಗೆಯೂ ಹೆಚ್ಚು ಚಿಂತಿಸಬೇಕಾಗಿಲ್ಲ. ಈ ಎಲ್ಲ ಕಾರಣಗಳಿಂದ ಫ್ಲ್ಯಾಟ್‌ಗಳನ್ನು ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಇದಕ್ಕೂ ಮಿಗಿಲಾಗಿ ಪ್ರಸ್ತುತ ಪೆಂಟ್‌ಹೌಸ್‌ಗಳ ಕ್ರೇಜ್ ಹೆಜ್ಜಾಗಿದೆ. ಪೆಂಟ್‌ಹೌಸ್‌ಗಳು ಯಾವುದೇ ರೆಸಾರ್ಟ್‌ಗಳಿಗಿಂತಲೂ ಕಮ್ಮಿ ಇಲ್ಲ.
ಏನಿದು ಪೆಂಟ್‌ಹೌಸ್?
ಎತ್ತರದ ಕಟ್ಟಡಗಳ ಮೇಲ್ಭಾಗದಲ್ಲಿ ಇರುವ ಆಕರ್ಷಕ ಮನೆಗಳನ್ನು ಪೆಂಟ್ ಹೌಸ್‌ಗಳಾಗಿ ಬದಲಾಯಿಸಲಾಗುತ್ತದೆ. ಮನೆಯ ಒಳಭಾಗದಿಂದಲೇ ಗಾರ್ಡನ್, ಜಿಮ್ ಏರಿಯಾಗಳನ್ನು ಮಾಡಲಾಗುತ್ತದೆ. ಇನ್ನೂ ಒಳಭಾಗವನ್ನು ಗ್ಲಾಸ್ ಹಾಗೂ ಇತರ ಇಂಟಿರೀಯರ್‌ಗಳನ್ನು ಬಳಸಿ ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿರುತ್ತದೆ. ಪೆಂಟ್‌ಹೌಸ್‌ಗಳು ಇತರ ಮನೆಗಳಿಂದ ವಿಭಿನ್ನ ಹಾಗೂ ಆಕರ್ಷವಾಗಿ ಇರುತ್ತವೆ. ಪೆಂಟ್‌ಹೌಸ್‌ಗಳು ಸಾಮಾನ್ಯ ಮನೆಗಳಿಗಿಂತ ಕೊಂಚ ದುಬಾರಿ ಯಾಗಿರುವ ಕಾರಣಕ್ಕಾಗಿ ಹೆಚ್ಚಾಗಿ ಶ್ರೀಮಂತರೂ ಮಾತ್ರವೇ ಪೆಂಟ್‌ಹೌಸ್‌ಗಳಲ್ಲಿ ವಾಸಿಸುತ್ತಾರೆ.
ವಿಶೇಷತೆ ಏನು?
ಪೆಂಟ್‌ಹೌಸ್‌ಗಳನ್ನು ಕಟ್ಟಡದ ಒಂದು ಮೂಲೆಗಳಲ್ಲೂ ಮಾಡಬಹುದಾಗಿದೆ. ಇದರ ವಿನ್ಯಾಸವೇ ಪ್ರಮುಖ ಆಕರ್ಷಣೆಯಾಗಿರುತ್ತದೆ. ವಿನ್ಯಾಸದಿಂದಲೇ ಜನರನ್ನು ಆಕರ್ಷಿಸುವ ಪೆಂಟ್‌ಹೌಸ್‌ಗಳಲ್ಲಿ ಗಾರ್ಡನಿಂಗ್, ಸ್ವಿಮ್ಮಿಂಗ್ ಫೂಲ್‌ಗಳನ್ನು ಕಟ್ಟಡದ ಜಾಗ ನೋಡಿ ಮಾಡಬಹುದಾಗಿದೆ.
ಪೆಂಟ್‌ಹೌಸ್‌ಗಳಿಗಾಗಿ ಕಟ್ಟಡದ ಕೊನೆಯ ಅಂತಸ್ತಿನಲ್ಲಿ ಇರುವ ಫ್ಲ್ಯಾಟ್‌ಗಳನ್ನು ಹೆಚ್ಚಾಗಿ ಖರೀದಿಸುವುದರಿಂದ ಅಲ್ಲಿಂದ ಹೊರ ಭಾಗದ ವ್ಯೂ ಚೆನ್ನಾಗಿರುತ್ತದೆ. ಬೆಳಗ್ಗೆ ಅಥವಾ ಸಂಜೆ ಬಾಲ್ಕನಿ ಮೇಲೆ ಬಂದರೆ ಹೊರಭಾಗದ ದೃಶ್ಯಗಳು ಸುಂದರವಾಗಿ ಕಾಣುವುದರಿಂದ ಮನಸ್ಸು ಕೂಡ ರಿಲಾಕ್ಸ್ ಆಗುತ್ತದೆ. ಇನ್ನೂ ಒಳಭಾಗವನ್ನು ಸುಂದರವಾಗಿ ವಿನ್ಯಾಸಗೊಳಿಸಲಾಗಿರುತ್ತದೆ. ಚಿಕ್ಕ ಮನೆಗಳನ್ನೂ ವಿಭಿನ್ನ ಆಕಾರಗಳಿಂದ ಸುಂದರವಾಗಿ ಬದಲಾಯಿಸುವುದು ಪೆಂಟ್‌ಹೌಸ್‌ಗಳ ಪ್ರಮುಖ ಆಕರ್ಷಣೆ. ಹೆಚ್ಚಾಗಿ ಆ ಮನೆಗಳನ್ನು ಗ್ಲಾಸ್‌ಗಳಿಂದ ಮಾಡಲಾಗಿರುತ್ತದೆ. ಇದರಿಂದ ಅಲ್ಲಿಂದ ಹೊರ ಭಾಗದ ಚಿತ್ರಣಗಳು ಸುಂದರವಾಗಿ ಕಾಣಸಿಗುತ್ತವೆ
ಪೆಂಟ್‌ಹೌಸ್ ಹೇಗಿರಬೇಕು?
.ಪೆಂಟ್‌ಹೌಸ್ ಗಾಜಿನ ಮನೆಯಾಗಿರುವುದರಿಂದ ಇಲ್ಲಿನ ಗೋಡೆಗಳಿಗೆ ಬಿಳಿ ಅಥವಾ ನೀಲಿ ಬಣ್ಣವೇ ಹೆಚ್ಚು ಸೂಕ್ತ.
.ಮನಸ್ಸನ್ನು ರಿಲ್ಯಾಕ್ಸ್ ಮಾಡಿಕೊಳ್ಳುವುದಕ್ಕಾಗಿ ಮಾತ್ರ ಬಳಸುವ ಪೆಂಟ್‌ಹೌಸ್ ಗಳಿಗೆ ಹೆಚ್ಚಿನ ಫರ್ನಿಚರ್ ಇಲ್ಲಿ ಅಗತ್ಯವಿಲ್ಲ.
. ಫ್ಯಾಮಿಲಿ ಸಮೇತ ಇಲ್ಲಿ ಸಮಯ ಕಳೆಯುವಿರಾದರೆ ಅಗತ್ಯ ಫರ್ನಿಚರ್, ವಸ್ತುಗಳು ಇರಲಿ.
.ಗಾರ್ಡನ್, ಸ್ವಿಮ್ಮಿಂಗ್ ಫೂಲ್ ಗಳ ಸೂಕ್ತ ನಿರ್ವಹಣೆ ಬಹು ಮುಖ್ಯ.
. ವಿದ್ಯುತ್ ದೀಪಗಳ ಆಯ್ಕೆಯಲ್ಲೂ ಹೆಚ್ಚು ಕಾಳಜಿವಹಿಸಬೇಕು. ಹಗಲು ಹೊತ್ತು ಇಲ್ಲಿ ಹೆಚ್ಚು ಬೆಳಕು ಬೀಳುವುದರಿಂದ ಮತ್ತು ರಾತ್ರಿ ಹೆಚ್ಚು ಕತ್ತಲಿದ್ದರೂ ತಿಂಗಳ ಬೆಳಕು ಬೀಳುವುದರಿಂದ ವಿದ್ಯುತ್ ದೀಪಗಳು ಅಗತ್ಯಕ್ಕೆ ತಕ್ಕಷ್ಟೇ ಇರಲಿ.
.ಅಗತ್ಯವಿರುವ ಸ್ಥಳಗಳಲ್ಲಿ ಮಾತ್ರ ಕರ್ಟನ್ ಬಳಸಿ. ಕರ್ಟನ್ ಇಲ್ಲದೆಯೂ ಮನೆ ಸುಂದರವಾಗಿ ಕಾಣುವುದು.
. ಸುರಕ್ಷೆಯ ಬಗ್ಗೆ ಮೊದಲೇ ಖಚಿತ ಪಡಿಸಿಕೊಳ್ಳಿ. ಇಲ್ಲಿಂದ ಹೊರಗಿನ ಆವರಣ ನೋಡಲು ಸುಂದರವಾಗಿರುತ್ತದೆ.
ಆದರೆ ಅಪಾಯವೂ ಅಷ್ಟೇ ಇರುತ್ತದೆ.
. ಪೆಂಟ್‌ಹೌಸನ ಒಳಭಾಗದಲ್ಲಿ ಯಾವುದೇ ವಸ್ತುವಿರಲಿ ಹೆಚ್ಚು ಗಾಢ ಬಣ್ಣದ್ದು ಬೇಡ. ತಿಳಿ ಬಣ್ಣದ ವಸ್ತುಗಳೇ ಪೆಂಟ್‌ಹೌಸ್‌ನ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ.
ಪ್ರಜ್ಞಾ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.