ತಾರಕಾಸುರನಿಗೆ ಗಣ್ಯವ್ಯಕ್ತಿ ಸಾಥ್
Team Udayavani, Sep 2, 2018, 11:11 AM IST
“ತಾರಕಾಸುರ’ ಚಿತ್ರತಂಡ ಖುಷಿಯ ಮೂಡ್ನಲ್ಲಿದೆ. ಅದಕ್ಕೆ ಕಾರಣ, ಚಿತ್ರದ ಒಂದು ಹಾಡು ಬಿಡುಗಡೆಯಾಗುತ್ತಿರೋದು. ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ “ತಾರಕಾಸುರ’ ಚಿತ್ರಕ್ಕೆ ಶಿವರಾಜಕುಮಾರ್ ಒಂದು ಹಾಡು ಹಾಡಿರೋದು ನಿಮಗೆ ಗೊತ್ತಿರಬಹುದು.
ಈಗ ಚಿತ್ರತಂಡ ಆ ಹಾಡನ್ನು ಬಿಡುಗಡೆ ಮಾಡಲು ಮುಂದಾಗಿದೆ. ಸೆ.03 ರಂದು ಚಿತ್ರದ ಮೊದಲ ಹಾಡು ಬಿಡುಗಡೆಯಾಗಲಿದೆ. ಇದು ನಾಯಕನ ಇಂಟ್ರೋಡಕ್ಷನ್ ಹಾಡಾಗಿದ್ದು, ಕವಿರಾಜ್ ಬರೆದ “ಕನ್ನಡ ಕಲಿಯೋ..’ ಎಂದು ಈ ಹಾಡನ್ನು ಆರಂಭವಾಗುತ್ತದೆ.
ಎಲ್ಲಾ ಓಕೆ, ಹಾಡನ್ನು ಬಿಡುಗಡೆ ಮಾಡುವವರು ಯಾರು ಎಂಬ ಪ್ರಶ್ನೆಗೆ ಚಿತ್ರತಂಡ ಕೊಡುವ ಉತ್ತರ, “ಕರ್ನಾಟಕದ ಅತಿ ಗಣ್ಯವ್ಯಕ್ತಿ’. “ತಾರಕಾಸುರ’ ಚಿತ್ರದ ಹಾಡನ್ನು ಕರ್ನಾಟಕದ ಅತಿ ಗಣ್ಯವ್ಯಕ್ತಿಯೊಬ್ಬರು ಬಿಡುಗಡೆ ಮಾಡಲಿದ್ದಾರಂತೆ. ಆದರೆ, ಆ ಗಣ್ಯವ್ಯಕ್ತಿ ಯಾರೆಂಬುದನ್ನು ಮಾತ್ರ ಚಿತ್ರತಂಡ ರಹಸ್ಯವಾಗಿಟ್ಟಿದೆ.
ಸೆಪ್ಟೆಂಬರ್ 03 ರಂದು ಆ ಗಣ್ಯವ್ಯಕ್ತಿ ಯಾರೆಂದು ತಿಳಿಯಲಿದೆ. ಈ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದಾರೆ. ಅಳಿವಿನಂಚಿನಲ್ಲಿರುವ ಜಾನಪದ ಕಲೆಯೊಂದರ ಸುತ್ತ ಇಡೀ ಸಿನಿಮಾ ಸುತ್ತಲಿದ್ದು, ವೈಭವ್ ಇಲ್ಲಿ ಮೂರು ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ನರಸಿಂಹಲು ನಿರ್ಮಿಸಿದ್ದು, ಧರ್ಮವಿಶ್ ಸಂಗೀತವಿದೆ. ಮಾನ್ವಿತಾ ಈ ಚಿತ್ರದ ನಾಯಕಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್ಎಫ್ಡಿಪಿ ಪೋರ್ಟಲ್ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.