ಫಲಿತಾಂಶ ನಿರೀಕ್ಷೆಯಲ್ಲಿ ಮತದಾರರು- ಅಭ್ಯರ್ಥಿಗಳು
Team Udayavani, Sep 2, 2018, 11:57 AM IST
ಬಂಟ್ವಾಳ : ಪುರಸಭೆ ಚುನಾವಣೆ ಫಲಿತಾಂಶ ಯಾರ ಪರ ಬರಬಹುದು ಎಂಬ ನಿರೀಕ್ಷೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಬಿಜೆಪಿ-ಕಾಂಗ್ರೆಸ್ ತಮಗೆ ಬಹುಮತ ಬರುವುದಾಗಿ ಅಭಿಪ್ರಾಯ ನೀಡಿದ್ದು, ಆ ಬಗ್ಗೆ ಪೂರ್ಣ ವಿಶ್ವಾಸ ಹೊಂದಿಲ್ಲ. ಬಹುಮತ ಬಾರದಿದ್ದರೆ ವಿಪಕ್ಷವಾಗಿ ಕೂರುತ್ತೇವೆ ಹೊರತು ಇತರ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂಬ ಸ್ಪಷ್ಟವಾಗಿ ತಿಳಿಸಿದ್ದರೂ ಈ ಹೇಳಿಕೆಗೆ ಎಷ್ಟು ಬದ್ಧವಾಗುತ್ತಾರೆ ಎನ್ನುವುದು ಸೆ. 3ರ ಅನಂತರದ ತಿಳಿಯಲಿದೆ. ಆಡಳಿತಕ್ಕೆ ನಾವೇ ಬರುವುದಾಗಿ ಹೇಳಿಕೊಂಡಿರುವ ಎಸ್‌ಡಿಪಿಐ ಯಾವ ರೀತಿ ಬಹುಮತ ಪಡೆಯಬಹುದು ಎಂಬುದು ಕುತೂಹಲ ಸೃಷ್ಟಿಸಿದೆ. ಬಂಟ್ವಾಳ ಪುರಸಭೆಯಲ್ಲಿ ನಾಲ್ಕು ಪಕ್ಷಗಳ ಉಮೇದ್ವಾರರು, ಒಬ್ಬರು ಪಕ್ಷೇತರ ಸಹಿತ ಒಟ್ಟು 71 ಮಂದಿ ಕಣದಲ್ಲಿದ್ದರು.
ಶೇ. 72.36 ಮತದಾನ
ಪುರಸಭೆಯ ಒಟ್ಟು 34,102 ಮತದಾರರಲ್ಲಿ 24,676 ಮಂದಿ ಮತ ಚಲಾಯಿಸಿದ್ದು, ಒಟ್ಟು ಶೇ. 72. 36 ಮತದಾನ ಆಗಿದೆ. ಇದರಲ್ಲಿ 11,840 ಮಂದಿ ಪುರುಷರು, 12,836 ಮಂದಿ ಮಹಿಳೆಯರು ಮತದಾನ ಮಾಡಿದ್ದಾರೆ.
ಶೇ. 27.64 ಮತದಾನ ವಂಚಿತರು
ಮತದಾನದಲ್ಲಿ 5,007 ಪುರುಷರು, 4,419 ಮಹಿಳೆಯರು ಸಹಿತ ಒಟ್ಟು 9,426 ಮಂದಿ ಭಾಗವಹಿಸಿಲ್ಲ. ಇವರಲ್ಲಿ ಬಹುತೇಕ ಮಂದಿ ವಿದೇಶದಲ್ಲಿ ಇದ್ದವರು. ಕೆಲವರು ಕರ್ತವ್ಯದ ನಿಮಿತ್ತ ಹೊರ ಜಿಲ್ಲೆ, ರಾಜ್ಯಗಳಲ್ಲಿ ನೆಲೆಸಿದವರಾಗಿದ್ದಾರೆ. ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ನೇತೃತ್ವದಲ್ಲಿ ಬಿ.ಸಿ. ರೋಡ್ ಮಿನಿ ವಿಧಾನಸೌಧದಲ್ಲಿ ಡಿಮಸ್ಟರಿಂಗ್ ಬಳಿಕ ಎಲ್ಲ ಇವಿಎಂ ಯಂತ್ರಗಳನ್ನು ಸುರಕ್ಷಿತವಾಗಿಡಲಾಗಿದೆ. ಸೆ. 3ರಂದು ಬೆಳಗ್ಗೆ 8 ರಿಂದ ಮತ ಎಣಿಕೆ ನಡೆಯಲಿದ್ದು, 10ರ ಸುಮಾರಿಗೆ ಎಲ್ಲ ಫಲಿತಾಂಶ ಪ್ರಕಟವಾಗಲಿದೆ ಎಂದು ತಹಶೀಲ್ದಾರ್ ಅಭಿಪ್ರಾಯಪಟ್ಟಿದ್ದಾರೆ.
ಬಹುಮತಕ್ಕೆ 14 ಸ್ಥಾನ
ಒಟ್ಟು 27 ಸ್ಥಾನಗಳಲ್ಲಿ ಯಾವುದೇ ಪಕ್ಷ ಬಹುಮತ ಸಾಬೀತು ಮಾಡಲು ಕನಿಷ್ಠ 14 ಸ್ಥಾನ ಬಲವನ್ನು ಹೊಂದಿರಬೇಕು. ಎಸ್‌ಡಿಪಿಐ ಸ್ಪರ್ಧಿಸಿರುವುದು ಕೇವಲ 12 ಸ್ಥಾನಗಳಿಗೆ. ಕಾಂಗ್ರೆಸ್ 25 ಸ್ಥಾನದಲ್ಲಿ ಸ್ಪರ್ಧಿಸಿದೆ. ಒಂದೊಂದು ಸ್ಥಾನದಲ್ಲಿ ಸಿಪಿಐ ಮತ್ತು ಜೆಡಿಎಸ್ ಅಭ್ಯರ್ಥಿಗೆ ಬೆಂಬಲಿಸಿದೆ. ಬಿಜೆಪಿ ಎಲ್ಲ 27 ಸ್ಥಾನಗಳಿಗೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಅಧ್ಯಕ್ಷ/ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ನಡೆದಾಗ ಒಬ್ಬರು ಶಾಸಕ ಮತ್ತು ಸಂಸದರ ಮತವು ಬಿಜೆಪಿಗೆ ಸಿಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi: ಗಾಂಜಾ ವಿಚಾರಕ್ಕೆ ಒಡಹುಟ್ಟಿದವರ ಗಲಾಟೆ; ಓರ್ವ ಸಾವು, ಮತ್ತೋರ್ವ ಗಂಭೀರ
Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ
Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್
Shettar: ಪ್ರಧಾನಿ ಮೋದಿ ಭೇಟಿಯಾದ ಶೆಟ್ಟರ್; ಬೆಳಗಾವಿಗೆ ವಂದೇ ಭಾರತ್ ವಿಸ್ತರಣೆಗೆ ಮನವಿ
Bengaluru: 54 ಪಾಲಿಕೆ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.