ಸಾಹಿತ್ಯದ ಪರಿಗಣನೆಗೆ ಬಾರದ ಯಕ್ಷಗಾನ ಬರವಣಿಗೆ
Team Udayavani, Sep 2, 2018, 4:20 PM IST
ಶಿರಸಿ: ಯಕ್ಷಗಾನ ಸರಳ ಬರವಣಿಗೆಯ ಶಕ್ತಿ ಅಪಾರವಾಗಿದ್ದರೂ ಸಹ ಯಕ್ಷಗಾನ ಬರವಣಿಗೆ ಸಾಹಿತ್ಯ ಎಂದು ಪರಿಗಣನೆ ಆಗದಿರುವುದು ಬೇಸರದ ಸಂಗತಿ ಎಂದು ಯಕ್ಷಗಾನ ಸಂಘಟಕ, ಅಕಾಡೆಮಿ ಸದಸ್ಯ ನಾಗರಾಜ್ ಜೋಶಿ ವಿಷಾದ ವ್ಯಕ್ತಪಡಿಸಿದರು. ಅವರು ಶನಿವಾರ ನಗರದ ಯೋಗ ಮಂದಿರದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಕಾರದಲ್ಲಿ ಮಹಿಳಾ ಹಾಗೂ ಮಕ್ಕಳ ಯಕ್ಷಗಾನ ತಂಡ ಯಕ್ಷ ಗೆಜ್ಜೆ ಹಮ್ಮಿಕೊಂಡ ಯಕ್ಷಗಾನ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಪ್ರತ್ಯೇಕ ಯಕ್ಷಗಾನ ಅಕಾಡೆಮಿ ಸ್ಥಾಪನೆಯಾಗಲು ಯಕ್ಷಗಾನ ಸಂಘಟಕರು, ಕಲಾವಿದರ ಶ್ರಮ ಹೆಚ್ಚಿದೆ. ಆದರೆ ಬಯಲಾಟ ಹಾಗೂ ಯಕ್ಷಗಾನ ಅಕಾಡೆಮಿಗೆ ಅನುದಾನ ಹಂಚಿಕೆಯಲ್ಲಿ ಪಾಲು ಮಾಡಿದ್ದು ಆತಂಕ ಸೃಷ್ಟಿಸಿದ್ದರೂ ನಂತರ 1.10 ಕೋ.ರೂ. ಅನುದಾನವನ್ನು ಸರಕಾರ ನೀಡಿತು ಎಂದ ಅವರು, ಸರಕಾರಿ ಪ್ರಾಯೋಜಿತ ಯಕ್ಷಗಾನ ಪ್ರದರ್ಶನ ಒಂದು ನಡೆಸಿ, ಅದಕ್ಕೆ ಐದಾರು ಫಲಕ ಹಾಕಿ ಹಣ ಮಾಡುವ ಕೆಲವರ ನಡೆ ಸರಿಯಲ್ಲ. ಹೊರ ಜಿಲ್ಲೆಗಳಲ್ಲಿ ಇರುವ ಇಂಥ ಕಾರ್ಯ ನಮ್ಮ ಜಿಲ್ಲೆಗೆ ಬಾರದಂತೆ ನೋಡಿಕೊಳ್ಳಬೇಕು. ಕಾಗದ ಪತ್ರಗಳಲ್ಲಿ ಮಾತ್ರ ಹತ್ತಾರು ಯಕ್ಷಗಾನ ಪ್ರದರ್ಶನ ನೀಡಿದ್ದೇವೆ ಎಂದು ತಿಳಿಸಿ ಹಣ ಮಾಡುತ್ತಿರುವ ಸಂಘಟನೆಗಳ ಬಗ್ಗೂ ನಾವು ಜಾಗೃತರಾಗಿರಬೇಕು ಎಂದರು.
ಮಕ್ಕಳಿಗೆ ಯಕ್ಷಗಾನದ ಪ್ರೋತ್ಸಾಹ ನೀಡಿದರೆ ಮಾತ್ರ ಯಕ್ಷಗಾನ ಉಳಿಯಲು ಸಾಧ್ಯ. ಈ ಕಾರಣದಿಂದ ಅಕಾಡೆಮಿ ಈ ವರ್ಷ 60 ತರಬೇತಿ ಶಿಬಿರಗಳಿಗೆ ಅನುಮತಿ ನೀಡಿದೆ. ಇಷ್ಟೊಂದು ವ್ಯಾಪಕವಾಗಿ ತರಬೇತಿ ನಡೆಸುತ್ತಿರುವ ಅಕಾಡೆಮಿ ಇದೇ ಮೊದಲು. ಉಳಿದ ಅಕಾಡೆಮಿಗಳಿಗೆ ಇಲ್ಲಿ ಯಶಸ್ಸು ಆದರೆ ಮಾದರಿಯಾಗಿ ಅನುಷ್ಠಾನಗೊಳ್ಳಬಹುದು ಎಂದರು.
ರಂಗಕರ್ಮಿ ರಮಾನಂದ ಐನಕೈ ಮಾತನಾಡಿ, ಮಕ್ಕಳನ್ನು ಗುಲಾಮರನ್ನಾಗಿಸುವ ಶೈಕ್ಷಣಿಕ ಕಲಿಕೆಯ ಒತ್ತಡದ ಹೊರಗೆ ಪರಿಪೂರ್ಣತೆಗೆ ಒಯ್ಯುವ ಸಾಂಸ್ಕೃತಿಕ ನಡೆಯನ್ನೂ ರೂಢಿಸಬೇಕು. ಮನುಷ್ಯನ ಪರಿಪೂರ್ಣತೆಯ ಬೆಳವಣಿಗೆಗೆ ಅನೇಕ ಕಾರ್ಯಗಳು ಕೊರತೆಯನ್ನುಂಟು ಮಾಡುತ್ತಿದೆ. ಜೀವನಕ್ಕಾಗಿ ಕಲಿಯಬೇಕೆ ವಿನಃ ಉದ್ಯೋಗಕ್ಕಾಗಿ ಅಲ್ಲ. ಚೆನ್ನಾಗಿ ಓದಿಕೊಂಡು ಇಂಜಿನಿಯರ್, ಡಾಕ್ಟರ್ ಆಗಬಹುದು. ಆದರೆ ಉತ್ತಮ ಕಲಾವಿದನಾಗಲು ಸಾಧ್ಯವಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಭಾಗವತ ಗಜಾನನ ಭಟ್ಟ ತುಳಗೇರಿ, ಯಕ್ಷಗಾನ ಶಿಕ್ಷಣ ಪಡೆದು ಸಂಸ್ಕಾರಯುತವಾಗಿ ಬದುಕಲೂ ಅವಕಾಶ ಆಗುತ್ತದೆ. ನೋಡುವುದನ್ನೂ ಈ ತರಬೇತಿ ಕಲಿಸುತ್ತದೆ ಎಂದರು. ಯೋಗ ಮಂದಿರ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಎನ್. ಭಟ್ಟ, ಎಂ.ಕೆ. ಹೆಗಡೆ ಗೋಳಿಕೊಪ್ಪ, ಸತೀಶ ಹೆಗಡೆ ಸಾಮ್ರಾಟ ಇತರರು ಇದ್ದರು. ಯಕ್ಷ ಗೆಜ್ಜೆ ಅಧ್ಯಕ್ಷೆ ನಿರ್ಮಲಾ ಹೆಗಡೆ ಗೋಳಿಕೊಪ್ಪ ಸ್ವಾಗತಿಸಿದರು. ಲತಾ ಗಿರಿಧರ ಹೊನ್ನೆಗದ್ದೆ ನಿರೂಪಿಸಿದರು.
ಯಕ್ಷಗಾನ ಮಕ್ಕಳಲ್ಲಿ ವ್ಯಕ್ತಿತ್ವ ರೂಪಿಸುತ್ತದೆ. ವೈಜ್ಞಾನಿಕ ಚಿಂತನಾ ಕ್ರಮ ಕೂಡ ಕಲಿಸುತ್ತದೆ. ಯಕ್ಷಗಾನ ಕಲೆಯನ್ನು ಸೈದ್ಧಾಂತಿಕವಾಗಿ ಮಂಡಿಸುವಂತಾಗಬೇಕು.
ರಮಾನಂದ ಐನಕೈ,
ರಂಗಕರ್ಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bangladeshದಲ್ಲಿ ಇಸ್ಕಾನ್ ನಿಷೇಧಿಸಬೇಕು: ಹೈಕೋರ್ಟ್ ಗೆ ಬಾಂಗ್ಲಾದೇಶ ಸರ್ಕಾರ ಅರ್ಜಿ!
Monkey disease: ಶೀಘ್ರ ಶಿರಸಿಗೆ ಮಂಗನ ಕಾಯಿಲೆ ತಪಾಸಣಾ ಲ್ಯಾಬ್: ಭೀಮಣ್ಣ
Viduthalai Part 2 Trailer: ದಟ್ಟ ಕಾಡಿನಲ್ಲಿ ಸದ್ದು ಮಾಡುವ ಬಂದೂಕು – ದಮನಿತರ ಬದುಕು..
Ullal: ಬಾವಿ, ಬೋರ್‌ವೆಲ್‌ನಲ್ಲಿ ತೈಲಮಿಶ್ರಿತ ನೀರು; ಸಮಸ್ಯೆ ಇರುವ ಮನೆಗಳಿಗೆ ಪೈಪ್‌ಲೈನ್
Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.