ಜಿಲ್ಲಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ
Team Udayavani, Sep 3, 2018, 4:26 PM IST
ಬಳ್ಳಾರಿ: ಶ್ರೀಕೃಷ್ಣ ವಿಶ್ವಕ್ಕೆ ದಾರಿದೀಪ. ಜಗತ್ತಿಗೆ ಮಾರ್ಗದರ್ಶನ ನೀಡಿದ ದೇವರು. ಅಂತಹ ಶ್ರೀಕೃಷ್ಣನ ಆದರ್ಶಗಳನ್ನು ಮನುಕುಲದ ಎಲ್ಲರೂ ಪಾಲಿಸಬೇಕು ಎಂದು ಶಾಸಕ ಜಿ. ಸೋಮಶೇಖರ ರೆಡ್ಡಿ ಹೇಳಿದರು.
ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿಶ್ವಕ್ಕೆ ದಾರಿದೀಪವಾಗಿರುವ ಶ್ರೀಕೃಷ್ಣನ ಮಾರ್ಗದರ್ಶನಗಳನ್ನು ಭಗವದ್ಗೀತಾ, ಕುರುಕ್ಷೇತ್ರ, ಮಹಾಭಾರತ ಪುರಾಣಗಳಲ್ಲಿ ನಾವು ಕಾಣಬಹುದು. ಮುಂದಿನ ದಿನಗಳಲ್ಲಿ ಎಲ್ಲ ಹಿಂದುಗಳು ಸೇರಿ ಶ್ರೀಕೃಷ್ಣ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಬೇಕು. ಶ್ರೀ ಕೃಷ್ಣನು ಕೇವಲ ಒಂದು ಜಾತಿಗೆ ಸೀಮಿತವಲ್ಲ.
ಇತನು ಎಲ್ಲಾ ಹಿಂದೂಗಳಿಗೆ ದೇವರಾಗಿದ್ದಾನೆ ಎಂದ ಅವರು, ಐಎಎಸ್ ಮತ್ತು ರಾಜಕೀಯ ಕ್ಷೇತ್ರದಲ್ಲಿ ಈ ಸಾಮಾಜದವರು ಉತ್ತರ ಭಾರತದಲ್ಲಿ ಅತೀ ಹೆಚ್ಚಿನ ಜನಸಂಖ್ಯೆಯಲ್ಲಿದ್ದಾರೆ. ಇಲ್ಲಿನ ಯುವಕರು ಸಹ ಐಎಎಸ್ ಮತ್ತು ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿ ತೋರಿಸಬೇಕು ಎಂದರು.
ಗೊಲ್ಲರ ಸಮಾಜಕ್ಕೆ ನೀಡಿರುವ ಖಾಲಿ ಸ್ಥಳದಲ್ಲಿ ಮಳಿಗೆಯನ್ನು ಕಟ್ಟಿಸಿ ಯುವಕರಿಗೆ ಉಚಿತವಾಗಿ ವಿದ್ಯಾಭ್ಯಾಸ, ಊಟದ ವ್ಯವಸ್ಥೆಯನ್ನು ನೀಡಿ ಅವರ ಉನ್ನತ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಜಿಪಂ ಅಧ್ಯಕ್ಷೆ ಸಿ.ಭಾರತಿ ತಿಮ್ಮಾರೆಡ್ಡಿ ಮಾತನಾಡಿದರು. ಕೆ.ಇ.ಚಿದಾನಂದಪ್ಪ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಗೊಲ್ಲರ ಸಂಘದ ಅಧ್ಯಕ್ಷ ಪಿ.ತಿಮ್ಮಪ್ಪ, ಪಾಲಿಕೆ ಸದಸ್ಯೆ ಚಂದ್ರಕಲಾ, ಮಾಜಿ ಉಪಮೇಯರ್ ಬೆಣಕಲ್ಲು ಬಸವರಾಜ, ಆಶಲತಾ, ಸೋಮಪ್ಪ, ಗೋವಿಂದರಾಜು, ಕೃಷ್ಣಮೂರ್ತಿ, ಪಿ.ಗಾದೆಪ್ಪ, ರಾಯಚೂರಿನ ಸಹಾಯಕ ಸಾರಿಗೆ ಆಯುಕ್ತ ವೆಂಕಟೇಶಪ್ಪ, ಸೋಮರೆಡ್ಡಿ ಹಾಗೂ ಸಮಾಜದ ಎಲ್ಲಾ ಮುಖಂಡರು, ಪದಾಧಿಕಾರಿಗಳು ಇದ್ದರು. ಬಿ.ನಾಗರಾಜ ಸ್ವಾಗತಿಸಿ ವಂದಿಸಿದರು.
ವಿಠ್ಠಲ-ಕೃಷ್ಣ ದೇಗುಲದಲ್ಲಿ ಜನ್ಮಾಷ್ಟಮಿ ಆಚರಣೆ
ಬಳ್ಳಾರಿ: ನಗರದ ರಾಯಲ್ ಕಾಲೋನಿಯಲ್ಲಿರುವ ವಿಠ್ಠಲ-ಕೃಷ್ಣ ದೇಗುಲದಲ್ಲಿ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಗಡಿಗೆ ಒಡೆಯುವ ಕಾರ್ಯಕ್ರಮವನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು. ಬೆಣ್ಣೆ ತುಂಬಿದ ಗಡಿಗೆ ಒಡೆಯಲು ನಾಮುಂದು, ತಾಮುಂದು ಎಂದು ಪುಟಾಣಿ ಕೃಷ್ಣರು ಪೈಪೋಟಿ ನೀಡುವ ಮೂಲಕ ಸಂಭ್ರಮದಿಂದ ಕೃಷ್ಣ ಜನ್ಮಾಷ್ಟಮಿ ಆಚರಿಸಿದರು. ಇನ್ನೂ ಜನ್ಮಾಷ್ಟಮಿ ನಿಮಿತ್ತ ದೇಗುಲದಲ್ಲಿ ಬೆಳಿಗ್ಗೆಯಿಂದಲೇ ನೈರ್ಮಲ್ಯ ವಿಸರ್ಜನೆ, ಪಂಚಾಮೃತಾಭಿಷೇಕ, ಪುಷ್ಪಾರ್ಚನೆ, ದೇವರ ನಾಮವನ್ನು ಪಠಿಸುವ ಮೂಲಕ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಇಲ್ಲಿರುವ ಶ್ರೀ ಕೃಷ್ಣನ ವಿಗ್ರಹವನ್ನು ಬೆಣ್ಣೆಯಿಂದ ಅಲಂಕಾರ ಮಾಡುವ ಮೂಲಕ ಉಡುಪಿಯ ಕೃಷ್ಣನ ನೆನಪುಸುವಂತೆ ಮಾಡಲಾಗಿತ್ತು. ಅಷ್ಟಮಿ ಪ್ರಯುಕ್ತ ಉಪವಾಸವಿದ್ದ ಕೃಷ್ಣನ ಭಕ್ತರು ಬೆಳಿಗ್ಗೆ ನಗರ ಪ್ರದಕ್ಷಣೆ ಮಾಡಿ ಪಲ್ಲಕ್ಕಿ ಸೇವೆ ಮಾಡಿದರು.
ಬಳಿಕ ದೇವಸ್ಥಾನ ಆವರಣದಲ್ಲಿ ಚಿಣ್ಣರು ಬೆಣ್ಣೆ ತುಂಬಿದ ಗಡಿಗೆಯನ್ನು ಒಡೆದು ಹಬ್ಬದ ಸಂಭ್ರಮ ಇಮ್ಮಡಿಗೊಳಿಸಿದರು. ಇನ್ನೂ ದೇವಸ್ಥಾನದ ಪಕ್ಕದ ವೇದಿಕೆಯಲ್ಲಿ ಇಂದ್ರಾಣಿ ನಾಟ್ಯಕಲಾ ಸಂಘದ ಮಕ್ಕಳು ಸೇರಿದಂತೆ ಸ್ಥಳೀಯ ಮಕ್ಕಳು ಭರತನಾಟ್ಯ, ಕುಚುಪುಡಿ, ಜಾನಪದ, ಮುಂತಾದ ನೃತ್ಯಗಳನ್ನು ಮಾಡಿದರು. ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿ ಪ್ರಕಾಶ್ ರಾವ್, ಪ್ರಾಣೇಶ್, ಯಜ್ಞವಲ್ಕಾ ಸೇವಾ ಸಮಿತಿಯ ಸದಸ್ಯರು ವಿಠ್ಠಲ-ಕೃಷ್ಣ ಭಜನಾ ಮಂಡಳಿಯ ಶೋಭಾ, ವೇದಾವತಿ, ಸುನಿತಾ, ಸಹನಾ, ಕವಿತಾ ಸೇರಿದಂತೆ ಇತರರು ಇದ್ದರು.
ಶ್ರೀಕೃಷ್ಣ ಭಾವಚಿತ್ರ ಮೆರವಣಿಗೆ ಇದಕ್ಕೂ ಮುನ್ನ ನಗರದ ಮುನಿಸಿಪಲ್ ಕಾಲೇಜು ಮೈದಾನದಿಂದ ನಡೆದ ಶ್ರೀಕೃಷ್ಣ ಜಯಂತಿ ಮೆರವಣಿಗೆಗೆ ಶಾಸಕ ಜಿ.ಸೋಮಶೇಖರ ರೆಡ್ಡಿ ಚಾಲನೆ ನೀಡಿದರು. ನಂತರ ಗಡಗಿ ಚೆನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ಹಳೇ ಬ್ರೂಸ್‌ಪೇಟೆ ಪೊಲೀಸ್ ಠಾಣೆ, ಜೈನ್ ಮಾರ್ಕೆಟ್, ಎಚ್.ಆರ್.ಗವಿಯಪ್ಪ ವೃತ್ತ ಮುಖಾಂತರ ವೇದಿಕೆ ಸ್ಥಳವಾದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರಕ್ಕೆ ತಲುಪಿತು. ಪಾಲಿಕೆ ಸದಸ್ಯರಾದ ಮಲ್ಲನಗೌಡ, ಶ್ರೀನಿವಾಸ ಮೋತ್ಕರ್ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
S.Korea: ರನ್ ವೇಯಲ್ಲಿ ಸ್ಕಿಡ್ ಆಗಿ ಗೋಡೆಗೆ ಅಪ್ಪಳಿಸಿದ ವಿಮಾನ: ಇಲ್ಲಿದೆ ನೋಡಿ ವಿಡಿಯೋ
ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು
World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್.. ಅರ್ಜುನ್ ಜಂಟಿ ಅಗ್ರಸ್ಥಾನ
Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ
PKL Season 11: ಇಂದು ಪ್ರೊ ಕಬಡ್ಡಿ ಫೈನಲ್… ಹರಿಯಾಣ – ಪಾಟ್ನಾ ಹಣಾಹಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.