ನಗರ ನಕ್ಸಲರಿಂದ ಡಾರ್ಕ್ ನೆಟ್ ಬಳಕೆ: ಮಹಾರಾಷ್ಟ್ರ ಪೊಲೀಸರಿಂದ ಬಯಲು
Team Udayavani, Sep 3, 2018, 4:57 PM IST
ಮುಂಬಯಿ : ನಗರ ನಕ್ಸಲರು ಕೊರಿಯರ್ ಸೇವೆಯನ್ನು ಮಾತ್ರವಲ್ಲದೆ ತಮ್ಮಲ್ಲಿನ ಮಾಹಿತಿ ರವಾನೆಗೆ ಪಾಸ್ ವರ್ಡ್ ರಕ್ಷಿತ ಪೆನ್ ಡ್ರೈವ್ಗಳನ್ನು ಬಳಸುತ್ತಿದ್ದರಲ್ಲದೆ ರಹಸ್ಯ ಮಾಹಿತಿಗಳನ್ನು ಇ-ಮೇಲ್ ಮೂಲಕ ರವಾನಿಸಲು ಡಾರ್ಕ್ ನೆಟ್ ಬಳಸುತ್ತಿದ್ದರು ಎಂದು ಮಹಾರಾಷ್ಟ್ರ ಪೊಲೀಸರು ಬಹಿರಂಗಪಡಿಸಿದ್ದಾರೆ.
ಈ ಮಾಹಿತಿಯನ್ನು ತಾವು ಬಂಧಿತ ನಗರ ನಕ್ಸಲರಿಂದ ತಿಳಿದುಕೊಂಡೆವೆಂದು ಪೊಲೀಸರು ಹೇಳಿದ್ದಾರೆ. (ಇದೇ ವೇಳೆ, ನ್ಯಾಯಾಂಗದ ವ್ಯಾಪ್ತಿಗೆ ಒಳಪಟ್ಟಿರುವ ಭೀಮಾ ಕೋರೇಗಾಂವ್ ಕೇಸಿಗೆ ಸಂಬಂಧಿಸಿ ಕಳೆದ ಶುಕ್ರವಾರ ನಡೆಸಿರುವ ಪತ್ರಿಕಾ ಗೋಷ್ಠಿಗಾಗಿ ಬಾಂಬೆ ಹೈಕೋರ್ಟ್ ಮಹಾರಾಷ್ಟ್ರ ಪೊಲೀಸರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವುದು ಇಲ್ಲಿ ಉಲ್ಲೇಖನೀಯ).
ಡಾರ್ಕ್ ನೆಟ್ ಎನ್ನುವುದು ಕಂಪ್ಯೂಟರ್ ಜಗತ್ತಿನ ಒಂದು ರಹಸ್ಯ ಭಾಗವಾಗಿದೆ. ಇದನ್ನು ಬಳಸಿಕೊಂಡು ಸೈಬರ್ ಖದೀಮರು ಅನಾಮಿಕರಾಗಿ ಉಳಿದುಕೊಂಡು ಅಕ್ರಮ ಇಂಟರ್ನೆಟ್ ಚಟುವಟಿಕೆಗಳನ್ನು ನಡೆಸುತ್ತಾರೆ. ಸಾಮಾನ್ಯವಾಗಿ ಇಂಟರ್ ನೆಟ್ ಬಳಸುವ ವ್ಯಕ್ತಿಯನ್ನು ಪತ್ತೆ ಹಚ್ಚಬಹುದಾಗಿದೆ; ಆದರೆ ಡಾರ್ಕ್ ನೆಟ್ ಬಳಸುವ ವ್ಯಕ್ತಿಯನ್ನು ಪತ್ತೆಹಚ್ಚುವುದು ಕಷ್ಟ.
ಅಂದಹಾಗೆ ಇಂಟರ್ನೆಟ್ ಬಳಕೆಯು ನೈಜ ಮತ್ತು ವಾಸ್ತವಿಕ ಜಗತ್ತಿನ ಕೇವಲ ಶೇ.4ರಷ್ಟಿರುತ್ತದೆ. ಉಳಿದಂತೆ ಡೀಪ್ ವೆಬ್, ಡಾರ್ಕ್ ನೆಟ್ ಬಳಕೆಯಲ್ಲಿದೆ. ಅಂತೆಯೇ ಮೂರು ಸ್ತರಗಳಲ್ಲಿ ಅಂತರ್ಜಾಲ ಇರುತ್ತದೆ : 1. ಸರ್ ಫೇಸ್ ವೆಬ್ (ನಾವು ನೀವು ಬಳಸುವಂಥದ್ದು), 2. ಡೀಪ್ ವೆಬ್, 3. ಡಾರ್ಕ್ ನೆಟ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.