ಹುಬ್ಬಳ್ಳಿ ವಿಮಾನ ಪ್ರಯಾಣಿಕರ ಸಂಖ್ಯೆ ಶೇ. 82 ಹೆಚ್ಚಳ
Team Udayavani, Sep 3, 2018, 5:47 PM IST
ಹುಬ್ಬಳ್ಳಿ: ನಗರದಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆ ಪ್ರತಿ ತಿಂಗಳು ಗಣನೀಯವಾಗಿ ವೃದ್ಧಿಯಾಗುತ್ತಿದ್ದು, ಜೂನ್‌ದಿಂದ ಜುಲೈವರೆಗೆ ಪ್ರಯಾಣಿಕರ ಸಂಚಾರದಟ್ಟಣೆ ಶೇ. 82ಕ್ಕೂ ಅಧಿಕ ಹೆಚ್ಚಳವಾಗಿದೆ. ಹುಬ್ಬಳ್ಳಿಯಿಂದ ಅಹ್ಮದಾಬಾದ್, ಬೆಂಗಳೂರು, ಗೋವಾ, ಚೆನ್ನೈ, ಹೈದರಾಬಾದ್, ಜಬಲಪುರ, ಮಂಗಳೂರು, ಕೊಚ್ಚಿ, ಮುಂಬಯಿಗೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚಳಗೊಂಡಿದೆ. ಜೂನ್ ತಿಂಗಳಲ್ಲಿ ಹುಬ್ಬಳ್ಳಿಯಿಂದ ವಿವಿಧ ಪ್ರದೇಶಗಳಿಗೆ ಸಂಚರಿಸುವ ವಿಮಾನಯಾನಿಗಳ ಹಾಗೂ ಸರಕು, ಕೋರಿಯರ್ ಸಂಖ್ಯೆ 25,023 ಇದ್ದದ್ದು ಜುಲೈ ತಿಂಗಳಲ್ಲಿ 45,548ಕ್ಕೆ ತಲುಪಿದೆ. ಈ ಹೆಚ್ಚಳ ಶೇ. 82ಕ್ಕೂ ಅಧಿಕವಾಗಿದೆ.
ಜುಲೈ ತಿಂಗಳಲ್ಲಿ ಅಹ್ಮದಾಬಾದ್ ನಿಂದ ಹುಬ್ಬಳ್ಳಿಗೆ 2346 ಪ್ರಯಾಣಿಕರು ಪ್ರಯಾಣಿಸಿದರೆ, ಹುಬ್ಬಳ್ಳಿಯಿಂದ ಅಹ್ಮದಾಬಾದ್ ಗೆ 2566 ಜನ, ಬೆಂಗಳೂರಿನಿಂದ ಹುಬ್ಬಳ್ಳಿಗೆ 9745, ಹುಬ್ಬಳ್ಳಿಯಿಂದ ಬೆಂಗಳೂರಿಗೆ 11145, ಮುಂಬಯಿಯಿಂದ ಹುಬ್ಬಳ್ಳಿಗೆ 2701, ಹುಬ್ಬಳ್ಳಿಯಿಂದ ಮುಂಬಯಿಗೆ 2642, ಗೋವಾದಿಂದ ಹುಬ್ಬಳ್ಳಿಗೆ 1176, ಹುಬ್ಬಳ್ಳಿಯಿಂದ ಗೋವಾಕ್ಕೆ 1334, ಹುಬ್ಬಳ್ಳಿಯಿಂದ ಚೆನ್ನೈಗೆ 2963, ಚೆನ್ನೈನಿಂದ 3078, ಹುಬ್ಬಳ್ಳಿಯಿಂದ ಹೈದರಾಬಾದ್‌ಗೆ 1704, ಹೈದರಾಬಾದ್‌ನಿಂದ ಹುಬ್ಬಳ್ಳಿಗೆ 1651, ಕೊಚ್ಚಿಯಿಂದ ಹುಬ್ಬಳ್ಳಿಗೆ 1256, ಹುಬ್ಬಳ್ಳಿಯಿಂದ ಕೊಚ್ಚಿಗೆ 1095, ಹುಬ್ಬಳ್ಳಿಯಿಂದ ಮಂಗಳೂರಿಗೆ 58, ಮಂಗಳೂರಿನಿಂದ ಹುಬ್ಬಳ್ಳಿಗೆ 66 ಹಾಗೂ ಹುಬ್ಬಳ್ಳಿಯಿಂದ ಜಬಲಪುರಕ್ಕೆ 8 ಮತ್ತು ಜಬಲಪುರದಿಂದ ಹುಬ್ಬಳ್ಳಿಗೆ 14 ಜನರು ವಿಮಾನಯಾನ ಮಾಡಿದ್ದಾರೆ. ಜುಲೈ ತಿಂಗಳಲ್ಲಿ ವಿಮಾನಯಾನ ಮೂಲಕ ವಿವಿಧ ಪ್ರದೇಶಗಳಿಂದ ಹುಬ್ಬಳ್ಳಿಗೆ 21957 ಜನ ಆಗಮಿಸಿದ್ದರೆ, ಹುಬ್ಬಳ್ಳಿಯಿಂದ ವಿವಿಧ ಸ್ಥಳಗಳಿಗೂ 23591ಜನ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubballi-Dharwad ಪ್ರತ್ಯೇಕ ಮಹಾನಗರ ಪಾಲಿಕೆ: ಸರ್ಕಾರದಿಂದ ಮಧ್ಯಂತರ ರಾಜ್ಯಪತ್ರ
ಸದ್ಯಕ್ಕೆ ಸಿಎಂ ಚರ್ಚೆ ಗೊಡವೆಯೇ ನನಗೆ ಬೇಡ: ಡಿ.ಕೆ.ಶಿವಕುಮಾರ್
Hubli: ಸರ್ಕಾರ ಮತ್ತು ವಿಜಯೇಂದ್ರ ನಡುವೆ ಉತ್ತಮ ಅಡ್ಜಸ್ಟ್‌ಮೆಂಟ್ ಇದೆ: ಯತ್ನಾಳ್ ಆರೋಪ
Hubli: ಕಸದ ವಾಹನಕ್ಕೆ ಸ್ಕೂಟಿ ಡಿಕ್ಕಿ: ಓರ್ವ ವಿದ್ಯಾರ್ಥಿ ಸಾವು, ಮತ್ತೋರ್ವ ಗಂಭೀರ
BJP ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಗೊತ್ತಿಲ್ಲ: ಸಚಿವ ಜೋಶಿ