ಶ್ರೀಕೃಷ್ಣ ವೇಷ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸೋಣದ ಸೊಗಸ್
Team Udayavani, Sep 4, 2018, 3:05 PM IST
ನವಿಮುಂಬಯಿ: ಸಾಹಿತ್ಯ ಬಳಗ ಮುಂಬಯಿ ಹಾಗೂ ನವಿ ಮುಂಬಯಿ ಕನ್ನಡ ಸಂಘ ವಾಶಿ ಇವರ ಜಂಟಿ ಅಯೋಜನೆಯಲ್ಲಿ ಶ್ರೀಕೃಷ್ಣ ವೇಷ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸೋಣದ ಸೊಗಸ್ ವೈಶಿಷ್ಟéಪೂರ್ಣ ಕಾರ್ಯಕ್ರಮವು ಆ. 25 ಮತ್ತು 26 ರಂದು ಎರಡು ದಿನಗಳ ಕಾಲ ನವಿ ಮುಂಬಯಿಯ ಕನ್ನಡ ಸಂಘ ವಾಶಿಯ ಸಭಾಗೃಹದಲ್ಲಿ ಜರಗಿತು.
ಆ. 25 ರಂದು ಶ್ರಾವಣ ಕವಿಗೋಷ್ಠಿ ಸೋಣದ ಸೊಗಸ್ ಕಾರ್ಯಕ್ರಮವು ಡಾ| ಕೆ. ಗೋವಿಂದ ಭಟ್ ಅವರ ಅಧ್ಯಕ್ಷತೆಯಲ್ಲಿ ಗೀತಾಲಕ್ಷ್ಮೀ ಅವರ ನಿರೂಪಣೆಯಲ್ಲಿ ನಿನ್ನ ನಾಮದ ಬಲವೊಂದಿದ್ದರೆ ಸಾಕು ವಿಷಯದ ಮೇಲೆ ನಡೆಯಿತು. ನಗರದ ಕವಿಗಳಾದ ಸಾ. ದಯಾ, ಡಾ| ಕರುಣಾಕರ ಶೆಟ್ಟಿ, ಪಣಿಯೂರು, ಪ್ರಕಾಶ್ ತದಡಿಕರ, ಪ್ರಮೋದ ಮಾಡ, ಬಿ. ಎಚ್. ಕಟ್ಟಿ, ರಶ್ಮಿ ಭಟ್, ಪೊಳಲಿ ಮಹೇಶ್ ಹೆಗ್ಡೆ ಪುಣೆ, ತಾರಾ ಬಂಗೇರ, ಡಾ| ಜಿ. ಪಿ. ಕುಸುಮಾ, ಅಮಿತಾ ಭಾಗವತ್. ಕುಮುದಾ ಆಳ್ವ, ನಳಿನಿ ಪ್ರಸಾದ್, ಶೋಭಾ ಶೆಟ್ಟಿ, ಶಾರದಾ ಅಂಬೆಸಂಗೆ, ಶಾಂತಾ ಶೆಟ್ಟಿ, ಶಾಂತಾ ಶಾಸ್ತ್ರಿ, ಅಶೋಕ್ ವಳದೂರು, ಗೀತಾ ಲಕ್ಷ್ಮೀಕೃಷ್ಣ ಭಗವಾನ್ ಅವರು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು.
ಕವಿಗೋಷ್ಠಿಯ ನಂತರ ಜರಗಿದ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾರಾಯಣಾಮೃತ ಪೌಂಡೇಶನ್ ಇದರ ಸಂಸ್ಥಾಪಕ ಎನ್. ಆರ್. ರಾವ್ ಅವರು ವಹಿಸಿದ್ದು, ಮುಖ್ಯ ಅಭ್ಯಾಗತರಾಗಿ ಬಿಲ್ಲವರ ಅಸೋಸಿಯೇಶನ್ ನಿಕಟಪೂರ್ವ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಆಗಮಿಸಿದ್ದರು. ಸಾಹಿತ್ಯ ಬಳಗದ ಅಧ್ಯಕ್ಷ ಎಚ್. ಬಿ. ಎಲ್. ರಾವ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಧುಸೂದನ್ ಟಿ. ಆರ್. ಅವರು ಜೇಷ್ಠ ನಾಗರಿಕರಿಗಾಗಿ ಕೃಷ್ಣನು ಮನೆಗೆ ಬಂದರೆ ನಾನೇನು ಮಾಡುವೆ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಭಾಗವಹಿಸಿದರು.
ಆನಂತರ ನಡೆದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಕಾವ್ಯಾ ಭಾಗವತ್, ಕಲಾ ಭಾಗವತ್, ಹೇಮಾ ಹೆಗ್ಡೆ, ಮೇಧಾ ಹೆಗ್ಡೆ, ದಿವ್ಯಾ ರಾವ್, ಆಶಾ ಕುಲಕರ್ಣಿ, ಸ್ವಾತಿ ಕುಲಕರ್ಣಿ, ಸುಮಾ ನಾಯಕ್ ಅವರು ಭಾಗವಹಿಸಿದ್ದರು. ಅನುರಾಧ ರಾವ್ ಅವರು ಕಾರ್ಯಕ್ರಮ ನಿರ್ವಹಿಸಿದರು.
ಆ. 26 ರಂದು ಅಪರಾಹ್ನ 3ರಿಂದ ಶ್ರೀಕೃಷ್ಣ ವೇಷ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. 17 ನೇ ವರ್ಷದ ಈ ಸ್ಪರ್ಧೆಯಲ್ಲಿ ಮುದ್ದು ಕೃಷ್ಣನಾಗಿ 7 ಮಕ್ಕಳು, ಬಾಲ ಕೃಷ್ಣನಾಗಿ 7 ಮಕ್ಕಳು ಮತ್ತು ನೃತ್ಯ ಕೃಷ್ಣ ಸ್ಪರ್ಧೆಯಲ್ಲಿ 7 ಮಂದಿ ಮಕ್ಕಳು ಭಾಗವಹಿಸಿ ಸಭಿಕರ ಮೆಚ್ಚುಗೆ ಪಡೆದರು. ತೀರ್ಪುಗಾರರಾಗಿ ರಚಿತಾ ರಾವ್ ಮತ್ತು ರೇಖಾ ರಾವ್ ಸಹಕರಿಸಿದರೆ, ಕರುಣಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಚಿತಾ ರಾವ್ ನಿರ್ದೇಶನದಲ್ಲಿ ಕಾನಾ ಸೋ ಜಾರೆ ಮತ್ತು ವಿಷ್ಣು ಸ್ತೋತ್ರಂ ಸಮೂಹ ನೃತ್ಯ ನಡೆಯಿತು. ಭಾರ್ಗವಿ ಪೋತಿ, ಪ್ರತೀûಾ ಭಟ್, ಸೌಮ್ಯಶ್ರೀ ಭಟ್, ತನ್ವಿ ರಾವ್, ಜಾನ್ಹವಿ ಪೋತಿ, ಮನಸ್ವಿ ಭಾರಧ್ವಾಜ್ ಭಾಗವಹಿಸಿದರು. ಹಿನ್ನೆಲೆ ಗಾಯನ ಸಹನಾ ಪೋತಿ ಮತ್ತು ಸಹನಾ ಭಾರಧ್ವಾಜ್ ನೀಡಿದರು. ಪದ್ಮ ಭಟ್ ಬಳಗದವರು ನಡೆಸಿಕೊಟ್ಟ ಸಮೂಹ ನೃತ್ಯದಲ್ಲಿ ಗುಬ್ಬಿ ಹಾಡು ಪದ್ಯಕ್ಕೆ ಪದ್ಮ ಭಟ್, ಸ್ಮಿತಾ ಭಟ್, ಸಂಧ್ಯಾ ಮೋಹನ್, ಶ್ವೇತಾ ಅಂಬೇಕರ್, ಜ್ಯೋತಿ ಪ್ರಸಾದ್, ಜ್ಯೊತಿ ರಾಮ್ ಪ್ರಸಾದ್ ಭಾಗವಹಿಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೊವಾಯಿ ಎಸ್‌ಎಂ ಶೆಟ್ಟಿ ಶಿಕ್ಷಣ ಸಂಕುಲದ ಪ್ರಾಂಶುಪಾಲ ಡಾ| ಶ್ರೀಧರ ಶೆಟ್ಟಿ ವಹಿಸಿ ಮಾತನಾಡಿ, ಬದುಕಿನಲ್ಲಿ ಶಿಸ್ತಿನ ಮಹತ್ವ ತಿಳಿಸಿದರು. ಮುಖ್ಯ ಅಭ್ಯಾಗತರಾಗಿ ಆಗಮಿಸಿದ ನ್ಯಾಯವಾದಿ ಪ್ರಕಾಶ್ ಎಲ…. ಶೆಟ್ಟಿ ಅವರು ಕೃಷ್ಣನ ಬದುಕು ಅವನ ರಾಜಕೀಯ ಇಂದಿನ ನಮ್ಮ ಬದುಕಿಗೆ ಹೇಗೆ ಅನ್ವಯವಾಗುತ್ತದೆ ಎಂಬುವುದನ್ನು ವಿವರಿಸಿದರು.
ಇಸ್ಕಾನ್‌ನ ಅಕಿಂಚನ್ ಸ್ವಾಮೀಜಿಯವರು ನಾವು ಮಾನವನಾಗಿ ಹೇಗೆ ಬಾಳು ಸಾಗಿಸಬೇಕೆನ್ನುವ ಬಗ್ಗೆ ಉಪನ್ಯಾಸ ನೀಡಿದರು. ಮತ್ತೂಬ್ಬ ಅತಿಥಿ ಸುಧೀರ್ ಆರ್. ಎಲ್. ಶೆಟ್ಟಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರತಿಭಾ ರಾವ್ ಸಭಾ ಕಾರ್ಯಕ್ರಮವನ್ನು ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Belagavi ಅಧಿವೇಶನದಲ್ಲಿ ಸರಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್
Constitution Day: ಜನಾಶೀರ್ವಾದ ಇರುವ ತನಕ ನಾನು ಜಗ್ಗುವುದಿಲ್ಲ: ಸಿಎಂ ಸಿದ್ದರಾಮಯ್ಯ
Karnataka Govt.,: ಸಂಪುಟ ಸರ್ಜರಿ ಸನ್ನಿಹಿತ: ಡಿಸಿಎಂ ಡಿಕೆಶಿ ಸುಳಿವು!
ರಾಹುಲ್ ಬ್ರಿಟನ್ ಪೌರತ್ವದ ಬಗ್ಗೆ ಪರಿಶೀಲಿಸುತ್ತಿದ್ದೇವೆ: ಹೈಕೋರ್ಟ್‌ಗೆ ಸರ್ಕಾರ!
Hard Disk: ಬಿಟ್ಕಾಯಿನ್ ಇದ್ದ ಹಾಡ್‌ಡಿಸ್ಕ್ ಎಸೆದ ಪ್ರೇಯಸಿ, ಪರದಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.