ರಾಗಿಯ ರಾಜ್ಯಭಾರ!


Team Udayavani, Sep 5, 2018, 6:00 AM IST

6.jpg

“ರಾಗಿ ತಿಂದವನಿಗೆ ರೋಗವಿಲ್ಲ’ ಎಂಬುದು ಈ ದಿನಗಳಲ್ಲಿ ಎಲ್ಲರೂ ಹೇಳುವ ಮಾತು. ರಾಗಿ ಗಂಜಿ, ರಾಗಿ ರೊಟ್ಟಿ, ರಾಗಿ ದೋಸೆ, ರಾಗಿ ಮುದ್ದೆ ತಿಂದರೆ ಮಧುಮೇಹವನ್ನು ದೂರವಿಡಬಹುದು. ಅತ್ಯಧಿಕ ಕ್ಯಾಲ್ಸಿಯಂ, ಕಬ್ಬಿಣಾಂಶ, ಪ್ರೋಟಿನ್‌, ನಾರು ಹಾಗೂ ಖನಿಜಾಂಶಗಳನ್ನೊಳಗೊಂಡ ರಾಗಿ, ಆರೋಗ್ಯದ ದೃಷ್ಟಿಯಿಂದ ಉತ್ತಮ ಧಾನ್ಯ. ರಾಗಿಯಿಂದ ಸುಲಭವಾಗಿ ಮಾಡಬಹುದಾದ ಕೆಲವೊಂದು ಪಾಕ ವಿಧಾನಗಳು ಇಲ್ಲಿವೆ. 

1. ರಾಗಿ ಪಾಯಸ
ಬೇಕಾಗುವ ಸಾಮಗ್ರಿ: ರಾಗಿ-2 ಕಪ್‌, ತೆಂಗಿನತುರಿ-1 ಕಪ್‌, ಗಸಗಸೆ-3 ಚಮಚ, ತುರಿದ ಬೆಲ್ಲ-2 ಕಪ್‌, ಹಾಲು-3 ಕಪ್‌, ಏಲಕ್ಕಿ ಪುಡಿ-1/2 ಚಮಚ, ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ, ಬಾದಾಮಿ-10

ಮಾಡುವ ವಿಧಾನ: ರಾಗಿಯನ್ನು 5-6 ಗಂಟೆ ನೀರಿನಲ್ಲಿ ನೆನೆಸಿ ಬಸಿದು, ಗಸಗಸೆ, ತೆಂಗಿನತುರಿ ಸೇರಿಸಿ 
ಅರೆದು, ಶೋಧಿಸಿ ಇರಿಸಿ. ಬಾಣಲೆಯಲ್ಲಿ 1/2 ಕಪ್‌ ನೀರು ಕಾಯಿಸಿ, ಬೆಲ್ಲದ ತುರಿ ಸೇರಿಸಿ ಕರಗಿಸಿ. ಬೆಲ್ಲ ಕರಗಿದ ಮೇಲೆ ಹಾಲು, ಅರೆದ ರಾಗಿ ಮಿಶ್ರಣ ಹಾಕಿ ಕುದಿಸಿ, ಒಲೆಯಿಂದ ಕೆಳಗಿರಿಸಿ. ತಣಿದ ಮೇಲೆ ಏಲಕ್ಕಿ ಪುಡಿ, ದ್ರಾಕ್ಷಿ, ಗೋಡಂಬಿ, ಬಾದಾಮಿ ತುಣುಕುಗಳನ್ನು ಸೇರಿಸಿದರೆ, ಪೌಷ್ಟಿಕವಾದ ರಾಗಿ ಪಾಯಸ ರೆಡಿ.     

2. ರಾಗಿ ಪಡ್ಡು
ಬೇಕಾಗುವ ಸಾಮಗ್ರಿ: ರಾಗಿ -1 ಕಪ್‌, ಅಕ್ಕಿ-2 ಕಪ್‌, ಉದ್ದಿನಬೇಳೆ-1ಕಪ್‌, ಕಡಲೆಬೇಳೆ-2 ಚಮಚ, ತೊಗರಿ ಬೇಳೆ-2 ಚಮಚ, ಹೆಸರುಬೇಳೆ-2 ಚಮಚ, ಮೆಂತ್ಯೆ-1 ಚಮಚ, ಅಕ್ಕಿ ಹಿಟ್ಟು-3 ಚಮಚ, ಜೀರಿಗೆ ಪುಡಿ-4 ಚಮಚ, ಕತ್ತರಿಸಿದ ಹಸಿಮೆಣಸು-6, ಕತ್ತರಿಸಿದ ಕೊತ್ತಂಬರಿ ಸೊಪ್ಪು-4 ಚಮಚ, ಕತ್ತರಿಸಿದ ಈರುಳ್ಳಿ-1/2 ಕಪ್‌,

ಉಪ್ಪು-ರುಚಿಗೆ, ಎಣ್ಣೆ-1 ಕಪ್‌.
ಮಾಡುವ ವಿಧಾನ: ಎರಡು ಚಮಚ ಎಣ್ಣೆಗೆ, ಈರುಳ್ಳಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು ಹಾಕಿ ಹುರಿದಿಡಿ. ರಾಗಿ, ಅಕ್ಕಿ, ಮೆಂತ್ಯೆ ಹಾಗೂ ಬೇಳೆಯನ್ನು ಆರು ಗಂಟೆ ನೆನೆಸಿ, ಬಸಿದು, ಅರೆದಿಡಿ. ಅದು ಹುದುಗಿದ ಮೇಲೆ, ಅಕ್ಕಿ ಹಿಟ್ಟು ಸೇರಿಸಿ ಕಲಸಿ. ಈ ಮಿಶ್ರಣಕ್ಕೆ ಹುರಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸು, ಜೀರಿಗೆ ಪುಡಿ, ಉಪ್ಪು ಸೇರಿಸಿ ಕಲಕಿ, ದೋಸೆ ಹಿಟ್ಟಿನ ಹದಕ್ಕೆ ತನ್ನಿ. ನಂತರ ಕಾಯಿಸಿದ ಪಡ್ಡಿನ ತವಾದ ಮೇಲೆ ಎಣ್ಣೆ ಸವರಿ, ಬಟ್ಟಲುಗಳಿಗೆ ಹಿಟ್ಟು ಹಾಕಿ ಎರಡೂ ಬದಿ ಬೇಯಿಸಿದರೆ, ಗರಿಗರಿಯಾದ ರಾಗಿ ಪಡ್ಡು, ಕಾಯಿ ಚಟ್ನಿಯೊಂದಿಗೆ ತಿನ್ನಲು ರೆಡಿ.  

3. ರಾಗಿ ಮುತಿಯಾ
ಬೇಕಾಗುವ ಸಾಮಗ್ರಿ: ರಾಗಿ ಹಿಟ್ಟು-2 ಕಪ್‌, ಗೋದಿ ಹಿಟ್ಟು-2 ಕಪ್‌, ಕಡಲೆ ಹಿಟ್ಟು-1 ಕಪ್‌, ಕತ್ತರಿಸಿದ ಮೆಂತ್ಯೆ ಸೊಪ್ಪು-1 ಕಪ್‌, ಕತ್ತರಿಸಿದ ಕೊತ್ತಂಬರಿ ಸೊಪ್ಪು-4 ಚಮಚ, ಹಸಿಮೆಣಸಿನಕಾಯಿ 3-4, ಶುಂಠಿ ತುರಿ-1 ಚಮಚ, ಅಚ್ಚ ಖಾರದ ಪುಡಿ-2 ಚಮಚ, ಉಪ್ಪು-ರುಚಿಗೆ ತಕ್ಕಷ್ಟು, ಜೀರಿಗೆ ಪುಡಿ-3 ಚಮಚ, ಎಣ್ಣೆ-1/4 ಕಪ್‌. ಒಗ್ಗರಣೆಗೆ-ಎಣ್ಣೆ-4 ಚಮಚ, ಸಾಸಿವೆ, ಇಂಗು-1/4 ಚಮಚ, ಎಳ್ಳು-3 ಚಮಚ, ಕರಿಬೇವಿನ ಎಸಳು-8.

ಮಾಡುವ ವಿಧಾನ: ಒಗ್ಗರಣೆಯ ಸಾಮಗ್ರಿಗಳನ್ನು ಬಿಟ್ಟು, ಮಿಕ್ಕೆಲ್ಲ ಸಾಮಗ್ರಿಗಳನ್ನು ಸೇರಿಸಿ, ನೀರು ಹಾಕಿ ಪೂರಿ ಹಿಟ್ಟಿನ ಹದಕ್ಕೆ ಗಟ್ಟಿಯಾಗಿ ಕಲಸಿ. ಈ ಮಿಶ್ರಣದಿಂದ ಮೊಟ್ಟೆಯಾಕಾರದ ಉಂಡೆಗಳನ್ನು ಮಾಡಿ, ಹಬೆಯಲ್ಲಿ ಹತ್ತು ನಿಮಿಷ ಬೇಯಿಸಿ. ತಣಿದ ಮೇಲೆ, ಬಿಲ್ಲೆಯಾಕಾರದಲ್ಲಿ ಒಂದು ಇಂಚಿನ ಅಳತೆಯ ತುಂಡುಗಳನ್ನು ಮಾಡಿ ಇಡಿ.ನಂತರ ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಸಾಸಿವೆ-ಇಂಗು-ಎಳ್ಳು-ಕರಿಬೇವು ಹಾಕಿ ಒಗ್ಗರಣೆ ಮಾಡಿ, ಬೇಯಿಸಿದ ಬಿಲ್ಲೆಗಳ ಮೇಲೆ ಹಾಕಿ ಕೈಯಾಡಿದರೆ ರುಚಿಯಾದ ರಾಗಿ ಮುತಿಯಾ ತಯಾರು.

4. ರಾಗಿ ಹಿಟ್ಟಿನ ತಾಲಿಪಟ್ಟು
ಬೇಕಾಗುವ ಸಾಮಗ್ರಿ: ರಾಗಿ ಹಿಟ್ಟು-3 ಕಪ್‌, ಅಕ್ಕಿ ಹಿಟ್ಟು-2 ಕಪ್‌, ಕತ್ತರಿಸಿದ ಈರುಳ್ಳಿ-1/2 ಕಪ್‌, ಕತ್ತರಿಸಿದ ಹಸಿಮೆಣಸು-5, ತೆಂಗಿನತುರಿ-1/2 ಕಪ್‌, ಕತ್ತರಿಸಿದ ಕರಿಬೇವಿನ ಸೊಪ್ಪು-2 ಚಮಚ, ಕತ್ತರಿಸಿದ ಪುದಿನಾ ಸೊಪ್ಪು-1 ಚಮಚ, ಕತ್ತರಿಸಿದ ಕೊತ್ತಂಬರಿ ಸೊಪ್ಪು-3 ಚಮಚ, ಜೀರಿಗೆ ಪುಡಿ-4 ಚಮಚ, ತುಪ್ಪ-2 ಚಮಚ, ಉಪ್ಪು-ರುಚಿಗೆ ತಕ್ಕಷ್ಟು, ಎಣ್ಣೆ-4 ಚಮಚ.

ಮಾಡುವ ವಿಧಾನ: ರಾಗಿ ಹಿಟ್ಟು, ಅಕ್ಕಿ ಹಿಟ್ಟು, ಈರುಳ್ಳಿ, ಹಸಿಮೆಣಸು. ತೆಂಗಿನತುರಿ, ಕರಿಬೇವು, ಪುದೀನಾ, ಕೊತ್ತಂಬರಿ ಸೊಪ್ಪು, ಜೀರಿಗೆ ಪುಡಿ, ತುಪ್ಪ, ಉಪ್ಪು ಬೆರೆಸಿ, ನೀರು ಹಾಕಿ ರೊಟ್ಟಿಯ ಹದಕ್ಕೆ ಕಲಸಿ. ಆ ಮಿಶ್ರಣದಿಂದ ಲಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂದು ಎಣ್ಣೆ ಸವರಿದ ತವಾದ ಮೇಲೆ, ರೊಟ್ಟಿಯ ಆಕಾರದಲ್ಲಿ ತಟ್ಟಿ. ತವಾ ಕಾಯಲಿರಿಸಿ, ಸ್ವಲ್ಪ ಎಣ್ಣೆ ಹಾಕಿ, ಎರಡೂ ಬದಿಯನ್ನು ಹದವಾಗಿ ಬೇಯಿಸಿ. ಗರಿಗರಿಯಾದ ರಾಗಿ ತಾಲಿಪಟ್ಟನ್ನು ಕಾಯಿ ಚಟ್ನಿಯೊಂದಿಗೆ ಸವಿಯಬಹುದು. 

5. ರಾಗಿ ನಿಪ್ಪಟ್ಟು
ಬೇಕಾಗುವ ಸಾಮಗ್ರಿ: ರಾಗಿ ಹಿಟ್ಟು-2 ಕಪ್‌, ಅಕ್ಕಿ ಹಿಟ್ಟು-2 ಕಪ್‌, ಮೈದಾ ಹಿಟ್ಟು.-1 ಕಪ್‌, ಚಿರೋಟಿ ರವೆ-1/2 ಕಪ್‌, ತರಿಯಾಗಿ ಪುಡಿ ಮಾಡಿದ ಹುರಿಗಡಲೆ-2 ಚಮಚ, ತರಿಯಾಗಿ ಪುಡಿ ಮಾಡಿದ ಕಡಲೆಕಾಯಿ ಬೀಜ-3 ಚಮಚ, ಕತ್ತರಿಸಿದ ಈರುಳ್ಳಿ-2 ಚಮಚ, ಅಚ್ಚ ಖಾರದ ಪುಡಿ-2 ಚಮಚ, ಇಂಗು-1/2 ಚಮಚ, ತರಿಯಾಗಿ ಪುಡಿ ಮಾಡಿದ ಎಳ್ಳು-1/2 ಚಮಚ, ಉಪ್ಪು, ವನಸ್ಪತಿ ಅಥವಾ ತುಪ್ಪ-3 ಚಮಚ, ಕರಿಬೇವಿನ ಎಲೆ-10.

ಮಾಡುವ ವಿಧಾನ: ರಾಗಿ ಹಿಟ್ಟು, ಅಕ್ಕಿ ಹಿಟ್ಟು, ಮೈದಾ ಹಿಟ್ಟು, ಚಿರೋಟಿ ರವೆ, ಹುರಿಗಡಲೆ, ಕಡಲೆಕಾಯಿ ಬೀಜದ ಪುಡಿಗಳನ್ನು ಸೇರಿಸಿ. ಈ ಮಿಶ್ರಣಕ್ಕೆ ಇಂಗು, ಖಾರದ ಪುಡಿ, ಎಳ್ಳು, ವನಸ್ಪತಿ, ಈರುಳ್ಳಿ, ಕರಿಬೇವು, ಉಪ್ಪು ಬೆರೆಸಿ, ನೀರಿನೊಂದಿಗೆ ವಡೆಯ ಹಿಟ್ಟಿನ ಹದಕ್ಕೆ ಗಟ್ಟಿಯಗಿ ಕಲಸಿ, ವಡೆಯಾಕಾರದಲ್ಲಿ ತಟ್ಟಿ ಎಣ್ಣೆಯಲ್ಲಿ ಕರಿದರೆ ರಾಗಿ ನಿಪ್ಪಟ್ಟು ರೆಡಿ. 

-ಜಯಶ್ರೀ ಕಾಲ್ಕುಂದ್ರಿ, ಬೆಂಗಳೂರು

ಟಾಪ್ ನ್ಯೂಸ್

ISREL

Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ

highcort dharwad

Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್

BYV-yathnal

BJP Internal Dispute: ಶಾಸಕ ಬಸನಗೌಡ ಯತ್ನಾಳ್‌ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು

Pejavara-Shree–Siddu

Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

DKShivakumar

Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-bumm

Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ

ISREL

Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ

highcort dharwad

Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್

BYV-yathnal

BJP Internal Dispute: ಶಾಸಕ ಬಸನಗೌಡ ಯತ್ನಾಳ್‌ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು

Pejavara-Shree–Siddu

Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.