ಮಾಲ್‌ಗಳಲ್ಲಿ ಚಾರ್ಜಿಂಗ್ ಸ್ಟೇಷನ್ ಕಡ್ಡಾಯ?
Team Udayavani, Sep 5, 2018, 12:11 PM IST
ಬೆಂಗಳೂರು: ದೇಶದಲ್ಲಿ ಮೊದಲ ಬಾರಿಗೆ “ಎಲೆಕ್ಟ್ರಿಕ್ ವೆಹಿಕಲ್ ಪಾಲಿಸಿ’ ಪರಿಚಯಿಸಿದ ರಾಜ್ಯ ಸರ್ಕಾರ, ಈಗ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ನಗರದ ಎಲ್ಲ ಶಾಪಿಂಗ್ ಮಾಲ್‌ಗಳು ಮತ್ತು ವಾಣಿಜ್ಯ ಕಟ್ಟಡಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೇಷನ್‌ಗಳ ನಿರ್ಮಾಣ ಕಡ್ಡಾಯಗೊಳಿಸಲು ಉದ್ದೇಶಿಸಿದೆ. ಈ ಸಂಬಂಧ ನಗರ ಯೋಜನಾ ಕಾಯ್ದೆಯಲ್ಲಿ ತಿದ್ದುಪಡಿ ತರಲು ಚಿಂತನೆ ನಡೆಸಿದೆ.
ವಾಯು ಮತ್ತು ಶಬ್ದಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಪ್ರೋತ್ಸಾಹಿಸಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಸರಿಸುಮಾರು ಅಂದಾಜು 100 ಮಾಲ್‌ಗಳು, 6 ಸಾವಿರಕ್ಕೂ ಅಧಿಕ ಕೇಂದ್ರೀಕೃತ ಹವಾನಿಯಂತ್ರಿತ ಕಟ್ಟಡಗಳು, ಮಲ್ಟಿಪ್ಲೆಕ್ಸ್ ಮತ್ತು ಚಿತ್ರಮಂದಿರಗಳು 300ಕ್ಕೂ ಹೆಚ್ಚಿವೆ. ಇನ್ನು ಅಪ್ಪಟ ವಾಣಿಜ್ಯ ಕಟ್ಟಡಗಳು ಒಂದು ಲಕ್ಷಕ್ಕೂ ಅಧಿಕವಾಗಿವೆ. ಹಾಗೊಂದು ವೇಳೆ ಚಾರ್ಜಿಂಗ್ ಸ್ಟೇಷನ್ ಕಡ್ಡಾಯಗೊಳಿಸಿದರೆ, ಪ್ರತಿ ಅರ್ಧ ಕಿ.ಮೀ. ಅಂತರದಲ್ಲಿ ವಾಹನಗಳ ಚಾರ್ಜಿಂಗ್ ಸೌಲಭ್ಯ ದೊರೆಯಲಿದೆ.
ಮಾಲ್-ವಾಣಿಜ್ಯ ಕಟ್ಟಡಗಳೇ ಯಾಕೆ?: ವಾಣಿಜ್ಯ ಕಟ್ಟಡಗಳಲ್ಲಿ ಈ ಸ್ಟೇಷನ್‌ಗಳನ್ನು ನಿರ್ಮಾಣ ಕಡ್ಡಾಯಗೊಳಿಸಲು ಉದ್ದೇಶಿಸಲಾಗಿದೆ. ಎಲೆಕ್ಟ್ರಿಕ್ ವೆಹಿಕಲ್‌ಗಳು ತೈಲ ಆಧಾರಿತ ವಾಹನಗಳಿಗಿಂತ ಭಿನ್ನ. ಈ ವಾಹನಗಳ ಚಾರ್ಜಿಂಗ್‌ಗೆ 2-3 ತಾಸು ಬೇಕಾಗುತ್ತದೆ. ಇದಕ್ಕೆ ಪೂರಕವಾಗಿ ಸಾಮಾನ್ಯವಾಗಿ ವಾಣಿಜ್ಯ ಕಟ್ಟಡಗಳಲ್ಲಿ ವಾಹನಗಳ ನಿಲುಗಡೆಗೆ ಉತ್ತಮ ವ್ಯವಸ್ಥೆ ಇರುತ್ತದೆ.
ಅಲ್ಲದೆ, ಇಲ್ಲಿಗೆ ಬರುವ ಜನರು ಶಾಪಿಂಗ್, ಮನರಂಜನೆ ಮತ್ತಿತರ ಉದ್ದೇಶಗಳಿಗೆ ಗಂಟೆಗಟ್ಟಲೆ ಸಮಯ ಕಳೆಯುತ್ತಾರೆ. ಹಾಗಾಗಿ, ಈ ಪ್ರದೇಶಗಳಲ್ಲಿ ಸ್ಥಾಪಿಸಲು ಚಿಂತನೆ ನಡೆದಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶನಾಲಯದ ನಿರ್ದೇಶಕ ರಾಕೇಶ್ ಸಿಂಗ್ “ಉದಯವಾಣಿ’ಗೆ ತಿಳಿಸಿದರು.
ಇದರ ಉದ್ದೇಶ ಜನರಿಗೆ ಪೆಟ್ರೋಲ್ ಬಂಕ್‌ಗಳು ಲಭ್ಯವಾಗುವಂತೆಯೇ ವಿದ್ಯುತ್‌ಚಾಲಿತ ವಾಹನಗಳ ಚಾರ್ಜಿಂಗ್ ಸ್ಟೇಷನ್‌ಗಳು ಸಿಗುವಂತಾಗಬೇಕು. ಆಗ, ಗ್ರಾಹಕರಲ್ಲಿ ವಿಶ್ವಾಸ ಮೂಡುತ್ತದೆ. ಬಳಕೆಗೆ ಪ್ರೋತ್ಸಾಹ ಸಿಕ್ಕಂತಾಗುತ್ತದೆ. ಈ ಹೊಸ ಕ್ರಮದಿಂದ ಪ್ರತಿ ಅರ್ಧ ಕಿ.ಮೀ. ಅಂತರದಲ್ಲೇ ಈ ಸ್ಟೇಷನ್‌ಗಳು ದೊರೆಯಲಿವೆ. ವಾಣಿಜ್ಯ ಕಟ್ಟಡಗಳ ಪಟ್ಟಿಯಲ್ಲಿ ಅಪಾರ್ಟ್‌ಮೆಂಟ್‌ಗಳು, ಪ್ರತಿಷ್ಠಿತ ಆಸ್ಪತ್ರೆಗಳು, ಮಹಾವಿದ್ಯಾಲಯಗಳು, ಐಷಾರಾಮಿ ಹೋಟೆಲ್‌ಗಳು ಕೂಡ ಬರಲಿದ್ದು, ಈ ಮೂಲಕ ಎಲ್ಲ ಕ್ಷೇತ್ರವನ್ನೂ ಒಳಗೊಂಡಂತೆ ಆಗಲಿದೆ ಎಂದೂ ಅವರು ಹೇಳಿದರು.
ಎಲ್ಲ ಕಟ್ಟಡಗಳಲ್ಲೂ ಕಷ್ಟ: ಹೀಗೆ ಚಾರ್ಜಿಂಗ್ ಸ್ಟೇಷನ್ ತೆರೆಯುವ ವಾಣಿಜ್ಯ ಕಟ್ಟಡಗಳು ಗ್ರಾಹಕರನ್ನು ಆಕರ್ಷಿಸಲಿವೆ. ಏನೂ ಖರೀದಿಸದಿದ್ದರೂ ಕೊನೆಪಕ್ಷ ಜನ ವಾಹನಗಳ ಚಾರ್ಜಿಂಗ್‌ಗೆ ಬರುತ್ತಾರೆ. ಚಾರ್ಜಿಂಗ್ ಅವಧಿಯಲ್ಲಿ ಅದೇ ಮಳಿಗೆಯಲ್ಲಿ ಒಂದು ಸುತ್ತು ಹಾಕುತ್ತಾರೆ. ಅಷ್ಟಕ್ಕೂ ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳೇ ಇರಲಿವೆ. ಇದೆಲ್ಲದರಿಂದ ಈ ಕ್ರಮ ಸ್ವಾಗತಾರ್ಹ.
ಆದರೆ, ಈ ಎಲ್ಲ ಅಪ್ಪಟ ವಾಣಿಜ್ಯ ಕಟ್ಟಡಗಳಲ್ಲೂ ಚಾರ್ಜಿಂಗ್ ಸ್ಟೇಷನ್ ಹಾಕುವುದು ಕಷ್ಟ ಎಂದು ಹೆಸರು ಹೇಳಲಿಚ್ಛಿಸದ ಬಿಬಿಎಂಪಿ ಯೋಜನಾ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು. ಇತ್ತೀಚೆಗೆ ವಿದ್ಯುತ್‌ಚಾಲಿತ ವಾಹನಗಳನ್ನು ಉತ್ತೇಜಿಸಲು ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)ವು ಈ ಮಾದರಿಯ ವಾಹನಗಳ ಚಾರ್ಜಿಂಗ್‌ಗೆ ತರಲುವ ವಿದ್ಯುತ್‌ಗೆ ರಿಯಾಯ್ತಿ ದರ ವಿಧಿಸಿದೆ.
ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಕೂಡ “ನ್ಯಾಷನಲ್ ಎಲೆಕ್ಟ್ರಿಕ್ ಮೊಬಿಲಿಟಿ ಮಿಷನ್’ ಅಡಿ 40 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿ ಪ್ರತಿ 3ರಿಂದ 5 ಕಿ.ಮೀ.ಗೊಂದು ಚಾರ್ಜಿಂಗ್ ಸ್ಟೇಷನ್ ಸ್ಥಾಪಿಸಲು ಚಿಂತನೆ ನಡೆಸಿದ್ದು, ಈ ಸಂಬಂಧ ತನ್ನ ಅಭಿಪ್ರಾಯ ಸಲ್ಲಿಸುವಂತೆ ಕೇಂದ್ರವು ರಾಜ್ಯ ಇಂಧನ ಇಲಾಖೆಗೆ ಪತ್ರ ಬರೆದಿದ್ದು, ಪ್ರತಿ ಸ್ಟೇಷನ್‌ಗೆ 25 ಲಕ್ಷ ರೂ. ನೀಡುವುದಾಗಿ ಹೇಳಿದೆ. ಅಷ್ಟೇ ಅಲ್ಲ, ಯಾರು ಬೇಕಾದರೂ ಚಾರ್ಜಿಂಗ ಸ್ಟೇಷನ್ ಸ್ಥಾಪಿಸಲು ಮುಕ್ತ ಅವಕಾಶ ಕಲ್ಪಿಸಿದ್ದು, ಬೆಸ್ಕಾಂ ಈ ನಿಟ್ಟಿನಲ್ಲಿ ಸಿದ್ಧತೆ ನಡೆಸಿದೆ.
ಈ ಎಲ್ಲ ಕಾರಣಗಳಿಂದ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಏರಿಕೆಯಾಗುತ್ತಿದೆ. ರಾಜ್ಯದಲ್ಲಿ 2018ರ ಜೂನ್ ಅಂತ್ಯಕ್ಕೆ ಅಂದಾಜು 12 ಸಾವಿರಕ್ಕೂ ಅಧಿಕ ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿದ್ದು, ಈ ಪೈಕಿ ನಗರ ವ್ಯಾಪ್ತಿಯಲ್ಲೇ 6,837 ಇವೆ. ಎಲೆಕ್ಟ್ರಿಕ್ ವೆಹಿಕಲ್ ನೀತಿ, ದರದಲ್ಲಿ ರಿಯಾಯ್ತಿ ಮತ್ತಿತರ ಅಂಶಗಳಿಂದ ಈಚಿನ ದಿನಗಳಲ್ಲಿ ಈ ಮಾದರಿಯ ವಾಹನಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡುಬರುತ್ತಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.
* 100 ನಗರದಲ್ಲಿರುವ ಶಾಪಿಂಗ್ ಮಾಲ್‌ಗಳು
* 1 ಲಕ್ಷ ವಾಣಿಜ್ಯ ಕಟ್ಟಡಗಳ ಸಂಖ್ಯೆ ಅಂದಾಜು
* 85 ಬೆಸ್ಕಾಂ ವಿವಿಧೆಡೆ ನಿರ್ಮಿಸಲು ಉದ್ದೇಶಿಸಿರುವ ಚಾರ್ಜಿಂಗ್ ಸ್ಟೇಷನ್‌ಗಳು
* 6,837 ನಗರದಲ್ಲಿರುವ ಎಲೆಕ್ಟ್ರಿಕ್ ವಾಹನಗಳು
* ವಿಜಯಕುಮಾರ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aishwarya Gowda Case: ಇನ್ನೊಂದು ಚಿನ್ನದಂಗಡಿಗೆ ವಂಚಿಸಿದ್ದ ಐಶ್ವರ್ಯ ಗ್ಯಾಂಗ್
Arrested: ಟ್ಯಾಟೂ ಆರ್ಟಿಸ್ಟ್ ಬಂಧನ: 2.50 ಕೋಟಿ ರೂ. ಡ್ರಗ್ಸ್ ಜಪ್ತಿ
Arrested: ಹೊಸ ವರ್ಷಾಚರಣೆಗೆ ಮಾದಕ ವಸ್ತು ಮಾರುತ್ತಿದ್ದ 11 ಮಂದಿ ಸೆರೆ
Response to Demand: ಬಿಸಿಯೂಟ ನೌಕರರಿಗೆ ಇಡುಗಂಟು: ಸರಕಾರದ ಮಾರ್ಗ ಸೂಚಿ ಪ್ರಕಟ
Imprisonment: ಸಂಘಟನೆಗಾಗಿ ದರೋಡೆ: ಜೆಎಂಬಿ ಉಗ್ರನಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Aishwarya Gowda Case: ಇನ್ನೊಂದು ಚಿನ್ನದಂಗಡಿಗೆ ವಂಚಿಸಿದ್ದ ಐಶ್ವರ್ಯ ಗ್ಯಾಂಗ್
Sabarimala; ಯಾತ್ರಿಗಳಿಗೆ ಅರಣ್ಯ ಮಾರ್ಗದ ವಿಶೇಷ ಪಾಸ್ ತಾತ್ಕಾಲಿಕ ಸ್ಥಗಿತ
Arrested: ಟ್ಯಾಟೂ ಆರ್ಟಿಸ್ಟ್ ಬಂಧನ: 2.50 ಕೋಟಿ ರೂ. ಡ್ರಗ್ಸ್ ಜಪ್ತಿ
Transformation; ಕೇವಲ 18 ತಿಂಗಳಲ್ಲಿ 55 ಕೆ.ಜಿ. ತೂಕ ಕಳೆದುಕೊಂಡ ಖ್ಯಾತ ನಟ ರಾಮ್ ಕಪೂರ್
2025: ಬರುವುದೆಲ್ಲಾ ಬರಲಿ ಗೆಲುವು ನಮ್ಮದಾಗಲಿ: ಸಿನಿಮಾದ 6 ವಿಭಾಗದವರ ನಿರೀಕ್ಷೆಯ ಮಾತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.