ಅವಸರ ತಪ್ಪುಗಳಿಗೆ ಕಾರಣವಾಗಬಾರದು
Team Udayavani, Sep 5, 2018, 2:51 PM IST
ನೆಹರೂನಗರ: ಪತ್ರಿಕೋದ್ಯಮ ಎನ್ನುವುದು ಅವಸರದ ಸಾಹಿತ್ಯ. ಆದರೆ ಅವಸರ ತಪ್ಪುಗಳಿಗೆ ಎಡೆಮಾಡಿಕೊಡಬಾರದು. ನಾವು ಮಾಡುವ ಒಂದು ಸಣ್ಣ ತಪ್ಪು ನಾವು ಅದುವರೆಗೆ ಸಂಪಾದಿಸಿದ ಎಲ್ಲ ಗೌರವಗಳನ್ನು ಕ್ಷಣದಲ್ಲಿ ಹಾಳು ಮಾಡಿಬಿಡುತ್ತದೆ ಎಂದು ಪತ್ರಕರ್ತೆ ಮನೋರಮಾ ಹೆಜಮಾಡಿ ಹೇಳಿದರು. ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ವತಿಯಿಂದ ಸೋಮವಾರ ನಡೆದ ಪತ್ರಕರ್ತ ಮೇಷ್ಟ್ರು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬರವಣಿಗೆ ಎಂದರೆ ನಮ್ಮೊಳಗಿನ ತುಡಿತಕ್ಕೆ ಶಬ್ದಗಳನ್ನು ಜೋಡಿಸುವುದಾ ಗಿದೆ. ಆ ಮೂಲಕ ವಿಷಯವನ್ನು ಜೀವಂತಗೊಳಿಸುತ್ತಾ ಹೋಗಬಹುದು.
ಲೇಖನ ಸಣ್ಣದಾದರೂ ಸಂಪೂರ್ಣ ಮಾಹಿತಿಯಿಂದ ಕೂಡಿರಬೇಕು. ಹಾಗೆಯೇ ಒಂದು ಲೇಖನದೊಳಗೆ ಶಬ್ದಗಳನ್ನು ಪುನರಾವರ್ತಿಸುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ಆಗ ಆ ಲೇಖನದ ತೂಕ ಹೆಚ್ಚಾಗುತ್ತದೆ ಎಂದವರು ತಿಳಿಸಿದರು.
ಪತ್ರಕರ್ತ ಮಾಹಿತಿ ಕಣಜ
ಪತ್ರಕರ್ತರಾದವರಿಗೆ ಯಾವುದೇ ಮಾಹಿತಿ ಬೇಡವೆಂದಿಲ್ಲ. ಅವರೊಂದು ಮಾಹಿತಿ ಕಣಜ ಆಗಿರಬೇಕು. ಅಗತ್ಯ ಬಂದಾಗ ಯಾವುದೇ ಮಾಹಿತಿಯನ್ನು ಮೆಲುಕು ಹಾಕುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಒಂದು ವಿಷಯಕ್ಕೆ ಅಥವಾ ಒಂದು ಪ್ರದೇಶಕ್ಕೆ ಕಾರ್ಯಕ್ಷೇತ್ರ ಸೀಮಿತವಾಗದಿರಲಿ ಎಂದು ಮನೋರಮಾ ಹೇಳಿದರು. ವಿಭಾಗದ ಉಪನ್ಯಾಸಕಿ ಸುಶ್ಮಿತಾ ಜಯಾನಂದ್, ಪ್ರಜ್ಞಾ ಬಾರ್ಯ ಉಪಸ್ಥಿತರಿದ್ದರು. ವಿಭಾಗದ ಸಂಯೋಜಕ ರಾಕೇಶ್ ಕುಮಾರ್ ಕಮ್ಮಜೆ ಸ್ವಾಗತಿಸಿ, ಪೂಜಾ ಪಕ್ಕಳ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ರಾಧಿಕಾ ಕಾಂತಡ್ಕ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.