ಇಲಿಜ್ವರ: ಮುನ್ನೆಚ್ಚರಿಕೆ ಕ್ರಮಕ್ಕೆ ಆರೋಗ್ಯ ಇಲಾಖೆ ಸೂಚನೆ
Team Udayavani, Sep 6, 2018, 6:45 AM IST
ಬೆಂಗಳೂರು: ಕೇರಳದಲ್ಲಿ ಇಲಿಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನೆರೆಪೀಡಿತ ಕೊಡಗು ಸೇರಿದಂತೆ ರಾಜ್ಯದಲ್ಲಿ ಇಲಿಜ್ವರ ಕಾಣಿಸಿಕೊಳ್ಳದಂತೆ ತಡೆಯಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸಜ್ಜಾಗಿದೆ.
ಕಳೆದ ವರ್ಷ ಈ ಸಮಯಕ್ಕೆ ಒಟ್ಟು 186 ಇಲಿ ಜ್ವರದ ಪ್ರಕರಣಗಳು ಪತ್ತೆಯಾಗಿದ್ದವು. ಅಲ್ಲದೆ ಇಬ್ಬರು ರೋಗಿಗಳು ಇಲಿಜ್ವರದಿಂದಾಗಿ ಮರಣ ಹೊಂದಿದ್ದರು. ಈ ಬಾರಿ ಕೇವಲ 136 ಪ್ರಕರಣಗಳ ಪತ್ತೆಯಾಗಿವೆ.
ಇಲ್ಲಿಯವರೆಗೂ ಯಾವುದೇ ವ್ಯಕ್ತಿಗಳು ಇಲಿ ಜ್ವರದಿಂದಾಗಿ ನಿಧನರಾಗಿರುವ ಕುರಿತು ವರದಿಯಾಗಿಲ್ಲ. ಕಳೆದ ವರ್ಷ ಒಟ್ಟು 475 ಪ್ರಕರಗಳು ಪತ್ತೆಯಾಗಿದ್ದವು. ಜುಲೈನಲ್ಲಿ ಶಿವಮೊಗ್ಗದಲ್ಲಿ 22, ಹಾವೇರಿಯಲ್ಲಿ 3, ಉತ್ತರ ಕನ್ನಡದಲ್ಲಿ 3,
ಚಿಕ್ಕಮಗಳೂರಿನಲ್ಲಿ 2, ದಕ್ಷಿಣ ಕನ್ನಡದಲ್ಲಿ 44, ಉಡುಪಿಯಲ್ಲಿ 57, ಕೊಡಗಿನಲ್ಲಿ 3, ಮಂಡ್ಯ ಹಾಗೂ ಚಾಮರಾಜನಗರದಲ್ಲಿ ತಲಾ ಒಂದೊಂದು ಇಲಿಜ್ವರ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ಉಪ ನಿರ್ದೇಶಕ ಡಾ.ಪ್ರಕಾಶ ಕುಮಾರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.