ವೇಷಧಾರಿಯಿಂದ ಹುಷಾರಾಗಿರಿ
Team Udayavani, Sep 7, 2018, 6:00 AM IST
ಇವನು ಅವನಲ್ಲ …
ಎಂಬ ಟ್ಯಾಗ್‌ಲೈನ್ ಬ್ಯಾನರ್ ಮೇಲೆ ಅಚ್ಚಾಗಿತ್ತು. ಇವನು ಅವನಲ್ಲ ಎಂದರೆ ಇವನ್ಯಾರು? ಅವನಲ್ಲ ಎಂದರೆ ಅವನ್ಯಾರು? ಹೀಗೆ ನಾನಾ ಪ್ರಶ್ನೆಗಳು ಅಲ್ಲಿದ್ದವರ ತಲೆಯಲ್ಲಿ ಸುಳಿದಾಡುತಿತ್ತು. ಆದರೆ, ನಿರ್ದೇಶಕ ವಿಕ್ರಮಾದಿತ್ಯ ಚಿತ್ರದ ಬಗ್ಗೆ ಹೆಚ್ಚು ಬಿಟ್ಟುಕೊಡಲಿಲ್ಲ. “ಇದೊಂದು ಸಾಮಾಜಿಕ ವಿಡಂಬನೆ ಚಿತ್ರ. ಮನುಷ್ಯ ವೇಷ ಹಾಕಿ ಹೇಗೆ ಯಾಮಾರಿಸುತ್ತಾನೆ ಎಂದು ಚಿತ್ರದ ಮೂಲಕ ಹೇಳುತ್ತಿದ್ದೇವೆ. ಮನುಷ್ಯ ಆಸೆಗಳ ಬೆನ್ನು ಬಿದ್ದಾಗ ಅವನ ಆಸೆ ಈಡೇರುವುದಿಲ್ಲ. ಅದೇ ಬೆನ್ನು ಹಾಕಿದಾಗ, ಆ ಆಸೆಗಳ ಪೂರೈಸುತ್ತದೆ ಎಂಬುದನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇವೆ’ ಎಂದರು.
ವಿಕ್ರಮಾದಿತ್ಯ ಮಾತನಾಡಿದ್ದು “ವೇಷಧಾರಿ’ ಎಂಬ ಹೊಸ ಚಿತ್ರದ ಬಗ್ಗೆ. ನ್ಯೂಸ್ ಚಾನಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರು, ಇದೇ ಮೊದಲ ಬಾರಿಗೆ ನಿರ್ದೇಶಕರಾಗಿದ್ದಾರೆ. ನಿರ್ದೇಶಕರಾಗಬೇಕೆಂಬ ಅವರ ಆಸೆಗೆ ಹಣ ಹಾಕಿದ್ದು ಅನಿಲ್ ಅಂಬಿ. “ವೇಷಧಾರಿ’ ಚಿತ್ರದಲ್ಲಿ ಆರ್ಯನ್, ಶ್ರುತಿ ರಾಜೇಂದ್ರ, ಸೋನಮ್, ಮೋಹನ್ ಜುನೇಜ, ಮೈಖಲ್ ಮಧು, ಮಿಮಿಕ್ರಿ ಗೋಪಿ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ವಿ. ಮನೋಹರ್ ಅವರು ಸಂಗೀತ ಸಂಯೋಜಿಸಿದ್ದು, ಅವರ ಅನುಪಸ್ಥಿತಿಯಲ್ಲಿ ಇತ್ತೀಚೆಗೆ ಹಾಡು ಗಳು ಮತ್ತು ಟೀಸರ್ ಬಿಡುಗಡೆ ಮಾಡಲಾಯಿತು.
ನಿರ್ದೇಶಕರು ಇದಕ್ಕೂ ಮುನ್ನ “ವೇಷಧಾರಿ’ ಎಂಬ ಕಾದಂಬರಿ ಬರೆದಿದ್ದು, ಆ ಕಾದಂಬರಿ ಆಧರಿಸಿ ಈ ಚಿತ್ರ ಮಾಡಲಾಗಿದೆ. ತಮ್ಮ ಮೊದಲ ಚಿತ್ರವೇ ಕಾದಂಬರಿ ಆಧರಿತ ಚಿತ್ರ ಎಂದು ಹೇಳಿಕೊಳ್ಳುವುದಕ್ಕೆ ಖುಷಿ ಎಂದ ನಾಯಕ ಆರ್ಯನ್, “ಒಬ್ಬ ಮನುಷ್ಯ ಅರಿಷಡ್ವರ್ಗಗಳನ್ನು ಬಿಟ್ಟು ಬದುಕೋಕೆ ಸಾಧ್ಯವಾ’ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ ಎಂದರು. ಇನ್ನು ಶ್ರುತಿ ರಾಜೇಂದ್ರ ಮತ್ತು ಸೋನಮ್ ಇಬ್ಬರೂ ತಮ್ಮ ಪಾತ್ರಗಳು ಬಹಳ ಚೆನ್ನಾಗಿದೆ ಎಂದು ಕೊಂಡಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.