![Horoscope: ಈ ರಾಶಿಯ ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ](https://www.udayavani.com/wp-content/uploads/2025/02/7-19-415x249.jpg)
![Horoscope: ಈ ರಾಶಿಯ ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ](https://www.udayavani.com/wp-content/uploads/2025/02/7-19-415x249.jpg)
Team Udayavani, Sep 7, 2018, 6:55 AM IST
ವಿಜಯಪುರ: “ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳಿಂದ ಸಂಪುಟ ವಿಸ್ತರಣೆ ವೇಳೆ ಎರಡೂ ಪಕ್ಷಗಳಲ್ಲಿ ಬಿರುಕು ಕಾಣಿಸಿಕೊಳ್ಳಲಿದ್ದು, ಅತೃಪ್ತರು ಸರ್ಕಾರ ಪತನಗೊಳಿಸಲಿದ್ದಾರೆ. ಮೈತ್ರಿ ಸರ್ಕಾರ ಪತನವಾಗುತ್ತಲೇ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಎಂ.ಬಿ. ಪಾಟೀಲ ಬಿಜೆಪಿಗೆ ಬಂದರೆ ನಮ್ಮ ಸರ್ಕಾರದಲ್ಲಿ ಸಚಿವ ಸ್ಥಾನ ನೀಡುತ್ತೇವೆ’ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಹಿರಂಗ ಆಹ್ವಾನ ನೀಡಿದ್ದಾರೆ.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇಸ್ರೇಲ್ ಕೃಷಿ ಅಧ್ಯಯನಕ್ಕೆ ತೆರಳಿರುವ ತೋಟಗಾರಿಕಾ ಸಚಿವ ಎಂ.ಸಿ.ಮನಗೂಳಿ ಪ್ರವಾಸದಿಂದ ಮರಳುವ ವೇಳೆಗೆ ಮೈತ್ರಿ ಸರ್ಕಾರ ಪತನವಾಗಿ, ಮಾಜಿ ಸಚಿವರಾಗಿ ತವರಿಗೆ ಬರಲಿದ್ದಾರೆ.ಮೇಲ್ಮನೆ ಚುನಾವಣೆಯಲ್ಲಿ ಎಂ.ಬಿ.ಪಾಟೀಲ ಸಹೋದರ ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಅವರ ಸೋಲು ಖಚಿತ ಎಂದರು.
ಸಿದ್ದರಾಮಯ್ಯ ಅವರು ಸಿಎಂ ಹುದ್ದೆಯಂಥ ಮಹತ್ವದ ಸ್ಥಾನ ನಿಭಾಯಿಸಿದರೂ ಸ್ಥಳೀಯ ಸಂಸ್ಥೆಯ ಮೇಲ್ಮನೆ ಚುನಾವಣೆಯಲ್ಲಿ ಮತದಾನ ಮಾಡದೆ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಆ ಮೂಲಕ ತಮ್ಮ ಮತದಾನ ಕರ್ತವ್ಯ ನಿಭಾಯಿಸದೆ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದ್ದಾರೆ. ಸಚಿವ ಎಂ.ಸಿ.ಮನಗೂಳಿ ಅವರೂ ಮತದಾನ ಮಾಡದೆ ತಮ್ಮ ಕರ್ತವ್ಯ ನಿರ್ಲಕ್ಷಿಸಿದ್ದಾರೆ.
– ಬಸನಗೌಡ ಪಾಟೀಲ ಯತ್ನಾಳ, ಬಿಜೆಪಿ ಶಾಸಕ
You seem to have an Ad Blocker on.
To continue reading, please turn it off or whitelist Udayavani.