ನಗರದಲ್ಲಿ ಬಾಯ್ದೆರೆದಿರುವ ಫುಟ್ಪಾತ್ಗಳು!
Team Udayavani, Sep 7, 2018, 10:05 AM IST
ಮಹಾನಗರ: ನಗರದ ಬಹುತೇಕ ಕಡೆಗಳಲ್ಲಿ ಫುಟ್ಪಾತ್ಗಳು ಪಾದಚಾರಿಗಳ ಸುಗಮ ಸಂಚಾರಕ್ಕೆ ಯೋಗ್ಯವಾಗಿಲ್ಲ. ಅದರಲ್ಲಿಯೂ ಜನನಿ ಬಿಡ ಪ್ರದೇಶಗಳಲ್ಲಿಯೇ ಫುಟ್ ಪಾತ್ಗೆ ಹಾಸಿರುವ ಚಪ್ಪಡಿ ಕಲ್ಲುಗಳೇ ಕಿತ್ತು ಹೋಗಿದ್ದು, ಅಪಾಯದ ಮುನ್ಸೂಚನೆಯಾಗಿ ಚರಂಡಿಗಳು ಬಾಯ್ದೆರೆದು ನಿಂತಿವೆ. ಇಲ್ಲಿ ಎಚ್ಚರ ತಪ್ಪಿ ಹೆಜ್ಜೆ ಇಟ್ಟರೆ ಅನಾಹುತ ತಪ್ಪಿದ್ದಲ್ಲ.
ನಗರದ ಪ್ರಮುಖ ರಸ್ತೆಗಳಲ್ಲಿ ಫುಟ್ ಪಾತ್ಗಳಿಗೆ ಹಾಸಿದ್ದ ಸಿಮೆಂಟ್ ಸ್ಲ್ಯಾಬ್ ಮುರಿದು ಚರಂಡಿಗಳು ತೆರೆದುಕೊಂಡಿವೆ. ಮಂಗಳೂರು ನಗರ ಸ್ಮಾರ್ಟ್ ಸಿಟಿಯಾಗುತ್ತಿದೆ. ಆದರೆ ಇಲ್ಲಿನ ಫುಟ್ಪಾತ್ಗಳ ದುಃಸ್ಥಿತಿ ನೋಡಿದರೆ ಗಂಭೀರವೆನಿಸುತ್ತದೆ. ಕಾಂಕ್ರೀಟ್ ರಸ್ತೆಗಳಾಗಿ ವರ್ಷ ಕಳೆದರೂ ಅಲ್ಲಿ ಫುಟ್ಪಾತ್ ನಿರ್ಮಾಣವಾಗಿಲ್ಲ. ಸಾರ್ವಜನಿಕರಿಂದ ಫುಟ್ಪಾತ್ ಸಮಸ್ಯೆ ಬಗ್ಗೆ ಪ್ರತಿನಿತ್ಯ ದೂರುಗಳು ಬರುತ್ತಿ ದ್ದರೂ ಪಾಲಿಕೆಯಿಂದ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗುತ್ತಿಲ್ಲ ಎನ್ನುವುದು ನಗರವಾಸಿಗಳ ಆರೋಪ. ಈ ಹಿನ್ನೆಲೆಯಲ್ಲಿ ನಗರದ ಎಂ.ಜಿ. ರೋಡ್, ಕೆ.ಎಸ್.ರಾವ್ ರೋಡ್, ಕುಳೂರು ಫೆರ್ರಿ ರೋಡ್(ಲೇಡಿಹಿಲ್ನಿಂದ – ಮಣ್ಣಗುಡ್ಡೆ ರಸ್ತೆ), ಪಿ.ವಿ.ಎಸ್. ವೃತ್ತ- ಬಂಟ್ಸ್ ಹಾಸ್ಟೆಲ್ ಸೇರಿದಂತೆ ನಗರದ ಹಲವು ಪ್ರಮುಖ ರಸ್ತೆಗಳಲ್ಲಿರುವ ಫುಟ್ ಪಾತ್ಗಳಲ್ಲಿ ಸದ್ಯದ ಸ್ಥಿತಿಯನ್ನು ‘ಸುದಿನ’ ಸೆರೆ ಹಿಡಿದಿರುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.