ಹಬ್ಬಕ್ಕೆ ಮೆರುಗು ನೀಡುವ ಸಾಂಪ್ರದಾಯಿಕ ಬಟ್ಟೆಗಳು
Team Udayavani, Sep 7, 2018, 1:12 PM IST
ಹಬ್ಬ ಶುರುವಾಗಿದೆ. ಖರೀದಿ ಜೋರಾಗಿದೆ. ಫ್ಯಾಶನ್ ಪ್ರಿಯರು ಹೊಸ ಬಟ್ಟೆಗಳಿಗೆ ಮೊರೆ ಹೋಗಿದ್ದಾರೆ. ಅದಕ್ಕೆ ತಕ್ಕಂತೆಯೇ ಮಾರುಕಟ್ಟೆಯಲ್ಲೂ ನಾನಾ ತರಹೇವಾರಿ ಡಿಸೈನ್‌ಗಳ ಬಟ್ಟೆಗಳು ಕಾಲಿಟ್ಟಿದ್ದು, ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಸಿಗುತ್ತಿದೆ. ಮುಕ್ತಿಗೂ ಖಾದಿ ಬಟ್ಟೆ ಉತ್ತಮ ಆಯ್ಕೆ ಎನ್ನುತ್ತಿದ್ದಾರೆ.
ದೇಶದೆಲ್ಲೆಡೆ ವೈಭವದಿಂದ ಆಚರಿಸಲ್ಪಡುವ ಗಣೇಶ ಹಬ್ಬ ಈಗ ಮತ್ತೆ ಬಂದಿದೆ. ಪ್ರತೀ ವರ್ಷ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ ದಿನ ಆಚರಿಸಲ್ಪಡುವ ಗಣೇಶ ಹಬ್ಬದಂದು ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಮೂರ್ತಿಯನ್ನು ಪೂಜಿಸುತ್ತಾರೆ. ಮೋದಕ, ಕಡುಬು ಸಿಹಿತಿಂದು ಸಂಭ್ರಮಿಸುತ್ತಾರೆ. ಇದೇ ವೇಳೆ ಹೊಸ ಬಟ್ಟೆ ಖರೀದಿಸಿ, ಮಿರ ಮಿರನೆ ಮಿಂಚದೇ ಇದ್ದರೆ ಹಬ್ಬದ ಖುಷಿ ಪೂರ್ಣಗೊಳ್ಳಲಾರದು.
ಹೌದು.. ಗಣೇಶ ಹಬ್ಬಕ್ಕೆಂದು ಹೊಸ ಬಟ್ಟೆ ಖರೀದಿ ಮಾಡುವ ಪರಿಪಾಠ ಇಂದು ನಿನ್ನೆಯದಲ್ಲ. ಈ ಹಿಂದೆಯೇ ಹಬ್ಬ ಬಂತೆಂದರೆ ಸಾಕು ಮನೆ ಮಂದಿ ಹೊಸ ಬಟ್ಟೆ ತೊಟ್ಟು ಸಂಭ್ರಮಿಸುತ್ತಿದ್ದರು. ಅದೇ ರೀತಿ ಈ ಬಾರಿಯೂ, ಫ್ಯಾಶನ್ ಪ್ರಿಯರು ಹೊಸ ಬಟ್ಟೆಗಳಿಗೆ ಮೊರೆ ಹೋಗಿದ್ದಾರೆ. ಅದಕ್ಕೆ ತಕ್ಕಂತೆಯೇ ಮಾರುಕಟ್ಟೆಯಲ್ಲೂ ನಾನಾ ತರಹೇವಾರಿ ಡಿಸೈನ್‌ಗಳ ಬಟ್ಟೆಗಳು ಕಾಲಿಟ್ಟಿದ್ದು, ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಸಿಗುತ್ತಿದೆ.
ಮೊದಲ ಪ್ರಾಶಸ್ತ್ಯ
ಹಬ್ಬವೆಂದ ಮೇಲೆ ಪಾಶ್ಚಾತ್ಯ ಬಟ್ಟೆಗಳಿಗಿಂತ ಸಾಂಪ್ರದಾಯಿಕ ಬಟ್ಟೆಗಳಿಗೆ ಮಹತ್ವ ಹೆಚ್ಚು. ಜರಿ ಪಂಚೆಯಲ್ಲಿ ಹಬ್ಬದ ಆಚರಣೆ ಮಾಡಿದರೆ ಅದರ ಗಮ್ಮತ್ತೇ ಬೇರೆ. ಇತ್ತೀಚೆಗೆ ನಗರ ಪ್ರದೇಶದಲ್ಲಿ ಪಂಚೆ ಉಡುವ ಮಂದಿ ಕಡಿಮೆ ಇದ್ದರೂ, ಗ್ರಾಮೀಣ ಪ್ರದೇಶದಲ್ಲಿ ಈ ಪದ್ಧತಿ ಇಂದಿಗೂ ಇದೆ. ಪುರುಷರು ಜರಿಪಂಚೆಯನ್ನು ಉಟ್ಟು ಹಬ್ಬದ ದಿನದಂದು ಕಂಗೊಳಿಸುತ್ತಾರೆ. ಗಣೇಶ ಚತುರ್ಥಿಯ ದಿನದಂದು ಸಾಮಾನ್ಯವಾಗಿ ಗಣಪತಿ ದೇವಸ್ಥಾನಕ್ಕೆ ತೆರಳುತ್ತಾರೆ. ಈ ಸಮಯದಲ್ಲಿಯೂ ಪ್ಯಾಂಟ್-ಟೀಶರ್ಟ್‌ಗಳಿಗಿಂತೂ ಹೆಚ್ಚಿನ ಆಯ್ಕೆ ಅಂದರೆ ಸಾಂಪ್ರದಾಯಿಕ ಬಟ್ಟೆಗಳಾಗಿವೆ.
ಹಬ್ಬಕ್ಕೆ ಮೆರುಗು ನೀಡುವ ಖಾದಿ
ಸಾಂಪ್ರದಾಯಿಕ ಉಡುಗೆಯಾದ ಖಾದಿ ಬಟ್ಟೆಗಳು ಹಬ್ಬಕ್ಕೆ ಮತ್ತಷ್ಟು ಕಳೆ ನೀಡುವುದರಲ್ಲಿ ಸಂಶಯವಿಲ್ಲ. ಇದೇ ಕಾರಣದಿಂದಾಗಿ ನಗರದಲ್ಲಿ ಖಾದಿ ಬಟ್ಟೆ ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಸೀರೆ, ಶರ್ಟ್, ಜುಬ್ಟಾ, ಪೈಜಾಮ, ವೇಸ್‌ಕೋಟ್, ಪುಟ್ಟ ಮಕ್ಕಳ ಲಂಗ ಜಾಕೀಟು, ಕಾಲೇಜು ಹುಡುಗಿಯರಿಗಾಗಿ ಚೂಡಿದಾರ್, ಆಕರ್ಷಕ ಖಾದಿ ಪರ್ಸ್, ಬ್ಯಾಗ್, ಖಾದಿ ದುಪಟ್ಟಾ, ಟಾಪ್… ಹೀಗೆ ಎಲ್ಲ ವಯೋಮಾನದವರಿಗೂ ಬೇಕಾದ ದರಿಸುಗಳು ಖಾದಿಯಲ್ಲಿರುವಾಗ ಹಬ್ಬಕ್ಕೆ ಇದಕ್ಕಿಂತ ಒಳ್ಳೆಯದು ಮತ್ತೇನು ಬೇಕು ಎನ್ನುತ್ತಿದ್ದಾರೆ ಗ್ರಾಹಕರು.
ಮಹಿಳೆಯರು ಕೂಡ ಹಬ್ಬಕ್ಕೆ ಹೊಸ ಬಟ್ಟೆ ಧರಿಸುತ್ತಿರುತ್ತಾರೆ. ಅದರಲ್ಲೂ ಹಬ್ಬದ ಸಮಯದಲ್ಲಿ ಸಂಬಂಧಿಕರ ಮನೆಗೆ ತೆರಳಿ ಹಿರಿಯರ ಆಶಿರ್ವಾದ ಪಡೆಯುವುದು ಸಾಮಾನ್ಯ. ಸೀರೆಯಲ್ಲಿ ಸಿಲ್ಕ್, ಫ್ಯಾನ್ಸಿ, ಎಂಬ್ರಾಯಿಡರಿ ವರ್ಕ್, ರೇಷ್ಮೆ, ಕಾಂಜೀವರಂ ಸೇರಿದಂತೆ ಮತ್ತಿತರ ಶೈಲಿಯ ಸೀರೆಗಳ ಖರೀದಿ ಹೆಚ್ಚಿದೆ. ಅದೇ ರೀತಿ ಯುವತಿಯರು ಕುರ್ತಾ, ಅನಾರ್ಕಲಿ, ಗೌನ್, ಚೋಲಿ, ಲೆಹಂಗ, ಸಲ್ವಾರ್ ಕಮೀಜ್, ಲಾಂಗ್ ಸ್ಕರ್ಟ್ ಖರೀದಿ ಮಾಡುತ್ತಿದ್ದಾರೆ.
ಹಬ್ಬಕ್ಕೆ ಅನೇಕ ಆಫರ್
ಮಾರುಕಟ್ಟೆಯಲ್ಲಿ ಗಣೇಶ ಹಬ್ಬಕ್ಕೆ ಖರೀದಿಸುವ ಬಟ್ಟೆಗಳ ಮೇಳೆ ಅನೇಕ ಆಫರ್‌ಗಳನ್ನು ನೀಡಲಾಗುತ್ತಿದೆ. ಕೆಲವೆಡೆ ಒಂದು ಬಟ್ಟೆ ಕೊಂಡರೆ ಮತ್ತೊಂದು ಉಚಿತವಾಗಿದ್ದರೆ. ಇನ್ನು ಕೆಲವೆಡೆ ಶೇ.15. 20 ಮತ್ತು 30ರಷ್ಟು ಆಫರ್ ನೀಡಲಾಗಿದೆ. ಇವಿಷ್ಟೇ ಅಲ್ಲದೆ, ಆನ್‌ಲೈನ್ ಶಾಪಿಂಗ್ ಪ್ರಿಯರಿಗೂ ಖರೀದಿಸುವ ಬಟ್ಟೆಗಳ ಮೇಲೆ ಆಫರ್‌ಗಳ ಸುರಿಮಳೆಯನ್ನೇ ನೀಡಲಾಗಿದೆ. ಗಣೇಶ ಹಬ್ಬದ ಅಂಗವಾಗಿ ನಗರದ ಟೆಕ್ಸ್‌ಟೈಲ್ಸ್, ಗಾರ್ಮೆಂಟ್ಸ್, ಬಟ್ಟೆ ಅಂಗಡಿಗಳಲ್ಲಿ ಹೆಚ್ಚಿನ ಜನಸಂದಣಿ ಇದೆ. ನಗರದ ಪ್ರಮುಖ ಜವಳಿ ಅಂಗಡಿಗಳಲ್ಲಿ ವಿವಿಧ ಆಫರ್‌ಗಳಿದ್ದು, ಕೆಲವೊಂದು ಕಡೆಗಳಲ್ಲಿ ರಸ್ತೆ ಬದಿಗಳಲ್ಲಿ ಬಟ್ಟೆ ಮಾರುವವರು ಕೂಡ ಹೆಚ್ಚಾಗಿದ್ದಾರೆ.
ಹೆಚ್ಚಿನ ಪ್ರಾಶಸ್ತ್ಯ
ಹಬ್ಬಕ್ಕೆ ಒಂದು ವಾರವಿರುವಾಗಲೇ ಬಟ್ಟೆಗಳ ಖರೀದಿ ಪ್ರಾರಂಭವಾಗಿದೆ. ಸಾಂಪ್ರದಾಯಿಕ ಶೈಲಿಯ ಬಟ್ಟೆಗಳಿಗೆ ಗ್ರಾಹಕರು ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದಾರೆ.
– ಗೌರವ್,
ವ್ಯಾಪಾರಿ
ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.