ಐತಿಹಾಸಿಕ ತೀರ್ಪು; ಮಾಧ್ಯಮ-ಸರ್ಕಾರಕ್ಕಿದೆ ಜವಾಬ್ದಾರಿ


Team Udayavani, Sep 7, 2018, 3:43 PM IST

righr.jpg

ಸಲಿಂಗಕಾಮ ಕುರಿತ ಸುಪ್ರೀಂಕೋರ್ಟ್‌ ತೀರ್ಪು ಐತಿಹಾಸಿಕವಾದದ್ದು. 2013ರಲ್ಲಿ ತಾನೇ ನೀಡಿದ್ದ ತೀರ್ಪನ್ನು ಪಕ್ಕಕ್ಕೆ ಸರಿಸುವ ಮೂಲಕ ಸಂವಿಧಾನದ ಮೂಲಭೂತ ಹಕ್ಕನ್ನು ಎತ್ತಿಹಿಡಿದಿರುವ ಸುಪ್ರೀಂಕೋರ್ಟ್‌, ಎಲ್ಲರ ಖಾಸಗಿತನಗಳಿಗೆ ಗೌರವ ನೀಡಬೇಕಾದದ್ದು ಈಗಿನ ಆದ್ಯ ಕರ್ತವ್ಯವಾಗಿದೆ ಎಂದಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 377 ಅನ್ನು ಭಾಗಶಃ ರದ್ದು ಮಾಡಿರುವ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಸಂವಿಧಾನ ಪೀಠ, ವರ್ಷಗಳಿಂದ ಹೋರಾಟ ನಡೆಸಿಕೊಂಡು ಬರುತ್ತಿದ್ದ ಎಲ್‌ಜಿಬಿಟಿ ಸಮುದಾಯಕ್ಕೆ ನಿರಾಳತೆ ನೀಡಿದೆ.

ಎಲ್‌ಜಿಬಿಟಿ ಸಮುದಾಯಕ್ಕೂ ತನ್ನದೇ ಆದ ಹಕ್ಕುಗಳಿವೆ ಎಂದು ಮೊದಲು ಹೇಳಿದ್ದು ದೆಹಲಿ ಹೈಕೋರ್ಟ್‌. 2009ರಲ್ಲೇ ಈ ಸಂಬಂಧ ತೀರ್ಪು ನೀಡಿದ್ದ ಅದು ಸಲಿಂಗಕಾಮ ಅಪರಾಧವಲ್ಲ ಎಂದಿತ್ತು. ಈ ಮೂಲಕ ದೆಹಲಿ ಹೈಕೋರ್ಟ್‌ ಎಲ್‌ಜಿಬಿಟಿ ಸಮುದಾಯದ 140 ವರ್ಷಗಳ ಕಾಯುವಿಕೆಗೆ ಒಂದು ಅಂತ್ಯ ಹಾಡಿತ್ತು. ಆದರೆ, ದೆಹಲಿ ಹೈಕೋರ್ಟ್‌ನ ಈ ತೀರ್ಪನ್ನು 2013ರಲ್ಲಿ ರದ್ದು ಮಾಡಿದ್ದ ಸುಪ್ರೀಂ ಕೋರ್ಟ್‌ ಸಲಿಂಗ ಕಾಮ ಅಪರಾಧವೆಂದು ಘೋಷಿಸಿ ಎಲ್‌ಜಿಬಿಟಿ ಸಮುದಾಯದ ಮೇಲೆ ಬರೆ ಎಳೆದಿತ್ತು. ಅಲ್ಲದೆ ಇಂಥ ಕಾನೂನುಗಳನ್ನು ಸಂಸತ್‌ ರೂಪಿಸಬೇಕು ಎಂದು ಹೇಳಿ ಕೈತೊಳೆದುಕೊಂಡಿತ್ತು.

ಆದರೆ, ಈ ಕುರಿತಂತೆ ಆಗಿನಿಂದ ಈಗಿನವರೆಗೆ ಸಂಸತ್‌ ಯಾವುದೇ ತೀರ್ಮಾನಕ್ಕೆ ಬರಲೇ ಇಲ್ಲ. 2015ರಲ್ಲಿ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರು ಸಲಿಂಗಕಾಮ ಅಪರಾಧವಲ್ಲ ಎಂದು ಘೋಷಿಸಬೇಕು ಎಂದು ಒತ್ತಾಯಿಸಿ ಖಾಸಗಿ ಮಸೂದೆಯೊಂದನ್ನೂ ಮಂಡಿಸಿದ್ದು, ಇದಕ್ಕೆ ಸಂಸತ್‌ ನಲ್ಲಿ ಯಾವುದೇ ಮಾನ್ಯತೆ ಸಿಗಲೇ ಇಲ್ಲ. ಕಡೆಗೆ ಕೇಂದ್ರವೇ ಕೋರ್ಟ್‌ನಲ್ಲಿ ವಾದ ಮಂಡಿಸಿ ಈ ವಿಚಾರದಲ್ಲಿ ಸಂಸತ್‌ ಮಾಡುವುದು ಏನೂ ಇಲ್ಲ, ಕೋರ್ಟ್‌ ಅವಶ್ಯವಾಗಿ ತನ್ನ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಹೇಳಿ ಸುಪ್ರೀಂ ಮಡಿಲಿಗೇ ಈ ಪ್ರಕರಣದ ಹೊಣೆಯನ್ನು ಹೊರಿಸಿತು.
 
ಸುಪ್ರೀಂ ಕೋರ್ಟ್‌, “ಈಗ ಕಾಲ ಬದಲಾಗಿದ್ದು, ಇಂದಿನ ಪರಿಸ್ಥಿತಿಗೆ ತಕ್ಕಂತೆ, ಸಂವಿಧಾನದಲ್ಲಿ ನೀಡಿರುವ ಹಾಗೆ ಎಲ್ಲರಿಗೂ ಸಮಾನವಾಗಿ ಮೂಲಭೂತ ಹಕ್ಕು ಸಿಗುವಂತೆ ಮಾಡಬೇಕು ಎಂಬ ಉದ್ದೇಶದಿಂದ ಸಲಿಂಗ ಕಾಮ ಅಪರಾಧವಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ’ ಎಂದೂ
ಹೇಳಿದೆ. ತೀರ್ಪಿನ ವೇಳೆ ಪಂಚಪೀಠದಲ್ಲಿದ್ದ ನ್ಯಾಯಮೂರ್ತಿಗಳು ಉಲ್ಲೇಖೀಸಿರುವ ಅಂಶಗಳು ಗಮನ ಸೆಳೆಯುತ್ತಿವೆ. ಅದರಲ್ಲೂ ಇದೇ ಮೊದಲ ಬಾರಿಗೆ ಸಂವಿಧಾನ ಪೀಠದಲ್ಲಿ ಕುಳಿತು ತೀರ್ಪು ಬರೆದಿರುವ ನ್ಯಾ.ಇಂದು ಮಲ್ಲೋತ್ರಾ ಅವರು, ಇತಿಹಾಸ ಎಲ್‌ಜಿಬಿಟಿ ಸಮುದಾಯ ಮತ್ತು ಅವರ ಕುಟುಂಬದವರ ಕ್ಷಮೆ ಕೇಳಬೇಕು ಎಂದಿದ್ದಾರೆ.

ಅಂದಿನಿಂದಲೂ ಇವರನ್ನು ಸಾಮಾಜಿಕವಾಗಿ ಕೆಟ್ಟದಾಗಿ ನೋಡುತ್ತಿದ್ದ ಸಮಾಜ ಉಳಿದವರಂತೆ ವಾಸಿಸಲು ಬಿಡಲೇ ಇಲ್ಲ. ಅವರನ್ನು ಮನುಷ್ಯರಂತೆಯೂ ನೋಡಲಿಲ್ಲ ಎಂದು ವಿಷಾದಿಸಿದ್ದಾರೆ. ನ್ಯಾ. ಇಂದು ಮಲ್ಲೋತ್ರಾ ಅವರ ಈ ಅಂಶ ಪರಿಗಣಿಸುವಂಥದ್ದಾಗಿದೆ. ಇಂದಿಗೂ ಸಮಾಜದಲ್ಲಿ ಎಲ್‌ಜಿಬಿಟಿ ಸಮುದಾಯದವರನ್ನು ಕೆಟ್ಟದಾಗಿ ನೋಡಿದ್ದೂ ಅಲ್ಲದೇ, ಅವರ ವಿರುದ್ಧ ಅಪರಾಧ ಪ್ರಕರಣಗಳನ್ನು ದಾಖಲಿಸುವ ಕೆಲಸವೂ ಆಗುತ್ತಿತ್ತು. ಸಾಮಾಜಿಕ ನೋವಿನ ನಡುವೆ, ಅಪರಾಧಿಗಳಂತೆ ಬದುಕುವ ಅನಿವಾರ್ಯತೆಗೆ ಈ ಸಮುದಾಯ ಸಿಲುಕಿತ್ತು. ಈಗ ಇಂಥ ನೋವುಗಳಿಗೆ ವಿರಾಮ ಹಾಡಿರುವ ಕೋರ್ಟ್‌ ಇವರಿಗೂ ಒಂದು ಗೌರವಯುತವಾದ ಬಾಳ್ವೆ ಇದೆ ಎಂದು ತೋರಿಸಿ ಕೊಟ್ಟಂತಾಗಿದೆ.

ಇದರ ಜತೆಗೆ ಗುರುವಾರದ ತೀರ್ಪು ಅಂತಾ ರಾಷ್ಟ್ರೀಯ ಮಟ್ಟದಲ್ಲೂ ಭಾರತವನ್ನು ಮೇಲ್‌ಸ್ತರಕ್ಕೆ ಕೊಂಡೊಯ್ದಿದೆ. ಜಗತ್ತಿನ ಖ್ಯಾತ ಪತ್ರಿಕೆಗಳೆಲ್ಲವೂ ತೀರ್ಪನ್ನು ಮೆಚ್ಚಿಕೊಂಡಿವೆ. ತೀರಾ ಮುಂದುವರಿದ ದೇಶಗಳು ಎನ್ನಿಸಿಕೊಂಡವರೂ ಇಂಥ ನಿರ್ಧಾರ ತೆಗೆದು ಕೊಳ್ಳುವುದರಲ್ಲಿ ಹಿಂದೆ ಬಿದ್ದಿರುವಾಗ, ಭಾರತದಂಥ ದೇಶದಲ್ಲಿ ಐತಿಹಾಸಿಕ ತೀರ್ಪು ಹೊರಬಿದ್ದಿರುವುದು ಸ್ವಾಗತಾರ್ಹ. ಕೋರ್ಟ್‌ ಏನೋ ಈ ಐತಿಹಾಸಿಕ
ತೀರ್ಪು ಕೊಟ್ಟಾಗಿದೆ, ಆದರೆ, ಇಂಥ ಸಂಬಂಧವುಳ್ಳವರನ್ನು ಇನ್ನು ಮುಂದಾದರೂ ಸಮಾಜ ಗೌರವಯುತವಾಗಿ ನೋಡುವುದನ್ನು ಕಲಿಯಬೇಕು. ಜತೆಗೆ ಸುಪ್ರೀಂ ಕೋರ್ಟ್‌ ಹೇಳಿದ ಹಾಗೆ, ಈ ಬಗ್ಗೆ ಅರಿವು ಮೂಡಿಸುವ ಕೆಲಸವೂ ಸರ್ಕಾರಗಳು ಮತ್ತು ಮಾಧ್ಯಮಗಳ ಕಡೆಯಿಂದ ಆಗಬೇಕು. 

ಟಾಪ್ ನ್ಯೂಸ್

1-dee

ಪ್ರಸಾರಕ ಸಂಸ್ಥೆಗಳ ಶುಲ್ಕ ಹೆಚ್ಚಳ: ಚಾನೆಲ್‌ಗ‌ಳ ದರವೂ ಹೆಚ್ಚಳ

1-dam

ಬ್ರಹ್ಮಪುತ್ರ ಅಣೆಕಟ್ಟಿಂದ ಭಾರತಕ್ಕೆ ಧಕ್ಕೆ ಆಗದು: ಚೀನ

1-ran

National Anthem Controversy:ಭಾಷಣ ಮಾಡದೆ ಹೋದ ತಮಿಳುನಾಡು ರಾಜ್ಯಪಾಲ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Mangaluru: ಬಾಲಕಿಯ ವೀಡಿಯೋ ಮಾಡಿದ್ದ ಯುವಕನಿಗೆ ಜೈಲು

Mangaluru: ಬಾಲಕಿಯ ವೀಡಿಯೋ ಮಾಡಿದ್ದ ಯುವಕನಿಗೆ ಜೈಲು

Belthangady ಶಾರ್ಟ್ ಸರ್ಕ್ಯೂಟ್: ಮನೆ ಬೆಂಕಿಗಾಹುತಿ

Belthangady ಶಾರ್ಟ್ ಸರ್ಕ್ಯೂಟ್: ಮನೆ ಬೆಂಕಿಗಾಹುತಿ

Uppinangady: ಬಸ್‌ ನಿಲ್ದಾಣದಲ್ಲಿ ಕಳವು

Uppinangady: ಬಸ್‌ ನಿಲ್ದಾಣದಲ್ಲಿ ಕಳವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

Editorial: ಕಾಮಗಾರಿಯ ವಿಳಂಬ ಸಲ್ಲದು

8

Editorial: ಕುಂದಾಪುರದ ಹೆದ್ದಾರಿ ಸಮಸ್ಯೆ ಸರಿಪಡಿಸಿ

6

Editorial: ಸಂಚಾರ, ಪಾರ್ಕಿಂಗ್‌; ಸಮನ್ವಯದ ಕ್ರಮ ಆಗಬೇಕು

1

Editorial: ಕಾಳ್ಗಿಚ್ಚು ಸಂಭವಿಸುವ ಮುನ್ನವೇ ಇರಲಿ ಎಚ್ಚರಿಕೆ

Hospital

Editorial: ರಾಜ್ಯದ ಸರಕಾರಿ ಆಸ್ಪತ್ರೆಗಳಿಗೆ ಬೇಕಿದೆ ತುರ್ತು ಕಾಯಕಲ್ಪ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-shiv

ಪಟ್ನಾದಲ್ಲಿ ಸುಮಾರು 500 ವರ್ಷಗಳ ಹಿಂದಿನ ದೇಗುಲ ಪತ್ತೆ

1-dee

ಪ್ರಸಾರಕ ಸಂಸ್ಥೆಗಳ ಶುಲ್ಕ ಹೆಚ್ಚಳ: ಚಾನೆಲ್‌ಗ‌ಳ ದರವೂ ಹೆಚ್ಚಳ

1-devvvi

ಕಂದಹಾರ್‌ ಹೈಜಾಕ್‌ ವೇಳೆಯ ಪೈಲಟ್‌ ದೇವಿ ಶರಣ್‌ ನಿವೃತ್ತಿ

1-dam

ಬ್ರಹ್ಮಪುತ್ರ ಅಣೆಕಟ್ಟಿಂದ ಭಾರತಕ್ಕೆ ಧಕ್ಕೆ ಆಗದು: ಚೀನ

1-ran

National Anthem Controversy:ಭಾಷಣ ಮಾಡದೆ ಹೋದ ತಮಿಳುನಾಡು ರಾಜ್ಯಪಾಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.