ನಮಗೆ ಎಸ್ಸಿ ಪ್ರಮಾಣ ಪತ್ರ ನೀಡಿ
Team Udayavani, Sep 7, 2018, 4:02 PM IST
ದಾವಣಗೆರೆ: ಭಾರತದಲ್ಲಿ ಪ್ರತಿ ವರ್ಷ 2.5 ಲಕ್ಷ ಜನರಿಗೆ ಕಣ್ಣುಗಳ ಅಗತ್ಯವಿದ್ದು, ಅ ಪ್ರಮಾಣದಷ್ಟು ನೇತ್ರದಾನಿಗಳು ದೊರೆಯುತ್ತಿಲ್ಲ. ಹಾಗಾಗಿ ಪ್ರತಿಯೊಬ್ಬರೂ ನೇತ್ರದಾನದ ಮೂಲಕ ಇತರರಿಗೆ ಬೆಳಕಾಗಬೇಕು ಎಂದು ಹರಪನಹಳ್ಳಿ
ಸಾರ್ವಜನಿಕ ಆಸ್ಪತ್ರೆ ನೇತ್ರತಜ್ಞೆ ಡಾ| ಸಂಗೀತಾ ಕೊಲ್ಹಾಪುರಿ ಮನವಿ ಮಾಡಿದ್ದಾರೆ.
ಗುರುವಾರ, ಜಿಲ್ಲಾ ಆಸ್ಪತ್ರೆಯಲ್ಲಿ 23ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ದಿನಾಚರಣೆ ಉದ್ಘಾಟಿಸಿ, ಮಾತನಾಡಿದ ಅವರು, ದೇಶದಲ್ಲಿ ಪ್ರತಿ ವರ್ಷ 2.5 ಲಕ್ಷದಷ್ಟು ಜನರಿಗೆ ಕಣ್ಣುಗಳು ಬೇಕು. ಆದರೆ, 25-30 ಸಾವಿರದಷ್ಟು ಮಾತ್ರವೇ
ಲಭ್ಯವಾಗುತ್ತಿವೆ. ಅಗತ್ಯ ಇರುವವರು ಮತ್ತು ದಾನಿಗಳ ಸಂಖ್ಯೆಯಲ್ಲಿ ಸಾಕಷ್ಟು ಅಂತರ ಕಂಡು ಬರುತ್ತಿದೆ. ಈ ಅಂತರ ಸರಿದೂಗಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ನೇತ್ರದಾನ ಮಾಡುವ ಜೊತೆಗೆ ಇತರರಲ್ಲೂ ಜಾಗೃತಿ ಮೂಡಿಸಬೇಕು
ಎಂದರು.
ಭಾರತದಲ್ಲಿ ಪ್ರತಿ ದಿನ 86 ಸಾವಿರದಷ್ಟು ಜನನವಾಗುತ್ತದೆ. 62 ಸಾವಿರ ಸಾವು ಸಂಭವಿಸುತ್ತವೆ. ಸಾವನ್ನಪ್ಪುವ ಮುನ್ನ
ನೇತ್ರದಾನ ಮಾಡಿದ್ದೇ ಆದಲ್ಲಿ ದೇಶದಲ್ಲಿರುವ 2.5 ಲಕ್ಷದಷ್ಟು ಜನರು ಕೇವಲ 11 ದಿನಗಳಲ್ಲಿ ದೃಷ್ಟಿ ಪಡೆಯುತ್ತಾರೆ. ಆದರೆ, ಅಂತಹ ಕೆಲಸ ಆಗುತ್ತಿಲ್ಲ. ನೇತ್ರದಾನಕ್ಕೆ ಎಲ್ಲರೂ ಮುಂದಾಗಬೇಕು ಎಂದು ತಿಳಿಸಿದರು.
ಮನುಷ್ಯನಿಗೆ ಅತೀ ಮುಖ್ಯವಾಗಿರುವ ಕಣ್ಣುಗಳಿಲ್ಲದೆ ಜೀವನ ನಡೆಸುವುದು ಕಷ್ಟ. ಒಂದೇ ಒಂದು ದಿನ ಕಣ್ಣು ಕಟ್ಟಿಕೊಂಡು ಜೀವನ ನಡೆಸಿದರೆ ಕಣ್ಣಿಲ್ಲದವರ ಜೀವನ ಎಷ್ಟು ಕಷ್ಟ ಎಂಬುದು ಅರಿವಾಗಲಿದೆ. ಜನ್ಮತಃ ಅಂಧತ್ವ ಒಳಗೊಂಡಂತೆ ವಿವಿಧ ಕಾರಣದಿಂದ ಕಣ್ಣುಗಳು ಇಲ್ಲದವರಿಗೆ ಮರು ದೃಷ್ಟಿ ನೀಡಲು ಕಣ್ಣುಗಳು ತೀರಾ ಅತ್ಯಗತ್ಯ. ಹಾಗಾಗಿ ಎಲ್ಲರೂ ಅಮೂಲ್ಯವಾದ ಕಣ್ಣುಗಳ ದಾನ ಮಾಡಬೇಕು ಎಂದು ಅವರು ಕೋರಿದರು.
ರಕ್ತದೊತ್ತಡ, ಮಧುಮೇಹ, ಮಾರಣಾಂತಿಕ ಕಾಯಿಲೆಯಿಂದ ನರಳುತ್ತಿರುವರು ಹೊರತುಪಡಿಸಿ ಆರೋಗ್ಯವಂತರು ನೇತ್ರದಾನ ಮಾಡಬಹುದು. ಕನ್ನಡಕ ಧರಿಸುತ್ತಿರುವರು ಕಣ್ಣುಗಳ ದಾನ ಮಾಡಬಹುದು.
ಮರಣವನ್ನಪ್ಪಿದ 6 ಗಂಟೆಯೊಳಗಾಗಿ ಕಣ್ಣುಗಳ ಪಡೆದುಕೊಂಡು ಸಂರಕ್ಷಿಸಿ, ಅಗತ್ಯ ಇದ್ದವರಿಗೆ ಜೋಡಣೆ ಮಾಡಲಾಗುವುದು. ನೇತ್ರದಾನ ಮಾಡಿದಂತಹವರ ಮರಣದ ಬಗ್ಗೆ ಅವರ ಕುಟುಂಬ ಸದಸ್ಯರು ಸೂಕ್ತ ಕಾಲದಲ್ಲಿ ಮಾಹಿತಿ ನೀಡಬೇಕು. ನೇತ್ರದಾನ ಮಾಡುವರು ಮೊದಲೇ ಹೆಸರು ನೋಂದಾಯಿಸಬೇಕು ಎಂದು ತಿಳಿಸಿದರು.
ನೇತ್ರದಾನದ ಬಗ್ಗೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಜಾಗೃತಿ ಮೂಡಬೇಕು. ಎಲ್ಲರೂ ನೇತ್ರದಾನಕ್ಕೆ ಮುಂದಾಗುವ ಮೂಲಕ ಅಂಧರ ಬಾಳಲ್ಲಿ ಮತ್ತೆ ದೃಷ್ಟಿ ತರುವಂತಾಗಬೇಕು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಂ.ಎಸ್. ತ್ರಿಪುಲಾಂಬ ಅಧ್ಯಕ್ಷತೆ ವಹಿಸಿದ್ದರು. ನೇತ್ರದಾನ ಪಾಕ್ಷಿಕ ದಿನಾಚರಣೆ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ| ಸಿದ್ದಪ್ಪ ಕೋಳ್ ಕೂರ್, ಡಾ| ಮೇಘನಾ ಪಾಟೀಲ್, ಡಾ| ಎಸ್. ಮೀನಾಕ್ಷಿ ಇತರರು ಇದ್ದರು. ವೇದಿಕೆ ಕಾರ್ಯಕ್ರಮದ ಮುನ್ನ ಜಿಲ್ಲಾ ಆಸ್ಪತ್ರೆಯಿಂದ ಜಾಗೃತಿ ಜಾಥಾ ನಡೆಯಿತು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.