ಪ್ರಕೃತಿ ಸೌಂದರ್ಯದ ಭೂಲೋಕದ ಕೈಲಾಸ “ಈ ನರಹರಿ ಪರ್ವತ”


Team Udayavani, Sep 7, 2018, 4:03 PM IST

narahari-parvatha-800.jpg

ಪ್ರಕೃತಿಯ ಮಡಿಲಲ್ಲಿ ಸುಂದರವಾದ ಒಂದು ತಾಣವೆಂದರೆ ಅದು ನರಹರಿ ಪರ್ವತ ಅದರಲ್ಲಿ ಶ್ರೀ ಸದಾಶಿವ ದೇವರ ಸನ್ನಿದಾನವೆಂಬುದು ಆಕರ್ಷಕ ದೇಹಕ್ಕೆಜೀವ ತುಂಬಿದಂತೆ, ಇಲ್ಲಿಗೆಬಂದು ನಿಂತಾಗಒಂದುಅನಿರ್ವಚನೀಯಆನಂದಉಂಟಾಗುತ್ತದೆ.ಅದು ಈ ಕ್ಷೇತ್ರದ ಪಾವಿತ್ರ್ಯದ ಸಂಕೇತ. ನರಹರಿ ಕ್ಷೇತ್ರವೆಂದರೆ ಸಂಕಟದಲ್ಲಿರುವವರ  ಸಂಕಟಗಳನ್ನು ದೂರಮಾಡುವಂಥ ಸ್ಥಳ ಎಂದೇ ವಾಡಿಕೆ.

ಈ ದೃಷ್ಟಿಯಿಂದ ಶ್ರೀ ನರಹರಿ ಪರ್ವತ ಮತ್ತು ಅಲ್ಲಿರುವ ಸಾದಾಶಿವ ದೇವಸ್ಥಾನ ಭಕ್ತಾದಿಗಳ ಪಾಲಿಗೆ ಸುಯೋಗ್ಯ, ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಪುಣ್ಯ ಕ್ಷೇತ್ರಗಳಲ್ಲಿ ಶ್ರೇಷ್ಠವಾದ ಕ್ಷೇತ್ರವಾಗಿ ರೂಪುಗೊಂಡಿದೆ. ಸೂರ್ಯೋದಯಶ್ರೀ ನರಹರಿ ಪರ್ವತವು ಬರಿಯ ದೇಗುಲವಲ್ಲ ಭಾವುಕರಿಗೆ ನಂದಗೋಕುಲ, ನಿಸರ್ಗ ಪ್ರಿಯರಿಗೆ ಪ್ರಕೃತಿಯ ಮಡಿಲು, ಬಾಳಿನಲ್ಲಿ ಬಳಲಿದವರಿಗೆ ಪ್ರಂತಶಾಂತಿ ಧಾಮ ಭಕ್ತರಿಗೆ ದೇವ ಸನ್ನಿಧಿ. ಅಂತೆಯೇ ಇಲ್ಲಿಯ ಸೂರ್ಯೋದಯ ಸೂರ್ಯಾಸ್ತಗಳಾಗಲಿ, ಬೆಳದಿಂಗಳ ರಾತ್ರಿಯಾಗಲೀ ಪ್ರತಿಯೊಬ್ಬರನ್ನು ಮಂತ್ರ ಮುಗ್ಧರನ್ನಾಗಿಸುವ ಮಾಂತ್ರಿಕ ಶಕ್ತಿಯಂತಿದೆ.

ಕ್ಷೇತ್ರದ ಇತಿಹಾಸ:

ಶಕ್ತಿಯುತ ಸ್ಥಳಕ್ಕೆ ಪುರಾಣದ ಹಿನ್ನೆಲೆಯೂ ಇಲ್ಲದಿಲ್ಲ, ಮಹಾಭಾರತದ ಕುರುಕ್ಷೇತ್ರದ ಯುದ್ಧದ ಬಳಿಕ ಪಾಂಡವರು ತಮ್ಮ ಪಾಪ ವಿಮೋಚನೆಗಾಗಿ ದಕ್ಷಿಣದ ಪುಣ್ಯಕ್ಷೇತ್ರವನ್ನು ಸಂದರ್ಶಿಸುತ್ತಾ, ಹರಿನರರು ಈ ಗಿರಿಯನ್ನೇರಿದರೆಂದೂ, ಶ್ರೀಹರಿಯು ತಾನು ತಂಗಿದ ಕುರುಹಿಗಾಗಿ ತನ್ನ ಆಯುಧದಿಂದ ಶಂಖ, ಚಕ್ರ, ಗದಾ, ಪದ್ಮಾಕಾರದ ತೀರ್ಥಕೂಪಗಳನ್ನು ನಿರ್ಮಿಸಿದನೆಂದೂ, ಈ ತೀರ್ಥಗಳ ಸ್ನಾನದಿಂದ ಬಾಹ್ಯಾಂತರ ಶು ಶುಚಿರ್ಭೂತನಾಗಿ ಅರ್ಜುನನು ಶಿಲೆಯಿಂದ ಶಿವಲಿಂಗವನ್ನು ಪ್ರತಿಷ್ಠಿಸಿ ಹರಿ ಸಮೇತನಾಗಿ ಹರನ ಪೂಜೆ ಮಾಡಿ ವರ ಪ್ರಸಾದ ಪಡೆದನೆಂದೂ ತತ್ಪರಿಣಾಮವಾಗಿ ಈ ಕ್ಷೇತ್ರವು ನರಹರಿ ಸದಾಶಿವ ಎಂಶ ನಾಮಾಂಕಿತವನ್ನು ಪಡೆಯಿತೆಂದೂ ಪುರಾಣ ಪ್ರತೀತಿಯಿದೆ.

ಕ್ಷೇತ್ರದ ವಿಶೇಶತೆ:

ನಾಸ್ತಿಕನನ್ನು ಆಸ್ತಿಕನನ್ನಾಗಿ ಪರಿವರ್ತಿಸುವ ಈ ಪ್ರೇಕ್ಷಣೀಯ ಪುಣ್ಯ ಕ್ಷೇತ್ರದಲ್ಲಿ ಕರ್ಕಾಟಕ, ಸಿಂಹ ಮಾಸಗಳ ಅಮಾವಾಸ್ಯೆಗಳಲ್ಲೂ, ಕಾರ್ತಿಕ ಮಾಸದ ಸೋಮುವಾರಗಳಲ್ಲೂ ಭಕ್ತಾದಿಗಳುಬಂದು ಹರಿಹರರ ಸೇವೆ ಮಾಡಿ ಚತುರ್ವಿಧ ಪುಣ್ಯ ಫ‌ಲ ಪಡೆಯುತ್ತಿದ್ದಾರೆ.ಈ ಕ್ಷೇತ್ರದಲ್ಲಿ ಬಲಿವಾಡು ಸೇವೆಯಿಂದ ಸರ್ವಭಯವೂ, ಪಾಶಾರ್ಪಣೆಯಿಂದ ಉಬ್ಬಸ ವ್ಯಾಧಿಯೂ, ತೊಟ್ಟಿಲು ಮಗು ಸೇವೆಯಿಂದ ಬಂಜೆತನವೂ ನೀಗುವುದಲ್ಲದೆ, ಎಳನೀರು ಅಭಿಷೇಕದಿಂದ ಸರ್ವ ಇಷ್ಟಾರ್ಥ ಸಿದ್ಧಿಯೂ ಆಗುವುದೆಂಬ ನಂಬಿಕೆ ಈಗಲೂ ಇದೆ.

ಸೌಂದರ್ಯದ ಚಿಲುಮೆ:

ಶ್ರೀ ನರಹರಿ ಬೆಟ್ಟದಮೇಲೆ ನಿಂತಾಗ ಎದುರುಗಡೆ ಪೂರ್ವದಲ್ಲಿ ಪ್ರಖ್ಯಾತವಾದ ಸುಳ್ಯಮಲೆ, ಬಲ್ಲಮಲೆ ಹಾಗೂ ದಕ್ಷಿಣದಲ್ಲಿ ಕಡೆಂಜ ಮಲೆ ಇದ್ದು ಅದೆಲ್ಲವನ್ನು ಈ ಬೆಟ್ಟದಮೇಲೆ ನಿಂತು ಕಣ್ತುಂಬಿ ಕೊಳ್ಳಬಹುದಾಗಿದೆ.

ಇಲ್ಲಿನ ಇನ್ನೊಂದು ವಿಶೇಷತೆಯೆಂದರೆ ಬೆಟ್ಟದ ಒಂದು ಬದಿಯಲ್ಲಿ ರಾಷ್ಟ್ರೀಯ ಹೆದ್ದಾರಿ ,ಇನ್ನೊಂದು ಬದಿಯಲ್ಲಿ ಮಂಗಳೂರು ಹಾಸನ ರೈಲುಮಾರ್ಗ, ಮಗದೊಂದು ಬದಿಯಲ್ಲಿ ಜೀವನದಿ ನೇತ್ರಾವತಿ ಹರಿಯುತ್ತದೆ, ಸುತ್ತಲೂ ಹಚ್ಚಹಸುರಿನ ಗದ್ದೆಗಳು, ತೆಂಗು ಅಡಿಕೆ ತೋಟಗಳು ಪ್ರಕೃತಿ ಮಾತೆಯ ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ರಾತ್ರಿ ಸಮಯದಲ್ಲಿ ಪಾಣೆಮಂಗಳೂರು, ಕಲ್ಲಡ್ಕ, ಬಿ.ಸಿ.ರೋಡು ಪ್ರದೇಶಗಳಲ್ಲಿ ಉರಿಯುವ ವಿದ್ಯುದ್ದೀಪಗಳನ್ನು ಕಂಡಾಗ ನಾವೇನು ಸ್ವರ್ಗದಲ್ಲಿದ್ದೇವೋ ಎಂಬ ಭಾವನೆ ಮೂಡುತ್ತದೆ. ಈ ಕ್ಷೇತ್ರವು ತ್ರಿವೇಣಿ ಸಂಗಮದಂತೆ ಮೂರು ಗ್ರಾಮಗಳಾದ ಪಾಣೆಮಂಗಳೂರು, ಅಮೂrರು, ಗೋಳ್ತಮಜಲು ಪ್ರದೇಶಗಳು ಸೇರಿ ತ್ರಿವೇಣಿ ಬೆಟ್ಟದಂತಿವೆ.

ಕ್ಷೇತ್ರಕ್ಕೆ ಮಾರ್ಗ:

ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ 28 ಕಿಲೋಮೀಟರ್‌ ಪೂರ್ವಕ್ಕೆ ಸಾಗಿದರೆ ನರಹರಿ ಸದಾಶಿವ ದೇವಸ್ಥಾನ ಸಿಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಕೇಂದ್ರದಲ್ಲಿರುವ ಬಿಸಿ ರೋಡ್‌ ಜಂಕ್ಷನ್‌ನಿಂದ 4 ಕಿಲೋಮೀಟರ್‌ ದೂರಸಾಗಿದರೆ ರಸ್ತೆಯ ಬಲಬದಿಗೆ ನರಹರಿ ಪರ್ವತ ಕಾಣ ಸಿಗುತ್ತದೆ. ಅಲ್ಲಿಂದ 1 ಕಿಲೋಮೀಟರ್‌ ಪ್ರಯಾಣಿಸಿ ನಂತರ ಮೆಟ್ಟಿಲುಗಳನ್ನು ಹತ್ತಿ ಹೋಗುವ ಮೂಲಕ ದೇವಸ್ಥಾನ ತಲುಪಬಹುದು.

ಟಾಪ್ ನ್ಯೂಸ್

6-ptr

Puttur: ಬಸ್ – ಬೈಕ್‌ ಅಪಘಾತ; ಸವಾರ ಸಾವು

Parliament; Pushing in front of Parliament House; Two MPs injured, allegations against Rahul Gandhi

Parliament; ಸಂಸತ್‌ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್‌ ವಿರುದ್ದ ಆರೋಪ

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

6-ptr

Puttur: ಬಸ್ – ಬೈಕ್‌ ಅಪಘಾತ; ಸವಾರ ಸಾವು

Parliament; Pushing in front of Parliament House; Two MPs injured, allegations against Rahul Gandhi

Parliament; ಸಂಸತ್‌ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್‌ ವಿರುದ್ದ ಆರೋಪ

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

1

Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.