ಮಸೀದಿ ನಿರ್ಮಾಣದ ವಿರುದ್ಧ ಪೊಲ್ಯ ನಿವಾಸಿಗಳ ಹಕ್ಕೊತ್ತಾಯ
Team Udayavani, Sep 8, 2018, 6:45 AM IST
ಪಡುಬಿದ್ರಿ: ಕಾಪು ತಾ| ಉಚ್ಚಿಲ ಬಡಾ ಗ್ರಾಮದ ಪೊಲ್ಯ 2ನೇ ವಾರ್ಡ್ ಸಾರ್ವಜನಿಕರು ಸೆ. 7ರಂದು ಉಚ್ಚಿಲ ಗ್ರಾ. ಪಂ. ಗೆ ಆಗಮಿಸಿ ಪೊಲ್ಯ ರಸ್ತೆಯ ಸಮೀಪ ವ್ಯಾವಹಾರಿಕ ಕಟ್ಟಡಕ್ಕೆಂದು ಪಂಚಾಯತ್ ಪರವಾನಿಗೆಯನ್ನು ಹೊಂದಿ ಮಸೀದಿ ಕಟ್ಟಡದ ನಿರ್ಮಾಣಕ್ಕೆ ಮುಂದಾಗಿರುವುದನ್ನು ಖಂಡಿಸಿ ಕೆಲಸ ನಿಲ್ಲಿಸುವಂತೆ ಆಗ್ರಹಿಸಿ ಮನವಿಯೊಂದನ್ನು ಗ್ರಾ. ಪಂ. ಅಧ್ಯಕ್ಷೆ ನಾಗರತ್ನಾ ಹಾಗೂ ಪಿಡಿಒ ಕುಶಾಲಿನಿ ಅವರಿಗೆ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಕೇಸರಿ ಯುವರಾಜ್ ತಾವು ಸಂಘರ್ಷಕ್ಕೆಂದೂ ಎಡೆಮಾಡಿಕೊಡುವುದಿಲ್ಲ. ಆದರೆ ತಮ್ಮ ಬದುಕು ದುಸ್ತರವಾಗಲೂ ಬಿಡುವುದಿಲ್ಲ. ಸಾರ್ವಜನಿಕರು ಪೊಲ್ಯ ಪ್ರದೇಶದಲ್ಲಿ ಇದುವರೆಗೂ ಕೋಮು ಸಾಮರಸ್ಯ
ದೊಂದಿಗೇ ಬದುಕನ್ನು ಸಾಗಿಸಿದ್ದಾರೆ. ಹಾಗಾಗಿ ಉತ್ತಮ ಬದುಕನ್ನು ತಮಗೆ ನೀಡಿರಿ. ಕಮರ್ಷಿಯಲ್ ಕಟ್ಟಡ ನಿರ್ಮಾಣದ ಬದಲು ಮಸೀದಿ ನಿರ್ಮಾಣಕ್ಕೆ ಅಲ್ಲಿನ ಸ್ಥಳೀಯರು ಅವಕಾಶ ನೀಡುವುದಿಲ್ಲವೆಂದರು.
ಉಚ್ಚಿಲ ಗ್ರಾ. ಪಂ. ನಲ್ಲಿ ಎಲ್ಲವೂ ಸರಿಯಿಲ್ಲ. ಅಧ್ಯಕ್ಷರು ಮತ್ತು ಪಿಡಿಒ ಸಮನ್ವಯತೆಯಿಂದ ಕಾರ್ಯನಿರ್ವಹಿಸ ದಿದ್ದಾಗ ಇಂತಹಾ ಮತೀಯ ಸಾಮರಸ್ಯ ಕೆಡಲೂ ಕಾರಣವಾಗುತ್ತದೆ. ಪೊಲ್ಯದಲ್ಲಿ ಈಗಾಗಲೇ ಎರಡು ಮಸೀದಿಗಳು ಹಾಗೂ ಎರಡು ಮದ್ರಸಗಳಿದ್ದು ಮತ್ತೂಂದು ಮಸೀದಿ ರಚನೆ ಸಾಧುವಲ್ಲ ಎಂದು ಸ್ಥಾನೀಯ ಬಿಜೆಪಿ ಅಧ್ಯಕ್ಷ ಉದಯ ಕುಮಾರ್ ಉಚ್ಚಿಲ ತಿಳಿಸಿದರು. ಪಿಡಿಒ ತಾನು ಈ ಕುರಿತಾಗಿ ಗ್ರಾ. ಪಂ. ಅಧ್ಯಕ್ಷರ ಅಭಿಪ್ರಾಯದಂತೆ ಅವರಲ್ಲಿ ಚರ್ಚಿಸಿ ನೊಟೀಸು ನೀಡುವುದಾಗಿ ತಿಳಿಸಿದ್ದಾರೆ. ಗ್ರಾ. ಪಂ. ಸದಸ್ಯರಾದ ಚಂದ್ರಶೇಖರ ಕೋಟ್ಯಾನ್, ಶಿವಕುಮಾರ್, ವಸಂತ ದೇವಾಡಿಗ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.