ಮೀನುಗಾರರಿಗೆ ಇನ್ನು ಜಿಪಿಎಸ್ ಮಾಹಿತಿ
Team Udayavani, Sep 8, 2018, 6:00 AM IST
ನವದೆಹಲಿ: ಪಾಕೃತಿಕ ವಿಪತ್ತಿನ ಮುನ್ಸೂಚನೆಗಳನ್ನು ನೀಡುವ ಹಾಗೂ ಅಂತಾರಾಷ್ಟ್ರೀಯ ಜಲಗಡಿಯ ಮಾಹಿತಿ ನೀಡುವ ಅತ್ಯಾಧುನಿಕ ದೇಶಿ ಜಿಪಿಎಸ್ ವ್ಯವಸ್ಥೆಯನ್ನು ಇಸ್ರೋ ಅಭಿವೃದ್ಧಿಪಡಿಸಿದ್ದು, ಈ ಮೂಲಕ ಮೀನುಗಾರರು ಎಚ್ಚರಿಕೆಗಳನ್ನು ಪಡೆಯಬಹುದಾಗಿದೆ. ನಾವಿಕ್ ಎಂಬ ಸಾಧನವು ಮೀನುಗಾರರಿಗೆ ಅತ್ಯಂತ ಮಹತ್ವದ್ದಾಗಿದ್ದು, ಮೀನುಗಾರಿಕೆಗಾಗಿ ಸಮುದ್ರಕ್ಕಿಳಿದಾಗ ನೈಸರ್ಗಿಕ ವಿಕೋಪಗಳ ಮುನ್ಸೂಚನೆಯನ್ನು ತಕ್ಷಣ ಒದಗಿಸುತ್ತದೆ. ಅಷ್ಟೇ ಅಲ್ಲ, ಅಂತಾರಾಷ್ಟ್ರೀಯ ಜಲಗಡಿಯಲ್ಲಿ ಅರಿವಿಲ್ಲದೇ, ಇನ್ನೊಂದು ದೇಶದ ವ್ಯಾಪ್ತಿಗೆ ತೆರಳಿ ಬಂಧನಕ್ಕೊಳಗಾಗುವ ಅಪಾಯವೂ ಇದರಿಂದ ತಪ್ಪಲಿದೆ. ಇದೆಲ್ಲವುಗಳ ಜೊತೆಗೆ ಮೀನು ಹೆಚ್ಚಿರುವ ಪ್ರದೇಶದ ಮಾಹಿತಿಯನ್ನೂ ಇದು ನೀಡಲಿದೆ.
ಕೇರಳದಲ್ಲಿ ಕಳೆದ ವರ್ಷ ಒಖೀ ಚಂಡಮಾರುತ ಸಂಭವಿಸಿದ ನಂತರದಲ್ಲಿ ಇಸ್ರೋ ಈ ವ್ಯವಸ್ಥೆ ಅಭಿವೃದ್ಧಿಪಡಿಸಿದೆ. ಈ ವೇಳೆ ಮೀನುಗಾರರಿಗೆ ಸರಿಯಾದ ಸಮಯಕ್ಕೆ ಮಾಹಿತಿ ಲಭ್ಯವಾಗಿರಲಿಲ್ಲ. ಹೀಗಾಗಿ ಹಲವು ಮೀನುಗಾರರು ಅಪಾಯಕ್ಕೆ ಸಿಲುಕಿದ್ದರು. ನಾವಿಕ್ ವ್ಯವಸ್ಥೆಯಲ್ಲಿ ಒಂದು ಸಾಧನವನ್ನು ಮೀನುಗಾರರು ಹೊಂದಿರಬೇಕಾಗುತ್ತದೆ. ನಾವಿಕ್ ಮೆಸೇಜಿಂಗ್ ವ್ಯವಸ್ಥೆಯ ಮೂಲಕ ನಾವು ಮಾಹಿತಿಗಳನ್ನು ನೀಡುತ್ತೇವೆ. ಇದು ಬ್ಲೂಟೂತ್ ಸಾಧನವಾಗಿದ್ದು, ಮೊಬೈಲ್‌ಗೆ ಕನೆಕ್ಟ್ ಆಗಿರುತ್ತದೆ ಎಂದು ಇಸ್ರೋ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.