ಓವಲ್ ಟೆಸ್ಟ್: ಕುಕ್ ಅರ್ಧ ಶತಕ
Team Udayavani, Sep 9, 2018, 6:00 AM IST
ಲಂಡನ್: ವಿದಾಯ ಪಂದ್ಯ ಆಡುತ್ತಿರುವ ಇಂಗ್ಲೆಂಡ್ ಆರಂಭಕಾರ ಅಲಸ್ಟೇರ್ ಕುಕ್ ಶುಕ್ರವಾರ ಮೊದಲ್ಗೊಂಡ ಓವಲ್ ಟೆಸ್ಟ್ ಪಂದ್ಯದಲ್ಲಿ 71 ರನ್ ಬಾರಿಸಿ ಮಿಂಚಿದ್ದಾರೆ. 7 ವಿಕೆಟಿಗೆ 182 ರನ್ ಗಳಿಸಿರುವ ಇಂಗ್ಲೆಂಡ್ ಕೊನೆಯ ಅವಧಿಯ ಆಟವನ್ನು ಮುಂದುವರಿಸುತ್ತಿದೆ.
ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ಕುಕ್-ಜೆನ್ನಿಂಗ್ಸ್ ಜೋಡಿ ಮೊದಲ ವಿಕೆಟಿಗೆ 60 ರನ್ ಗಳಿಸಿ ಉತ್ತಮ ಅಡಿಪಾಯ ನಿರ್ಮಿಸಿತು. ಜೆನ್ನಿಂಗ್ಸ್ ಗಳಿಕೆ 23 ರನ್. ಈ ಜೋಡಿಯನ್ನು ಜಡೇಜ ಬೇರ್ಪಡಿಸಿದರು. ಮತ್ತೆ ವನ್‌ಡೌನ್‌ನಲ್ಲಿ ಬಂದ ಮೊಯಿನ್ ಅಲಿ ಈ ಬಾರಿ ವಿಫಲರಾಗಲಿಲ್ಲ (50). ದ್ವಿತೀಯ ವಿಕೆಟಿಗೆ 73 ರನ್ ಒಟ್ಟುಗೂಡಿತು. ಸ್ಕೋರ್ 133ಕ್ಕೆ ಏರಿದಾಗ 190 ಎಸೆತಗಳಲ್ಲಿ 71 ರನ್ ಬಾರಿಸಿದ ಕುಕ್ ಬುಮ್ರಾಗೆ ಬೌಲ್ಡ್ ಆದರು.
ಈ ಹಂತದಲ್ಲಿ ಭಾರತದ ಬೌಲರ್‌ಗಳು ತಿರುಗೇಟು ನೀಡಿದರು. ಇಂಗ್ಲೆಂಡ್ ತೀವ್ರ ಕುಸಿತ ಕಂಡಿತು. ನಾಯಕ ಜೋ ರೂಟ್ ಮತ್ತು ಕೀಪರ್ ಜಾನಿ ಬೇರ್‌ಸ್ಟೊ ರನ್ ಗಳಿಸುವ ಮೊದಲೇ ನಿರ್ಗಮಿಸಿದರು. ಬುಮ್ರಾ ಮತ್ತು ಇಶಾಂತ್ ಈ ವಿಕೆಟ್ ಉಡಾಯಿಸಿದರು. ಒಂದಕ್ಕೆ 133 ರನ್ ಗಳಿಸಿ ಸುಸ್ಥಿತಿಯಲ್ಲಿದ್ದ ಇಂಗ್ಲೆಂಡ್ 134ಕ್ಕೆ 4 ವಿಕೆಟ್ ಕಳೆದುಕೊಂಡಿತು.
ಎಲ್ಲರೂ ನಿರೀಕ್ಷೆ ಇರಿಸಿದ್ದು ಆರಂಭಕಾರ ಪೃಥ್ವಿ ಶಾ ಮೇಲೆ. ಆದರೆ ಆಯ್ಕೆಯಾದದ್ದು ಹನುಮ ವಿಹಾರಿ. ಇದು ಓವಲ್ ಟೆಸ್ಟ್ ಪಂದ್ಯದ ಅಚ್ಚರಿ!
ಅಂತಿಮ ಟೆಸ್ಟ್ ಪಂದ್ಯಕ್ಕಾಗಿ ಭಾರತ 2 ಬದಲಾವಣೆಗಳೊಂದಿಗೆ ಕಣಕ್ಕಿಳಿಯಿತು. ಸ್ಪಿನ್ನರ್ ಆರ್. ಅಶ್ವಿನ್ ಮತ್ತು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬದಲು ಹನುಮ ವಿಹಾರಿ ಮತ್ತು ರವೀಂದ್ರ ಜಡೇಜ ಅವಕಾಶ ಪಡೆದರು. ಆಂಧ್ರಪ್ರದೇಶದ 24ರ ಹರೆಯದ ಹನುಮ ವಿಹಾರಿ ಭಾರತದ 292ನೇ ಟೆಸ್ಟ್ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ನಾಯಕ ವಿರಾಟ್ ಕೊಹ್ಲಿಯಿಂದ “ಟೆಸ್ಟ್ ಕ್ಯಾಪ್’ ಪಡೆದರು. ಇಂಗ್ಲೆಂಡ್ ತನ್ನ ಆಡುವ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳಲಿಲ್ಲ. ಸೌತಾಂಪ್ಟನ್ ಗೆಲುವಿನ ಬಳಗದೊಂದಿಗೆ ಆಡಲಿಳಿಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
Champions Trophy: ಮೋದಿ ಪಾಕ್ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ
IPL 2025: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ
Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ
Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ
ಚಂದ್ರಶೇಖರ ಶ್ರೀ ವಿರುದ್ಧ ಕೇಸ್; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.