ಹೊರದೇಶಕ್ಕೂ ತೆನೆ ರವಾನೆ
Team Udayavani, Sep 8, 2018, 10:06 AM IST
ಪಡುಪೆರಾರ ಪುಚ್ಚಳದ ಫ್ರಾನ್ಸಿಸ್ ರೋಡ್ರಿಗಸ್ ಮತ್ತು ಪತ್ನಿ ಪಾವ್ಲಿನ್ ರೋಡ್ರಿಗಸ್ ಈ ಬಾರಿ ಸುಮಾರು 50 ಸೆಂಟ್ಸ್ ಜಾಗದಲ್ಲಿ ಭತ್ತ ಬೇಸಾಯ ಮಾಡಿದ್ದಾರೆ. 22 ವರ್ಷಗಳಿಂದ ಈ ದಂಪತಿ ತೆನೆ ಹಬ್ಬಕ್ಕೆಂದು ಭತ್ತ ಬೇಸಾಯ ಮಾಡುತ್ತಿದ್ದಾರೆ. 8 ದಿನಗಳಿಂದ ಇವರು ಮಾಡಿದ ಭತ್ತದ ತೆನೆಗಳು ಅಮೆರಿಕ, ದುಬಾೖ, ಕುವೈತ್, ಮುಂಬಯಿ, ಬೆಂಗಳೂರು ಸಹಿತ ಹಲವೆಡೆ ರವಾನೆಯಾಗಿವೆ.
ಬೆಳೆಸಿದ ತೆನೆ ಪ್ರತಿ ವರ್ಷ ಬಜಪೆ, ಪೆರಾರ, ಅದ್ಯಪಾಡಿ, ನೀರುಡೆ, ಪೆರ್ಮುದೆ, ದೇರೆಬೈಲು, ಹೊಸಬೆಟ್ಟು ಚರ್ಚ್‌ಗಳಿಗೆ ಕೊಂಡು ಹೋಗುತ್ತಿದ್ದಾರೆ. ಈಗಾಗಲೇ ಕೆಲವು ಚರ್ಚ್‌ನವರು ತೆನೆಯನ್ನು ಕೊಂಡುಹೋಗಿದ್ದಾರೆ. ತಾಲೂಕಿನ ಕೆಲವು ದೈವ, ದೇವಸ್ಥಾನಗಳಿಗೂ ಇವರು ಬೆಳೆಸಿದ ತೆನೆಗಳು ರವಾನೆಯಾಗುತ್ತಿದೆ. ಈಗಾಗಲೇ ಕುದ್ರೋಳಿ ದೇವಸ್ಥಾನಕ್ಕೆ ಒಂದು ಸಣ್ಣ ಗದ್ದೆಯನ್ನು ಬುಕ್ಕಿಂಗ್ ಮಾಡಲಾಗಿದೆ.
ಬೆಂಕಿರೋಗ, ಕೀಟಬಾಧೆ
3 ಬೊಟ್ಟು ಗದ್ದೆಯಲ್ಲಿ ಭತ್ತ ಕೃಷಿ ಮಾಡಿದ್ದು, ಈ ಬಾರಿ ಮೊದಲು ಬೆಂಕಿ ರೋಗ ತಗಲಿತ್ತು. ಮಳೆ ಜಾಸ್ತಿಯಾದ ಕಾರಣ ಕೀಟಗಳ ಹಾವಳಿ, ಈಗ ಬೊಂಬುಚ್ಚಿಯ ಭಾದೆ ಇದೆ. ಈ ಸಂಕಷ್ಟಗಳನ್ನು ನಡು ವೆ ಯೂ ಭತ್ತ ಬೇಸಾಯ ಮಾಡಲಾಗಿದೆ ಎನ್ನುತ್ತಾರೆ ಫ್ರಾನ್ಸಿಸ್.
ಬಜಪೆ ಚರ್ಚ್‌ಗೆ ಉಚಿತವಾಗಿ ತೆನೆ ನೀಡುವ ಇವರು, ಬೇರೆ ಯವರಾದರೆ ನೀಡಿದ ಹಣವನ್ನು ತೆಗೆದುಕೊಳ್ಳುತ್ತಾರೆ. ಫ್ರಾನ್ಸಿಸ್ ಅವರಿಗೆ ಈಗ 71 ವರ್ಷ. ಆದರೂ ಈ ಕಾಯಕ ಬಿಟ್ಟಿಲ್ಲ. ಈ ಮೂಲಕ ಕೃಷಿಯಿಂದ ದೂರ ಸರಿಯುವ ಯುವಕರಿಗೆ ಮಾದರಿಯಾಗಿದ್ದಾರೆ.
ಸುಬ್ರಾಯ ನಾಯಕ್ ಎಕ್ಕಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.