ಮೂರ್ತಿ ವಿಸರ್ಜನೆಯೇ ಸವಾಲು
Team Udayavani, Sep 8, 2018, 12:15 PM IST
ಬೆಂಗಳೂರು: ಕೈ-ಕಾಲು, ಕಿವಿ ಭಗ್ನಗೊಂಡಿರುವ ಗಣೇಶ. ವಿಜರ್ಸನೆಯಾಗದೆ ಅಲ್ಲಿಲ್ಲಿ ತೇಲುವ ಗಣಪ. ತ್ಯಾಜ್ಯ ರಾಶಿಯ ನಡುವೆ ಏಕಾಂಗಿ ಮೂರ್ತಿ… ಗೌರಿ-ಗಣೇಶ ಚತುರ್ಥಿ ಸಂದರ್ಭದಲ್ಲಿ ಶ್ರದ್ಧೆ, ಭಕ್ತಿಯಿಂದ ಆರಾಧಿಸಲ್ಪಡುವ ನಿಮ್ಮ ಗಣೇಶ ಮೂರ್ತಿಗಳು ವಿಸರ್ಜನೆ ನಂತರದಲ್ಲಿ ನಗರದ ವಿವಿಧ ಕೆರೆ ಹಾಗೂ ಕಲ್ಯಾಣಿಗಳ ಬಳಿ ಕಂಡುಬರುವುದು ಹೀಗೆ.
ಗಣೇಶೋತ್ಸವ ಹಿನ್ನೆಲೆಯಲ್ಲಿ ಜನ ಐದಾರು ಅಡಿಗಳ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಾರೆ. ಆದರೆ, ಕಲ್ಯಾಣಿಗಳಲ್ಲಿ ಅವುಗಳನ್ನು ಸಮರ್ಪಕವಾಗಿ ವಿಸರ್ಜಿಸಲು ಸಾಧ್ಯವಾಗದು. ಇದರಿಂದಾಗಿ ವಿಸರ್ಜನೆಯ “ಶಾಸ್ತ್ರ’ ಮುಗಿಸಿ ನಂತರ ಪಕ್ಕಕ್ಕೆ ಇಡಲಾಗುತ್ತದೆ. ಈ ವೇಳೆ ಮೂರ್ತಿಯ ಕೈ-ಕಾಲು, ಕಿವಿ, ಶಿರಕ್ಕೆ ಹಾನಿಯಾಗಿ ವಿರೂಪವಾಗುತ್ತಿದ್ದು, ಕೆಲವು ಕೆರೆಗಳಲ್ಲಿ ಸಮರ್ಪಕವಾಗಿ ಮುಳುಗದೆ ತೇಲಾಡುತ್ತಿರುತ್ತವೆ.
ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿಗಳಿಗೆ ರಾಸಾಯನಿಕ ಬಳಸುವುದರಿಂದ ನೀರಿನಲ್ಲಿ ಬೇಗ ಕರಗುವುದಿಲ್ಲ. ನಿತ್ಯ ಸಾವಿರಾರು ಗಣೇಶ ಮೂರ್ತಿಗಳು ವಿಸರ್ಜನೆಗಾಗಿ ಬರುವುದರಿಂದ ಅಲ್ಲಿನ ಸಿಬ್ಬಂದಿ ಮೂರ್ತಿಗಳನ್ನು ಪಕ್ಕಕ್ಕಿಡುತ್ತಾರೆ. ಇದರಿಂದಾಗಿ ಭಕ್ತಿ ಶ್ರದ್ಧೆಯಿಂದ ಪೂಜಿಸಿದ ಗಣೇಶ ಮೂರ್ತಿಗಳು ವಿರೂಪಗೊಂಡು ಬಳಿಕ ವಿಲೇವಾರಿಯಾಗುತ್ತವೆ.
ಪಿಒಪಿ ಹಾಗೂ ಐದು ಅಡಿಗಿಂತಲೂ ಹೆಚ್ಚಿನ ಅಳತೆಯ ಗಣೇಶ ಮೂರ್ತಿಗಳ ಬಳಕೆಯಿಂದ ಸಮಸ್ಯೆಯಾಗುತ್ತಿದೆ. ಇದರೊಂದಿಗೆ ಪಿಒಪಿ ಗಣೇಶ ಮೂರ್ತಿಗಳ ತ್ಯಾಜ್ಯ ವಿಲೇವಾರಿಯೂ ಪಾಲಿಕೆಗೆ ತಲೆನೋವಾಗಿ ಪರಿಗಣಿಸಿದ್ದು, ಭಕ್ತರು ಪರಿಸರ ಸ್ನೇಹಿ ಹಾಗೂ 5 ಅಡಿಗಿಂತ ಕಡಿಮೆ ಎತ್ತರದ ಮೂರ್ತಿ ಪೂಜಿಸಲು ಮುಂದಾಗಬೇಕು ಎಂದು ಪಾಲಿಕೆ ಮನವಿ ಮಾಡಿದೆ.
ಗಣೇಶೋತ್ಸವದ ಹಿನ್ನೆಲೆಯಲ್ಲಿ ನಗರದ ವಿವಿಧ ಕೆರೆಗಳು ಹಾಗೂ ಕಲ್ಯಾಣಿಗಳಲ್ಲಿ ವಿಸರ್ಜನೆಯಾಗುವ ಗಣೇಶ ಮೂರ್ತಿಗಳಿಂದ ನೂರಾರು ಟನ್ ಮಣ್ಣು ಹಾಗೂ ಹೂ, ಬಾಳೆ ಕಂಬ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ವಿಲೇವಾರಿ ಕಷ್ಟವಾಗುತ್ತಿದೆ.
ವಾರ್ಷಿಕ 8 ಲಕ್ಷ ಮೂರ್ತಿಗಳ ಆರಾಧನೆ: ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸಾಕಷ್ಟು ಮಂದಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸುವುದು ವಾಡಿಕೆ. ಅದರಂತೆ ವಾರ್ಷಿಕ 8 ಲಕ್ಷಕ್ಕೂ ಹೆಚ್ಚಿನ ಗಣೇಶ ಮೂರ್ತಿಗಳು ನಗರದಲ್ಲಿ ಪ್ರತಿಷ್ಠಾಪನೆಯಾಗುತ್ತಿವೆ. ಆ ಪೈಕಿ 3 ಲಕ್ಷ ಮೂರ್ತಿಗಳನ್ನು ಮನೆ ಆವರಣ, ಬಾವಿ ಇತರೆಡೆ ವಿಸರ್ಜಿಸಲಾಗುತ್ತಿದೆ. ಉಳಿದ 5 ಲಕ್ಷ ಮೂರ್ತಿಗಳನ್ನು ಪಾಲಿಕೆಯ ಕೆರೆ ಹಾಗೂ ಕಲ್ಯಾಣಿಗಳಲ್ಲಿ ವಿಸರ್ಜನೆಯಾಗುತ್ತಿದ್ದು, ಬಹಳಷ್ಟು ಕಡೆ ಕೆರೆಗಳು ಮಲೀನವಾಗುತ್ತಿವೆ.
ತ್ಯಾಜ್ಯ ಪ್ರಮಾವೂ ಹೆಚ್ಚಳ: ನಗರದಲ್ಲಿ ಸಾಮಾನ್ಯ ದಿನಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಪ್ರಮಾಣಕ್ಕೆ ಹೋಲಿಸಿದರೆ ಹಬ್ಬದ ಸಂದರ್ಭದಲ್ಲಿ ಹತ್ತಾರು ಪಟ್ಟು ಹೆಚ್ಚು ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಪೌರಕಾರ್ಮಿಕರು ಮೂರು ಪಾಳಿಗಳಲ್ಲಿ ಕಾರ್ಯ ನಿರ್ವಹಿಸಿ ತ್ಯಾಜ್ಯ ವಿಲೇವಾರಿ ಕೈಗೊಳ್ಳುತ್ತಾರೆ. ಗಣೇಶ ಚತುರ್ಥಿಯ ದಿನ ಹಾಗೂ ನಂತರ ಎರಡು- ಮೂರು ದಿನ ಭಾರಿ ಪ್ರಮಾಣದಲ್ಲಿ ತ್ಯಾಜ್ಯ ಸೃಷ್ಟಿಯಾಗಲಿದೆ.
ಏಕಾಏಕಿ ನೂರಾರು ಟನ್ ತ್ಯಾಜ್ಯ ಹೆಚ್ಚುವರಿಯಾಗಿ ಉತ್ಪತ್ತಿಯಾಗುವುದರಿಂದ ತ್ವರಿತ ವಿಲೇವಾರಿ ಸವಾಲೆನಿಸುತ್ತದೆ. ಮೂರ್ತಿ ವಿಸರ್ಜನಾ ಸ್ಥಳಗಳಲ್ಲಿಯೇ ಭಾರೀ ಪ್ರಮಾಣದಲ್ಲಿ ಹೂವು, ಹಣ್ಣು , ಪೂಜಾ, ಅಲಂಕಾರ ಸಾಮಗ್ರಿ, ತ್ಯಾಜ್ಯ ಸೃಷ್ಟಿಯಾಗುತ್ತಿದ್ದು, ಕೆರೆ ಪರಿಸರಕ್ಕೂ ಹಾನಿಯಾಗುತ್ತದೆ. ಇದನ್ನು ತಪ್ಪಿಸಲು ಎಲ್ಲರೂ ಸ್ವತ್ಛತೆಗೆ ಆದ್ಯತೆ ನೀಡಬೇಕಿದೆ ಎಂದು ಹೇಳಿದರು.
ಗಣೇಶ ಮೂರ್ತಿ ಆರಾಧನೆಯ ಉದ್ದೇಶವೇ ಬೇರೆ: ಕೆರೆಗಳಿಗೆ ಹಲವು ಕಡೆಗಳಿಂದ ನೀರು ಹರಿದು ಬರುವುದರಿಂದ ಹೆಚ್ಚಿನ ಲವಣಾಂಶಗಳು ಹಾಗೂ ವಿವಿಧ ಬಗೆಯ ಬೀಜಗಳು ಕೆರೆ ಸೇರುತ್ತವೆ. ಹೀಗಾಗಿ ಒಂದು ಊರಿನ ಮಣ್ಣಿನಿಂದ ಮಾಡಿ ಮೂರ್ತಿಗಳನ್ನು ಮತ್ತೂಂದು ಊರಿಗೆ ನೀಡುವ ಮೂಲಕ ಲವಣಾಂಶ ಹಾಗೂ ಬೀಜಗಳು ತಲುಪುವಂತೆ ಮಾಡುವ ಉದ್ದೇಶದಿಂದ ಕೆರೆಯ ಮಣ್ಣಿನಿಂದ ಗಣೇಶ ಮೂರ್ತಿ ತಯಾರಿಸಲಾಗುತ್ತಿತ್ತು. ಇದು ಒಂದು ರೀತಿಯಲ್ಲಿ ಜೀವವೈವಿಧ್ಯ ಪ್ರಕ್ರಿಯೆಯಾಗಿತ್ತು ಎನ್ನುತ್ತಾರೆ ಪರಿಸರವಾದಿ ಡಾ.ಎ.ಎನ್.ಯಲ್ಲಪ್ಪರೆಡ್ಡಿ.
ಆದರೆ ಈಚಿನ ವರ್ಷಗಳಲ್ಲಿ ರಾಸಾಯನಿಕಗಳಿಂದ ತಯಾರಿಸಿದ ಗಣೇಶ ಮೂರ್ತಿಗಳ ಆರಾಧನೆಗೆ ವಿದ್ಯಾವಂತರೇ ಹೆಚ್ಚು ಒತ್ತು ನೀಡುತ್ತಿದ್ದಾರೆ. ಇದರಿಂದ ನಾವೇ ಕೆರೆಗಳಿಗೆ ವಿಷ ಹಾಕಿ ಹಾಳು ಮಾಡುತ್ತಿದ್ದೇವೆ. ಮೂರ್ತಿಗಳ ಮೂಲಕ ವಿಷಕಾರಿ ಅಂಶಗಳು ಕೆರೆ ಸೇರುತ್ತಿದ್ದು, ಸುತ್ತಮುತ್ತಲಿನ ಅಂತರ್ಜಲ ಸಹ ವಿಷಮಯವಾಗಿ ಜನರು ವಿವಿಧ ಕಾಯಿಲೆಗಳಿಗೆ ತುತ್ತಾಗುವಂತಾಗಿದೆ. ಹೀಗಾಗಿ ನಗರದ ಜನರು ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಬಳಕೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.
* ವೆಂ. ಸುನೀಲ್‌ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್ ನೀಡಿದ ರಿಷಭ್ ಪಂತ್
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.