ಉದ್ಭವ ಮೂರ್ತಿ ಹರ್ತಿ ಬಸವಣ್ಣ


Team Udayavani, Sep 8, 2018, 3:25 PM IST

200.jpg

ಗದಗ ತಾಲೂಕಿನ ಹರ್ತಿ ಗ್ರಾಮದ ಗುಡ್ಡದಲ್ಲಿ ನೆಲೆಸಿರುವ ಉದ್ಭವ ಮೂರ್ತಿ ಬಸವಣ್ಣ, ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿದ್ದಾನೆ. ಸಕಲ ಭಕ್ತರ ಕಷ್ಟ-ಕಾರ್ಪಣ್ಯಗಳನ್ನು ತೊಲಗಿಸಿ, ಇಷ್ಟಾರ್ಥಗಳನ್ನು ಈಡೇರಿಸುವ ಮೂಲಕ ಈ ಭಾಗದ ಕಾಮಧೇನು ಎಂದೇ ಆತ ಹೆಸರಾಗಿದ್ದಾನೆ. 

ಇತಿಹಾಸ
ದಕ್ಷಿಣ ಭಾರತದ ಎಪ್ಪತ್ತು ಗಿರಿಗಳಲ್ಲಿ ಕಪ್ಪತ್ತಗಿರಿಗೆ (ಕಪ್ಪತ್ತ ಗುಡ್ಡ) ಅಗ್ರ ಸ್ಥಾನವಿದೆ. ಈ ಕಪ್ಪತ್ತಗಿರಿಯ ಪಡವಣ ದಿಕ್ಕಿಗೆ ಹರಗಣಪುರ (ಹರ್ತಿ)ದಲ್ಲಿ ಈ ಹಿಂದೆ ನೆಲೆಸಿದ್ದ ಅನೇಕ ತಪಸ್ವಿಗಳಿಗೆ, ಸಾಧು-ಸಂತರಿಗೆ, ಶಿವಭಕ್ತರಿಗೆ ನುಲುಂದ ಮತ್ತು ಕಪೋತ ರಾಕ್ಷಸರು ತೊಂದರೆ ಕೊಡುತ್ತಿದ್ದರು. ಆಗ ಶಿವಭಕ್ತರು ಉಗ್ರ ತಪಸ್ಸು ಮಾಡಿದ್ದರಿಂದ ಶಿವನು ಪ್ರತ್ಯಕ್ಷನಾಗಿ ನಿಮ್ಮೆಲ್ಲರನ್ನು ರಕ್ಷಿಸಲು ಇಲ್ಲಿಯೇ ವಾಸ ಮಾಡುತ್ತೇನೆಂದು ಆಶೀರ್ವದಿಸಿದ. ಆನಂತರದಲ್ಲಿ ಪರಮೇಶ್ವರ ಹರಗಣಪುರದ ಗುಡ್ಡದಲ್ಲಿ ಧ್ಯಾನಾಸಕ್ತನಾಗುತ್ತಾನೆ. ಪಾರ್ವತಿಯ ಅಣತಿಯಂತೆ ಮನ್ಮಥನು ಶಿವನಿಗೆ ಹೂವು ಬಾಣ ಬಿಡುತ್ತಾನೆ. ಆಗ ಶಿವನು ತನ್ನ ಮೂರನೆಯ ಕಣ್ಣು ತೆರೆಯಲು ಮನ್ಮಥನು ಸುಟ್ಟು ಭಸ್ಮವಾದನು. ಮನ್ಮಥ ಸುಟ್ಟು ಭಸ್ಮವಾದ ಸ್ಥಳದ ಪ್ರತೀಕವಾಗಿ ಇಲ್ಲಿ ದೀಪಸ್ತಂಭವಿದೆ. ನಂತರ ಪಾರ್ವತಿಯು ನಂದಿ ಸಮೇತ ಬಂದು ಶಿವನ ಬರುವಿಕೆಗಾಗಿ ತಪಸ್ಸು ಮಾಡ ಹತ್ತಿದಳು. ನಂದಿಯು ತಾಯಿಯ ವರ್ತನೆಯನ್ನು ಶಿವನಿಗೆ ಅರುಹಿದ. ಶಿವನು ಪಾರ್ವತಿಯ ತಪಸ್ಸಿಗೆ ಮಣಿದು ಭೂಲೋಕದಲ್ಲಿ ವಿವಾಹವಾದನಂತೆ. ಅಂದಿನಿಂದ ಹರಗಣಪುರವು ಹರಸತಿಪುರ ಎಂದು ಕರೆಯಲ್ಪಟ್ಟಿತ್ತಂತೆ. 

ಕಾಲಾನಂತರದಲ್ಲಿ ಶಿವನು ನಂದಿಗೆ “ನೀನು ಇಲ್ಲಿಯೇ ಹರ್ತಿ ಬಸವಣ್ಣನೆಂಬ ನಾಮಾಂಕಿತದಿಂದ ಅವತರಿಸಿ, ಶಿವಭಕ್ತರ ಕಲ್ಯಾಣಕ್ಕೆ ಮತ್ತು ಧರ್ಮಾತ್ಮರಿಗೆ ತೊಂದರೆ ಕೊಡುವವರನ್ನು ಶಿಕ್ಷಿಸುವಂತೆ ‘ ಎಂದು ಆಜ್ಞಾಪಿಸುತ್ತಾನೆ. ಗುಡ್ಡದ ಗವಿಯ ದೊಡ್ಡ ಬಂಡಿಯಲ್ಲಿ ನಂದಿ (ಬಸವಣ್ಣ) ಉದ್ಭವವಾಯಿತು. ಮುಂದೆ ನುಲುಂದ ಮತ್ತು ಕಪೋತ ರಾಕ್ಷಸರ ಸಂಹಾರ ಮಾಡಿದ ಬಸವಣ್ಣ, ಊರಿನ ಜನರ ಕಷ್ಟ-ಕಾರ್ಪಣ್ಯಗಳನ್ನು ಕಳೆದ. ಪರಿಣಾಮ, ಬಸವಣ್ಣನ ಮಹಿಮೆ ದಿನದಿಂದ ದಿನಕ್ಕೆ ಪಸರಿಸಿತು.

ಗುಡ್ಡದಿಂದ ಕೆಳಗಿಳಿದ ಬಸವಣ್ಣ
ಗುಡ್ಡದ ಮೇಲೆ ನೆಲೆನಿಂತಿದ್ದ ಬಸವಣ್ಣನನ್ನು ಶಿವಬಸಮ್ಮ ಹೂಗಾರ ಎಂಬ ಅರ್ಚಕ ಮನೆತನದ ವೃದ್ಧೆ ಪ್ರತಿದಿನ ಭಯ, ಭಕ್ತಿಯಿಂದ ಪೂಜೆ ಮಾಡುತ್ತಿದ್ದಳು. ಒಂದು ದಿನ ಪೂಜೆಯ ನಂತರ “ಹೇ ಬಸವಣ್ಣ, ನನ್ನಪ್ಪಾ, ಇನ್ನು ಮುಂದೆ ಗುಡ್ಡ ಹತ್ತಿ ನಿನ್ನ ಪೂಜೆಗೆ ಬರುವುದು ಕಷ್ಟದ ಕೆಲಸ. ಇಂದು ನಿನಗೆ ಕೊನೆಯ ಪೂಜೆ’ ಎಂದು ನಿವೇದಿಸಿದಳು. ವೃದ್ಧೆಯ ಮುಗª ಭಕ್ತಿಗೆ ಒಲಿದ ಬಸವಣ್ಣ, ಅವಳ ಹಿಂದೆಯೇ ಗುಡ್ಡದಿಂದ ಕೆಳಗೆ ಬಂದನಂತೆ. ಆ ಗಳಿಗೆಯಲ್ಲಿ ನಿಗೂಢವಾದ ಶಬ್ದವಾಗುತ್ತಿದ್ದಂತೆ ಆಕೆ ಕುತೂಹಲದಿಂದ ತಿರುಗಿ ನೋಡಿದ್ದಾಳೆ. ಅಷ್ಟೇ: ಬಸವಣ್ಣ, ಅಲ್ಲಿಯೇ ನೆಲೆ ನಿಂತನಂತೆ. ನಂತರ ಅಲ್ಲಿಯೇ ದೇವಸ್ಥಾನ ಕಟ್ಟಲಾಗಿದೆ ಎನ್ನುತ್ತಾರೆ ದೇವಸ್ಥಾನದ ಪ್ರಧಾನ ಅರ್ಚಕ ಸಂಗಮೇಶ ಪೂಜಾರ.

ಸಿದ್ಧಿ ಸ್ಥಾನವಾದ ಹರ್ತಿ
ಬಸವಣ್ಣನ ದೇವಸ್ಥಾನದ ಆವರಣದಲ್ಲಿ ನವಗ್ರಹ ಮಂಟಪ, ಶಿವನ ಮೂರ್ತಿ, ನಂದಿ ಧ್ವಜ, ಹನುಮಂತ, ಗಣೇಶ ಮತ್ತು ನಾಗರ ಮೂರ್ತಿಗಳ ಮಂಟಪವಿದೆ. ಸದ್ಯ ಎಂಟು ಕುಟುಂಬಗಳಿಂದ ಅರ್ಚಕ ಸೇವೆ ನಡೆಯುತ್ತಿದ್ದು, ವರ್ಷಕ್ಕೆ ಒಂದು ಕುಟುಂಬಕ್ಕೆ ಈ ಸೇವೆ ವರ್ಗಾವಣೆಯಾಗುತ್ತದೆ. ಪ್ರತಿ ಸೋಮವಾರ ವಿಶೇಷ ಪೂಜೆ, ರುದ್ರಾಭಿಷೇಕ ಮತ್ತು ಅರ್ಚಕರ ಮನೆಯಿಂದ ಬಸವಣ್ಣನ ಗುಡಿಗೆ ಪಲ್ಲಕ್ಕಿ ಉತ್ಸವ ಜರುಗುತ್ತದೆ. ಶ್ರಾವಣ ಮಾಸದಲ್ಲಿ ವಿಶೇಷ ಧಾರ್ಮಿಕ ಕಾರ್ಯಗಳು ನಡೆಯುತ್ತವೆ. ಶ್ರಾವಣ ಮಾಸದ ಕೊನೆಯ ಸೋಮವಾರ ಬಸವಣ್ಣನ ಮಹಾರಥೋತ್ಸವ, ಕಾರ್ತಿಕ ಮಾಸದಲ್ಲಿ ಲಕ್ಷ ದೀಪೋತ್ಸವ ಜರುಗುತ್ತದೆ. ಪ್ರತಿ ಅಮಾವಾಸ್ಯೆ ದಿನದಂದು ಅನ್ನ ಪ್ರಸಾದ ಸೇವೆ ಇರುತ್ತದೆ. ಬಸವೇಶ್ವರ ದೇವಸ್ಥಾನ ವ್ಯವಸ್ಥಾಪಕ ಕಮಿಟಿ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಗಳೂ ಸಾಗುತ್ತಿವೆ.

ತ್ರಿಕೂಟಾಚಲ ಮಾದರಿ
 ಚಾಲುಕ್ಯರ ಆಳ್ವಿಕೆಯ ಕಾಲದಲ್ಲಿ ಕ್ರಿ.ಶ. 1172ರಲ್ಲಿ ಪಾರ್ವತಿ ಮತ್ತು ಪರಮೇಶ್ವರ ದೇವಾಲಯ ನಿರ್ಮಾಣವಾಗಿದೆ ಎಂದು ಶಿಲಾಶಾಸನದಲ್ಲಿ ಉಲ್ಲೇಖವಿದೆ. ಹರ್ತಿ ಗ್ರಾಮದ ಬೆಟ್ಟದ ಇಳಿಜಾರಿನಲ್ಲಿ ಈಶ್ವರ ಗುಡಿಯಿದೆ. ಇದು ತ್ರಿಕೂಟಾಚಲ ಮಾದರಿಯಾಗಿದೆ. ಗರ್ಭಗುಡಿಯಲ್ಲಿ ಶಿವ-ಪಾರ್ವತಿಯರು ದಂಡಿ ಬಾಸಿಂಗ ಧರಿಸಿ ವಿವಾಹಕ್ಕೆ ಅಲಂಕಾರಗೊಂಡ ಮಾದರಿಯ  ವಿಗ್ರಹಗಳಿವೆ. ಶ್ರಾವಣ ಮಾಸದ ಕೊನೆಯ ಸೋಮವಾರದ ಮೊದಲನೇ ಗುರುವಾರ, ಗಿರಿಜಾ ಕಲ್ಯಾಣದ ದಿವಸ ಶಿವ-ಪಾರ್ವತಿಯರ ವಿವಾಹ ಸಮಾರಂಭ ಜರುಗುತ್ತದೆ. ನಂತರವೇ ಹರ್ತಿ ಬಸವಣ್ಣನ ಜಾತ್ರಾ ಕಾರ್ಯಗಳು ಶುರುವಾಗುತ್ತವೆ.

ಶರಣು ಹುಬ್ಬಳ್ಳಿ  

ಟಾಪ್ ನ್ಯೂಸ್

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

1-sindu

Badminton; ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌: ಸಿಂಧು, ಸೆನ್‌ ಕ್ವಾರ್ಟರ್‌ಫೈನಲಿಗೆ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

1-pak

ODI; ಜಿಂಬಾಬ್ವೆ ಎದುರು ಪಾಕ್‌ಗೆ 2-1 ಸರಣಿ

1-wqewqe

Pro Kabaddi:ಯುಪಿ, ತೆಲುಗು ಜಯಭೇರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

1-sindu

Badminton; ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌: ಸಿಂಧು, ಸೆನ್‌ ಕ್ವಾರ್ಟರ್‌ಫೈನಲಿಗೆ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

1-skk

Cricket; ವೇಗಿ ಸಿದ್ದಾರ್ಥ್ ಕೌಲ್‌ ನಿವೃತ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.