“”ರಾಜಕೀಯ ಪಕ್ಷಗಳಿಗೆ ಇಷ್ಟವಾಗಲಿ ಎಂದು ಇದನ್ನು ರಚಿಸಿದ್ದಲ್ಲ”


Team Udayavani, Sep 9, 2018, 6:00 AM IST

x-6.jpg

ಬಹುಬೇಗನೆ ಮರುಮುದ್ರಣ ಕಂಡಿರುವ “ಕಶೀರ’ ಕಾದಂಬರಿಯ ಲೇಖಕಿ ಸಹನಾ ವಿಜಯಕುಮಾರ್‌ ಅವರಿಗೆ ಹನ್ನೆರಡು ಪ್ರಶ್ನೆಗಳು….

1 ಕಾಶ್ಮೀರದ ಬಗ್ಗೆ ಕನ್ನಡದಲ್ಲಿ ಕಾದಂಬರಿ ಬರೆಯಬೇಕೆಂದು ನಿಮಗೆ ಯಾಕೆ ಅನ್ನಿಸಿತು?
-ಈ ಕಥಾವಸ್ತುವು ಕಾಶ್ಮೀರದ ಕುರಿತು ಅಧ್ಯಯನ ಮಾಡುವಾಗಲೇ ಬಲವಾಗಿ ಕಾಡಲಾರಂಭಿಸಿತು. ಬಹಳ ಹಿಂದಿನಿಂದಲೂ ಜ್ಞಾನೋಪಾಸನೆಯ ಕೇಂದ್ರವಾಗಿದ್ದ, ಅನೇಕ ದಾರ್ಶನಿಕ ಹಾಗೂ ಶಾಸ್ತ್ರಜ್ಞರನ್ನು ಭಾರತಕ್ಕೆ ಕೊಡುಗೆಯಾಗಿ ನೀಡಿದ ಕಾಶ್ಮೀರದ ಇಂದಿನ ದುಃಸ್ಥಿತಿ ಕಾದಂಬರಿ ಬರೆಯಲು ಪ್ರೇರೇಪಿಸಿತು.

2 ದೀರ್ಘ‌ ಕೃತಿಗಳನ್ನು ಜನ ಓದುವುದಿಲ್ಲ ಎನ್ನುತ್ತಾರೆ. 
-ಹಾಗೇನಿಲ್ಲ, ಸತ್ವಯುತವಾದ ಹಾಗೂ ರಸಾನುಭವವನ್ನು ಉಂಟುಮಾಡಬಲ್ಲ ಯಾವ ಕಥಾ ವಸ್ತುವನ್ನಾದರೂ ದೀರ್ಘ‌ವಾಗಿದ್ದರೂ ಜನ ಸ್ವೀಕರಿಸುತ್ತಾರೆ. ಇದು “ಕಶೀರ’ದ ವಿಷಯದಲ್ಲೇ ನನ್ನ ಅನುಭವಕ್ಕೆ ಬಂದಿದೆ. ಎರಡನೆಯ, ಮೂರನೆಯ ಬಾರಿ ಓದಿ ವಿಷಯವನ್ನು ಮನನ ಮಾಡಿಕೊಂಡು ನನಗೆ ತಿಳಿಸಿದ ಗಂಭೀರ ಓದುಗರಿ¨ªಾರೆ.

3 ಶಾರದೆಯನ್ನು “ಕಾಶ್ಮೀರ ಪುರವಾಸಿನಿ’ ಎಂದು ಬಣ್ಣಿಸಲು ಕಾರಣವಾದ ಅಂಶ ನಿಮ್ಮ ಅನುಭವಕ್ಕೆ ಬಂತೆ?
-ಇದನ್ನು ಅನುಭವಕ್ಕೆ ತಂದುಕೊಳ್ಳುವ ಪರಿಸ್ಥಿತಿ ಸದ್ಯಕ್ಕೆ ಕಾಶ್ಮೀರದಲ್ಲಿಲ್ಲ. ಏಕೆಂದರೆ, ಶಾರದಾಪೀಠ ಇರುವುದು ಇಂದಿನ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ. ಭಾರತದ ವ್ಯಾಪ್ತಿಗೆ ಬರುವ ಕಾಶ್ಮೀರದಲ್ಲಿ ಬರೀ ಉಗ್ರವಾದ, ಕಲ್ಲೆಸೆತಗಳೇ. ಆದರೆ ಶಾರದೆ ಕಾಶ್ಮೀರ ಪುರವಾಸಿನಿ ಎಂಬ ಉಲ್ಲೇಖ ಕಲ್ಹಣನ ರಾಜತರಂಗಿಣಿಯಲ್ಲೇ ದೊರಕುತ್ತದೆ. ಅಲ್ಲದೆ ಹಲವಾರು ಪೌರಾಣಿಕ ಕಥೆಗಳ ಹಾಗೂ ಸಂಶೋಧಕರ ಆಕರಗಳಿಂದ ಪುರಾವೆಗಳು ದೊರಕುತ್ತವೆ.

4 ಕಾಶ್ಮೀರಕ್ಕೆ ಎಷ್ಟು ಸಲ ಭೇಟಿ ನೀಡಿದಿರಿ?
-ಒಂದು ಸಲ. ಜಮ್ಮು ಹಾಗೂ ಕಾಶ್ಮೀರಗಳಲ್ಲಿ ಕೆಲ ದಿನಗಳು ತಂಗಿ ಅಲ್ಲಿಯ ಸ್ಥಿತಿ-ಗತಿಗಳನ್ನು ಖುದ್ದು ಅವಲೋಕಿಸಿ ಅದನ್ನು ಅಧ್ಯಯನದೊಂದಿಗೆ ತಾಳೆ ಹಾಕಿ ಅರಿತೆ.

5 ಕಾಶ್ಮೀರ ಕ್ಷೇತ್ರ ಕಾರ್ಯದಲ್ಲಿ ನಿಮಗೇನಾದರೂ ತೊಂದರೆಯಾಗಲಿಲ್ಲವೆ?
-ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡುವಾಗ ವಹಿಸ ಬೇಕಾದ ಮುಂಜಾಗ್ರತೆಗಳನ್ನು ಗಮನದಲ್ಲಿಟ್ಟುಕೊಂಡಿದ್ದರೂ ಒಂದೆರಡು ಬಾರಿ ಅಪಾಯಕರ ಸನ್ನಿವೇಶಗಳಿಂದ ಪಾರಾದೆವು ಎಂದು ಜೊತೆಗೆ ಕರೆದೊಯ್ದವರು ಹೇಳಿದರು. ಉಳಿದಂತೆ ಹೆಜ್ಜೆ ಹೆಜ್ಜೆಗೂ ಮುನ್ನೆಚ್ಚರಿಕೆ ಅತ್ಯಗತ್ಯ. ಭಾರತದ ಇತರ ನಗರಗಳಲ್ಲಿ ಓಡಾಡುವಂತೆ ಬಿಡುಬೀಸಾಗಿ ಮನ ಬಂದಲ್ಲಿ ಸಂಚರಿಸಲಾಗದು. 

6 ಕಾದಂಬರಿಯ ಬದಲಿಗೆ ಇತಿಹಾಸ ಕೃತಿಯನ್ನೇ ಬರೆಯಬಹುದಿತ್ತು…
-ಸಂವೇದನೆಗಳನ್ನು ಬಿಂಬಿಸಲು ಕಾದಂಬರಿಯೇ ಸೂಕ್ತ ಮಾಧ್ಯಮ. ಇದರಲ್ಲಿ ಬರುವ ಕೈಲಾಶ್‌ ಪಂಡಿತರ ಪಾತ್ರ ಅನುಭವಿಸುವ ವೇದನೆ, ಬಶೀರ್‌ ಅಹ್ಮದ್‌ರ ಪಾತ್ರ, ಅನುಭವಿಸುವ ಗೊಂದಲಗಳನ್ನು ಮಾಹಿತಿಯ ರೂಪದಲ್ಲಿ ಪ್ರಸ್ತುತ ಪಡಿಸಿದ್ದರೆ ಇಷ್ಟು ಪರಿಣಾಮಕಾರಿಯಾಗಿರುತ್ತಿರಲಿಲ್ಲ. ಮೇಲಾಗಿ ಇದು ಕಾಶ್ಮೀರಿ ಹಿಂದೂಗಳ ನೈಜ ಅನುಭವ.

7 ಕಾದಂಬರಿಯಲ್ಲಿ ಕಲ್ಪನೆಗೆ ಅವಕಾಶವಿದೆಯಲ್ಲ?
-ಈ ಕಾದಂಬರಿಯ ಎಲ್ಲ ಕಾಲ್ಪನಿಕ ಅಂಶಗಳು ಸತ್ಯಾಧಾರಿತವಾದದ್ದೇ. ಏಕೆಂದರೆ, 28 ವರ್ಷಗಳ ಹಿಂದೆ  ಕೆಲ ಮತಾಂಧರು ಕಾಶ್ಮೀರಿ ಹಿಂದೂಗಳನ್ನು ತಮ್ಮ ಮನೆ-ಮಠಗಳನ್ನು ಬಿಟ್ಟು ಹೊರಡುವಂತೆ ಮಾಡಿದ್ದು ಕಲ್ಪಿತ ಘಟನೆಯಲ್ಲ. ಅದನ್ನು ಆಧರಿಸಿರುವುದರಿಂದ ಈ ಕೃತಿಯಲ್ಲಿ ಕಲ್ಪನೆ ಸತ್ಯದ ಎಲ್ಲೆ ಮೀರದಂತೆ ಮೂಡಿಬಂದಿದೆ. 

8 ಅನುಚ್ಛೇದ 370, ನೆಹರೂ-ಗಾಂಧಿ-ಪಟೇಲ್‌ರ ವಿಚಾರಧಾರೆಗಳು- ಇತ್ಯಾದಿ ಚಾರಿತ್ರಿಕ ವಿಚಾರಗಳನ್ನು ಕಾದಂಬರಿಯಲ್ಲಿ ನಿರೂಪಿಸುವುದು ಸವಾಲೆನಿಸಲಿಲ್ಲವೆ?
ಹೌದು, ಆದರೆ, ಕಾಶ್ಮೀರದ ಇಂದಿನ ದುಃಸ್ಥಿತಿಗೆ ಕಾರಣವಾಗಿರುವುದು ಅಂದಿನ ರಾಜಕಾರಣಿಗಳ ದೂರದೃಷ್ಟಿ ಹಾಗೂ ಇಚ್ಛಾಶಕ್ತಿಯ ಕೊರತೆ. ಅದನ್ನು ಗಣನೆಗೆ ತೆಗೆದುಕೊಳ್ಳದೆ ಬರೀ ಕಥೆಯ ರೂಪದಲ್ಲಿ ಹೇಳುವುದು ವಾಸ್ತವಕ್ಕೆ ದ್ರೋಹವೆಸಗಿದಂತಾಗುತ್ತದೆ.  ಆದ್ದರಿಂದ ಪಾತ್ರಗಳಿಗೆ ಪೂರಕವೆನಿಸಿದ ಪ್ರಮಾಣದಲ್ಲಿ ಅಂದಿನ ರಾಜಕಾರಣಿಗಳ ಕೊಡುಗೆಯೂ ಅಲ್ಲಲ್ಲಿ ಪ್ರಸ್ತಾಪವಾಗುತ್ತದೆ. 

9 ಕಶ್ಯಪ ಮಹರ್ಷಿ, ಶಂಕರಾಚಾರ್ಯರು, ಹೃದಯನಾಥ ಪಂಡಿತರು… ಹೀಗೆ ಪುರಾಣ-ಚರಿತ್ರೆ- ವರ್ತಮಾನಗಳನ್ನು ಒಂದು ನೂಲಿನಲ್ಲಿ ಹೇಗೆ ಹೆಣೆದಿರಿ?
ಪುರಾಣ, ಚರಿತ್ರೆಗಳು ಒಂದನ್ನೊಂದು ಬೆಸೆದುಕೊಂಡೇ ಬಂದಿವೆ. ಭೌಗೋಳಿಕವಾಗಿ ಕಾಶ್ಮೀರ ನಮಗೆ ದೂರವೆನಿಸಿದರೂ ಇತಿಹಾಸವನ್ನೊಮ್ಮೆ ಅವಲೋಕಿಸಿದರೆ ದಕ್ಷಿಣಭಾರತದಿಂದ ಶಂಕರಾಚಾರ್ಯರು ಅಲ್ಲಿಗೆ ಹೋಗಿದ್ದು ಹಾಗೂ ಕೊಲ್ಕತಾದಿಂದ ವಿವೇಕಾನಂದರು ಅಲ್ಲಿಗೆ ಭೇಟಿ ನೀಡಿದ್ದು ತಿಳಿದುಬರುತ್ತದೆ. ಇರುವ ಕೊಂಡಿಗಳನ್ನು ಕಳಚದಂತೆ ಕಾಪಾಡಿಕೊಳ್ಳುವುದಷ್ಟೇ ನಮ್ಮ ಕೆಲಸ. 

10 ಕಾಶ್ಮೀರ ಸಮಸ್ಯೆ ರಾಜಕೀಯಮಯವಾಗಿದೆ.  ನಿಮ್ಮ ಕಾದಂಬರಿಯೂ ಯಾವುದಾದರೂ ರಾಜಕೀಯ ಪಕ್ಷಕ್ಕೆ ಇಷ್ಟವಾಗಬಹುದಲ್ಲ?
-ರಾಜಕೀಯ ಪಕ್ಷಗಳಿಗೆ ಇಷ್ಟವಾಗಲಿ ಎಂದು ಇದನ್ನು ರಚಿಸಿದ್ದಲ್ಲ. ಮಾನವೀಯತೆ ಇರುವ ಭಾರತೀಯರ ಮನಸ್ಸಿಗೆ ಹಿಡಿಸಿದರೆ ಸಾಕು. ಪದೇ ಪದೇ ತಮ್ಮನ್ನು ಜಾತ್ಯಾತೀತರು ಎಂದು ಬೆನ್ನು ತಟ್ಟಿಕೊಳ್ಳುವ ಮಂದಿಯ ಮನಸ್ಸುಗಳನ್ನು ತಟ್ಟಿದರೆ ಸಾಕು.  

11ಸಲೀಂನಂಥ ವಿಚಾರವಂತರು ಕಾಶ್ಮೀರದಲ್ಲಿ ಸಾಕಷ್ಟು ಮಂದಿ ಇದ್ದಾರೆಯೆ?
-ಹೌದು, ಸಾಕಷ್ಟು ಜನರಿದ್ದಾರೆ. ಆದರೆ ಪ್ರತ್ಯೇಕತಾವಾದಿಗಳ ಕಪಿಮುಷ್ಟಿಯಿಂದ ಬಿಡಿಸಿಕೊಳ್ಳುವ ದಾರಿ ಕಾಣದೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹೇಳಲಾರದೆ ಮೌನವಾಗಿದ್ದಾರೆ. ರಾಜಕೀಯ ಮೇಲಾಟದಿಂದಾಗಿ ವಿದ್ಯೆಯಿಂದ, ಉದ್ಯೋಗಾವಕಾಶಗಳಿಂದ ವಂಚಿತರಾಗಿರುವವರ ಸಂಖ್ಯೆ ಬಹು ದೊಡ್ಡದಿದೆ.
 
12 ನಿಮ್ಮ ಕಾದಂಬರಿಯ ಆಶಯ ಕಾಶ್ಮೀರ ಸಮಸ್ಯೆಯನ್ನು ಶಮನಗೊಳಿಸುವುದೆ?
-ಯಾವ ಸಾಹಿತ್ಯ ಕೃತಿಯೂ ಸಮಸ್ಯೆಯನ್ನು ಶಮನಗೊಳಿಸಲಾರದು. ಪಾತ್ರಗಳ ಮೂಲಕ ಅದರ ಅಂತರಾಳಕ್ಕಿಳಿದು ಶೋಧಿಸಿ ಅದರ ಸ್ವರೂಪವನ್ನು, ಆಳ-ಅಗಲಗಳನ್ನು ಓದುಗರ ಅನುಭವಕ್ಕೆ ತಂದುಕೊಟ್ಟು ಅರಿವು ಮೂಡಿಸಬಲ್ಲದಷ್ಟೇ. 

ಟಾಪ್ ನ್ಯೂಸ್

1-mohali

Mohali; ಬಹುಮಹಡಿ ಕಟ್ಟಡ ಕುಸಿತ: ಹಲವರು ಸಿಲುಕಿರುವ ಶಂಕೆ

kejriwal 2

Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

1-russia

9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!

ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ

ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ

ಸಿನೆಮಾ ಪೋಸ್ಟರ್‌ ಗಳ ಕೋಣೆಯಲ್ಲಿ-ಹಾಲಿವುಡ್‌ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ

ಸಿನೆಮಾ ಪೋಸ್ಟರ್‌ ಗಳ ಕೋಣೆಯಲ್ಲಿ-ಹಾಲಿವುಡ್‌ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ

1-wewqe

Vijay Hazare Trophy;ಕೃಷ್ಣನ್ ಶ್ರೀಜಿತ್ ಅಮೋಘ ಶತಕ:ಬಲಿಷ್ಠ ಮುಂಬೈ ಎದುರು ಕರ್ನಾಟಕ ಜಯಭೇರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kumble: ಯುವಕನ ಕೊಲೆ; ಆರು ಮಂದಿ ಅಪರಾಧಿಗಳು ಡಿ. 23ರಂದು ಶಿಕ್ಷೆ ತೀರ್ಪು ಘೋಷಣೆ

Kumble: ಯುವಕನ ಕೊಲೆ; ಆರು ಮಂದಿ ಅಪರಾಧಿಗಳು ಡಿ. 23ರಂದು ಶಿಕ್ಷೆ ತೀರ್ಪು ಘೋಷಣೆ

Shiroor: ಡಿವೈಡರ್‌ಗೆ ಕಾರು ಢಿಕ್ಕಿ

Shiroor: ಡಿವೈಡರ್‌ಗೆ ಕಾರು ಢಿಕ್ಕಿ

1-mohali

Mohali; ಬಹುಮಹಡಿ ಕಟ್ಟಡ ಕುಸಿತ: ಹಲವರು ಸಿಲುಕಿರುವ ಶಂಕೆ

rape

Ashram;89 ವರ್ಷದ ಆಶ್ರಮ ಗುರುವಿನ ಮೇಲೆ ಆತ್ಯಾಚಾ*ರ ಪ್ರಕರಣ ದಾಖಲು

‌Mysore: ಮೊಬೈಲ್‌ ಜೂಜಾಟ; ನಾಲ್ವರ ಬಂಧನ

‌Mysore: ಮೊಬೈಲ್‌ ಜೂಜಾಟ; ನಾಲ್ವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.