ಬೆಳ್ಮಣ್: ನೀರಿದ್ದರೂ,ಉಪಯೋಗಕ್ಕಿಲ್ಲದ ಬಾವಿ
Team Udayavani, Sep 9, 2018, 6:00 AM IST
ಬೆಳ್ಮಣ್: ಸಾರ್ವಜನಿಕರ ಉಪಯೋಗಕ್ಕಾಗಿ ನಿರ್ಮಿಸಲಾಗಿದ್ದ ಬಾವಿ ನಿರ್ವಹಣೆ ಕಾಣದೆ ಪಾಳುಬಿದ್ದಿರುವುದು ಬೆಳ್ಮಣ್ ಸರಕಾರಿ ಪ.ಪೂ.ಕಾಲೇಜಿನ ಹೊರಭಾಗದ ಹೆದ್ದಾರಿ ಬದಿಯಲ್ಲಿ ಕಂಡು ಬಂದಿದೆ.
1954 ರಲ್ಲಿ ನಿರ್ಮಾಣಗೊಂಡಿರುವ ಈ ಬಾವಿಯೂ ಪೇಟೆ ಪ್ರದೇಶದ ಸಾಕಷ್ಟು ಮನೆಗಳಿಗೆ ಕುಡಿಯುವ ನೀರಿಗಾಗಿ ಉಪಯೋಗವಾಗುತ್ತಿತ್ತು. ಆದರೆ ಇದೀಗ ಪೇಟೆ ಪ್ರದೇಶಗಳು ಬೆಳವಣಿಗೆಯಾಗುತ್ತಿದ್ದಂತೆ ಈ ಸಾರ್ವಜನಿಕ ಕುಡಿಯುವ ನೀರಿನ ಈ ಬಾವಿ ಉಪಯೋಗಕ್ಕೆ ಬಾರದೆ ಪಾಳು ಬಿದ್ದಿದೆ.
ಬಾವಿಯಲ್ಲಿ ಉತ್ತಮ ನೀರಿನ ಒರತೆ ಇದ್ದರೂ ಈ ಭಾಗದಲ್ಲಿ ಉಪಯೋಗವಾಗುತ್ತಿಲ್ಲ, ಹಲವು ಮನೆಗಳಿಗೆ ಉಪಯೋಗ ಶುದ್ಧ ನೀರು ಹೊಂದಿರುವ ಈ ಬಾವಿಯ ನೀರು ಬೆಳ್ಮಣ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲವಾರು ಮನೆಗಳಿಗೆ ಉಪಯೋಗಕ್ಕೆ ಬರುತ್ತಿತ್ತು. ಬಾವಿಯ ಜತೆಗೆ ನೀರನ್ನು ಶುಚಿಗೊಳಿಸಿದಲ್ಲಿ ನೀರಿನ ಅಭಾವದ ಸಮಸ್ಯೆ ಎದುರಿಸುತ್ತಿರುವ ಕೆಲವೊಂದು ಮನೆಗಳಿಗೆ ಪ್ರಯೋಜನವಾಗಲಿದೆ.ಹೊಸ ಬಾವಿ ನಿರ್ಮಿಸುವುದಕ್ಕಿಂತ ಇರುವ ಬಾವಿಯ ನಿರ್ವಹಣೆ ಮಾಡಬೇಕೆನ್ನುವುದು ಇಲ್ಲಿನ ಸ್ಥಳೀಯರ ಅಭಿಪ್ರಾಯ.
ಬಾವಿ ತುಂಬಾ ತ್ಯಾಜ್ಯ
ಬಾವಿಯ ಒಳ ಭಾಗ ತುಂಬ ಹುಲ್ಲು, ಪೊದೆಗಳು ಬೆಳೆದಿದ್ದು ಬಾವಿಯ ನೀರು ಹಾಳಾಗಿದೆ. ಪ್ಲಾಸ್ಟಿಕ್ ತ್ಯಾಜ್ಯಗಳೂ ಇದರಲ್ಲಿವೆ. ಇದನ್ನು ಶುಚಿಗೊಳಿಸಿ ಬಳಕೆಗೆ ಯೋಗ್ಯವನ್ನಾಗಿ ಮಾಡಬಹುದು.
ಶುಚಿಗೊಳಿಸಿ
ಈ ಹಿಂದೆ ಈ ಬಾವಿಯ ನೀರನ್ನು ಉಪಯೋಗಿಸುತ್ತಿದ್ದೆವು. ಮತ್ತೆ ಶುಚಿಗೊಳಿಸಿದರೆ ಈ ಭಾಗದ ಜನರಿಗೆ ಉಪಯೋಗವಾಗಬಹುದು. ಗಮನ ಹರಿಸಿದಲ್ಲಿ ಉತ್ತಮ.
– ಭಾಸ್ಕರ್,ಗ್ರಾಮಸ್ಥ.
ಶೀಘ್ರ ಕ್ರಮ
ಬಾವಿಯ ನೀರನ್ನು ಉಪಯೋಗಿಸುವವರ ಸಂಖ್ಯೆ ಕಡಿಮೆಯಾದ ಕಾರಣ ಪಾಳು ಬಿದ್ದಿದೆ. ಮತ್ತೆ ಬಾವಿಯನ್ನು ಶುಚಿಗೊಳಿಸುವ ಕಾರ್ಯವನ್ನು ಶೀಘ್ರ ಕೈಗೊಳ್ಳುತ್ತೇವೆ.
– ಮಲ್ಲಿಕಾ ರಾವ್,
ಬೆಳ್ಮಣ್ ಗ್ರಾ.ಪಂ ಅಧ್ಯಕ್ಷೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?
Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್ಅಪ್
Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.