ಹಣ ಉಳಿತಾಯಕ್ಕೆ ಪಂಚ ಮಾರ್ಗ
Team Udayavani, Sep 10, 2018, 2:47 PM IST
ಹಣವಿಲ್ಲದ ಬದುಕನ್ನು ಇಂದು ಊಹಿಸುವುದೂ ಅಸಾಧ್ಯ. ನಾವು ಇವತ್ತಿಗೆ ಮಾತ್ರವಲ್ಲ ನಾಳೆಯ ಬಗ್ಗೆಯೂ ಯೋಚಿಸುತ್ತೇವೆ. ಹೀಗಾಗಿ ಹಣ ಕೈಗೆ ಬಂದ ತತ್ ಕ್ಷಣ ಖರ್ಚಿನ ದಾರಿ ತೆರೆದುಕೊಳ್ಳುವುದರಿಂದ ಉಳಿತಾಯಕ್ಕೆ ಇರುವ ನೂರಾರು ದಾರಿಗಳನ್ನು ಹುಡುಕುತ್ತೇವೆ. ಧನ ಉಳಿತಾಯಕ್ಕಾಗಿ ಹಲವು ಮಾರ್ಗಗಳನ್ನು ಹುಡುಕುವುದರ ಜತೆಗೆ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಹೇಗೆ ಧನವನ್ನು ನ್ಯಾಯ ಸಮ್ಮತ ಬಳಕೆಗೆ ಒಳಪಡಿಸಬಹುದು ಎಂಬುದನ್ನು ಅರಿತುಕೊಳ್ಳಬೇಕಾಗಿದೆ. ಹಣ ಉಳಿತಾಯ ಎಂಬುದನ್ನು ಅಭಿಯಾನವನ್ನಾಗಿ ನಾವು ಅನುಕರಿಸಬೇಕು. ಆಗ ಮಾತ್ರ ‘ಸೆಲ್ಫ್ ಮನಿ ಕಂಟ್ರೋಲ್’ ಸಾಧ್ಯ.
ವಿವೇಚನಾಯುಕ್ತ ಹೂಡಿಕೆ
ಹಣದ ಉಳಿತಾಯಕ್ಕಾಗಿ ನೀಡಬಹುದಾದ ಮಾರ್ಗಸೂಚಿಗಳ ಪೈಕಿ ಬಹುಶ: ಇದು ಎಲ್ಲಕ್ಕಿಂತಲೂ ಅತ್ಯಂತ ಆಪ್ತವಾದುದು. ಕೆಲವೊಂದು ವ್ಯಾವಹಾರಗಳಿಗೆ ದೊಡ್ಡ ಮೊತ್ತದ ಹಣ ಹೂಡುವ ಅವಶ್ಯಕತೆ ಖಂಡಿತಾ ಕಂಡುಬರುತ್ತದೆ. ಹೊಸ ಉದ್ಯಮ ಆರಂಭಿಸುವವರಾಗಿದ್ದಲ್ಲಿ ಹೂಡಿಕೆಗಾಗಿ ತಜ್ಞರ ಮೊರೆ ಹೋಗುವುದು ಒಳಿತು. ವಿವೇಚನಾ ಬದ್ಧವಾಗಿ ಉಳಿತಾಯ ಮಾಡುವುದರಿಂದ ಸಂಭಾವ್ಯ ಆರ್ಥಿಕ ಅಪಾಯದಿಂದ ಪಾರಾಗಬಹುದು.
ನಿವೃತ್ತ ಜೀವನಕ್ಕಾಗಿ
ನಿವೃತ್ತ ಜೀವನಕ್ಕಾಗಿ ಉದ್ಯೋಗದ ಆರಂಭದಿಂದಲೇ ಉಳಿತಾಯ ಆರಂಭಿಸುವುದು ಅತೀ ಮುಖ್ಯವಾಗಿದೆ. ನಮ್ಮ ಭವಿಷ್ಯದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಏನನ್ನೂ ಹೇಳಲಾಗದು. ಹಾಗಾಗಿ, ನಿವೃತ್ತ ಜೀವನಕ್ಕಾಗಿ ಹಣ ಉಳಿತಾಯ ಮಾಡುವುದು ನಮ್ಮ ಇಂದಿನ ಅನಿವಾರ್ಯತೆಯಲ್ಲೊಂದಾಗಿದೆ.
ಮಕ್ಕಳ ವಿದ್ಯಾಭ್ಯಾಸಕ್ಕಾಗಿ
ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಅವರ ವಿದ್ಯಾಭ್ಯಾಸಕ್ಕೆಂದು ಹಣದ ಉಳಿತಾಯವನ್ನು ಮಾಡುವುದು ಎಲ್ಲರ ಆದ್ಯ ಕರ್ತವ್ಯವಾಗಿರುತ್ತದೆ. ಮಗುವಿನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ಬದಲು ಆ ಹಣವನ್ನು ಅವರ ವಿದ್ಯಾಭ್ಯಾಸಕ್ಕಾಗಿ ವಿನಿಯೋಗಿಸಬಹುದು.
ತುರ್ತು ಪರಿಸ್ಥಿತಿಗಾಗಿ
ಭವಿಷ್ಯದಲ್ಲಿ ಆಪತ್ತು ಯಾವಾಗ ಬೇಕಾದರೂ ಸಂಭವಿಸಬಹುದು. ಅಗತ್ಯ ಸಂದರ್ಭದಲ್ಲಿ ಅಥವ ಅನಿವಾರ್ಯವಾದ ಸಂದಿಗ್ನತೆಗಳು ತಲೆದೂರಿದರೆ ಖರ್ಚಿಗೆ ಹಣವಿಲ್ಲದೇ ಇನ್ನೊಬ್ಬರ ಬಳಿ ಕೈಚಾಚುವ ಪ್ರಮೇಯ ಸಂಭವಿಸುತ್ತದೆ. ಇದಕ್ಕಾಗಿ ನಾವು ಯೋಜನಾ ಬದ್ಧವಾಗಿ ಆರ್ಥಿಕ ಶಿಸ್ತನ್ನು ರೂಢಿಸಿಕೊಂಡರೆ ಉತ್ತಮ.
ಇತಿಯುಳ್ಳ ಮಿತಿಯಾದ ಖರ್ಚು
ಈ ನಿಯಮವು ಹಣದ ಉಳಿತಾಯದ ವಿಚಾರದಲ್ಲಿ ಅತ್ಯಂತ ಪರಿಣಾಮಕಾರಿ. ಅತಿಯಾದ ಖರ್ಚುಗಳು ಒಟ್ಟು ಅರ್ಥ ವ್ಯವಸ್ಥೆ ಅಥವಾ ಬಜೆಟ್ ಅನ್ನು ಕುಂಠಿತಗೊಳಿಸಬಹುದಾಗಿದೆ. ಶಿಸ್ತುಬದ್ಧವಾದ ಆರ್ಥಿಕ ಹಿಡಿತ ಸಂತೋಷದ ಕುಂಟುಂಬಕ್ಕೆ ಮುನ್ನುಡಿಯಾಗಲಿದೆ.
ಕಾರ್ತಿಕ್ ಅಮೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲೀಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.