ವಿಜಯಪುರ: ಅಪ್ರಕಟಿತ ಅರೇಬಿಕ್ ಶಾಸನ ಪತ್ತೆ
Team Udayavani, Sep 10, 2018, 3:48 PM IST
ವಿಜಯಪುರ: ಐತಿಹಾಸಿಕ ವಿಜಯಪುರ ನಗರದಲ್ಲಿ ಅಪ್ರಕಟಿತ ಅರೇಬಿಕ್ ಶಾಸನ ಪತ್ತೆಯಾಗಿದೆ. ಅಲಿಕ್ ರೋಜಾ ಸಮೀಪದ ಸಾದಾತ್ ಮಸೀದಿ ದರ್ಗಾ ಸ್ಥಳದಲ್ಲಿ ಸಂಶೋಧಕ ಡಾ| ಎ.ಎಲ್. ನಾಗೂರ ಶಾಸನ ಪತ್ತೆ ಹಚ್ಚಿದ್ದಾರೆ.
ಅಪ್ರಕಟಿತ ಸದರಿ ಶಾಸನ ಮಹ್ಮದ್ ಆದಿಲಶಾಹನ ಕಾಲಕ್ಕೆ ಸೇರಿದ್ದು, ಅರೇಬಿಯಾ ದೇಶದ ತುರೇಮಿ ಪಟ್ಟಣ ಸಮೀಪದ ಹಜರ್ ಮೌತ್ ನಿಂದ ವಿಜಯಪುರ ನಗರಕ್ಕೆ ಆಗಮಿಸಿದ್ದ ಖಾದ್ರಿಯಾ ಶಾಖೆ ಸೂಫಿ ಸಂತರಾದ ಸೈಯದ್ ಶಾಹ ಜಾಫರ್ ಸಕಾಫ್ ಇವರ ನಿಧನದ ಕುರಿತು ಮಾಹಿತಿ ನೀಡುತ್ತಿದೆ.
ಹತ್ತು ಸಾಲುಗಳನ್ನು ಹೊಂದಿರುವ ಶಾಸನದಲ್ಲಿ 8ನೇ ಸಾಲು ಮಾತ್ರ ಪರ್ಶಿಯನ್ ಭಾಷೆ ಬಳಸಲಾಗಿದೆ. ಅಲ್ಲಾಹನು ಪರಮದಯಾಳು; ಆತನೊಬ್ಬನೆ ಮೊಹಮ್ಮದರು (ಸ) ಆತನ ಪ್ರವಾದಿಗಳು. ಅಲ್ಲಾಹನ ಸಂತರ ಮೇಲೆ ಯಾವುದೇ ಭಯ ದುಃಖಗಳು ಉಂಟಾಗವು, ಇದು ನಿಸ್ಸಂಶಯ. ಅವರ ಸಮಾಧಿ ಪವಿತ್ರವಾದುದು. ಗುರುವಿನ ಗುರುವಾದ ಸಾದಾತರ ಮುಖ್ಯಸ್ಥ ಸೈಯದ್ ಶಾಹ ಜಾಫರ್ ಸಕಾಫರ್ ಅವರಿಗೆ ಗೌರವಾರ್ಪಣೆ. ಅರೇಬಿಯಾದ ತುರೇಮಿ
ಪ್ರದೇಶದಿಂದ ಬಂದು ವಿಜಯಪುರದಲ್ಲಿ ನೆಲೆಸಿದ್ದಾರೆ. ಇವರು ಸೈಯದ್ ಅಬ್ದುಲ್ಲಾ ಅವರ ಪುತ್ರ. ತುರೇಮಿ ಪಟ್ಟಣದ ಹಜರ್ ಮೌತ್‌ನವರು.
ಪ್ರವಾದಿ ಮೊಹಮ್ಮದರ (ಸ) ನಂತರದ 28ನೇ ತಲೆಮಾರಿಗೆ ಸೇರಿದವರು. ಸೈಯದ್ ಶಾಹ ಜಾಫರ್ ಸಕಾಫ್ ಅವರು 20, ಜಿಲ್ಲಾದಾ 1057ರಲ್ಲಿ (ಹಿ.ಶ.) ಸ್ವರ್ಗಸ್ಥರಾದರು ಎಂದು ಶಾಸನ ಸಾರುತ್ತದೆ. ಸಂತ ಸೈಯದ್ ಶಾಹ ಜಾಫರ್ ಸಕಾಫ್ ಅವರು ವಿಜಯಪುರದಲ್ಲಿ ನೆಲೆಸಿದ್ದಕ್ಕೆ ಸಾಕ್ಷಿಯಾಗಿ ಸೂಫಿ ಮಠ (ಖಾನಖಾ) ಒಂದು ಅಲಿಕ್ ರೋಜಾ ಪ್ರದೇಶದಲ್ಲಿ ಇದೆ. ಈ ಶಾಸನದ ಶೋಧ ಕಾರ್ಯದಲ್ಲಿ ಸಾದಾತ್ ದರ್ಗಾದ ಸಜ್ಜಾದೆ ನಶೀನ್ (ಪೀಠಾಧಿಪತಿ)
ಮತ್ತು ಖಾನದಾನಿ ಮುತವಲ್ಲಿಗಳಾದ ಸೈಯದ್ ಆಮೀರ ಸಕಾಫ್ ಸಾದಾತ್ ಮತ್ತು ಅವರ ವಂಶಸ್ಥ ಅರೇಬಿಕ ಪಂಡಿತ ಸೈಯದ್ ಮುರ್ತುಜಾ ಖಾದ್ರಿ ಸಕಾಫ್ ಸಾದಾತ್ ಅವರು ನೆರವು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.