ಪ್ರತಿ ಶಿಶುವಿಗೂ ಶ್ರವಣ ತಪಾಸಣೆ ಕಡ್ಡಾಯ
Team Udayavani, Sep 11, 2018, 12:29 PM IST
ಬೆಂಗಳೂರು: ಕೇರಳ ಮಾದರಿಯಲ್ಲಿ ಪ್ರತಿ ನವಜಾತ ಶಿಶುವಿನ ಶ್ರವಣ ದೋಷ ತಪಾಸಣೆಯನ್ನು ರಾಜ್ಯದಲ್ಲೂ ಸಾರ್ವತ್ರಿಕ ಮತ್ತು ಕಡ್ಡಾಯಗೊಳಿಸಲಾಗುವುದು ಎಂದು ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ತಿಳಿಸಿದ್ದಾರೆ.
ಆರೋಗ್ಯ ಇಲಾಖೆ, ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮ ಹಾಗೂ ರಾಷ್ಟ್ರೀಯ ಬಾಲ ವಿಕಾಸ ಕಾರ್ಯಕ್ರಮದ ವತಿಯಿಂದ ಸೋಮವಾರ ವಿಕಾಸಸೌಧದಲ್ಲಿ ಹಮ್ಮಿಕೊಂಡಿದ್ದ ನವಜಾತ ಶಿಶುವಿನ ಶ್ರವಣ ದೋಷ ತಪಾಸಣಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮದಡಿ (ಎನ್‌ಪಿಪಿಸಿಡಿ) ರಾಜ್ಯದಲ್ಲಿ ನವಜಾತ ಶಿಶುಗಳ ಶ್ರವಣ ದೋಷ ತಪಾಸಣಾ ಕಾರ್ಯಕ್ರಮ ನಡೆಯುತ್ತಿದೆ. ಸದ್ಯ ಪೋಷಕರ ಕೋರಿಕೆ ಮೇರೆಗೆ ಅಥವಾ ಕೆಲವೊಂದು ವಿಶೇಷ ಪ್ರಕರಣಗಳಲ್ಲಿ ಮಾತ್ರ ಆಯ್ದ ಆಸ್ಪತ್ರೆಗಳಲ್ಲಿ ತಪಾಸಣಾ ಕಾರ್ಯ ಕೈಗೊಳ್ಳಲಾಗುತ್ತಿದೆ.
ಆದರೆ, ಹುಟ್ಟುವ ಮಕ್ಕಳಲ್ಲಿನ ಶ್ರವಣ ದೋಷವನ್ನು ಶೀಘ್ರ ಪತ್ತೆ ಹಚ್ಚಿ, ಸೂಕ್ತ ಚಿಕಿತ್ಸೆ ಕೊಡುವ ಮೂಲಕ ಶ್ರವಣ ದೋಷದ ಮೇಲೆ ನಿಯಂತ್ರಣ ಸಾಧಿಸಲು ಇನ್ನು ಮುಂದೆ ರಾಜ್ಯದಲ್ಲಿ ಹುಟ್ಟು ಪ್ರತಿಯೊಂದು ಮಗುವಿನ ಶ್ರವಣ ದೋಷ ತಪಾಸಣೆಯನ್ನು ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸಾರ್ವತ್ರಿಕ ಮತ್ತು ಕಡ್ಡಾಯಗೊಳಿಸಲಾಗುವುದು. ಈ ಕಾರ್ಯಕ್ರಮವನ್ನು ಪ್ರಸಕ್ತ ಆರ್ಥಿಕ ವರ್ಷದ ಕ್ರಿಯಾ ಯೋಜನೆಯಲ್ಲಿ ಸೇರಿಸಿಕೊಳ್ಳಲಾಗುವುದು ಎಂದರು.
ರಾಜ್ಯವೇ ಹಣ ಹೊಂದಿಸಲಿದೆ: ಶ್ರವಣ ದೋಷ ತಪಾಸಣೆ ಮತ್ತು ಅಗತ್ಯ ಶ್ರವಣ ಉಪಕರಣಗಳ ವಿತರಣೆಗೆ ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಪ್ರಸ್ತಾವನೆಗಳಿಗೆ ಕೇಂದ್ರ ಸರ್ಕಾರದ ಅನುಮೋದನೆ ಈವರೆಗೆ ಸಿಕ್ಕಿಲ್ಲ. ಆದರೆ, ಕಾರ್ಯಕ್ರಮಕ್ಕೆ ಹಣದ ಅಡಚಣೆಯಾಗಬಾರದು ಎಂದು ರಾಜ್ಯ ಸರ್ಕಾರವೇ ಹಣ ಹೊಂದಿಸಲಿದೆ.
ಈ ಕಾರ್ಯಕ್ರಮಕ್ಕೆ 5ರಿಂದ 10 ಕೋಟಿ ರೂ. ಬೇಕಾಗಬಹುದು. ರಾಜ್ಯ ಸರ್ಕಾರದ ಪಾಲು ಸೇರಿದಂತೆ ಇತರ ಕಾರ್ಯಕ್ರಮಗಳಲ್ಲಿ ಅನುದಾನವನ್ನು ಬಳಸಿಕೊಳ್ಳಲಾಗುವುದು ಎಂದು ಇದೇ ವೇಳೆ ಪಾಂಡೆ ತಿಳಿಸಿದರು. ಈ ವೇಳೆ ಶ್ರವಣ ದೋಷಕ್ಕೆ ಒಳಗಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಮಕ್ಕಳ ಪೋಷಕರು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಕೇರಳದಲ್ಲಿ ನವಜಾತ ಶಿಶುವಿನ ಶ್ರವಣ ದೋಷದ ಸಾರ್ವತ್ರಿಕ ತಪಾಸಣೆ ಯೋಜನೆ ಬಗ್ಗೆ ಕೇರಳ ಸಾಮಾಜಿಕ ಭದ್ರತಾ ಅಭಿಯಾನದ ಕಾರ್ಯನಿರ್ವಾಕ ಅಧಿಕಾರಿ ಡಾ. ಮಹ್ಮದ್ ಅಶೀಲ್ ಪ್ರತ್ಯಾಕ್ಷಿಕೆ ನೀಡಿದರು. ರಾಷ್ಟ್ರೀಯ ಆರೋಗ್ಯ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕ ರತನ್ ಕೇಲ್ಕರ್ ಇತರರಿದ್ದರು.
ಅವಮಾನಕ್ಕೆ ಹೆದರದಿರಿ – ಮಾಜಿ ವೇಗಿ ಬ್ರೆಟ್ ಲೀ: ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಜಾಗತಿಕ ಶ್ರವಣ ರಾಯಭಾರಿ, ಮಾಜಿ ಕ್ರಿಕೆಟಿಗ ಬ್ರೆಟ್ ಲೀ, ನವಜಾತ ಶಿಶುವಿನ ಶ್ರವಣ ದೋಷ ನಿವಾರಣೆಗೆ ಶೀಘ್ರ ಪತ್ತೆ ಹಾಗೂ ಸೂಕ್ತ ಚಿಕಿತ್ಸೆ ಅವಶ್ಯಕವಾಗಿದೆ.
ಶ್ರವಣ ದೋಷ ಎದುರಿಸುತ್ತಿರುವ ಮಕ್ಕಳ ಪೋಷಕರು ಸಮಾಜದಲ್ಲಿ ಎದುರಾಗುವ ಅವಮಾನ, ಮುಜುಗರವನ್ನು ಧೈರ್ಯದಿಂದ ಎದುರಿಸಬೇಕು. ಶ್ರವಣ ದೋಷ ಎದುರಿಸುತ್ತಿರುವ ಮಕ್ಕಳು ಮತ್ತು ಅವರ ಪೋಷಕರ ಬಗ್ಗೆ ಸಮಾಜ ಮಾನವೀಯ ದೃಷ್ಟಿಕೋನ ಹೊಂದಿರಬೇಕು. ಈ ದೋಷ ನಿವಾರಣೆಗೆ ಭಾರತ ಸರ್ಕಾರ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದೆ. ಆದರೆ, ಸಾಗಬೇಕಾದ ಹಾದಿ ಇನ್ನೂ ಇದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.