ಸೇತುವೆ ಮನವಿಗೆ ಸ್ಪಂದಿಸಿದ ಸಚಿವ ರೇವಣ್ಣ
Team Udayavani, Sep 12, 2018, 12:25 PM IST
ಕಡಬ: ಪಿಜಕಳದ ಪಾಲೋಳಿಯಿಂದ ಎಡಮಂಗಲವನ್ನು ಸಂಪರ್ಕಿಸಲು ಕುಮಾರಧಾರಾ ಹೊಳೆಗೆ ಸೇತುವೆ ನಿರ್ಮಿಸಬೇಕೆಂಬ ಗ್ರಾಮಸ್ಥರ ಮನವಿಗೆ ಸ್ಪಂದಿಸಿರುವ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ, ಸೇತುವೆ ನಿರ್ಮಾಣಕ್ಕೆ ತಗಲಬಹುದಾದ ವೆಚ್ಚದ ಅಂದಾಜು ಪಟ್ಟಿ ತಯಾರಿಸುವಂತೆ ಇಲಾಖಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಪಾಲೋಳಿಯಲ್ಲಿ ಸೇತುವೆ ನಿರ್ಮಿಸಬೇಕೆಂದು ಸ್ಥಳೀಯರು ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತಲೇ ಇದ್ದರು. ಕಳೆದ ತಿಂಗಳು ಕಡಬ ತಾಲೂಕು ಜೆಡಿಎಸ್ ಅಧ್ಯಕ್ಷ ಸಯ್ಯದ್‌ಮೀರಾ ಸಾಹೇಬ್ ಅವರು ಗ್ರಾಮಸ್ಥರ ಮನವಿಯೊಂದಿಗೆ ಸಚಿವ ಎಚ್.ಡಿ. ರೇವಣ್ಣ ಅವರನ್ನು ಭೇಟಿಯಾಗಿ ಸೇತುವೆ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಿದ್ದರು.
ಅಧಿಕಾರಿಗಳ ಭೇಟಿ
ಸೆ. 11ರಂದು ಪಾಲೋಳಿಗೆ ಭೇಟಿ ನೀಡಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. ಅಂದಾಜು ಪಟ್ಟಿ ತಯಾರಿಸುವ ಸಲುವಾಗಿ ಸ್ಥಳ ಪರಿಶೀಲಿಸಿದ್ದೇವೆ. ಸೇತುವೆ, ಸಂಪರ್ಕ ರಸ್ತೆ ನಿರ್ಮಾಣಕ್ಕೆ 18 ಕೋಟಿ ರೂ. ಬೇಕಾಗಬಹುದು. ಅಂದಾಜುಪಟ್ಟಿ ತಯಾರಿಸಿ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಜಾರಾಮ್ ತಿಳಿಸಿದ್ದಾರೆ.
ಸಹಾಯಕ ಎಂಜಿನಿಯರ್ ಪ್ರಮೋದ್ ಕುಮಾರ್, ಜಿ.ಪಂ. ಎಂಜಿನಿಯರ್ ಭರತ್, ಪ್ರಮುಖರಾದ ಸಯ್ಯದ್ ಮೀರಾ ಸಾಹೇಬ್, ರೋಯ್ ಅಬ್ರಹಾಂ, ಕಡಬ ಗ್ರಾ.ಪಂ. ಸದಸ್ಯರಾದ ಕೃಷ್ಣಪ್ಪ ಬೈಲಂಗಡಿ, ಸರೋಜಿನಿ ಎಸ್. ಆಚಾರ್, ಸೇತುವೆ ಹೋರಾಟ ಸಮಿತಿ ಅಧ್ಯಕ್ಷ ಸಾಂತಪ್ಪ ಗೌಡ ಪಿಜಕ್ಕಳ, ಕಾರ್ಯದರ್ಶಿ ಶ್ಯಾಮ್ ಥಾಮಸ್, ಉಪಾಧ್ಯಕ್ಷ ಜೋಸ್ ಕೇಂಜೂರು, ಖಜಾಂಚಿ ರವೀಂದ್ರ ಎಡಮಂಗಲ, ಸ್ಥಳೀಯರಾದ ಅರುಣ್ ಕುಮಾರ್, ಯತೀಂದ್ರ, ಸುಂದರ, ರಂಜೀವ್ ಪಿ.ಆರ್., ಸತೀಶ್, ನಾರಾಯಣ, ಮುರಳೀಧರ, ಹರೀಶ್, ಪುರುಷೋತ್ತಮ, ರಫೀಕ್, ಉಸ್ಮಾನ್, ಶ್ರೀನಿವಾಸ, ದಯಾನಂದ, ಮಧುಸೂದನ, ಪೂವಪ್ಪ ಉಪಸ್ಥಿತರಿದ್ದರು.
ರಸ್ತೆ ಅಭಿವೃದ್ಧಿ: ಸ್ಥಳ ಪರಿಶೀಲನೆ
ಅಧಿಕಾರಿಗಳು ನೂಜಿಬಾಳ್ತಿಲ ಗ್ರಾಮವನ್ನು ಸಂಪರ್ಕಿಸುವ ಕಾಯರಡ್ಕ-ಪೇರಡ್ಕ ಹಾಗೂ ಕಲ್ಲುಗುಡ್ಡೆ-ಎಂಜಿರ ರಸ್ತೆಯನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಅಂದಾಜು ಪಟ್ಟಿ ಸಲ್ಲಿಸಲು ಸ್ಥಳಕ್ಕೆ ಭೇಟಿ ನೀಡಿ ರಸ್ತೆಯನ್ನು ಪರಿಶೀಲಿಸಿದರು. ಸೈಯದ್ ಮೀರಾ ಸಾಹೇಬ್, ಜೆಡಿಎಸ್ ಮುಖಂಡರಾದ ಸುಂದರ ಗೌಡ ಬಳ್ಳೇರಿ, ಇ.ಜಿ. ಜೋಸೆಫ್, ದಿಲ್ಫರ್ ಫಾರೂಕ್, ಹರಿಪ್ರಸಾದ್ ಎನ್ಕಾಜೆ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Karinja: ಅಪಾಯಕಾರಿ ವಿದ್ಯುತ್ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ
ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.