ಬರವಣಿಗೆಯೇ ಬಂಡವಾಳ


Team Udayavani, Sep 12, 2018, 3:01 PM IST

12-sepctember-16.jpg

ಭಾಷೆ ಗೊತ್ತಿದೆ, ತಕ್ಕ ಮಟ್ಟಿನ ಬರವಣಿಗೆ ಶೈಲಿಯೂ ಚೆನ್ನಾಗಿದೆ ಎಂದಾದರೆ ಬದುಕು ರೂಪಿಸಲು ನೂರಾರು ದಾರಿಗಳು ಸಿಕ್ಕಿದಂತೆಯೇ ಸರಿ. ಭಾಷೆ ಮತ್ತು ಉತ್ತಮ ಬರವಣಿಗೆಯನ್ನು ರೂಢಿಸಿಕೊಂಡರೆ ಒಂದೊಳ್ಳೆ ಭವಿಷ್ಯವನ್ನು ಖಂಡಿತ ರೂಪಿಸಿಕೊಳ್ಳಬಹುದು. ತೂಕದ ಶಬ್ದಗಳಿಂದ ಮತ್ತಷ್ಟು ಬರವಣಿಗೆಯನ್ನು ಉನ್ನತ ಗುಣಮಟ್ಟಕ್ಕೆ ಕೊಂಡೊಯ್ಯವುದು ಒಂದು ಕಲೆ. ಏಕೆಂದರೆ ಒಬ್ಬ ಉತ್ತಮ ಬರಹಗಾರನಾಗಬೇಕಾದರೆ ಚೆನ್ನಾಗಿ ಓದಿಕೊಂಡಿರಬೇಕು. ಹಾಗಾದರೆ ಮಾತ್ರ ಒಳ್ಳೆಯ ಪದಗಳನ್ನು ಬರವಣಿಗೆಯಲ್ಲಿ ತರಲು ಸಾಧ್ಯ.

ಕಂಟೆಂಟ್‌ ರೈಟಿಂಗ್‌, ಹವ್ಯಾಸಿ ಪತ್ರಕರ್ತ, ಅನುವಾದ, ಬ್ಲಾಗ್‌ ರೈಟಿಂಗ್‌ ಹೀಗೆ ಬರವಣಿಗೆಯ ಹವ್ಯಾಸವಿದ್ದ ವರು ಹಣದೊಂದಿಗೆ ಉತ್ತಮ ಹೆಸರನ್ನೂ ಗಳಿಸಲು ಸಾಧ್ಯವಿದೆ. ಈ ಎಲ್ಲದಕ್ಕೂ ಮುಖ್ಯವಾಗಿ ಅವಶ್ಯಕವಾಗಿರುವುದು ಸ್ಪಷ್ಟ ಭಾಷಾ ಜ್ಞಾನ ಹಾಗೂ ಸೃಜನಶೀಲ ಬರವಣಿಗೆ. ಕಠಿನ ಶಬ್ದಗಳನ್ನು ಸರಳವಾಗಿ ಅರ್ಥೈಸುವ ರೀತಿ ತಿಳಿದಿದ್ದರೆ ಸಾಕು.

ಕಂಟೆಂಟ್‌ ರೈಟಿಂಗ್‌ನಲ್ಲಿ ಒಂದು ವಿಷಯ ಆಧಾರಿತವಾಗಿ ಬರೆಯುವುದು ಆದರೆ ಅದು ಅತ್ಯಂತ ಸರಳವಾಗಿ ಸುಲಭವಾಗಿ ಸೀಮಿತ ಪದಗಳ ಮಿತಿಯೊಳಗೆ ಓದುಗನಿಗೆ ಅರ್ಥವಾಗುವಂತಿರಬೇಕು. ಇದು ಕಮರ್ಷಿಯಲ್‌ ಸೆಕ್ಟರ್‌ನಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ. ಏಕೆಂದರೆ ಮಾರುಕಟ್ಟೆಗೆ ಯಾವುದೇ ಹೊಸ ವಸ್ತುಗಳು ಬಂದರೆ ಅದರ ಸವಿವರವನ್ನು ನೀಡುವುದು ಕೂಡ ಈ ಕಂಟೆಂಟ್‌ ರೈಟರ್‌. ಹಾಗಾಗಿ ಇದು ಬಿಸಿನೆಸ್‌ ಫೀಲ್ಡ್‌ನ ಬಹು ಮುಖ್ಯ ಅಂಗವಾಗಿದೆ.

ಬರವಣಿಗೆ ಹವ್ಯಾಸದ ಜತೆಗೆ ಸ್ವಲ್ಪ ಸಾಮಾನ್ಯ ಜ್ಞಾನ ಹಾಗೂ ಕ್ರಿಯೆಟಿವಿಟಿ ಹಾಗೂ ಓದುವ ಹವ್ಯಾಸವನ್ನೊಳಗೊಂಡಿದ್ದರೆ ಹವ್ಯಾಸಿ ಪತ್ರಕರ್ತನಾಗಲು ಸಾಧ್ಯ. ಯಾವುದಾದರೊಂದು ವಿಷಯದ ಬಗ್ಗೆ ತಾರ್ಕಿಕವಾಗಿ, ವಿಶ್ಲೇಷಣಾತ್ಮಕವಾಗಿ ಬರೆಯಬಹುದು. ಹೀಗೆ ಗುರುತಿಸಿಕೊಂಡರೆ ಮ್ಯಾಗಜಿನ್‌, ದಿನಪತ್ರಿಕೆ, ವೆಬ್‌ಸೈಟ್‌ಗಳು ಅವಕಾಶವನ್ನು ಕೊಡುತ್ತವೆ ಮಾತ್ರವಲ್ಲ ಉತ್ತಮ ಸಂಭಾವನೆಯನ್ನೂ ನೀಡುತ್ತವೆ.

ಅನುವಾದ ಅಥವಾ ತರ್ಜುಮೆ ಎನ್ನುವುದು ಸ್ವಂತ ಶ್ರಮದಿಂದ ಮಾತ್ರ ಸಾಧ್ಯ. ಇಂಗ್ಲಿಷ್‌ ಅಥವಾ ಇನ್ಯಾವುದೋ ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದ ಮಾಡುವುದು ಒಂದು ಕಲೆ. ಇಂತವುಗಳಿಗೆ ಹೆಚ್ಚು ಬೇಡಿಕೆ ಇದೆ. ಕಾದಂಬರಿ, ಕಥೆ ಪುಸ್ತಕಗಳನ್ನು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದಿಸುವುದು ದೊಡ್ಡ ಕಾರ್ಯ. ಅಂತಹವರು ಕೆಲವೇ ಕೆಲವು ಮಂದಿ ಇರುವುದು. 

ತರಬೇತಿಗಿಂತ ಆಸಕ್ತಿಯೇ ಮುಖ್ಯ
ಈ ಬರವಣಿಗೆಯನ್ನು ಉತ್ತಮ ತರಗತಿ, ಶಿಕ್ಷಕರಿಂದ ಕಲಿಯುವುದಕ್ಕಿಂತ ಆಸಕ್ತಿಯಿಂದ ಬರೆಯವುದು ಮುಖ್ಯ. ಸೃಜನಾತ್ಮಕವಾಗಿ, ವಿಭಿನ್ನವಾಗಿ ಅಕ್ಷರಕ್ಕೆ ಜೀವ ಕೊಡುವುದು ಬರವಣಿಗೆಯ ಶೈಲಿ. ಇದರ ಬಗ್ಗೆ ಸ್ವಲ್ಪ ಗಮನ ಹರಿಸಿದರೆ ಬರಹಗಾರರಾಗಲು ಸಾಧ್ಯ. 

ವಿಷಯ ಜ್ಞಾನ
ವಿಷಯಗಳು ಸಾವಿರಾರು ಹಾಗಾಗಿ ನಮಗಿಷ್ಟ ಬಂದ ವಿಷಯಗಳ ಕುರಿತು ಬರೆಯಬಹುದು. ವಿಜ್ಞಾನ, ತಂತ್ರಜ್ಞಾನ, ಭಾಷೆ, ರಾಜಕೀಯ, ಸಾಹಿತ್ಯ ಹೀಗೆ ಎಲ್ಲದರೆಡೆ ಗಮನ ಹರಿಸಬಹುದು. ಇದು ನಮ್ಮ ಕೆರಿಯರ್‌ ಅನ್ನೂ ಬದಲಿಸಬಹುದು. ಆದರೆ ಇದಕ್ಕೆ ಓದು ಮಾತ್ರ ಬಹುಮುಖ್ಯ. 

ಭರತ್‌ರಾಜ್‌ ಕರ್ತಡ್ಕ

ಟಾಪ್ ನ್ಯೂಸ್

ಸಿ.ಟಿ.ರವಿ

chikkamagaluru: ಹೆಬ್ಬಾಳ್ಕರ್‌ ನಿಂದನೆ ಪ್ರಕರಣ; ಸಿ.ಟಿ.ರವಿಗೆ ಬೆದರಿಕೆ ಪತ್ರ

Bihar; ಮಕ್ಕಳಿಲ್ಲದ ಮಹಿಳೆಯನ್ನು ಗರ್ಭಿಣಿಯನ್ನಾಗಿ ಮಾಡಿ 5 ಲಕ್ಷ ರೂ ಪಡೆಯಿರಿ: ಹೀಗೊಂದು ಜಾಲ

Bihar; ಮಕ್ಕಳಿಲ್ಲದ ಮಹಿಳೆಯನ್ನು ಗರ್ಭಿಣಿಯನ್ನಾಗಿ ಮಾಡಿ 5 ಲಕ್ಷ ರೂ ಪಡೆಯಿರಿ: ಹೀಗೊಂದು ಜಾಲ

Bangladesh: Tamim Iqbal bids farewell to international cricket

Bangladesh: ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ವಿದಾಯ ಹೇಳಿದ ತಮೀಮ್‌ ಇಕ್ಬಾಲ್

Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?

Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?

Choo Mantar Movie Review

Choo Mantar Review: ಬಂಗಲೆಯಲ್ಲೊಂದು ಭಯಾನಕ ಕಥೆ!

4-ct-ravi

Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ

AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?

AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

11-bng

Bengaluru:1 ಕಿ.ಮೀ. ಬೆನ್ನಟ್ಟಿ ಕಾಡುಪ್ರಾಣಿ ಬೇಟೆಗಾರರ ಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು

10-bng

Bengaluru: ನಾಯಿ ಕಚ್ಚಿ 4 ವರ್ಷದ ಬಾಲಕನಿಗೆ ಗಾಯ: ಶ್ವಾನ ಮಾಲಿಕನ ವಿರುದ್ಧ ಪ್ರಕರಣ ದಾಖಲು

ಸಿ.ಟಿ.ರವಿ

chikkamagaluru: ಹೆಬ್ಬಾಳ್ಕರ್‌ ನಿಂದನೆ ಪ್ರಕರಣ; ಸಿ.ಟಿ.ರವಿಗೆ ಬೆದರಿಕೆ ಪತ್ರ

9-bng

Bengaluru: ಜಗಳ ಬಿಡಿಸಲು ಬಂದ ಮಾವನ ಕೊಂದ ಅಳಿಯ!

8-bng

Bengaluru: ಬಿಯರ್‌ ಬಾಟಲಿ ಕಸಿದಿದ್ದಕ್ಕೆ ಸ್ನೇಹಿತನ ಹತ್ಯೆ; 7 ಜನ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.