ಗ್ರಾಮೀಣ ಬದುಕಿನ ಸೊಗಡನ್ನು ತೆರೆದಿಟ್ಟ ‘ಬೆಟ್ಟದ ಜೀವ’
Team Udayavani, Sep 12, 2018, 3:26 PM IST
ಗ್ರಾಮೀಣ ಭಾಗದ ಸೊಗಡು, ಮಲೆನಾಡಿನ ಜೀವನ ಶೈಲಿ, ಸಂಬಂಧಗಳ ಬಗೆಗಿನ ಅತೀವ ಪ್ರೀತಿಯ ಚಿತ್ರಣವನ್ನು ಶಿವರಾಮ ಕಾರಂತರ ಬೆಟ್ಟದ ಜೀವ ಕಾದಂಬರಿಯಲ್ಲಿ ಕಾಣಬಹುದಾಗಿದೆ. ಗ್ರಾಮೀಣ ಜನರ ಬದುಕು, ಅಲ್ಲಿನ ಜನರ ಧೀಮಂತಿಕೆ, ನಡೆ, ನುಡಿ, ಸಾಹಸವನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ.
ಘಟನೆ 1
ಎರಡು ದಿನ ಅಲೆದಲೆದು ಸೋತ ಜೀವ ಮಲಗಲು ಹಂಬಲಿಸುತ್ತಿತ್ತು. ಮಲಗಲು ಮನೆಯೇ ಬೇಕು ಎಂದೆನಿಸುತ್ತಿರಲಿಲ್ಲ. ಮರದ ಮಗ್ಗುಲು ಸಾಕು ಎಂದೆನಿಸುತ್ತಿತ್ತು. ತಡೆಯಲಾರದಷ್ಟು ಹಸಿವು, ನೀರಡಿಕೆ. ಕಾಡಿನ ನಡುವೆ ಮಲಗಲು ಭಯವಾಗಿ ಮನುಷ್ಯನಿರುವ ಗೂಡು ಸಿಕ್ಕಿದರೆ ಸಾಕು ಎಂದೆನಿಸುತ್ತಿತ್ತು. ಕತ್ತಲ ದಾರಿಯಲ್ಲಿ ಕಣ್ಣು ಮುಚ್ಚಿ ಸಾಗಿದಂತ ಅನುಭವ. ಹೀಗೆ ಲೇಖಕರು ಕಾದಂಬರಿಯ ಆರಂಭದಲ್ಲಿ ಪುತ್ತೂರಿನಿಂದ ಸುಬ್ರಹ್ಮಣ್ಯಕ್ಕೆ ಹೋಗುವ ದಾರಿ ಬಗ್ಗೆ ವಿಶ್ಲೇಷಿಸುತ್ತಾರೆ.
ಘಟನೆ 2
ಗೋಪಾಲಯ್ಯ ಅವರೊಂದಿಗೆ ಸ್ನಾನಕ್ಕೆ ಹೊರಟ ಕಾರಂತರು ನದಿ ತೀರದಲ್ಲಿ ಬಂಡೆ ಮೇಲೆ ಕುಳಿತು ಜಪವನ್ನು ಮುಗಿಸಿ ಕಾಲು ಚಾಚಿ ವಿಶ್ರಾಂತಿ ಪಡೆಯತೊಡಗಿದರು. ಅಷ್ಟರಲ್ಲಿ ಗೋಪಾಲಯ್ಯ, ಮೌನದಿಂದ ಮಾತಿಗೆ ಧುಮುಕಿದರು. ಯಾಕಾಗಿ ಇಲ್ಲಿ ಬಂದಿದ್ದೀರಿ? ಅವರ ಮಾತಿಗೆ ನಾನು ಮೌನವಾಗಿದ್ದೆ.
ಅವರೆಂದರು, ಆಗ ಕೇಳಲಿಲ್ಲವೇ ನಿಮಗೆ? ಈ ಪ್ರದೇಶದಲ್ಲಿ ವಾಸವಾಗಿರಲು ನಿಮಗೆ ಬೇಸರವಾಗುವುದಿಲ್ಲವೆ ಎಂದು ಮತ್ತೆ ಪ್ರಶ್ನಿಸಿದಾಗ ಬೆಟ್ಟದ ಕುಡಿಯಿಂದ ನದಿಗೆ ಬರುವ ತನಕ, ನೆಲದ ಗರ್ಭದಲ್ಲಿಯೇ ಹುದುಗಿ ಹರಿಯುತ್ತಿದ್ದ ಅವರ ವಿಚಾರ ಸರಣಿ, ಈಗ ಮೇಲೆ ಎದ್ದು ಬಂದ ಅನುಭವವಾಯಿತು. ಪ್ರಕೃತಿಯ ಸೌಂದರ್ಯದ ನಡುವೆ ಮೌನವೇ ಹೆಚ್ಚು ಶೋಭೆ ತರುವಂಥ ಪ್ರಶ್ನೆಯನ್ನು ಕೇಳಿ ಹಳ್ಳಿಗಾಡಿನ ಸೌಂದರ್ಯದ ವಿಶ್ಲೇಷಣೆಯೂ ಇಲ್ಲಿ ಮನಸ್ಸಿಗೆ ಮುದ ನೀಡುವಂತಿದೆ.
ಘಟನೆ 3
ರಾತ್ರಿಯ ನಿದ್ದೆ ಮುಗಿಸಿ ಬೆಳಗ್ಗೆ ಎಳುವಾಗ ಈ ನಾಡಿನಲ್ಲಿ ಹಲವು ವರ್ಷ ವಾಸಿಸಿದಂತ ಅನುಭವ. ಆ ಮನೆಯ ಪ್ರತಿಯೊಂದು ಕಂಬವೂ ನನಗೆ ತಿಳಿದಿದೆ, ತೋಟದ ಗಿಡ ಮರಗಳ ಪರಿಚಯವಿದೆ, ಅಂಗಳದ ಮುಂದಿನ ದಂಬೆಯಲ್ಲಿ ನಿತ್ಯವೂ ಕಾಲು ತೊಳೆದಂತೆ ಕಾಣಿಸುತ್ತಿತ್ತು. ಹಿಂದಿನ ದಿನ ಮನೆಯ ಸುತ್ತಲನ್ನು ಆವರಿಸಿದ ಯಾವ ಹಿಮದ ಪೀಡೆಯೂ ಈ ದಿನ ಇರಲಿಲ್ಲ. ಆಗ ಬರುವ ಪ್ರಕೃ ತಿಯ ಹಳ್ಳಿಯ ಜೀವನ ನಮ್ಮನ್ನು ಹೇಗೆ ಸೆಳೆಯುತ್ತದೆ ಎಂಬ ಅಂಶವೂ ಹುದುಗಿದೆ.
ಶ್ರುತಿ ನೀರಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
UV Fusion: ಪ್ರತೀ ಕ್ಷಣವೂ ಜೀವಿಸುವುದನ್ನು ಕಲಿ
ChampionsTrophy: ಭಾರತೀಯ ತಂಡ ಪ್ರಕಟ ವಿಳಂಬ ಸಾಧ್ಯತೆ; ರಾಹುಲ್ ಗೆ ಬಿಸಿಸಿಐ ವಿಶೇಷ ಸಂದೇಶ
Dandeli: ನಿಯಮ ಉಲ್ಲಂಘಿಸಿದ ದ್ವಿಚಕ್ರ ವಾಹನಗಳಿಗೆ ಬಿಸಿ ಮುಟ್ಟಿಸಿದ ಅಧಿಕಾರಿ
Mine Tragedy: ಇಂದು ಮತ್ತೆ ಮೂರೂ ಮೃತದೇಹಗಳು ಪತ್ತೆ, ಐವರಿಗಾಗಿ ಮುಂದುವರೆದ ಕಾರ್ಯಾಚರಣೆ
Venkatesaya Namaha: ವೆಂಕಟೇಶನ ನಂಬಿ ಬಂದವರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.