ನಟಸಾರ್ವಭೌಮ ಖುಷಿಯೂ ಇದೆ ಭಯವೂ ಇದೆ


Team Udayavani, Sep 14, 2018, 6:00 AM IST

puneeth-rajkumar.jpg

ಕಣ್ಣಲ್ಲಿ ಇನ್ನೂ ನಿದ್ದೆ ಇತ್ತು, ಮುಖ ಬಾಡಿತ್ತು, ಲವಲವಿಕೆ ಕಡಿಮೆಯಾಗಿತ್ತು …ಅದಕ್ಕೆ ಕಾರಣ ಜೆಟ್‌ ಲ್ಯಾಗ್‌. ಅಮೇರಿಕಾದಲ್ಲಿ ಅಕ್ಕ ಸಮ್ಮೇಳನ ಮುಗಿಸಿ ಬೆಂಗಳೂರಿಗೆ ಬಂದ್ದಿರು ಪುನೀತ್‌ ರಾಜಕುಮಾರ್‌. ಸರಿಯಾಗಿ ನಿದ್ದೆ­ಯಾಗದ ಕಾರಣ ಬಹಳ ಬಳಲಿ­ದವರಂತೆ ಕಾಣುತ್ತಿದ್ದರು. ಅದೇ ಬಳಲಿಕೆ­ಯಲ್ಲಿ ವಿನಯ್‌ ರಾಜಕುಮಾರ್‌ ಅಭಿ­ನಯದ “ಗ್ರಾಮಾಯಣ’ ಟೀಸರ್‌ ಬಿಡುಗಡೆಗೆ ಅವರು ಬಂದಿದ್ದರು. ಕಾರ್ಯ­ಕ್ರಮ ಶುರುವಾಗುವುದು ಸ್ವಲ್ಪ ತಡವಾದ ಕಾರಣ, ಅವರನ್ನು ಮಾತಿಗೆಳೆದಾಗ, ಅಮೇರಿಕಾದಲ್ಲಿ ನಡೆದ “ಕವಲು ದಾರಿ’ ಟೀಸರ್‌ ಬಿಡುಗಡೆಯಿಂದ ಮಾತು ಶುರು ಮಾಡಿದರು.

“ಟೀಸರ್‌ ಬಿಡುಗಡೆ ಚೆನ್ನಾಗಿ ಆಯ್ತು. ಟೀಸರ್‌ ಬಿಡುಗಡೆಗೆ ಒಳ್ಳೆಯ ವೇದಿಕೆ ಸಿಕ್ಕಿತು. ನಾನು ಈ ಬಾರಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದೆ. ಅದೇ ಸಮಯದಲ್ಲಿ, ಟೀಸರ್‌ ಸಹ ರೆಡಿ ಇತ್ತು. ಅಲ್ಲೇ ಬಿಡುಗಡೆ ಮಾಡಿದರೆ ಹೇಗೆ ಅಂತ ಹೇಮಂತ್‌ ಪ್ಲಾನ್‌ ಮಾಡಿದರು. ಅದ­ರಂತೆ ಅಲ್ಲೇ ಬಿಡುಗಡೆಯಾಯಿತು. ಟೀಸರ್‌ಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಇದೇ ಪ್ರತಿಕ್ರಿಯೆ ಸಿನಿಮಾ ಬಿಡುಗಡೆಗೂ ಸಿಕ್ಕಿದರೆ ಚೆನ್ನಾಗಿರುತ್ತದೆ ಅಂತ ಹೇಮಂತ್‌ ಹೇಳುತ್ತಿದ್ದರು. ಚಿತ್ರದ ಶೂಟಿಂಗ್‌ ಮುಗಿದು, ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ನಡೆ­ಯು­ತ್ತಿದೆ. ಬಹುಶಃ ಅಕ್ಟೋಬರ್‌ ಅಥವಾ ನವೆಂಬರ್‌ನಲ್ಲಿ ಬಿಡುಗಡೆ ಆಗ­ಬಹುದು. ಇದರಲ್ಲಿ ನನ್ನ ಇನ್ವಾಲ್‌Ì ಮೆಂಟ್‌ ಏನೂ ಇಲ್ಲ. ಐದಾರು ಬಾರಿ ಲೊಕೇಶನ್‌ಗೆ ಹೋಗಿದ್ದೆ ಅಷ್ಟೇ. ಕ್ರಿಯೇಟಿವ್‌ ಸೈಡ್‌ನ‌ಲ್ಲಿ ನಂದೇನು ಇಲ್ಲ. ಸಿನಿಮಾಗೇನು ಬೇಕೋ ಕೊಟ್ಟಿ­ದ್ದೀವಿ ಅಷ್ಟೇ’ ಎನ್ನುತ್ತಾರೆ ಪುನೀತ್‌ ರಾಜಕುಮಾರ್‌.

ಅವಾರ್ಡ್‌ ಸಹ ಬರಬೇಕು: 
ಪುನೀತ್‌ ಸದ್ಯಕ್ಕೆ ತಮ್ಮ ಪಿಆರ್‌ಕೆ ಬ್ಯಾನರ್‌­ನಿಂದ “ಕವಲು ದಾರಿ’ ಮತ್ತು “ಮಾಯಾ ಬಜಾರ್‌ 2016′ ಚಿತ್ರಗಳನ್ನು ನಿರ್ಮಿಸುತ್ತಿ­ದ್ದಾರೆ. 

ಸದ್ಯದಲ್ಲೇ ಇನ್ನೂ ಒಂದು ಚಿತ್ರವನ್ನು ಶುರು ಮಾಡುವ ಯೋಚನೆ ಅವರಿಗಿದೆ. ಸದ್ಯಕ್ಕೆ ಮಾತುಕತೆಯ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಹೊಸ ಚಿತ್ರದ ಬಗ್ಗೆ ತಿಳಿಸುವುದಾಗಿ ಹೇಳುವ ಪುನೀತ್‌, “ನಮ್ಮ ಸಿನಿಮಾಗಳಲ್ಲದೆ, ಬೇರೆಯವರ ಸಿನಿಮಾಗಳು ಮಾಡಬೇಕು ಅಂತ ಆಸೆ ಇದೆ. ನನಗೆ ಕಮರ್ಷಿಯಲ್‌, ಕಲಾತ್ಮಕ, ಅವಾರ್ಡ್‌ ಸಿನಿಮಾ ಅಂತೆಲ್ಲಾ ಗೊತ್ತಿಲ್ಲ. ನನ್ನ ಪ್ರಕಾರ ಜನ ನೋಡುವ ಸಿನಿಮಾ ಮಾಡಬೇಕು. ಅದಕ್ಕೆ ಅವಾರ್ಡ್‌ ಸಹ ಬರಬೇಕು. ನಾನು ನಟನಾಗಿ ಕೆಲವು ರಿಸ್ಕ್ಗಳನ್ನು ತೆಗೆದುಕೊಳ್ಳುವುದಕ್ಕಾಗಲ್ಲ. ಅದಕ್ಕೆ ಕಾರಣ ಕಮರ್ಷಿಯಲ್‌ ಚೌಕಟ್ಟು. ಬ್ರಿಡ್ಜ್ ಮಾಡಿ ತೆಗೆದುಬಿಟ್ಟರೆ ಓಕೆ. ಆ ತರಹ ಕಾನ್ಸೆಪ್ಟ್ ಸಿಗಲಿಲ್ಲ ಅಂದರೆ ಜನರಿಗೆ ತಲುಪಿಸೋದು ಕಷ್ಟ. ಸದ್ಯದ ದಿನಗಳಲ್ಲಿ ಬ್ರಿಡ್ಜ್ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಜನರಿಗೆ ತಲುಪುತ್ತಿದೆ. ರಿಷಭ್‌ ಶೆಟ್ಟಿ ಅವರ “ಸರ್ಕಾರಿ ಶಾಲೆ’ ಚೆನ್ನಾಗಿ ಹೋಗುತ್ತಿದೆ ಅಂತ ಕೇಳಿದ್ದೇನೆ’ ಎಂದು ಹೇಳುತ್ತಲೇ, ಆ ಚಿತ್ರ ಹೇಗಾಗುತ್ತಿದೆ ಎಂದು ಕೇಳುವ ಮೂಲಕ ಕುತೂಹಲ ತೋರಿಸಿದರು.

ತಾನಾಗಿಯೇ ಕೂಡಿ ಬರಬೇಕು
ಪುನೀತ್‌ ಹೊಸ ಬ್ಯಾನರ್‌ ಹುಟ್ಟುಹಾಕಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ ಎಂಬ ಸುದ್ದಿಯಾದಾಗ, ಹಲವರು ಕಥೆ ತಂದರಂತೆ. ಆದರೆ, ಸಿನಿಮಾ ತಾನಾಗಿಯೇ ಕೂಡಿಬರಬೇಕು ಎನ್ನುವುದು ಪುನೀತ್‌ ಅಭಿಪ್ರಾಯ. “ತುಂಬಾ ಜನ ಕೇಳ್ತಾರೆ. ಅದು ತಾನಾಗಿಯೇ ಆಗಿ ಬರಬೇಕು. ಎರಡು ಚಿತ್ರಗಳು ಆಗಿದ್ದು ಸಹ ಅದೇ ರೀತಿಯಲ್ಲಿ. ಇನ್ನು ಕೆಲವೇ ತಿಂಗಳುಗಳಲ್ಲಿ ಇನ್ನೊಂದು ಚಿತ್ರ ಶುರುವಾಗುವ ಸಾಧ್ಯತೆ ಇದೆ. ಸದ್ಯಕ್ಕೆ ಅದು ಡಿಸ್ಕಷನ್‌ ಹಂತದಲ್ಲಿದೆ. ಖಂಡಿತವಾಗಲೂ ಮೂರು ಸಿನಿಮಾ ಆಗತ್ತೆ. ನನಗೆ ನನ್ನ ಸಿನಿಮಾ ಬಗ್ಗೆ ಮಾತಾಡೋಕೆ ಗೊತ್ತಿಲ್ಲ. ಆದರೆ, ಈ ಸಿನಿಮಾಗಳನ್ನ ನಾನು ಮಾರ್ಕೆಟ್‌ ಮಾಡಬೇಕು, ಜನ ನೋಡಬೇಕು ಅನಿಸುತ್ತೆ. ಇವತ್ತು ಡಿಜಿಟಲ್‌ ಮೀಡಿಯಂ ಸಿಕ್ಕಾಪಟ್ಟೆ ಬೆಳೆದಿದೆ. 

ವರ್ಲ್ಡ್ ಸಿನಿಮಾ ಈಗ ಕೈಯಲ್ಲೇ ಸಿಗುತ್ತದೆ. ಚಿತ್ರದ ಗುಣಮಟ್ಟ ಚೆನ್ನಾಗಿದ್ದರೆ, ಅದು ಇನ್ನೊಂದು ಭಾಷೆಯ ಅಥವಾ ಇನ್ನೊಂದು ರಾಜ್ಯದ ಸಿನಿಮಾ ಅನಿಸಲ್ಲ. ಬೇರೆ ದೇಶದಲ್ಲಿರುವವರಿಗೆ ಕನ್ನಡ, ತೆಲುಗು, ತಮಿಳು ಅಂತಿರಲ್ಲ. ಅದು ಇಂಡಿಯನ್‌ ಸಿನಿಮಾ ಆಗಿರತ್ತೆ. ನಾನೇ ಸ್ಪಾನಿಶ್‌, ಕೊರಿಯನ್‌ ಸಿನಿಮಾ ತುಂಬಾ ನೋಡ್ತೀನಿ’ ಎನ್ನುತ್ತಾರೆ ಪುನೀತ್‌.

ಸಂತೋಷ, ಭಯ ಎರಡೂ ಇದೆ
ಪುನೀತ್‌ ಅಭಿನಯದ “ನಟಸಾರ್ವಭೌಮ’ ಚಿತ್ರವು ಅಕ್ಟೋಬರ್‌ 5ರಂದು ಬಿಡುಗಡೆಯಾಗುತ್ತದೆ ಎಂದು ಮೊದಲು ಹೇಳಲಾಗಿತ್ತು. ಆದರೆ, ಚಿತ್ರದ ಚಿತ್ರೀಕರಣ ಇನ್ನೂ ಮುಗಿದಿಲ್ಲವಾದ್ದರಿಂದ, ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ. ಇನ್ನು ಅಂತ ಟೈಟಲ್‌ ಕುರಿತು ಮಾತನಾಡುವ ಅವರು, “ಆ ಹೆಸರಿಡೋದು ನಿರ್ದೇಶಕರು ಮತ್ತು ನಿರ್ಮಾಪಕರ ನಿರ್ಧಾರ. ನಿಜ ಹೇಳಬೇಕೆಂದರೆ, ಮೊದಲು ನನಗೆ ಟೈಟಲ್‌ ಹೇಳಿದಾಗ, ಐ ವಾಸ್‌ ನಾಟ್‌ ಓಕೆ. ಆ ಹೆಸರಿಗೆ ತುಂಬಾ ತೂಕ ಇದೆ, ಅದು ಬೇಕಾ ಅಂತನಿಸಿತ್ತು. “ರಾಜಕುಮಾರ’ ಅಂತ ಹೆಸರು ಇಟ್ಟಾಗಲೂ ಯಾಕೆ ಇದೆಲ್ಲಾ ಮಾಡ್ತಾರೆ ಅಂತ ಅನಿಸೋದು. ಆದರೆ, ಅಂತಿಮವಾಗಿ ಅದು ನಿರ್ದೇಶಕರ ವಿಷನ್‌. ಅಂಥದ್ದೊಂದು ಟೈಟಲ್‌ ಬಗ್ಗೆ ಸಂತೋಷವಿದೆಯಾದರೂ, ಭಯ ಇದೆ’ ಎಂಬುದು ಪುನೀತ್‌ ಅಭಿಪ್ರಾಯ.

ಜಾಸ್ತಿ ಸಿನಿಮಾ ಮಾಡಬೇಕು
ಇನ್ನು “ನಟಸಾರ್ವಭೌಮ’ ನಂತರ ಪುನೀತ್‌, ಸಂತೋಷ್‌ ಆನಂದರಾಮ್‌ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದಾರೆ. ಆ ಚಿತ್ರಕ್ಕೆ ಹೆಸರಿಟ್ಟಿಲ್ಲವಂತೆ. ಎರಡೂ¾ರು ತಿಂಗಳಲ್ಲಿ ಎಲ್ಲವೂ ಪಕ್ಕಾ ಆಗಲಿದೆ ಎನ್ನುವ ಅವರು, ನಂತರ ತಮ್ಮ ಬ್ಯಾನರ್‌ನಲ್ಲೇ ಇನ್ನೊಂದು ಸಿನಿಮಾ ಮಾಡುವ ಯೋಚನೆಯಲ್ಲಿದ್ದಾರೆ. ಈ ವರ್ಷ ಸಿನಿಮಾ ಕಡಿಮೆಯಾಯಿತು ಎಂಬುದನ್ನು ಪುನೀತ್‌ ಸಹ ಒಪ್ಪಿಕೊಳ್ಳುತ್ತಾರೆ. ದೊಡ್ಡ ಹೀರೋಗಳೆಲ್ಲಾ ಹೆಚ್ಚುಹೆಚ್ಚು ಚಿತ್ರಗಳಲ್ಲಿ ನಟಿಸಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌.ಎ. ಚಿನ್ನೇಗೌಡ ಅವರ ಮಾತನ್ನು ನೆನಪಿಸಿದಾಗ, “ಅವರು ಹೇಳುವುದು ಸರಿ. ಈ ವರ್ಷ “ನಟಸಾರ್ವಭೌಮ’ ಜೊತೆಗೆ ಇನ್ನೊಂದು ಸಿನಿಮಾ ಮಾಡಬೇಕಿತ್ತು. ಆದರೆ, ಆಗಲಿಲ್ಲ. ಎಲ್ಲರೂ ಸಿನಿಮಾ ಮಾಡುತ್ತಿದ್ದಾರೆ. ಯಾಕೋ ನಿಧಾನವಾಗುತ್ತಿದೆ. ಎಲ್ಲರೂ ಇನ್ನೂ ಜಾಸ್ತಿ ಸಿನಿಮಾಗಳನ್ನು ಮಾಡಬೇಕು. ಕಳೆದ ಎಂಟು ತಿಂಗಳುಗಳಲ್ಲಿ ದೊಡ್ಡ ಸಿನಿಮಾಗಳು ಬಿಡುಗಡೆಯಾಗಿದ್ದು ಕಡಿಮೆಯೇ. ಇನ್ನು ಮುಂದೆ ಒಂದರಹಿಂದೊಂದು ದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತದೆ. ಖಂಡಿತಾ ಇಂಪ್ರೂವ್‌ ಆಗುತ್ತದೆ’ ಎಂದರು ಪುನೀತ್‌ ರಾಜಕುಮಾರ್‌.

ಅಷ್ಟರಲ್ಲಿ, “ಗ್ರಾಮಾಯಣ’ ಚಿತ್ರದ ಟೀಸರ್‌ ಬಿಡುಗಡೆ ಇನ್ನೇನು ಕೆಲವೇ ಕ್ಷಣಗಳಲ್ಲಿ ನಡೆಯಲಿದೆ ಎಂದು ಮಾತು ನಿರೂಪಕರಿಂದ ಕೇಳಿಸುತ್ತಿದ್ದಂತೆಯೇ, ಪುನೀತ್‌ ಎದ್ದು ವೇದಿಕೆ ಕಡೆ ಹೊರಟರು.

ನನಗೆ ನನ್ನ ಸಿನಿಮಾ ಬಗ್ಗೆ ಮಾತಾಡೋಕೆ ಗೊತ್ತಿಲ್ಲ. ಆದರೆ, ಈ ಸಿನಿಮಾಗಳನ್ನ ನಾನು ಮಾರ್ಕೆಟ್‌ ಮಾಡಬೇಕು, ಜನ ನೋಡಬೇಕು ಅನಿಸುತ್ತೆ. ಇವತ್ತು ಡಿಜಿಟಲ್‌ ಮೀಡಿಯಂ ಸಿಕ್ಕಾಪಟ್ಟೆ ಬೆಳೆದಿದೆ. ವರ್ಲ್ಡ್ ಸಿನಿಮಾ ಈಗ ಕೈಯಲ್ಲೇ ಸಿಗುತ್ತದೆ…

– ಚೇತನ್‌ ನಾಡಿಗೇರ್‌

ಟಾಪ್ ನ್ಯೂಸ್

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

Sandalwood: ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

KD

Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್‌

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

sand 1

Padubidri: ಮರಳು ಅಕ್ರಮ ಸಾಗಾಟ; ವಶ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

9

Dr MC Sudhakar: ‘ಹೈಕಮಾಂಡ್‌ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.