ಟೆಸ್ಟ್ ಸರಣಿ ಸೋತರೂ ಭಾರತ ನಂ. ವನ್
Team Udayavani, Sep 13, 2018, 6:40 AM IST
ಲಂಡನ್: ಇಂಗ್ಲೆಂಡ್ ವಿರುದ್ಧ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಸೋತರೂ ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಇಂಗ್ಲೆಂಡ್ ಈ ಸರಣಿಯನ್ನು 4-1 ಅಂತರದಿಂದ ಗೆದ್ದು ರ್‍ಯಾಂಕಿಂಗ್‌ನಲ್ಲಿ 4ನೇ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ವಿರಾಟ್ ಕೊಹ್ಲಿ ತಂಡ 125 ಅಂಕಗಳೊಂದಿಗೆ ಈ ಟೆಸ್ಟ್ ಸರಣಿ ಯನ್ನು ಆರಂಭಿಸಿತ್ತು. ಆದರೆ ಸರಣಿ ಸೋತ ಬಳಿಕ 10 ಅಂಕ ಕಳೆದುಕೊಂಡು 115 ಅಂಕಕ್ಕೆ ಇಳಿಯಿತು. ಆದರೂ ಭಾರತ ಅಗ್ರಸ್ಥಾನ ಉಳಿಸಿಕೊಂಡಿದೆ. ಸರಣಿಯಲ್ಲಿ ಉತ್ತಮ ನಿರ್ವಹಣೆ ನೀಡಿ 4-1 ಟೆಸ್ಟ್‌ಗಳಿಂದ ಭಾರತವನ್ನು ಸೋಲಿಸಿರುವ ಇಂಗ್ಲೆಂಡ್ ತಂಡ ರ್‍ಯಾಂಕಿಂಗ್‌ನಲ್ಲೂ ಭಡ್ತಿ ಪಡೆದಿದೆ. 97 ಅಂಕ ದೊಂದಿಗೆ 5ನೇ ಸ್ಥಾನದಲ್ಲಿದ್ದ ಇಂಗ್ಲೆಂಡ್ ಸರಣಿ ಗೆಲುವಿನ ಬಳಿಕ 105 ಅಂಕದೊಂದಿಗೆ ನ್ಯೂಜಿಲ್ಯಾಂಡ್ ತಂಡವನ್ನು ಹಿಂದಿಕ್ಕಿ 4ನೇ ಸ್ಥಾನ ಪಡೆದುಕೊಂಡಿದೆ. ಜೋ ರೂಟ್ ತಂಡ ದಕ್ಷಿಣ ಆಫ್ರಿಕಾ,ಆಸ್ಟ್ರೇಲಿಯ ತಂಡಗಳಿಂದ ಕೇವಲ ಒಂದು ಅಂಕ ಹಿಂದಿದೆ. ಈ ಎರಡು ತಂಡಗಳು 106 ಅಂಕ ಹೊಂದಿದೆ.ನ್ಯೂಜಿಲ್ಯಾಂಡ್ ತಂಡ 102 ಅಂಕ ಹೊಂದಿದೆ. ಐದು ಅಂಕಗಳ ಅಂತರದಲ್ಲಿ ನಾಲ್ಕು ತಂಡಗಳಿದ್ದು ನಿಕಟ ಪೈಪೋಟಿ ನೀಡುತ್ತಿವೆ.
ಟೆಸ್ಟ್ ರ್‍ಯಾಂಕಿಂಗ್
ತಂಡ ರೇಟಿಂಗ್ ಅಂಕ
ಭಾರ ತ 115 4016
ದ.ಆಫ್ರಿಕಾ 106 3712
ಆಸ್ಟ್ರೇಲಿಯ 106 3499
ಇಂಗ್ಲೆಂಡ್ 105 4722
ನ್ಯೂಜಿಲೆಂಡ್ 102 2354
ಶ್ರೀಲಂಕಾ 97 3668
ಪಾಕಿಸ್ಥಾನ 88 1853
ವೆಸ್ಟ್‌ಇಂಡಿಸ್ 77 2235
ಬಾಂಗ್ಲದೇಶ 67 1268
ಜಿಂಬಾಬ್ವೆ 2 12
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ
Siddapura: ಅದೃಷ್ಟ ತಂದ ಲಾರಿ ಧರ್ಮಸ್ಥಳ ಕ್ಷೇತ್ರಕ್ಕೆ ಸಮರ್ಪಣೆ
Bengaluru: ಮಾದಾವರ ವಿಸ್ತರಿತ ಮೆಟ್ರೊದಲ್ಲಿ ಮೊದಲ ದಿನ 16000 ಜನ ಪ್ರಯಾಣ
Balaganur: ಕಾಲುವೆಯಲ್ಲಿ ನವಜಾತ ಶಿಶು ದೇಹ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.