ತಾಜ್ ಪ್ರವೇಶಕ್ಕೆ ಹೆಚ್ಚುವರಿ 200 ರೂ. ನಿಗದಿ
Team Udayavani, Sep 13, 2018, 10:14 AM IST
ಆಗ್ರಾ: ಪ್ರೇಮ ಸೌಧ ತಾಜ್‌ಮಹಲ್‌ನ ಮುಖ್ಯ ಭಾಗಕ್ಕೆ ಪ್ರವೇಶ ಮಾಡಬೇಕಿದ್ದರೆ ಇನ್ನು ಹೆಚ್ಚುವರಿಯಾಗಿ 200 ರೂ. ನೀಡಬೇಕು. ಮಂಗಳವಾರ ಹೊಸದಿಲ್ಲಿಯಲ್ಲಿ ತಾಜ್‌ಮಹಲ್‌ನ ರಕ್ಷಣೆ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಸಿಐಎಸ್‌ಎಫ್, ಆಗ್ರಾ ಜಿಲ್ಲಾಡಳಿತ ಮತ್ತು ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ನಡುವಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಕೇಂದ್ರ ಸಂಸ್ಕೃತಿ ಇಲಾಖೆ ಆ.8ರಂದು ಜಾರಿಗೆ ಬರುವಂತೆ ವಿದೇಶಿ ಪ್ರವಾಸಿಗರಿಗೆ ಇರುವ ಪ್ರವೇಶ ದರವನ್ನು 1 ಸಾವಿರ ರೂ.,ಗಳಿಂದ 1,100 ರೂ.ಗಳಿಗೆ ಏರಿಸಿತ್ತು. ದೇಶೀಯ ಪ್ರವಾಸಿಗರಿಗೆ 40 ರೂ., ಗಳಿಂದ 50 ರೂ., ಗಳಿಗೆ ಪರಿಷ್ಕರಿಸಿ ಆದೇಶಿಸಿತ್ತು.
ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಇನ್ಸ್ಟಿಟ್ಯೂಟ್ (ಎನ್‌ಇಇಆರ್‌ಐ) ತಾಜ್‌ಮಹಲ್ ಗೆ ಪ್ರವಾಸಿಗರ ಭೇಟಿಯಿಂದ ಆಗುತ್ತಿರುವ ಒತ್ತಡದ ಬಗ್ಗೆ ಅಧ್ಯಯನ ನಡೆಸಿತ್ತು. ಈ ಸಂದರ್ಭದಲ್ಲಿ ಅದರ ಮುಖ್ಯ ಭಾಗಕ್ಕೆ ಪ್ರವೇಶ ಮಾಡುವವರ ಸಂಖ್ಯೆಯನ್ನು ಗಣನೀಯವಾಗಿ ತಗ್ಗಿಸುವಂತೆ ಸೂಚನೆ ನೀಡಿತ್ತು. ಅದಕ್ಕೆ ಪೂರಕವಾಗಿ ಸುಪ್ರೀಂಕೋರ್ಟ್ ಕೂಡ ಐತಿಹಾಸಿಕ ಸ್ಮಾರಕ ರಕ್ಷಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhopal: ಬಿಜೆಪಿ ಮಾಜಿ ಶಾಸಕ ಸಿಂಗ್ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
BJP; ಅಮಿತ್ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.