ನೇಪಥ್ಯಕ್ಕೆ ನ್ಯಾರೋಗೇಜ್
Team Udayavani, Sep 13, 2018, 10:45 AM IST
ಅಹಮದಾಬಾದ್: ಏಷ್ಯಾದಲ್ಲಿಯೇ ಮೊದಲ ನ್ಯಾರೋ ಗೇಜ್ ರೈಲ್ವೇ ಲೈನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಗುಜರಾತ್‌ನ ಧಬೋಯ್‌ನಿಂದ ಮಿಯಾಗಾಂವ್ ವರೆಗಿನ 33 ಕಿ.ಮೀ. ಮಾರ್ಗ ಶೀಘ್ರವೇ ಬ್ರಾಡ್ ಗೇಜ್ ಆಗಿ ಪರಿವರ್ತನೆಯಾಗಲಿದೆ.
19ನೇ ಶತಮಾನದಿಂದ ಈ ಮಾರ್ಗ ಕಾರ್ಯವೆಸಗುತ್ತಾ ಬಂದಿದೆ. ಕೈಗಾರಿಕಾ ಪರಂಪರೆ ಎಂಬ ನಿಟ್ಟಿನಲ್ಲಿ ಅದನ್ನು ಯಥಾಸ್ಥಿತಿಯಲ್ಲಿಯೇ ಇರಿಸಬೇಕು ಎಂಬ ಕಾರಣದಿಂದ ಕೇಂದ್ರ ರೈಲ್ವೇ ಇಲಾಖೆ ಬಯಸಿತ್ತು. ಕೇವಲ 2 ರೈಲು ಸಂಚರಿಸುತ್ತಿದೆ ಎಂಬ ಕಾರಣಕ್ಕಾಗಿ ಅದನ್ನು ಪರಂಪರೆಯ ರೈಲು ಎಂದು ಪರಿಗಣಿಸಲು ಸಾಧ್ಯವಿಲ್ಲ. ಗೇಜ್ ಬದಲಾವಣೆ ಮಾಡಬೇಕು ಎಂದು ಜೂನ್‌ನಲ್ಲಿ ರೈಲ್ವೇ ಮಂಡಳಿಗೆ ಪಶ್ಚಿಮ ರೈಲ್ವೇ ಪತ್ರ ಬರೆದಿತ್ತು. ಕಾಮಗಾರಿ ಮುಕ್ತಾಯವಾದರೆ ವಡೋದರಾದಲ್ಲಿನ ಸಂಚಾರ ವ್ಯವಸ್ಥೆ ನಿಭಾಯಿಸಲು ಅನುಕೂಲವಾಗುತ್ತದೆ ಎಂದು ಪ್ರಸ್ತಾವಿಸಲಾಗಿತ್ತು.
ಗಮನಾರ್ಹ ಅಂಶವೆಂದರೆ 2011-12ನೇ ಸಾಲಿನಲ್ಲಿಯೇ ಅದಕ್ಕೆ ಅನುಮೋದನೆ ನೀಡಲಾಗಿತ್ತು. ಇದೀಗ ಯೋಜನೆ ಜಾರಿಗೆ ಟೆಂಡರ್ ಕರೆದು, ಅದನ್ನು ಗುತ್ತಿಗೆದಾರರಿಗೆ ಹಂಚಿಕೆ ಮಾಡಿಯೂ ಆಗಿದೆ ಎಂದು ‘ದ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ. ಒಟ್ಟು 110 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ದೇಶದ ಕೆಲ ಪರ್ವತ ಪ್ರದೇಶಗಳನ್ನು ಹೊರತುಪಡಿಸಿ ಉಳಿದೆಡೆ ವಾಣಿಜ್ಯಿಕವಾಗಿ ನ್ಯಾರೋ ಗೇಜ್ ರೈಲ್ವೇ ಲೈನ್ ಬಳಕೆ ಇಲ್ಲ. ಪಶ್ಚಿಮ ರೈಲ್ವೇ ಪಟಲ್ಪಾನಿಯಿಂದ ಕಲಾಕುಂಡ್ ವರೆಗೆ ಇರುವ 9.5 ಕಿ.ಮೀ. ಮಾರ್ಗವನ್ನು ಮಾತ್ರ ಪರಂಪರೆ ಎಂಬ ನೆಲೆಯಲ್ಲಿ ಕಾಪಿಡಲು ಪ್ರಸ್ತಾವ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ
Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
Supreme Court: ಮೀಸಲಿಗಾಗಿ ಆಗುವ ಮತಾಂತರ ಸಂವಿಧಾನಕ್ಕೆ ಮೋಸ
Lokasabha: ಕರ್ನಾಟಕದ 869 ಸೇರಿ 58,929 ವಕ್ಫ್ ಆಸ್ತಿಗಳ ಅತಿಕ್ರಮ: ಕಿರಣ್ ರಿಜಿಜು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ
Rashmika Mandanna; ಪುಷ್ಟ-3 ಸುಳಿವು ನೀಡಿದ ನಟಿ ರಶ್ಮಿಕಾ ಮಂದಣ್ಣ
Deepika Das: ನಟಿ ದೀಪಿಕಾ ದಾಸ್ ಕುಟುಂಬಕ್ಕೆ ಬೆದರಿಕೆ ಕರೆ; ಯುವಕನ ವಿರುದ್ಧ ದೂರು
Pakistan: ಇಮ್ರಾನ್ ಬಿಡುಗಡೆಗೆ ಬೆಂಬಲಿಗರ ಪ್ರತಿಭಟನೆ: ಹಿಂಸಾಚಾರ, ಸಾವಿರಾರು ಜನರ ಬಂಧನ
Madikeri: ಲಾರಿ ಡಿಕ್ಕಿಯಾಗಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.