ಉಡುಪಿ ಜಿಲ್ಲೆ – 451, ದ.ಕ. – 379, ಕಾಸರಗೋಡು – 21
Team Udayavani, Sep 13, 2018, 11:18 AM IST
ಉಡುಪಿ: ಕರಾವಳಿಯಲ್ಲಿ ಗಣೇಶೋತ್ಸವಗಳ ಸಂಖ್ಯೆ ಪ್ರತಿವರ್ಷದಂತೆ ಈ ವರ್ಷವೂ ಹೆಚ್ಚಿದೆ. 1893ರಲ್ಲಿ ಪುಣೆಯ ಮೂರು ಕಡೆ ಮತ್ತು ಮುಂಬಯಿ ಗಿರ್ ಗಾಂವ್‌ನ ಕೇಶವ್‌ಜಿ ನಾಯಕ್ ಚೌಕ್‌ನಲ್ಲಿ ಆರಂಭಗೊಂಡ ಗಣೇಶೋತ್ಸವ ಮುಂಬಯಿ ಕರ್ನಾಟಕ, ಹೈದರಾಬಾದ್ ಕರ್ನಾಟಕದಲ್ಲಿ ತಳವೂರಿ ಕರಾವಳಿಗೆ ಬಂದದ್ದು 1948ರಲ್ಲಿ. ಮಂಗಳೂರು ಪ್ರತಾಪನಗರದ ಸಂಘ ನಿಕೇತನದಲ್ಲಿ ಆರಂಭಿಸಿದ ಗಣೇಶೋತ್ಸವ ಅವಿಭಜಿತ ದ. ಕನ್ನಡ ಜಿಲ್ಲೆಯ ಪ್ರಥಮ ಗಣೇಶೋತ್ಸವ. ಇಲ್ಲೀಗ 71ನೇ ವರ್ಷದ್ದು. ಈಗಿನ ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಆರಂಭಗೊಂಡ ಅತಿ ಹಿರಿಯ ಗಣೇಶನ ಪೆಂಡಾಲ್ ಕಡಿಯಾಳಿಗೆ ಅನಂತರದ ಸ್ಥಾನ. ಇಲ್ಲೀಗ 52ನೇ ವರ್ಷದ ಉತ್ಸವ . ಕಾಸರಗೋಡಿನ ಮಲ್ಲಿಕಾರ್ಜುನ ದೇವಸ್ಥಾನದ ಗಣೇಶೋತ್ಸವ ಕಾಸರಗೋಡು ಜಿಲ್ಲೆಯಲ್ಲಿ ಅತಿ ಹಿರಿದು. ಇದಕ್ಕೆ 63ನೇ ವರ್ಷ.
ದ.ಕ. ಜಿಲ್ಲೆಗೆ ಹೋಲಿಸಿದರೆ ಉಡುಪಿ ಜಿಲ್ಲೆಯಲ್ಲಿ ಗಣೇಶೋತ್ಸವಗಳ ಸಂಖ್ಯೆ ಹೆಚ್ಚು. ಈ ವರ್ಷ ಒಟ್ಟು 451 ಸಾರ್ವಜನಿಕ ಗಣೇಶೋತ್ಸವಗಳಿವೆ. ದ.ಕ. ಜಿಲ್ಲೆಯಲ್ಲಿ ಒಟ್ಟು 379. ಮಂಗಳೂರು ಕಮಿಷನರೆಟ್ ವ್ಯಾಪ್ತಿಯಲ್ಲಿ (ಮೂಲ್ಕಿ, ಮೂಡಬಿದಿರೆ, ಉಳ್ಳಾಲ, ಸುರತ್ಕಲ್, ಪಣಂಬೂರು ಸೇರಿ) 161, ಗ್ರಾಮಾಂತರದಲ್ಲಿ 218 ಇವೆ.
ಉಡುಪಿ: 15 ಉತ್ಸವ ಹೆಚ್ಚಳ
ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ 15 ಉತ್ಸವಗಳು ಹೆಚ್ಚಿ 451ಕ್ಕೆ ಏರಿದೆ. ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿ 25, ಮಲ್ಪೆ- 19, ಮಣಿಪಾಲ -15, ಬ್ರಹ್ಮಾವರ-39, ಕೋಟ – 42, ಹಿರಿಯಡಕ-11, ಬೈಂದೂರು -45, ಗಂಗೊಳ್ಳಿ – 29, ಕೊಲ್ಲೂರು-14, ಕುಂದಾಪುರ ನಗರ-32, ಕುಂದಾಪುರ ಗ್ರಾ. -22, ಶಂಕರ ನಾರಾಯಣ- 29, ಅಮಾಸೆಬೈಲು- 8, ಕಾರ್ಕಳ ನಗರ – 23, ಕಾರ್ಕಳ ಗ್ರಾಮಾಂತರ- 25, ಅಜೆಕಾರು- 12, ಹೆಬ್ರಿ- 19, ಕಾಪು-15, ಶಿರ್ವ- 13, ಪಡುಬಿದ್ರಿಯಲ್ಲಿ 14 ಇವೆ.
ಮಂಗಳೂರು ನಗರ: 3 ಹೆಚ್ಚಳ
ಮಂಗಳೂರು ಕಮಿಷನರೆಟ್ ವ್ಯಾಪ್ತಿಯಲ್ಲಿ ಉತ್ಸವಗಳು 3 ಹೆಚ್ಚಿವೆ. ಇಲ್ಲಿ ಒಟ್ಟು 161 ಗಣೇಶೋತ್ಸವಗಳು ನಡೆಯಲಿವೆ. ಮಂಗಳೂರು ಕೇಂದ್ರ ಉಪವಿಭಾಗದಲ್ಲಿ 26, ಮಂಗಳೂರು ಉತ್ತರ (ಪಣಂಬೂರು) ಉಪವಿಭಾಗದಲ್ಲಿ 88 ಪ್ರತಿಷ್ಠಾಪನೆ, 91 ವಿಸರ್ಜನೆ, ಮಂಗಳೂರು ದಕ್ಷಿಣ ಉಪ ವಿಭಾಗದಲ್ಲಿ 44 ಉತ್ಸವಗಳು ಇವೆ.
ದ.ಕ. ಗ್ರಾಮಾಂತರ: 4 ಹೆಚ್ಚಳ
ಜಿಲ್ಲೆಯ ಗ್ರಾಮಾಂತರದಲ್ಲಿ 5 ಉತ್ಸವಗಳು ಹೆಚ್ಚಿ ಒಟ್ಟು 218 ನಡೆಯಲಿವೆ. ಬಂಟ್ವಾಳ ನಗರ-10, ಬಂಟ್ವಾಳ ಗ್ರಾ.- 17, ವಿಟ್ಲ-21, ಪುತ್ತೂರು ನಗರ -15, ಪುತ್ತೂರು ಗ್ರಾಮಾಂತರ – 16, ಉಪ್ಪಿನಂಗಡಿ-17, ಬೆಳ್ತಂಗಡಿ- 26, ಪುಂಜಾಲಕಟ್ಟೆ-5, ವೇಣೂರು-17, ಸುಬ್ರಹ್ಮಣ್ಯ- 10, ಸುಳ್ಯ-17, ಕಡಬ-12, ಧರ್ಮಸ್ಥಳ 17, ಬೆಳ್ಳಾರೆ 18.
ತಿಲಕರ ಐತಿಹಾಸಿಕ ಪಳೆಯುಳಿಕೆ
ಬಾಲಗಂಗಾಧರ ತಿಲಕರ ಮರಿಮಗನನ್ನು 2017ರಲ್ಲಿ ಪರ್ಕಳ ಗಣೇಶೋತ್ಸವ ಸಮಿತಿಯವರು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದರು. ತಿಲಕರ ವಂಶಸ್ಥರು ಕರಾವಳಿಗೆ ಬಂದದ್ದು ಅದೇ ಮೊದಲು. ತಿಲಕರ ಇನ್ನೊಂದು ಪ್ರಾಚೀನ ಸಾಂಸ್ಕೃತಿಕ, ಐತಿಹಾಸಿಕ ಪಳೆಯುಳಿಕೆ ಇರುವುದು ಮಂಗಳೂರಿನ ಕೆನರಾ ಪ್ರೌಢಶಾಲೆಯಲ್ಲಿ. ಅದು ಮಹಾತ್ಮಾ ಗಾಂಧೀಜಿ 1927ರ ಅ. 26ರಂದು ಮಂಗಳೂರಿಗೆ ಆಗಮಿಸಿದಾಗ ಅನಾವರಣಗೊಳಿಸಿದ್ದ ತಿಲಕರ ತೈಲವರ್ಣ ಚಿತ್ರ. ಇದು ಇಂದಿಗೂ ಇದೆ. ತಿಲಕರ ಭಾವಚಿತ್ರವನ್ನು ಕೆಲವು ಗಣೇಶೋತ್ಸವದವರು ಆಮಂತ್ರಣ ಪತ್ರಿಕೆಯಲ್ಲಿ, ಬ್ಯಾನರ್‌ಗಳಲ್ಲಿ ಮುದ್ರಿಸುತ್ತಾರೆ. ಕೆಲವರು ಭಾವಚಿತ್ರ ಇರಿಸಿ ಗೌರವ ಸಲ್ಲಿಸುತ್ತಾರೆ.
ಉಡುಪಿ ಜಿಲ್ಲೆ: ವಾರ್ಷಿಕ ಏರಿಕೆ
ಜಿಲ್ಲೆಯಲ್ಲಿ 2008 ರಲ್ಲಿದ್ದ 331 ಉತ್ಸವ 2009ರಲ್ಲಿ 338, 2010ರಲ್ಲಿ 353, 2011ರಲ್ಲಿ 363, 2012ರಲ್ಲಿ 379, 2013ರಲ್ಲಿ 392, 2014ರಲ್ಲಿ 403, 2015ರಲ್ಲಿ 406, 2016ರಲ್ಲಿ 420, 2017ರಲ್ಲಿ 436ಕ್ಕೇರಿತು. ಈ ವರ್ಷ 451.
ಕಾಸರಗೋಡಿನಲ್ಲಿ ಸರಳ ಆಚರಣೆ
ಜಿಲ್ಲೆಯಲ್ಲಿ ಮೆರವಣಿಗೆ ನಡೆಯುವ 21 ಗಣೇಶೋತ್ಸವಗಳಿವೆ. ದೇವಸ್ಥಾನಗಳಲ್ಲಿ ಇಟ್ಟು ಮೆರವಣಿಗೆ ಮಾಡದೆ ವಿಸರ್ಜಿಸುವ ಗಣಪತಿ ಪೂಜೆಗಳು ಲೆಕ್ಕದಲ್ಲಿ ಸೇರಿಲ್ಲ. ಜಿಲ್ಲೆಯಲ್ಲಿ ಕನ್ನಡಿಗರ ಪ್ರದೇಶದಲ್ಲಿ ಗಣೇಶೋತ್ಸವ ಜನಪ್ರಿಯ. ಈ ಬಾರಿ ಕೇರಳದಲ್ಲಿ ಪ್ರಾಕೃತಿಕ ವಿಕೋಪ ನಡೆದ ಕಾರಣ ಸರಳವಾಗಿ ಆಚರಿಸಲಾಗುತ್ತಿದೆ.
ದ.ಕ. ಜಿಲ್ಲೆ: ವಾರ್ಷಿಕ ಏರಿಕೆ
ಜಿಲ್ಲೆಯಲ್ಲಿ 2008ರಲ್ಲಿದ್ದ 296 ಗಣೇಶೋತ್ಸವಗಳು 2009ರಲ್ಲಿ 298, 2010ರಲ್ಲಿ 305 (ಮಂಗಳೂರು ನಗರದಲ್ಲಿ 140, ಗ್ರಾಮಾಂತರದಲ್ಲಿ 165), 2011ರಲ್ಲಿ 332 (ನಗರ 139, ಗ್ರಾಮಾಂತರ 193), 2012ರಲ್ಲಿ 335 (ನಗರ 143, ಗ್ರಾಮಾಂತರ 192), 2013ರಲ್ಲಿ 334 (ನಗರ 145, ಗ್ರಾಮಾಂತರ 189), 2014ರಲ್ಲಿ 350 (ನಗರ 145, ಗ್ರಾಮಾಂತರ 205), 2015ರಲ್ಲಿ 354 (ನಗರ 151, ಗ್ರಾಮಾಂತರ 203), 2016ರಲ್ಲಿ 364 (ನಗರ 155, ಗ್ರಾಮಾಂತರ 209), 2017ರಲ್ಲಿ 372 (ನಗರ 158, ಗ್ರಾಮಾಂತರ 214) ಇದ್ದವು. ಈ ವರ್ಷ 379 (ನಗರ 161, ಗ್ರಾಮಾಂತರ 218).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
MUST WATCH
ಹೊಸ ಸೇರ್ಪಡೆ
Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.