ಜಾರಕಿಹೊಳಿ ಅಣ್ತಮ್ಮಂದಿರ ಆಟಕ್ಕೆ ಕಾಂಗ್ರೆಸ್ ಕಾರ್ಯಕರ್ತರ ಅಸಮಾಧಾನ
Team Udayavani, Sep 13, 2018, 3:35 PM IST
ಬೆಳಗಾವಿ: ರಾಜ್ಯ ರಾಜಕೀಯದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿರುವ ಜಾರಕಿಹೊಳಿ ಸಹೋದರರ ದ್ವಂದ್ವ ನಿಲುವು ಕಾಂಗ್ರೆಸ್ ಪಕ್ಷದಲ್ಲಿ ಅವರನ್ನೇ ನಂಬಿಕೊಂಡಿರುವ ಕಾರ್ಯಕರ್ತರಿಗೆ ತೀವ್ರ ಗೊಂದಲ ಹಾಗೂ ಅಸಮಾಧಾನ ಉಂಟುಮಾಡಿದೆ.
ಕಳೆದ ಒಂದು ತಿಂಗಳಿಂದ ಸಮ್ಮಿಶ್ರ ಸರ್ಕಾರದಲ್ಲಿ ತಲ್ಲಣ ಉಂಟುಮಾಡಿರುವ ನಾನಾ ರೀತಿಯ ರಾಜಕೀಯ ಆತಂಕಗಳಿಗೆ ಕಾರಣವಾಗಿರುವ ರಮೇಶ ಜಾರಕಿಹೊಳಿ ಹಾಗೂ ಸತೀಶ ಜಾರಕಿಹೊಳಿ ಅವರ ನಡೆ ಹಾಗೂ ಅನುಮಾನಾಸ್ಪದ ಹೇಳಿಕೆಗಳು ಜಿಲ್ಲಾ ಕಾಂಗ್ರೆಸ್ ವಲಯದಲ್ಲಿ ಸಾಕಷ್ಟು ಇರುಸು ಮುರುಸು ಉಂಟುಮಾಡುತ್ತಿವೆ. ಅಲ್ಲದೇ ಪರಸ್ಪರ ಕಚ್ಚಾಡುವ ಸ್ಥಿತಿಗೆ ಕಾರ್ಯಕರ್ತರು ಬಂದಿದ್ದಾರೆ.
ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ರಹಸ್ಯ ಸಭೆಗಳನ್ನು ನಡೆಸುತ್ತ ಬಂದಿರುವ ಜಾರಕಿಹೊಳಿ ಸಹೋದರರು ಬಿಜೆಪಿ ಜೊತೆ ಕೈಜೋಡಿಸುವುದು ಬಹುತೇಕ ಖಚಿತವಾಗಿದೆ. ಇದು ನಿಜವಾಗಿದ್ದೇ ಆದರೆ ರಾಜಕೀಯವಾಗಿ ಅವರನ್ನು ನಂಬಿಕೊಂಡಿರುವವರು ಆತಂತ್ರವಾಗಲಿದ್ದಾರೆ ಎಂಬ ಆತಂಕ ಕಾಂಗ್ರೆಸ್ ನಲ್ಲಿ ಕಾಣುತ್ತಿದೆ.
ಜಾರಕಿಹೊಳಿ ಸಹೋದರರು ಹಾಗೂ ಕಾಂಗ್ರೆಸ್ ವಲಯದಲ್ಲಿ ಬಹಳ ಗೊಂದಲ ಇದೆ. ಅನೇಕ ಕಾರಣಗಳಿಂದ ನೊಂದಿರುವ ಜಾರಕಿಹೊಳಿ ಸಹೋದರರ ಲೆಕ್ಕಾಚಾರ ಈಗ ರಾಜಕೀಯ ವೈರತ್ವದ ರೂಪದಲ್ಲಿ ಬದಲಾವಣೆಯಾಗಿದೆ. ಆದರೆ ಅವರನ್ನು ನಮ್ಮ ಪಕ್ಷಕ್ಕೆ ಸೇರಿಸಿಕೊಂಡು ಅಧಿಕಾರ ನೀಡಿದರೆ ಅದಕ್ಕಿಂತ ಕೆಟ್ಟ ಪರಿಸ್ಥಿತಿ ಇನ್ನೊಂದು ಆಗದು ಎಂಬುದು ಬಿಜೆಪಿ ನಾಯಕರ ಅಭಿಪ್ರಾಯ.
ಆಲೋಚನೆ ಮಾಡಿಲ್ಲ: ನಾನು ಕಳೆದ ಒಂದು ವಾರದಿಂದ ಅಥಣಿ ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದೇನೆ. ನಾವು ಜಾರಕಿಹೊಳಿ ಸಹೋದರರ ಹಿಂಬಾಲಕರು. ಇಂತಹ ಸಾಕಷ್ಟು ಜನ ಜಿಲ್ಲೆಯಲ್ಲಿ ಇದ್ದಾರೆ. ಹಾಗೆಂದು ನಾವೂ ಕೂಡ ಅವರೊಂದಿಗೆ ಹೋಗುತ್ತೇವೆ ಎಂಬುದು ತಪ್ಪು. ನಾವು ಇದುವರೆಗೆ ಈ ರೀತಿ ಆಲೋಚನೆಯನ್ನೇ ಮಾಡಿಲ್ಲ. ಈ ವಿಷಯದಲ್ಲಿ ಅನಗತ್ಯ ಗೊಂದಲ ಉಂಟುಮಾಡಲಾಗುತ್ತಿದೆ ಎಂಬುದು ಅಥಣಿ ಶಾಸಕ ಮಹೇಶ ಕುಮಠಳ್ಳಿ ಹೇಳಿಕೆ.
ಈಗಿನ ರಾಜಕೀಯ ಬೆಳವಣಿಗೆ ನಮಗೂ ಸಹ ಅಚ್ಚರಿ ತಂದಿದೆ. ಜಾರಕಿಹೊಳಿ ಸಹೋದರರು ಪಕ್ಷ ಬಿಡುವ ಮಟ್ಟಕ್ಕೆ ಹೋಗಲಾರರು ಎಂಬ ವಿಶ್ವಾಸ ನಮಗಿದೆ. ಆದರೆ ಜಾರಕಿಹೊಳಿ ಅವರಿಗೆ ನೋವಾದರೆ ನಮಗೂ ನೋವಾದ ಹಾಗೆ ಎಂಬುದು ಅವರ ಅಭಿಪ್ರಾಯ.
ರಾಜಕೀಯದಲ್ಲಿ ಈ ರೀತಿ ಬೆಳವಣಿಗೆ ಸಹಜ. ಆದರೆ ಕಾಂಗ್ರೆಸ್‌ಗೆ ಇದರಿಂದ ಯಾವುದೇ ಹಾನಿಯಾಗಿಲ್ಲ. ಜಾರಕಿಹೊಳಿ ಸಹೋದರರು ಪಕ್ಷದ ವರಿಷ್ಠರು ಅಥವಾ ಸರ್ಕಾರಕ್ಕೆ ಬೆದರಿಕೆ ಹಾಕಿಲ್ಲ. ಎಲ್ಲವೂ ಬಗೆಹರಿದಿದೆ. ಗೊಂದಲಗಳು ನಿವಾರಣೆಯಾಗಿವೆ. ಜಿಲ್ಲೆಯ ಕಾರ್ಯಕರ್ತರಲ್ಲಿ ಸಹ ಯಾವ ರೀತಿಯ ಸಮಸ್ಯೆಯೂ ಇಲ್ಲ ಎನ್ನುತ್ತಾರೆ ಕಾಂಗ್ರೆಸ್‌ನ ಹಿರಿಯ ಮುಖಂಡ ಹಸಮ್ ಭಾವಿಕಟ್ಟಿ.
ಅನುಕೂಲಕ್ಕೆ ತಕ್ಕಂತೆ ದಾಳ: ಜಾರಕಿಹೊಳಿ ಸಹೋದರರು ತಮಗೆ ಅನುಕೂಲ ಆಗುವ ಹಾಗೆ ಆಗಾಗ ದಾಳ ಉರುಳಿಸುತ್ತಾರೆ. ವೈಯಕ್ತಿಕ ಲಾಭ ಅವರಿಗೆ ಹೆಚ್ಚು ಮಹತ್ವದ್ದು. ತಮಗೆ ಹಿನ್ನಡೆಯಾದರೆ ಇಲ್ಲವೇ ತಮ್ಮ ಮಾತು ನಡೆಯುತ್ತಿಲ್ಲ ಎಂಬುದು ಕಂಡುಬಂದರೆ ಅವರ ತೆರೆಮರೆಯ ರಾಜಕೀಯ ಆರಂಭವಾಗುತ್ತದೆ. ಇದರಿಂದ ಕಾರ್ಯಕರ್ತರಿಗೆ ಬಹಳ ಸಮಸ್ಯೆಯಾಗುತ್ತದೆ ಎಂಬುದು ಕಾಂಗ್ರೆಸ್ ಮುಖಂಡರ ಅಭಿಪ್ರಾಯ.
ಅಭಿವೃದ್ಧಿಯ ವಿಷಯದಲ್ಲಿ ಜಿಲ್ಲೆಗೆ ಸಾಕಷ್ಟು ಅನ್ಯಾಯವಾಗಿದೆ. ಬೆಳಗಾವಿಯಿಂದ ಸರಕಾರದ ಕಚೇರಿಗಳು ಹಾಸನ ಹಾಗೂ ಬೆಂಗಳೂರಿಗೆ ಸ್ಥಳಾಂತರವಾಗಿವೆ. ಆದರೆ ಈ ಬಗ್ಗೆ ಯಾವುದೇ ಚಕಾರ ಎತ್ತದೇ ಹಾಗೂ ಸರಕಾರದ ಮೇಲೆ ಒತ್ತಡ ಹಾಕದ ಜಾರಕಿಹೊಳಿ ಸಹೋದರರು ಈಗ ತಮಗೆ ಅವಮಾನವಾಗಿದೆ ಎಂಬ ಕಾರಣದಿಂದ ಸಮ್ಮಿಶ್ರ ಸರಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ಜಿಲ್ಲೆಯ ಅಭಿವೃದ್ಧಿಗಿಂತ ವೈಯಕ್ತಿಕ ಹಿತಾಸಕ್ತಿ ಇವರಿಗೆ ಮುಖ್ಯವಾಗಿದೆ ಎಂಬುದು ಕೆಲವು ಕಾಂಗ್ರೆಸ್ ಕಾರ್ಯಕರ್ತರ ಆರೋಪ.
ಕಾರ್ಯಕರ್ತರ ಪ್ರಶ್ನೆ
ಡಿ.ಕೆ. ಶಿವಕುಮಾರ ಸೇರಿದಂತೆ ಯಾರಿಗೂ ನಾವು ಜಿಲ್ಲೆಯಲ್ಲಿ ರಾಜಕಾರಣ ಮಾಡಲು ಬಿಡುವುದಿಲ್ಲ ಎಂದು ಹೇಳುವ ರಮೇಶ ಮತ್ತು ಸತೀಶ ಜಾರಕಿಹೊಳಿ ವಿಧಾನಸಭೆ ಚುನಾವಣೆಯಲ್ಲಿ ಬೇರೆ ಜಿಲ್ಲೆಯ ನಾಯಕರು ಇಲ್ಲಿಗೆ ಬಂದು ಸ್ಪರ್ಧೆ ಮಾಡುವಾಗ ಏಕೆ ಸುಮ್ಮನಿದ್ದರು ಎಂಬುದು ಕಾರ್ಯಕರ್ತರ ಪ್ರಶ್ನೆ.
ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯ ಮಾಡಲಾಗಿತ್ತು. ಯಾವುದೇ ಕಾರಣಕ್ಕೂ ಹೊರ ಜಿಲ್ಲೆಯ ಎಂ.ಡಿ. ಲಕ್ಷ್ಮಿನಾರಾಯಣಗೆ ಅವಕಾಶ ಮಾಡಿಕೊಡಬಾರದು ಎಂದು ಹೈಕಮಾಂಡ್‌ಗೆ ಪತ್ರ ನೀಡಲಾಗಿತ್ತು. ಆದರೆ ಆಗ ಜಾರಕಿಹೊಳಿ ಸಹೊದರರು ಚಕಾರ ಎತ್ತಲಿಲ್ಲ. ಈಗ ಡಿ.ಕೆ. ಶಿವಕುಮಾರ ಜಿಲ್ಲೆಯ ರಾಜಕಾರಣದಲ್ಲಿ ಪ್ರವೇಶ ಮಾಡದಂತೆ ಒತ್ತಾಯ ಮಾಡುತ್ತಿದ್ದಾರೆ.
. ಶಂಕರ ಮುನವಳ್ಳಿ. ಕೆಪಿಸಿಸಿ ಮಾಜಿ ಸದಸ್ಯ
ಕೇಶವ ಆದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ನ್ಯಾಯಾಧೀಶರ ಮುಂದೆ ಪೊಲೀಸ್ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ
CT Ravi case:ಬೆಳಗಾವಿ ಕೋರ್ಟ್ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ
Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.