ಜಿಲ್ಲಾಧಿಕಾರಿ ತಂಡದಿಂದ ಮತ್ತೆ ಪರಿಶೀಲನೆ
Team Udayavani, Sep 15, 2018, 11:16 AM IST
ವಿಟ್ಲಪಟ್ನೂರು: ಇಲ್ಲಿನ ಗ್ರಾಮದಲ್ಲಿ ಪ್ರಕೃತಿ ವಿಕೋಪದಿಂದ ಅಡಿಕೆ ಬೆಳೆಗಾರರು ಕೊಳೆರೋಗದಿಂದ ಕಂಗೆಟ್ಟು ಹೋಗಿರುವ ಬಗ್ಗೆ ಅತೀ ಹೆಚ್ಚು ಲಿಖಿತ ದೂರುಗಳು ಜಿಲ್ಲಾಧಿಕಾರಿಗೆ ಸಲ್ಲಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ ನಡೆಸಿದ್ದಲ್ಲದೆ, ಕೇಂದ್ರ ನಷ್ಟ ಪರಿಹಾರ ಅಧ್ಯಯನ ತಂಡದ ಜತೆಗೆ ಗುರುವಾರ ಮತ್ತೆ ಮೂರ್ಜೆಬೆಟ್ಟು ಪರಿಸರದಲ್ಲಿ ಪರಿಶೀಲನೆ ನಡೆಸಿದ್ದಾರೆ.
ಕೇಂದ್ರದ ಎನ್.ಡಿ.ಆರ್.ಎಫ್. ತಂಡದ ಭರ್ತೇಂದು ಕುಮಾರ್ ಸಿಂಗ್, ಮಾಣಿಕ್ ಚಂದ್ರ ಪಂಡಿತ್, ಸದಾನಂದ ಬಾಬು ಅವರ ತಂಡ ಅಡಿಕೆ, ಕಾಳುಮೆಣಸು ಕೊಳೆರೋಗದಿಂದ ಕಂಗೆಟ್ಟ ರೈತರ ಮನೆಗೆ ಭೇಟಿ ನೀಡಿತು. ಮೂರ್ಜೆಬೆಟ್ಟು ಅಣ್ಣಪ್ಪ ರೈ 3.36 ಎಕ್ರೆ, ರಮಾನಾಥ ಅಡಪ 2.53 ಎಕ್ರೆ, ವಿಶ್ವನಾಥ ಅಡಪ 2.1 ಎಕ್ರೆ, ಶ್ರೀಪ್ರಕಾಶ ಕುಕ್ಕಿಲ 6.1 ಎಕ್ರೆ, ಗೋಪಾಲಕೃಷ್ಣ ಶೆಟ್ಟಿ ಬಿಕನಾಜೆ 1.5 ಎಕ್ರೆ, ಸುಧೇಶ್ ಭಂಡಾರಿ ಎರ್ಮೆನಿಲೆ 2.23 ಎಕ್ರೆ ಸಹಿತ ಹಲವು ಮಂದಿ ರೈತರು ತಮ್ಮ ಶೇ.8 0ರಷ್ಟು ಬೆಳೆ ನಷ್ಟ ಹೊಂದಿದ ಬಗ್ಗೆ ವಿವರಿಸಿದರು.
ತೋಟಗಾರಿಕೆ ಇಲಾಖೆ ಡಿಡಿ ಎಚ್. ಆರ್. ನಾಯಕ್, ಎಡಿಸಿ ಕುಮಾರ್, ಜಿ.ಪಂ. ಸದಸ್ಯೆ ಮಂಜುಳಾ ಮಾಧವ ಮಾವೆ, ತಾ.ಪಂ. ಸ್ಥಾಯೀ ಸಮಿತಿ ಮಾಜಿ ಅಧ್ಯಕ್ಷ ಮಾಧವ ಮಾವೆ, ತಹಶೀಲ್ದಾರ್ ಪುರಂದರ ಹೆಗ್ಡೆ, ಕಂದಾಯ ನಿರೀಕ್ಷಕ ದಿವಾಕರ ಮುಗುಳಿಯ, ವಿಟ್ಲಪಟ್ನೂರು ಗ್ರಾ.ಪಂ. ಅಧ್ಯಕ್ಷ ರವೀಶ್ ಶೆಟ್ಟಿ ಕರ್ಕಳ, ಪೊಲೀಸ್ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್, ಸಂದೇಶ್ ಶೆಟ್ಟಿ ಬಿಕನಾಜೆ, ಅರವಿಂದ ರೈ ಮೂರ್ಜೆಬೆಟ್ಟು ಮತ್ತಿತರರಿದ್ದರು.
ವರದಿ ಸಿಎಂಗೆ
ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಮಾತನಾಡಿ, ಸೆ. 14ಕ್ಕೆ ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿಗಳ ಸಭೆ ನಡೆಯಲಿದ್ದು, ಈ ಸಂದರ್ಭ ಬೇರೆ ಬೇರೆ ಕಡೆ ಭೇಟಿ ನೀಡಿ, ಸಂಗ್ರಹಿಸಿದ ವರದಿಯನ್ನು ಈ ತಂಡ ಸಲ್ಲಿಸಲಿದೆ. ಆ ಸಭೆಯಲ್ಲಿ ಆಗುವ ನಿರ್ಣಯದ ಪ್ರಕಾರ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳುತ್ತೇವೆ. ಪರಿಹಾರದ ಕುರಿತ ಅರ್ಜಿಗಳನ್ನು ಸಂಗ್ರಹಿಸುತ್ತಿದ್ದು, ಸೆ. 15ರವರೆಗೆ ಅರ್ಜಿ ನೀಡಲು ಅವಕಾಶವಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.