ಮಹಿಳೆಯ ಅತ್ಯಾಚಾರ, ಅಮಾನುಷ ಹಿಂಸೆ: ದಿಲ್ಲಿ SI ಪುತ್ರ ಅರೆಸ್ಟ್
Team Udayavani, Sep 15, 2018, 11:43 AM IST
ಹೊಸದಿಲ್ಲಿ : ಮಹಿಳೆಯೊಬ್ಬಳನ್ನು ಅಮಾನುಷವಾಗಿ ಹೊಡೆದು ಹಿಂಸಿಸುವ ವಿಡಿಯೋ ವೈರಲ್ ಆದುದನ್ನು ಅನುಸರಿಸಿ ದಿಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಓರ್ವರ ಪುತ್ರ 21ರ ಹರೆಯದ ರೋಹಿತ್ ತೋಮರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ ಪೊಲೀಸರು ರೇಪ್ ಮತ್ತು ಅಮಾನುಷ ಹಿಂಸೆಯ ಕೇಸನ್ನು ದಾಖಲಿಸಿಕೊಂಡಿದ್ದಾರೆ.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ದಿಲ್ಲಿ ಪೊಲೀಸ್ ಕಮಿಷನರ್ ಅಮೂಲ್ಯ ಪಟ್ನಾಯಕ್ ಅವರಿಗೆ ಈ ಶಾಕಿಂಗ್ ಘಟನೆಯ ಬಗ್ಗೆ ಫೋನ್ ಮಾಡಿ ಆರೋಪಿಯ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳುವಂತೆ ಆದೇಶಿಸಿದ್ದಾರೆ.
ಎಸ್‌ಐ ಪುತ್ರ ರೋಹಿತ್ ತೋಮರ್ ಮಹಿಳೆಯ ತಲೆಕೂದಲು ಹಿಡಿದು ಎಳೆದಾಡಿ ಕಾಲಿನಿಂದ ಒದ್ದು ಯದ್ವಾ ತದ್ವಾ ಹೊಡೆಯುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಪೊಲೀಸರು ಆರೋಪಿ ರೋಹಿತ್ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಮಹಿಳೆಯೊಬ್ಬರಿಗೆ ಕ್ರಿಮಿನಲ್ ಬೆದರಿಕೆಯ ಒಡ್ಡುವ ಇನ್ನೊಂದು ಪ್ರಕರಣದಲ್ಲಿ ಕೂಡ ರೋಹಿತ್ ತೋಮರ್ ಮತ್ತು ಆತನ ತಂದೆ, ಎಸ್‌ಐ ಅಶೋಕ್ ಕುಮಾರ್ ತೋಮರ್ ರನ್ನು ಎಫ್ಐಆರ್‌ನಲ್ಲಿ ಆರೋಪಿಗಳನ್ನಾಗಿ ಹೆಸರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ರೋಹಿತ್ ತೋಮರ್ ವಿರುದ್ಧ ಮೊದಲ ಕೇಸನ್ನು ಆತನ ಗರ್ಲ್ ಫ್ರೆಂಡ್ ಕೊಟ್ಟಿದ್ದ ದೂರಿನ ಪ್ರಕಾರ ಕಳೆದ ಗುರುವಾರ ಪಶ್ಚಿಮ ದಿಲ್ಲಿಯ ತಿಲಕ್ ನಗರ ಠಾಣೆಯಲ್ಲಿ ದಾಖಲಿಸಲಾಗಿತ್ತು.
ತನ್ನ ಗರ್ಲ್ ಫ್ರೆಂಡ್ ಮೇಲೆ ತಾನು ನಡೆಸಿದ್ದ ಅಮಾನುಷ ಹಲ್ಲೆಯ ವಿಡಿಯೋವನ್ನು ರೋಹಿತ್ ಇನ್ನೋರ್ವ ಮಹಿಳೆಗೆ ತೋರಿಸಿದ್ದ. ಅದನ್ನು ಕಂಡ ಆಕೆ ತಾನು ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದಾಗ, “ಹಾಗೆ ಮಾಡಿದರೆ ನಿನಗೂ ಇದೇ ಗತಿ ಕಾಣಿಸುವೆ’ ಎಂದು ರೋಹಿತ್ ಕ್ರಿಮಿನಲ್ ಬೆದರಿಕೆ ಹಾಕಿದ್ದ. ಈ ಕ್ರಿಮಿನಲ್ ಬೆದರಿಕೆಗೆ ಸಂಬಂಧಿಸಿದಂತೆ ಮಹಿಳೆಯು ಉತ್ತಮ್ ನಗರ ಪೊಲೀಸ್ ಠಾಣೆಯಲ್ಲಿ ನಿನ್ನೆ ಶುಕ್ರವಾರ ದೂರು ದಾಖಲಿಸಿದ್ದಳು.
ಈ ಎರಡೂ ಪ್ರಕರಣದ ವಿಡಿಯೋಗಳು ವೈರಲ್ ಆಗುವುದರೊಂದಿಗೆ ಜನಾಕ್ರೋಶ ಹುಟ್ಟಿಸಿದ್ದವು. ದಿಲ್ಲಿಯಲ್ಲಿ ಮಹಿಳೆಯರಿಗೆ ಇರುವ ಜೀವ ಬೆದರಿಕೆ, ಅಭದ್ರತೆ ನಿರ್ಭಯಾ ಪ್ರಕರಣದ ಬಳಿಕವೂ ಹಾಗೆಯೇ ಮುಂದುವರಿದಿದೆ ಎಂದು ಜನರು ಇಂಟರ್‌ನೆಟ್‌ನಲ್ಲಿ ಸರಕಾರದ ವಿರುದ್ಧ ಟೀಕೆ ಖಂಡನೆಗಳ ಸುರಿಮಳೆ ಗೈಯುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu: ಗೋ ಮಾಂಸ ತಿನ್ನೋದು ಸರಿ ಎಂದಾದರೆ ಮೂತ್ರ ಯಾಕೆ ಬೇಡ: ಬಿಜೆಪಿ
Delhi Polls: ದಿಲ್ಲಿ ವಿಧಾನಸಭೆಯ 70 ಸ್ಥಾನಕ್ಕೆ ಬರೋಬ್ಬರಿ 699 ಅಭ್ಯರ್ಥಿಗಳು ಸ್ಪರ್ಧೆ!
Supreme Court: ಟೆಕಿ ಅತುಲ್ ಪುತ್ರನನ್ನು ಅಜ್ಜಿ ಸುಪರ್ದಿಗೆ ನೀಡಲು ಸುಪ್ರೀಂ ನಕಾರ
NRI: ಸಂಸತ್ತಿನಲ್ಲಿ ಎನ್‌ಆರ್‌ಐ ಪ್ರಾತಿನಿಧ್ಯ: ಸ್ಥಾಯಿ ಸಮಿತಿ ಸಭೇಲಿ ಚರ್ಚೆ
Dog’s Revenge: ತನಗೆ ಡಿಕ್ಕಿ ಹೊಡೆದ ಕಾರಿನ ಮೇಲೆ ಸೇಡು ತೀರಿಸಿಕೊಂಡ ಶ್ವಾನ…