ಸ್ಲೀಪ್ವೆಲ್ ಗ್ರಾಹಕರಿಗೆ ಒಲಿದ ಕಾರು
Team Udayavani, Sep 15, 2018, 12:05 PM IST
ಬೆಂಗಳೂರು: ದೇಶದ ಮುಂಚೂಣಿ ಮ್ಯಾಟ್ರಸ್ ಬ್ರಾಂಡ್ ಸ್ಲಿàಪ್ವೆಲ್ ಮ್ಯಾಟ್ರಸ್, ಆ.1ರಿಂದ ಸೆ.30 ರವರೆಗೆ ಆಯೋಜಿಸಿರುವ “ಸ್ಲೀಪ್ವೆಲ್ ಎಕ್ಸ್ಚೇಂಜ್ ಆಫರ್-2018′ ಮೇಳದಲ್ಲಿ ನಗರದ ಬೆಳ್ಳಂದೂರು ಗ್ರಾಹಕ ಇ.ಶ್ರೀನಿವಾಸುಲು ಅವರು ಹೋಂಡಾ ಅಮೇಜ್ ಕಾರನ್ನು ಗೆದ್ದಿದ್ದಾರೆ.
ಮಂಗಳವಾರ ಎಚ್ಎಸ್ಆರ್ ಲೇಔಟ್, ಸೆಕ್ಟರ್1ರ 27ನೇ ಮುಖ್ಯರಸ್ತೆಯ ಮಿಲನ್ ಫರ್ನಿಚರ್ ಮತ್ತು ಫರ್ನಿಶಿಂಗ್ ಮಳಿಗೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶೋರೂಂ ಮಾಲೀಕ ಅಶೋಕ್ ಸಂದೇಶ್ ಅವರು ಶ್ರೀನಿವಾಸುಲು ದಂಪತಿಗೆ ಕಾರಿನ ಕೀ ಹಸ್ತಾಂತರಿಸಿದರು.
ನಂತರ ಮಾತನಾಡಿದ ಅವರು, ಪ್ರತಿ ವರ್ಷ ಆಗಸ್ಟ್ನಿಂದ ಸೆಪ್ಟೆಂಬರ್ವರೆಗೆ ಸ್ಲೀಪ್ವೆಲ್ ಎಕ್ಸ್ಚೇಂಜ್ ಕೊಡುಗೆ ಮೇಳ ಹಮ್ಮಿಕೊಳ್ಳಲಾಗುತ್ತದೆ. ಈ ಸಂದರ್ಭದಲ್ಲಿ ಗ್ರಾಹಕರಿಗೆ ತಮ್ಮ ಹಳೆಯ ಹಾಸಿಗೆ, ದಿಂಬು ಮತ್ತು ಬೆಡ್ಶೀಟ್ಗಳನ್ನು ಬದಲಾಯಿಸಿಕೊಳ್ಳುವ ಉತ್ತಮ ಅವಕಾಶವಿರುತ್ತದೆ. ಇಷ್ಟೇ ಅಲ್ಲದೆ, ಕಾರು, ಸ್ಕೂಟರ್ ಸೇರಿದಂತೆ ವಿಶೇಷ ಬಹುಮಾನ ಹಾಗೂ 10 ಸಾವಿರ ನಗದು ಗೆಲ್ಲುವ ಅವಕಾಶವಿರುತ್ತದೆ ಎಂದರು.
ಸ್ಲೀಪ್ವೆಲ್ ಪ್ರಾದೇಶಿಕ ಮಾರಾಟ ವ್ಯವಸ್ಥಾಪಕ ಎಲ್.ಆರ್.ಅರುಣ್ ಮಾತನಾಡಿ, ಎರಡು ತಿಂಗಳ ಎಕ್ಸ್ಚೇಂಜ್ ಮೇಳದಲ್ಲಿ ಇದುವರೆಗೆ 5 ಹೋಂಡಾ ಅಮೇಜ್ ಕಾರುಗಳನ್ನು ಗ್ರಾಹಕರು ಪಡೆದಿದ್ದಾರೆ. ಅದರಲ್ಲಿ ಬೆಂಗಳೂರಿನ ಗ್ರಾಹಕ 1 ಕಾರನ್ನು ಹಾಗೂ ಮಂಗಳೂರಿನ ಗ್ರಾಹಕ 1 ಆಕೀrವಾ 5ಜಿ ಸ್ಕೂಟರನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕೇವಲ 14 ಸಾವಿರ ರೂ.ನ ಸ್ಲೀಪ್ವೆಲ್ ಮ್ಯಾಟ್ರಸ್ ಖರೀದಿಸಿರುವ ಗ್ರಾಹಕ 10 ಸಾವಿರದವರೆಗೆ ಗಿಫ್ಟ್ ವೋಚರ್ ಹಾಗೂ ಕಾರು ಗೆದ್ದಿರುವ ಉದಾಹರಣೆ ಇದೆ. ಪ್ರತಿ ಗ್ರಾಹಕರಿಗೆ ಒಂದಿಲ್ಲೊಂದು ಖಚಿತ ಉಡುಗೊರೆ ಇದ್ದೇ ಇದೆ ಎಂದು ನುಡಿದರು. ಸ್ಲೀಪ್ವೆಲ್ ಐಷಾರಾಮಿ ಹಾಸಿಗೆ, ದಿಂಬು ಮತ್ತು ಬೆಡ್ಶೀಟ್ ತಯಾರಿಸಿ ಮಾರಾಟ ಮಾಡುತ್ತಿರುವ ಶೀಲಾ ಗ್ರೂಪ್ನ ಅಂಗ ಸಂಸ್ಥೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 22 ಮಹಿಳೆ ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.