ಲೂಧಿಯಾನ: ತಾಯಿ, ಸೋದರ ಸಂಬಂದಿಯನ್ನು ಕೊಂದ ಅಪರಾಧಿಗೆ ಗಲ್ಲು ಶಿಕ್ಷೆ
Team Udayavani, Sep 15, 2018, 12:26 PM IST
ಲೂಧಿಯಾನ : 2013ರಲ್ಲಿ ತನ್ನ ತಾಯಿ ಮತ್ತು ಸೋದರ ಸಂಬಂಧಿಯನ್ನು ಕೊಂದ ಅಪರಾಧಕ್ಕಾಗಿ ಇಲ್ಲಿನ ನ್ಯಾಯಾಲಯ, ಆರೋಪಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದೆ.
ಕೊಲೆ ಅಪರಾಧಿ ರಿಷು ಗ್ರೋವರ್ ನನ್ನು ‘ಸಾಯುವ ತನಕ ನೇಣಿಗೆ ಹಾಕಬೇಕು’ ಎಂದು ಇಲ್ಲಿನ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಅರುಣ್ ವೀರ್ ವಶಿಷ್ಠ ಅವರು ತೀರ್ಪು ನೀಡಿದರು.
30ರ ಹರೆಯದ ಕೊಲೆ ಅಪರಾಧಿ ಗ್ರೋವರ್ ತನ್ನ ತಾಯಿ ಉಷಾ ರಾಣಿ (55) ಮತ್ತು ಸೋದರ ಸಂಬಂಧಿ ಹೀನಾ ಗ್ರೋವರ್ (22) ಅವನ್ನು 2013ರ ಮೇ 21 -22ರ ನಡುವಿನ ರಾತ್ರಿ ನಗರದ ಹೃದಯಭಾಗದಲ್ಲಿರುವ ಬಾಬಾ ಥಾನ್ ಸಿಂಗ್ ಚೌಕದ ಸಮೀಪವಿರುವ ಮೊಹಲ್ಲಾ ಫತೇಗಂಜ್ ನಲ್ಲಿನ ತನ್ನ ಮನೆಯಲ್ಲಿ ನಿರ್ದಯವಾಗಿ ಕೊಂದಿದ್ದ.
ರಿಷು ಗ್ರೋವರ್ ಗೆ ಹೀನಾ ಜತೆಗೆ ಲೈಂಗಿಕ ಸಂಬಂಧವಿತ್ತು. ಆಕೆಯ ಮದುವೆ ಬೇರೊಬ್ಟಾತನೊಂದಿಗೆ ನಿಗದಿಯಾದ ಕಾರಣ ಈತ ಆಕ್ರೋಶಿತನಾಗಿದ್ದ. ಪರಿಣಾಮವಾಗಿ ಹೀನಾ ಮತ್ತು ತನ್ನ ತಾಯಿ ಉಷಾ ರಾಣಿಯನ್ನು ಆತ ಕೊಂದ. ಈ ಕೊಲೆ ಕೃತ್ಯ ನಡೆಸಿದ ಬಳಿಕ ಆರೋಪಿ ರಿಷು ಮನೆಯಲ್ಲಿದ್ದ ನಗ – ನಗದಿನೊಂದಿಗೆ ಪರಾರಿಯಾಗಿದ್ದ ಎಂದು ಎಫ್ಐಆರ್ ನಲ್ಲಿ ದಾಖಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!
Winter Session: ಸಂಸತ್ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Adani ಗ್ರೂಪ್ಗೆ ಸಾಲ: ಜಾಗತಿಕ ಬ್ಯಾಂಕ್ಗಳಿಂದ ತಾತ್ಕಾಲಿಕ ಬ್ರೇಕ್?
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.