ಅಕ್ಷರದಿ ಅರಳುವ ಗಣಪ


Team Udayavani, Sep 15, 2018, 12:54 PM IST

91.jpg

ಗಣೇಶನನ್ನು ಹೇಗೆಲ್ಲಾ ಸಂಭ್ರಮಿಸಬಹುದು? ಮೂರ್ತಿ ಕೂರಿಸಿ ಪೂಜೆ ಮಾಡುವ ಮೂಲಕ, ತಿಂಡಿ ತಿನಿಸುಗಳನ್ನು ತಯಾರಿಸಿ ಮನೆ ಮಂದಿಗೆಲ್ಲಾ ಬಡಿಸುವ ಮೂಲಕ ಪಡುವ ಸಂಭ್ರಮ ಗೊತ್ತಿರುವುದೇ. ಇಲ್ಲೊಬ್ಬರು ಅಕ್ಷರಗಳ ಮೂಲಕ ಗಣೇಶನನ್ನು ಸಂಭ್ರಮಿಸುತ್ತಿದ್ದಾರೆ. ಕಲಾವಿದ ವೆಂಕಟೇಶ್‌ ಎಲ್ಲೂರ ಅವರಿಗೆ ಯಾರಾದರೂ ಮಾತಿಗೆ ಸಿಕ್ಕರೆ ಸಾಕು ಮೊದಲು ಅವರ ಹೆಸರನ್ನು ಕೇಳಿ ಪಡೆಯುತ್ತಾರೆ. ಹೆಸರಲ್ಲೇನಿದೆ ರೀ ಎಂದಿರಾ? ತಡೆಯಿರಿ ಹೆಸರಲ್ಲಿ ಗಣೇಶ ಇದ್ದಾನೆ. ಹೆಸರನ್ನು ತಿಳಿದುಕೊಂಡ ನಂತರ ವೆಂಕಟೇಶ್‌ ಅವರು ಒಂದು ಕಾಗದವನ್ನು ತೆಗೆದುಕೊಂಡು ಅವರ ಅಕ್ಷರಗಳನ್ನು ಬಳಸಿಕೊಂಡು ಕ್ಷಣಾರ್ಧದಲ್ಲಿ ಗಣಪತಿಯ ಚಿತ್ರವನ್ನು ಮೂಡಿಸಿಬಿಡುತ್ತಾರೆ. ಮುಂದಿರುವವರು ಒಂದು ಕ್ಷಣ ಅಚ್ಚರಿಪಡಲೇಬೇಕು! 

ಹೀಗೆ ಅಕ್ಷರಗಳಲ್ಲಿ ವಿಭಿನ್ನ ಮಾದರಿಯ ಗಣಪನನ್ನು ಸೃಷ್ಟಿಸಿ ಎಲ್ಲರ ಮನ ಗೆಲ್ಲುತ್ತಿರುವ ವೆಂಕಟೇಶ್‌ ಎಲ್ಲೂರ ಅವರು ಆರ್‌.ಟಿ.ನಗರದ ನಿವಾಸಿ. ಈಗಾಗಲೇ ಸುಮಾರು 20 ಸಾವಿರಕ್ಕಿಂತ ಹೆಚ್ಚು ಅಕ್ಷರಗಣಪನನ್ನು ತಯಾರಿಸಿದ್ದಾರೆ. ವೆಂಕಟೇಶ್‌ ವೃತ್ತಿಯಲ್ಲಿ ಮೆಕ್ಯಾನಿಕಲ್‌ ಇಂಜಿನಿಯರ್‌. ಬಾಲ್ಯದಿಂದಲೂ ಇವರಿಗೆ ಕಲೆಯಲ್ಲಿ ಆಪಾರವಾದ ಆಸಕ್ತಿ. ಆಗ ಚಿಕ್ಕಪುಟ್ಟ ಚಿತ್ರಗಳನ್ನು ಬಿಡಿಸುತ್ತಿದ್ದರು. 2004ರಲ್ಲಿ ತಮಗರಿವಿಲ್ಲದೆ ಈ ಹವ್ಯಾಸವನ್ನು ಕಂಡುಕೊಂಡರು. ಅಂದಿನಿಂದ ತಮ್ಮ ಈ ಹವ್ಯಾಸದಿಂದ ಹಬ್ಬದ ಖುಷಿಯನ್ನು ಹಂಚುತ್ತಾ ಬಂದಿದ್ದಾರೆ.

ಇವರ ಬಳಿ ರಾಜಕಾರಣಿಗಳು, ಸಿನಿಮಾ ನಟರು, ಉದ್ಯಮಿಗಳು, ಶಿಕ್ಷಕರು ಹೀಗೆ ಹಲವಾರು ಮಂದಿ ತಮ್ಮ ಆಪ್ತರಿಗೆ ಉಡುಗೊರೆ ನೀಡಲು ಅಕ್ಷರ ಗಣಪನನ್ನು ಮಾಡಿಸಿಕೊಂಡಿದ್ದಾರೆ. ಕಲೆಯು ಯಾವ ರೀತಿಯಲ್ಲೆಲ್ಲಾ ರೂಪಾಂತರ ಹೊಂದಿ, ಹೇಗೆಲ್ಲಾ ಸ್ಪೂರ್ತಿ ನೀಡುತ್ತದೆ ಎಂಬುದಕ್ಕೆ ಅಕ್ಷರ ಗಣಪನೇ ಸಾಕ್ಷಿ.

ಮಾಹಿತಿಗೆ: myganesha.com
– ವಿ.ಎಸ್‌. ನಾಯಕ್‌

ಟಾಪ್ ನ್ಯೂಸ್

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.