ಸೂಳೆಕೆರೆ ಸಂರಕ್ಷಣೆಗೆ ಸರ್ವೇ; ನಾಳೆ ಜಿಲ್ಲಾಧಿಕಾರಿ ಭೇಟಿ
Team Udayavani, Sep 15, 2018, 3:39 PM IST
ದಾವಣಗೆರೆ: ಇತಿಹಾಸ ಪ್ರಸಿದ್ಧ ಸೂಳೆಕೆರೆ (ಶಾಂತಿಸಾಗರ) ಸರ್ವೇ ಕಾರ್ಯ ಪ್ರಾರಂಭಿಸುವ ಹಿನ್ನೆಲೆಯಲ್ಲಿ ಸೆ. 16 ರಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅಲ್ಲಿಗೆ ಭೇಟಿ ನೀಡುವರು ಎಂದು ಖಡ್ಗ ಶಾಂತಿಸಾಗರ (ಸೂಳೆಕೆರೆ) ಸಂರಕ್ಷಣಾ ಮಂಡಳಿ ಅಧ್ಯಕ್ಷರಾದ ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಸ್ವಾಮೀಜಿ ತಿಳಿಸಿದ್ದಾರೆ.
11ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ಐತಿಹಾಸಿಕ ಸೂಳೆಕೆರೆ ಉಳಿಸಬೇಕು. ಒತ್ತುವರಿ ತೆರವುಗೊಳಿಸಬೇಕು
ಮತ್ತು ತುಂಬಿರುವ ಹೂಳು ತೆಗೆಸುವ ಉದ್ದೇಶದಿಂದ ಮಂಡಳಿ ಕೆಲಸ ಮಾಡುತ್ತಿದೆ. ಸೂಳೆಕೆರೆ ಉಳಿಸುವ ಮೊದಲ ಹಂತದಲ್ಲಿ ಕೆರೆಯ ಸರ್ವೇ ಕಾರ್ಯ ನಡೆಯಬೇಕು. ಅದರ ಪೂರ್ವಭಾವಿಯಾಗಿ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಭಾನುವಾರ ಸೂಳೆಕೆರೆಗೆ ಭೇಟಿ ನೀಡುವರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಏಷ್ಯಾ ಖಂಡದ 2ನೇ ಅತಿ ದೊಡ್ಡ ಕೆರೆಯಾಗಿರುವ ಸೂಳೆಕೆರೆ 6,650 ಎಕರೆ ವಿಸೀರ್ಣ ಹೊಂದಿದೆ. ಈಗ ಲಭ್ಯ ಇರುವ
ದಾಖಲೆ ಪ್ರಕಾರ ಕೆರೆಯ ವಿಸೀ¤ರ್ಣ 5,550 ಎಕರೆ. ಒಟ್ಟು 1 ಸಾವಿರ ಎಕರೆಯಷ್ಟು ಜಾಗ ಒತ್ತುವರಿ ಆಗಿದೆ. ಒತ್ತುವರಿ ತೆರವು ಮಾಡುವ ಮುನ್ನ ಕೆರೆಯ ವಿಸೀರ್ಣದ ಸರ್ವೇ ನಡೆಯಬೇಕಿದೆ.
ಸರ್ವೇ ನಡೆದು, ಕೆರೆಯ ಗಡಿಗುಂಟ ಟ್ರೆಂಚ್ (ಗುಂಡಿ) ತೋಡುವ ಕಾರ್ಯಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಕೆರೆಯ ಮೂಲ ವಿಸ್ತೀರ್ಣ ಗೊತ್ತುಪಡಿಸಿಕೊಳ್ಳಲು ತೀರಾ ಅಗತ್ಯವಾಗಿರುವ ಸರ್ವೇ ಕಾರ್ಯ ಪ್ರಾರಂಭಿಸುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು.
ಸೂಳೆಕೆರೆ ನಿರ್ಮಾಣವಾದ ಕಾಲದಿಂದಲೂ ಹೂಳು ತೆಗೆದಿಲ್ಲ. ಹಾಗಾಗಿ 12-13 ಅಡಿ ಆಳ ಹೂಳಿದೆ ಎಂದು ಅಂದಾಜಿಸಲಾಗಿದೆ. ಒಂದೊಮ್ಮೆ ಇಡೀ ಕೆರೆಯಲ್ಲಿನ ಹೂಳು ತೆಗೆಸಿದ್ದಲ್ಲಿ ಕೆರೆಯ ನೀರಿನ ಸಂಗ್ರಹಣಾ ಸಾಮರ್ಥ್ಯ 2 ಟಿಎಂಸಿಯಿಂದ 4.5 ಟಿಎಂಸಿ ಆಗಬಹುದು.
10 ವ್ಹೀಲ್ ಇರುವ 100 ಲಾರಿಗಳಲ್ಲಿ ದಿನಕ್ಕೆ 15 ಲೋಡ್ ಹೂಳು ಸಾಗಿಸಿದರೆ ಇಡೀ ಕೆರೆಯಲ್ಲಿನ ಹೂಳು ತೆಗೆಯಲಿಕ್ಕೆ 2 ವರ್ಷ ಬೇಕಾಗಬಹುದು ಎಂಬ ಅಂದಾಜಿದೆ. ಹೂಳು ತೆಗೆಯುವ ಮುನ್ನ ಕೆರೆಯ ಮೂಲ ವಿಸ್ತೀರ್ಣ ತಿಳಿಯುವುದು ಅತೀ ಮುಖ್ಯ. ಹಾಗಾಗಿ ಸರ್ವೇ ಕಾರ್ಯ ಪ್ರಾರಂಭಿಸಬೇಕು ಎಂಬ ಮಂಡಳಿ, ಸುತ್ತಮುತ್ತಲಿನ ಗ್ರಾಮಸ್ಥರು, ತಾಲೂಕಿನ
ಜನತೆಯ ಒತ್ತಾಯಕ್ಕೆ ಸರ್ಕಾರಕ್ಕೆ ಪೂರಕವಾಗಿ ಸ್ಪಂದಿಸಿದೆ ಎಂದು ತಿಳಿಸಿದರು.
ಸೂಳೆಕೆರೆ ಉಳಿಸಿಕೊಳ್ಳುವ ಹಿನ್ನೆಲೆಯಲ್ಲಿ ಚನ್ನಗಿರಿ ಪಟ್ಟಣ ಒಳಗೊಂಡಂತೆ ತಾಲೂಕಿನಾದ್ಯಂತ ಜಾಗೃತಿ ಮೂಡಿಸಲಾಗುತ್ತದೆ. ಹಲವಾರು ಕಡೆ ಜಾಗೃತಿ ಜಾಥಾಗಳು ನಡೆಯುತ್ತಿವೆ. ಸರ್ವೇ ಕಾರ್ಯಕ್ಕೆ 50 ಲಕ್ಷ ಅನುದಾನ ಬೇಕು ಎಂಬುದಾಗಿ ಕರ್ನಾಟಕ ನೀರಾವರಿ ಮಂಡಳಿಯೇ ಅಧಿಕೃತ ಮಾಹಿತಿ ನೀಡಿದೆ. ಸರ್ಕಾರದಿಂದ ಹಣ ಬರುವುದು
ವಿಳಂಬವಾಗಬಹುದು ಎಂಬ ಹಿನ್ನೆಲೆಯಲ್ಲಿ ಹಲವಾರು ಕಡೆ ಜನರು ಸ್ವ ಪ್ರೇರಣೆಯಿಂದ ದೇಣಿಗೆ ನೀಡುತ್ತಿದ್ದಾರೆ. ಸರ್ವೇ ಕಾರ್ಯ ಪ್ರಾರಂಭಿಸಲು ಅಗತ್ಯವಾಗಿರುವ ದೇಣಿಗೆ ಸಂಗ್ರಹಿಸಲು ಬ್ಯಾಂಕ್ ಖಾತೆ ಪ್ರಾರಂಭಿಸಲಾಗಿದೆ.
ಆಸಕ್ತರು ಚನ್ನಗಿರಿಯ ಕರ್ನಾಟಕ ಬ್ಯಾಂಕ್ ಖಾತೆ 1712500100706701 ಐಊಖಇಓಅRಆ000071
ಮೂಲಕ ಹಣ ನೀಡಬಹುದು ಎಂದು ತಿಳಿಸಿದರು. ಚನ್ನಗಿರಿಯ ಕೇದಾರನಾಥ ಮಠದ ಶ್ರೀ ಕೇದಾರನಾಥ ಶಾಂತವೀತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸೂಳೆಕೆರೆಯನ್ನ ಉಳಿಸಿಕೊಳ್ಳಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ. ಅದರಿಂದ ಮುಂದಿನ ಪೀಳಿಗೆಗಳಿಗೆ ಸಾಕಷ್ಟು ಪ್ರಯೋಜನ ಆಗುತ್ತದೆ. ಆ ನಿಟ್ಟಿನಲ್ಲಿ ತಾಲೂಕಿನ ಪ್ರತಿಯೊಬ್ಬರು ಕಾರ್ಯೋನ್ಮುಖರಾಗಿದ್ದಾರೆ ಎಂದು ತಿಳಿಸಿದರು.
ಖಡ್ಗ ಶಾಂತಿಸಾಗರ(ಸೂಳೆಕೆರೆ) ಸಂರಕ್ಷಣಾ ಮಂಡಳಿಯ ಬಿ.ಆರ್. ರಘು, ಬಿ. ಚಂದ್ರಹಾಸ್, ಕೆ. ಷಣ್ಮುಖಯ್ಯ, ಎಂ.ಬಿ.
ವೀರಭದ್ರಯ್ಯ, ಎಚ್.ವಿ. ರವೀಂದ್ರನಾಥ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
MUST WATCH
ಹೊಸ ಸೇರ್ಪಡೆ
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.