ನಗುವಿನಿಂದ ದೇಹಕ್ಕೆ ದಿವ್ಯ ಔಷಧ : ಪಡಶೆಟ್ಟಿ
Team Udayavani, Sep 15, 2018, 4:12 PM IST
ಬೆಳಗಾವಿ: ದೇವರನ್ನು ಎಲ್ಲ ಕಡೆ ಹುಡುಕಬೇಡಿ. ನಗೆಯಲ್ಲಿಯೇ ದೇವರಿದ್ದಾನೆ. ನೀವು ನಗುತ್ತ ನಗಿಸುತ್ತ ಇದ್ದಲ್ಲಿ ಈ ನಗೆದೇವರು ಯಾವಾಗಲೂ ತಮಗೆ ಒಳ್ಳೆಯದನ್ನೇ ಮಾಡುತ್ತಾನೆ. ಎಂದು ಬೆಂಗಳೂರಿನ ಹಾಸ್ಯ ದರ್ಪಣ ಪತ್ರಿಕೆ ಸಂಪಾದಕ ಎಸ್.ಎಸ್. ಪಡಶೆಟ್ಟಿ ಹೇಳಿದರು.
ನಗರದ ಹಾಸ್ಯಕೂಟ ಹಾಗೂ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಆಶ್ರಯದಲ್ಲಿ ನಡೆದ ನಗೆಯೂಟ ಹಾಗೂ ಸಂಗೀತ ಸಂಜೆ ಕಾರ್ಯಕ್ರಮದ ಪ್ರಮುಖ ಭಾಷಣಕಾರರಾಗಿ ಆಗಮಿಸಿದ್ದ ಅವರು, ನಾಡಗೇರ ಕೃಷ್ಣರಾಯ, ಎನ್ಕೆ, ಟಿ. ಸುನಂದಮ್ಮ ಮುಂತಾದ ಪ್ರಮುಖ ಹಾಸ್ಯಲೇಖಕರ ಕೃತಿಗಳು ಇಂದು ಓದಲು ಸಿಗುತ್ತಿಲ್ಲ ಈ ಕೃತಿಗಳು ಪುನಮುದ್ರಣಗೊಳ್ಳವಂತೆ ಸರ್ಕಾರ ಮುಂದಾಗಬೇಕಾದ ಅವಶ್ಯಕತೆಯಿದೆ ಎಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಾ| ಸ್ವಪ್ನಾ ಕುಲಕರ್ಣಿ ಮಾತನಾಡಿ, ಹಾಸ್ಯಕೂಟ ಎನ್ನುವುದು ಅಪರೂಪದ ನಗೆಲೋಕ. ಇದೊಂದು ಕೌಟುಂಬಿಕ ಕಾರ್ಯಕ್ರಮದಂತೆ. ಮನುಷ್ಯನಿಗೆ ನಗು ಎನ್ನುವುದು ದಿವ್ಯ ಔಷಧಯಿದ್ದಂತೆ. ನಗುವಾಗ ದೀರ್ಘ ಶ್ವಾಸೋಚ್ಛಾಸ ನಡೆಯುತ್ತದೆ. ನಿಮ್ಮಲ್ಲಿ ನಗುವಿದ್ದರೆ ವೈದ್ಯರ ಬಳಿ ಬರುವ ಅವಶ್ಯಕತೆಯೇ ಇರುವುದಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಕನ್ನಡ ಹೋರಾಟಗಾರ ಡಾ. ಸಿದ್ದನಗೌಡ ಪಾಟೀಲ ಹಾಸ್ಯಕೂಟ ಪ್ರತಿ ತಿಂಗಳೂ ಹೊಸಬರನ್ನು ಬೆಳಗಾವಿ ಹಾಸ್ಯಪ್ರಿಯರಿಗೆ ಪರಿಚಯಿಸುವ ಮಹತ್ತರ ಕಾರ್ಯ ಮಾಡುತ್ತಿದೆ ಎಂದರು. ಡಾ| ಎ.ಎಲ್. ಕುಲಕರ್ಣಿ, ನಗೆ ಬರೆಹಗಾರ ಬೆಂಗಳೂರಿನ ಕೊ.ಲ. ರಂಗನಾಥರಾವ್ ಉಪಸ್ಥಿತರಿದ್ದರು. ಗುಂಡೇನಟ್ಟಿ ಮಧುಕರ ಪ್ರಾಸ್ತಾವಿಕ ಭಾಷಣ ಮಾಡಿದರು. ಜಿ. ಎಸ್. ಸೋನಾರ, ಎಂ.ಬಿ. ಹೊಸಳ್ಳಿ ತಮ್ಮ ನಗೆ ಮಾತುಗಳಿಂದ ಜನರನ್ನು ರಂಜಿಸಿದರು. ಪ್ರೊ| ಜಿ. ಕೆ. ಕುಲಕರ್ಣಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
ಗಾಂಧಿ ಭಾರತ್ ಕಾರ್ಯಕ್ರಮದ ಬಗ್ಗೆ ಶೆಟ್ಟರ್ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ
Congress ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ದೇಶದ ಇತಿಹಾಸದ ಒಂದು ಐತಿಹಾಸಿಕ ಕಾರ್ಯಕ್ರಮ
Belagavi: ಗಾಂಧಿ ಭಾರತ ಹಿನ್ನೆಲೆ ಡಿ. 26, 27 ರಂದು ಕೆಲ ಶಾಲೆಗಳಿಗೆ ರಜೆ
Suspension: ಸಿ.ಟಿ. ರವಿ ಪ್ರಕರಣ; ಖಾನಾಪುರ ಸಿಪಿಐ ಅಮಾನತು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.