ವ್ಯಕ್ತಿಗತ ಸಾಮರ್ಥ್ಯಕ್ಕೆ ಹೆಚ್ಚು ಮಹತ್ವ
Team Udayavani, Sep 15, 2018, 5:25 PM IST
ಹುಬ್ಬಳ್ಳಿ: ಜಗತ್ತಿನಲ್ಲಿಂದು ವ್ಯಕ್ತಿಗತ ಸಾಮರ್ಥ್ಯಕ್ಕೆ ಮಹತ್ವ ನೀಡಲಾಗುತ್ತಿದೆ ವಿನಃ ಹೆಣ್ಣು-ಗಂಡೆಂಬ ಭೇದ ಅಳೆಯಲಾಗುತ್ತಿಲ್ಲವೆಂದು ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕಿ ಡಾ| ನೀಲಾಂಬಿಕಾ ಪಟ್ಟಣಶೆಟ್ಟಿ ಹೇಳಿದರು. ಜೆ.ಸಿ. ನಗರದ ಜಗದ್ಗುರು ಮೂರು ಸಾವಿರಮಠ ವಿದ್ಯಾವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪಠ್ಯೇತರ ಚಟುವಟಿಕೆಗಳ ಹಾಗೂ ಸ್ನಾತಕೋತ್ತರ ಸಂಗೀತ ವಿಭಾಗದ ಉದ್ಘಾಟನಾ ಸಮಾರಂಭ ನೆರವೇರಿಸಿ ಅವರು ಮಾತನಾಡಿದರು.
ಪುರುಷ ಪ್ರಧಾನ ಸಮಾಜ ಹೋಗಿ ವ್ಯಕ್ತಿಗತ ಸಮಾಜವಾಗಿ ಬದಲಾಗುತ್ತಿದೆ. ಹೆಣ್ಣು-ಗಂಡುವೆಂಬ ಲಿಂಗ ಆಧಾರದ ಮೇಲೆ ಪ್ರತಿಭೆಗಳು ನಿಂತುಕೊಂಡಿಲ್ಲ. ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರು ಮೇಲುಗೈ ಸಾಧಿಸಿದ್ದಾರೆ. ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಶೇ.70ಪಾಲು ಮಹಿಳೆಯದ್ದಾಗಿದೆ. ಸಾಮಾಜಿಕ, ರಾಜಕೀಯ, ಆರ್ಥಿಕತೆ, ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಅವಳ ಪಾತ್ರ ಮಹತ್ತರವಾಗಿದೆ. ವಿಶ್ವದಲ್ಲಿ ಮಹಿಳೆಯರ ಸಂಖ್ಯೆ ಶೇ.50ರಷ್ಟಿದೆ. ಅದರಲ್ಲಿ ಶೇ.33ಮಹಿಳೆಯರು ಕಷ್ಟದ ಕೆಲಸ ಮಾಡಿದರೆ, ಶೇ.77 ದುಡಿಯುತ್ತಿದ್ದಾರೆ. ಆದರೆ ಇವರ ಉತ್ಪನ್ನ ಕೇವಲ ಶೇ.10 ಆಗಿದೆ. ಅಲ್ಲದೆ ಇವರ ಆಸ್ತಿ ಶೇ.1 ಮಾತ್ರವಾಗಿದೆ ಎಂದರು.
ನಿವೃತ್ತ ಪ್ರಾಂಶುಪಾಲ ಡಾ| ಕಮಲ ಪುರಂದರೆ ಮತ್ತು ಎಸ್‌ಜೆಎಂವಿಎಸ್‌ನ ಗೌರವ ಕಾರ್ಯಾಧ್ಯಕ್ಷ ಅರವಿಂದ ಕುಬಸದ ಮಾತನಾಡಿದರು. ಮೂಜಗು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಾ| ನೀಲಾಂಬಿಕಾ ಪಟ್ಟಣಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ವಿಜಯಲಕ್ಷ್ಮೀ ಕಟ್ಟಿಮಠ ಸ್ವಾಗತಿಸಿದರು. ಶ್ವೇತಾ ಕಾಗೇನವರ ನಿರೂಪಿಸಿದರು. ಪ್ರೊ| ಜಿ.ಎಸ್. ಗುಡಾರದ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ
By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್ ವೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.