ಆತ್ಮಹತ್ಯೆ: ತಡೆಯುವ ಕ್ರಮಗಳು
Team Udayavani, Sep 16, 2018, 6:00 AM IST
ಹಿಂದಿನ ವಾರದಿಂದ- ಯಾರಾದರೊಬ್ಬರು ಆತ್ಮಹತ್ಯೆಯ ಬಗ್ಗೆ ಗಂಭೀರವಾಗಿ ಆಲೋಚಿಸುತ್ತಿದ್ದಾರೆ
ಎಂಬುದರ ಎಚ್ಚರಿಕೆ ಸಂಕೇತಗಳು: ಆತ್ಮಹತ್ಯೆ ಮಾಡಿಕೊಳ್ಳುವ ಅಪಾಯ ಹೊಂದಿರುವ ವ್ಯಕ್ತಿಗಳು ಬಹುತೇಕ ಬಾರಿ ವಾಚಿಕ, ವರ್ತನಾತ್ಮಕ ಮತ್ತು ದೈಹಿಕ ಸೂಚನೆಗಳನ್ನು ಹೊಂದಿರುತ್ತಾರೆ. ಅವುಗಳೆಂದರೆ:
ವರ್ತನಾತ್ಮಕ ಸೂಚನೆಗಳು
– ಏಕಾಕಿಯಾಗುವುದು
– ಮನೋಭಾವ ಅಥವಾ ವರ್ತನೆಯಲ್ಲಿ ಹಠಾತ್ ಬದಲಾವಣೆ
– ಮಾದಕವಸ್ತುಗಳ ಸೇವನೆ ಅಥವಾ ಮದ್ಯಪಾನ
– ಆತ್ಮಹತ್ಯೆಗೆ ಪ್ರಯತ್ನ ಅಥವಾ ಸ್ವಹಾನಿಯ ಪ್ರಯತ್ನ
– ಶಾಲೆ ಅಥವಾ ಕೆಲಸದಲ್ಲಿ ಕಷ್ಟಪಡುವುದು
– ಚಟುವಟಿಕೆಗಳನ್ನು ನಿಲ್ಲಿಸುವುದು
– ರೂಢಿಗತ ಚಟುವಟಿಕೆಗಳಲ್ಲಿ ನಿರಾಸಕ್ತಿ
– ನಿದ್ದೆ ಮಾಡುವುದಕ್ಕೆ ಅಥವಾ ಆಹಾರ ಸೇವಿಸುವುದಕ್ಕೆ ನಿರಾಸಕ್ತಿ, ಕಷ್ಟ
– ಅತಿ ವೇಗದಲ್ಲಿ ಚಲಾಯಿಸುವುದೇ ಮುಂತಾದ ಅಪಾಯಕಾರಿ ವರ್ತನೆಗಳು
ದೈಹಿಕ ಸೂಚನೆಗಳು
– ತಮ್ಮ ಸ್ವರೂಪ, ವೈಯಕ್ತಿಕ ನೈರ್ಮಲ್ಯ, ಬಟ್ಟೆಬರೆಯ ಬಗ್ಗೆ ನಿರಾಸಕ್ತಿ
– ದೀರ್ಘಕಾಲಿಕ ನೋವು ಮುಂತಾಗಿ ಸತತ ದೈಹಿಕ ದೂರು
– ಹಸಿವು ನಷ್ಟ ಅಥವಾ ಹೆಚ್ಚುವುದರಿಂದ ತೂಕ ನಷ್ಟ ಅಥವಾ ಗಳಿಕೆ
– ಏಕಾಗ್ರತೆಯ ಕೊರತೆ ಅಥವಾ ದಣಿವು
ವಾಚಿಕ ಸೂಚನೆಗಳು
– ತನ್ನನ್ನು ತಾನು ಕೊಂದುಕೊಳ್ಳುವ ಬೆದರಿಕೆ
– “ನಾನು ಸತ್ತು ಹೋದರೆ ಯಾರಿಗೂ ಏನೂ ನಷ್ಟವಿಲ್ಲ’ ಮುಂತಾದ ಮಾತುಗಳು
– ಇತರರಿಗೆ ಹೊರೆಯಾಗಿರುವ ಬಗ್ಗೆ ಮಾತನಾಡುವುದು
– ನಿಕಟ ಬಂಧುಗಳು, ಕುಟುಂಬಿಕರು, ಗೆಳೆಯ ಗೆಳತಿಯರಿಗೆ ವಿದಾಯ ಹೇಳುವುದು, ಮೌಲ್ಯಯುತ ಅಥವಾ ತುಂಬಾ ಇಷ್ಟವಾದ ವಸ್ತುಗಳನ್ನು ತೊರೆಯುವುದು ಅಥವಾ ವಿಲ್ ಬರೆಯುವುದು.
(ಮುಂದುವರಿಯುತ್ತದೆ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.