ಪ್ರಶಸ್ತಿ ಪ್ರಭಾವಳಿ 


Team Udayavani, Sep 16, 2018, 6:00 AM IST

awards.jpg

ಮೊನ್ನೆ ನಾ ಬರೆದ ಪುಸ್ತಕವೊಂದಕ್ಕೆ ಪ್ರಶಸ್ತಿ ಬಂತು. ಪತ್ರಿಕೆಯಲ್ಲಿ ಈ ಸುದ್ದಿ ಪ್ರಕಟವಾಗಿ ನಾಡಿನ ಎಲ್ಲ ಜನರಿಗೆ ಸುದ್ದಿ ಟಾಂ ಟಾಂ ಆದದ್ದೇ ತಡ, ನನ್ನ ಕೆಲ ಸ್ನೇಹಿತರು (ನನ್ನ ವಿಚಾರದಲ್ಲಿ ಮಾತ್ರ ಎಡಪಂಥಿಯರು) ಕಳ್ಳತನ ಮಾಡಿದ ಆರೋಪಿಯಂತೆ ನೋಡತೊಡಗಿದರು. ಇನ್ನು ಕೆಲವು ಸಂಬಂಧಿಕರು, ಹಿತೈಷಿಗಳು, ಆಫೀಸ್‌ ಸಿಬ್ಬಂದಿ, ಮೇಲಧಿಕಾರಿಗಳು ಫೋನ್‌ ಮಾಡಿ ಅಭಿನಂದನೆ ಹೇಳತೊಡಗಿದರು. ಆಶ್ವರ್ಯವೆಂದರೆ, ಇವರು ಯಾರೂ ನನ್ನ ಸಾಹಿತ್ಯದ ಒಂದು ಸಾಲನ್ನೂ ಓದಿದವರಲ್ಲ ಅಂತ ಘಂಟಾಘೋಷವಾಗಿ ಹೇಳಬಲ್ಲೆ. ಪತ್ರಿಕೇಲಿ ನನ್ನ ಪೋಟೊ ಬಂದುದನ್ನು ನೋಡಿ ಗೇಲಿಮಾಡಲು ಇದು ಒಂದು ಸುವರ್ಣಾವಕಾಶವಾಗಿತ್ತು. ಜೊತೆಗೆ ಹೊಟ್ಟೆಕಿಚ್ಚು ಸಹ ಕೆಲವರಿಗೆ. ನನ್ನ ಶಿಷ್ಯನೊಬ್ಬ ಬೆಳಗಿನ ಜಾವವೇ (ಅಂದರೆ ಸರಿಯಾಗಿ ತಿಂಡಿ ಸಮಯಕ್ಕೆ) ಓಡೋಡಿ ಬಂದ. ಬಂದವನೆ ತಾನೇ ಕುರ್ಚಿ ಎಳೆದು ಕುಳಿತ. “”ಸಾರ್‌, ಕಂಗ್ರಾಟ್ಸ್‌. ಕೊನೆಗೂ ಗೆದ್ದುಬಿಟ್ರಿ ಬಿಡಿ ಸಾರ್‌’ ಎಂದು ಹಲ್ಲು ಕಿರಿದ. 

ಕೈಕಟ್ಟಿ ಕುಳಿತಿದ್ದ ನನ್ನ ಕೈ ಬಿಡಿಸಿ ಕೈ ಕುಲುಕಿದ. ಡೈನಿಂಗ್‌ ಟೇಬಲ್‌ ಕಡೆ ನೋಡಿ ಅಲ್ಲಿದ್ದ ಮೂರ್‍ನಾಲ್ಕು ಸೇಬು ಕೈಗೆತ್ತಿಕೊಂಡು ತಿನ್ನತೊಡಗಿದ. ಅಭಿನಂದನೆ ದುಬಾರಿಯಾಯ್ತು ಅಂತ ನನಗೆ ಮನಸ್ಸಿನಲ್ಲಿ ಅನಿಸತೊಡಗಿತು. ಆದರೆ‌ ಹೇಳಿಕೊಳ್ಳಲಾಗಲಿಲ್ಲ. ನಾನು ಟೇಬಲ್‌ ಮೇಲೆ ಸುಂದರವಾಗಿ ಕಾಣಲೆಂದು ನಿನ್ನೆ ಕೆ.ಜಿ.ಗೆ ಮೂನ್ನೂರು ರೂಪಾಯಿ ಕೊಟ್ಟು ತಂದಿಟ್ಟು ಖುಷಿ ಪಡುತ್ತಿದ್ದೆ. ಅದರಲ್ಲಿನ ಒಂದನ್ನು ತಿನ್ನುವ ಮನಸ್ಸು ಕೂಡ ಮಾಡಿರಲಿಲ್ಲ. ಇದಾದ ಮೇಲೆ ಮತ್ತೆರಡು ಬಾಳೆಹಣ್ಣು ಬಿಡಿಸಿ ತಿನ್ನತೊಡಗಿದ. ಆ ನಂತರ ಪಕ್ಕಕ್ಕೇ ಬಂದು ಕುಳಿತು ಪುಸ್ತಕದ ವಿವರಣೆ ಕೇಳತೊಡಗಿದ. ನನಗೆ ಸ್ವಲ್ಪ ಸಮಾಧಾನ ವೆನಿಸತೊಡಗಿತು. ಯಾಕೆಂದರೆ, ಇವನು ನನ್ನ ಪ್ರೀತಿಯ ಶಿಷ್ಯನಾಗಿದ್ದರಿಂದ ನನಗೆ ಕೋಪ ಜಾಸ್ತಿ ಬರಲಿಲ್ಲ. ನಾನು ಇಷ್ಟಪಟ್ಟು ಬರೆಯಲಿ, ಕಷ್ಟಪಟ್ಟು ಬರೆಯಲಿ ಬರೆದದ್ದನ್ನು ವಿಮರ್ಶೆ ಮಾಡದೆ ಒಂದೇ ಧಾಟಿಯಲ್ಲಿ ಓದಿ ಪ್ರಶಂಸೆ ಮಳೆಗೆರೆಯುತ್ತಿದ್ದ ಮುಖದ ತುಂಬ ವಿಮರ್ಶಕನ ಗಾಂಭೀರ್ಯ ಹೊತ್ತು ಪ್ರಶ್ನೆಗಳನ್ನು ಕೇಳತೊಡಗಿದ.

“”ಸಾರ್‌, ನಿಮ್ಮ ಯಾವ ಪುಸ್ತಕಕ್ಕೆ ಈ ಬಹುಮಾನ ಬಂತು ಸರ್‌?”
“”ಹಳ್ಳಿಹೈದರು”
“”ಇದನ್ನು ಯಾವಾಗ ಬರೆದಿರಿ ಸರ್‌?”
“”ಕಳೆದ ವರ್ಷ ಅಷ್ಟೇ”
“”ಓಹೊ! ಹಳೇ ಪುಸ್ತಕಾನಾ? ಸರ್‌, ಹಳೆ ಪುಸ್ತಕಕ್ಕೆ ಯಾಕೆ ಸರ್‌ ಬಹುಮಾನ ಕೊಡತಾರೆ?”
“”ಹಾಗಲ್ಲಪ್ಪಾ, ಪುಸ್ತಕವೊಂದನ್ನು ಬಹುಮಾನಕ್ಕೆ ಆಯ್ಕೆ ಮಾಡುವಲ್ಲಿ ಕೆಲವು ಮಾನದಂಡಗಳಿರುತ್ತವೆ. ಅದರಲ್ಲಿ ಇದು ಕೂಡ ಒಂದು”
“”ಇಲ್ಲಿಯವರೆಗೆ ನನಗೆ ಇದನ್ನು ತೋರಿಸಲೇ ಇಲ್ಲವಲ್ಲ ಸಾರ್‌”
“”ಹೌದು, ಬಹಳ ಮಹಣ್ತೀದ ಕೃತಿ ಅದು. ಅದಕ್ಕೆ ತೋರಿಸಲಾಗಿಲ್ಲ”
“”ಸಾರ್‌ ಹೇಗೆ ಬರೆದಿರಿ?”
“”ಹೀಗೆ ಒಂದಿಷ್ಟು ಪೇಪರು-ಪೆನ್ನು ತಗೊಂದು ಸಮಯಾವಕಾಶ ಮಾಡಿಕೊಂಡು ಬರೆದೆ. ಕೊನೆಗೆ ಒಂದು ಪುಸ್ತಕ್ಕಗುವಷ್ಟಾಯಿತು. ಪ್ರಿಂಟ್‌ ಮಾಡಿಸಿದೆ. ಸುಮ್ಮನೆ ಮನೇಲಿ ಯಾಕೆ ಇಟ್ಟುಕೋಬೇಕು ಅನ್ಕೋತಿದ್ದೆ. ಅಷ್ಟರಲ್ಲಿ ಈ ಸ್ಪರ್ಧೆ ಏರ್ಪಡಿಸಿದ ಸುದ್ದಿ ಪತ್ರಿಕೇಲಿ ಬಂದಿತ್ತಲ್ಲ, ಅವರು ಕೇಳಿದ ವಿಳಾಸಕ್ಕೆ ಕಳಿಸಿದೆ. ಪ್ರಶಸ್ತಿ ಬಂತು” ಅಂದೆ. ನಾ ಹೇಳುತ್ತಿದ್ದುದನ್ನು ಕಿವಿಯಗಲಿಸಿ ಕೇಳುತ್ತಿದ್ದವ ಮತ್ತೂಂದು ಸೇಬು ಹಣ್ಣನ್ನು ತಿನ್ನುತ್ತ, “”ಈ ಪ್ರಶಸ್ತಿಗಳೇ ಹೀಗೆ ಸರ್‌, ಯಾರ ಯಾರಿಗೋ ಯಾವಾಗಂದ್ರ ಆವಾಗ ದೊಬಕ್ಕನೆ ಬಂದು ಬೀಳತಾವೆ. ಈಗೀಗ ನೊಬೆಲ್‌ ಬಹುಮಾನ ಕೂಡಾ ದುಡ್ಡು ಕೊಟ್ರೆ ಕರೆದು ಕೊಡತಾರಂತೆ” ಅಂದ. ನನಗೆ ಗಾಬರಿಯಾಯ್ತು ಅವನ ಮಾತ ಕೇಳಿ. ಅವಾಕ್ಕಾದೆ. ಮತ್ತೂಮ್ಮೆ ಕಂಗ್ರಾಟ್ಸ್‌ ಹೇಳಿ, “”ನಿಮ್ಮಿಂದ ಕನ್ನಡ ಸಾಹಿತ್ಯಕ್ಕೆ ಇನ್ನಷ್ಟು ಕೃತಿಗಳು ಬರಬೇಕು ಸಾರ್‌. ನೀವು ಕೂಡ ಮುಂದೆ ಬರಬೇಕು” ಅಂದ. ಮತ್ತೂಂದು ಸೇಬುಹಣ್ಣು ಕೈಯಲ್ಲಿ ಹಿಡಿದುಕೊಂಡು, “”ಮತ್ತೆ ನಾಳೆ ಬರಿ¤àನಿ ಸಾರ್‌” ಎಂದು ಹೇಳಿ ಹೊರಟು ಹೋದ.

ಮಧ್ಯಾಹ್ನ ನನ್ನ ತಂದೆಯ ಗೆಳೆಯರಿಬ್ಬರು ಬಂದರು. ಹೇಳಿಕೇಳಿ ಎಪ್ಪತ್ತೆçದರ ಆಸುಪಾಸಿನಲ್ಲಿದ್ದವರು. ಅವರಿಗೆ ಸರಿಯಾಗಿ ಕಣ್ಣು ಕಾಣಿಸದು, ಕಿವಿನೂ ಕೇಳದು. ನಾನು ನನ್ನ ರೂಮಿನಲ್ಲಿ ಯಾವುದೋ ಪುಸ್ತಕವೊಂದನ್ನು ಓದುತ್ತ ಕುಳಿತಿದ್ದೆ. ಬಂದವರೇ ನನ್ನ ಬಗೆಗೆ ಮಾತುಕತೆ ಶುರುಮಾಡಿದರು. ನಾನು ಅವರಿದ್ದಲ್ಲಿಯೇ ಹೋಗಬೇಕಾಗಿ ಬಂತು. ನಮ್ಮ ತಂದೆಗಿಂತ ಹಿರಿಯರಾದ ನಿಜಗುಣಿ ಸರ್‌, “”ನನ್ನ ನೋಡಿ  ಏನಪಾ… ಪುಸ್ತಕ ಬರದ ಪ್ರಶಸ್ತಿ ತಗೊಂದ ಸುದ್ದಿ ಪೇಪರದಾಗ ನೋಡಿದ್ವಿ ಖರೇ ಏನ?” ಕೇಳಿದರು. ನಾನು ಅಭಿಮಾನದಿಂದ ಅಂಗಿಯ ಕಾಲರ್‌ ಸರಿಮಾಡಿಕೊಳ್ಳುತ್ತ, “”ಹೌದ್ರಿ”  ಅಂದೆ.

“”ಸರಿಯಾಗಿ ಇಂಜಿನಿಯರೋ, ಡಾಕ್ಟರೋ ಓದಿದ್ದರ ವಿದೇಶದಾಗ ಸೆಟ್ಲ ಆಗತಿದ್ದಿ. ರಾತ್ರಿ-ಹಗಲಿ ಯಾರ ಯಾರೋ ಬರೆದ ಪುಸ್ತಕ ಓದಿ, ಅದರಿಂದ ತಲಿಕೆಟ್ಟು ನೀನೂ ಒಂದ ಪುಸ್ತಕ ಬರೆದಿ. ಮುಂದೆನಾತು? ನೀ ಬರೆದ್ದನ್ನು ಇನ್ನಾ$Âರಿಗೋ ಕಳಿಸಿದಿ. ಅದನ್ನ ಓದಿ ಅವರು ತಲಿಕೆಟ್ಟು ಸದ್ಯ ನಮ್ಮಿಂದ ತೊಲಗಲಿ ಅಂತ ಅದೊಂದ ಪ್ರಶಸ್ತಿ ನಿನಗ ಕೊಟ್ಟ ಕೈ ತೊಳಕೊಂಡರು. ಜೀವನದಲ್ಲಿ ಜಂಟಲ್‌ಮಾÂನ ಆಗಬೇಕಿತ್ತ. ನೀ ಜಸ್ಟ್‌ ಪೊಯೆಟ್ಟು, ನಾವೆಲಿಸ್ಟೊ ಅಲ್ಲ. ಜನರಿಗೆ ಮೊಬೈಲದೊಳಗಿನ ಮೆಸೆಜ್‌ ಓದೋಕೆ ಟೈಮಿಲ್ಲ. ಇನ್ನು ನಿನ್ನ ನೂರು ಪುಟದ ಪುಸ್ತಕ ಯಾವಾಗ ಓದು ತಾರೆ? ಹಾಂ! ಇದರಿಂದ ಪರಿಸರ ಹಾನಿ, ಅರಣ್ಯ ನಾಶ, ವಿದ್ಯುತ್‌ ವ್ಯರ್ಥ ವೆಚ್ಚ, ಇಂಕ್‌ ಖರ್ಚು, ಸಮಯ ಹಾಳು” ಅಂತಂದ‌ರು. ಅವರ ಮಾತು ಕೇಳಿ ಒಂದುಕ್ಷಣ ನನ್ನ ತಲೆ ಗಿರ್ರ ಅಂದಿತು. ಈ ಹಾಳಾದ ಮುದುಕರ ಹತ್ರ ಇನ್ನಷ್ಟು ಹೊತ್ತು ಕುಳಿತರೇ ತಲೆ ಚಿತ್ರಾನ್ನ ಆಗೋದರಲ್ಲಿ ಡೌಟೇ ಇಲ್ಲ ಅನಿಸಿತು. “”ಈಗ ಬಂದೆ” ಅಂತ ಹೇಳಿ ಅಲ್ಲಿಂದ ನನ್ನ ರೂಮ್‌ ಸೇರಿದೆ.

ಮರುದಿನ ಬೆಳಿಗ್ಗೆ ಪೇಪರ ತರಲು ಮನೆ ಪಕ್ಕದ ಸರ್ಕಲಿನ ಬುಕ್‌ ಸ್ಟಾಲಿಗೆ ಹೋದೆ. ನನ್ನ ವಿದ್ಯಾ ಗುರುಗಳಾದ ಗುರಸಿದ್ದಪ್ಪನವರು ಸಾರ್ವಜನಿಕ ಹಾಗೂ ಅತ್ಯಂತ ಜನ ನಿಬಿಡವಾದ ಆ ಸ್ಥಳದಲ್ಲಿ ನಿಂತು ನಿರಾತಂಕವಾಗಿ ಬೀಡಿ ಸೇದಿ ಹೊಗೆಯುಗುಳತ ನಿಂತಿದ್ದರು.
 
ಪಕ್ಕಾ ಇತಿಹಾಸಕರರಾದ ಅವರು ಅಂದಿನ ಇತಿಹಾಸಕ್ಕೂ ಇಂದಿನ ವರ್ತಮಾನಕ್ಕೂ ತುಲನೆಮಾಡಿ ಮಾತಾಡುವ ಕೆಟ್ಟ ಚಾಳಿ ಅವರದು. ಪ್ರತಿ ಮಾತಿಗೂ ಉದಾಹರಣೆ ಕೊಡುತ್ತಿದ್ದರು. ನಾನು ಅವರನ್ನು ಕಂಡು ಹೈಸ್ಕೂಲ್‌ ಹುಡುಗನಂತೆ ನಮ್ರವಾಗಿ “ನಮಸ್ತೇ ಸರಾ’ ಅಂದೆ. ಮೂಗಿನ ಮೇಲಿನ ಕನ್ನಡಕವನ್ನು ಮೇಲೇರಿಸಿಕೊಳ್ಳುತ ನನ್ನ ನೋಡಿ ಗುರುತು ಹಿಡಿದು ಕರೆದರು.

“”ಪಾಂಡುರಂಗನೇನೋ?” 
“”ಹೌದು ಸರ್‌!” 
“”ಪೇಪರಿನ್ಯಾಗ ನಿನ್ನ ಹೆಸರ ಬಂದಿತ್ತಂತ ಖರೇ ಏನೋ?”
“”ಹೌದು ಸರ್‌, ನಿನ್ನೆ ಬಂದಿತ್ತು”
“”ಕಳ್ಳತನ ಮಾಡಿದಿಯಾ ಬದ್ಮಾಶ್‌?”
“”ಅಯ್ಯೋ! ಇಲ್ಲ ಸಾರ್‌”
“”ಮತಾöಕೆ ನಿನ್ನ ಹೆಸರು ಪೇಪರಿನ್ಯಾಗ ಬಂತೋ?”
“”ನಾನೊಂದು ಪುಸ್ತಕ ಬರೆದಿದ್ದೆ ಸಾರ್‌, ಅದಕ್ಕೆ ಪ್ರಶಸ್ತಿ ಬಂತು. ಅದನ್ನು ಪೇಪರಿನಲ್ಲಿ ಹಾಕಿದ್ದಾರೆ ಸಾರ್‌” 
“”ಓಹೊ ಇಷ್ಟೇನಾ… ನಾ ಬೇರೆನೇ ಅಂದಕೊಂಡಿದ್ದೆ
 ಬಿಡು. ಸದ್ಯಾ ಅದಲ್ಲವಲ್ಲ” ಅಂದರು ಬೇಸರದಿಂದ.
“”ಸಾರ್‌, ನೀವೆನ ಅಂದುಕೊಂಡಿದ್ದೀರಿ?” ಗಾಬರಿಯಿಂದ ಕೇಳಿದೆ.

 “”ಅದೇ ಶ್ರೀನಿವಾಸನಗರದಲ್ಲಿ ಬ್ಯಾಂಕ್‌ ದರೋಡೆ ಆಗಿತ್ತಲ್ಲ ಆ ಕಳ್ಳರೆಲ್ಲ ಸಿಕ್ಕಿಬಿದ್ದಿದ್ದಾರಂತೆ ಅವರ ಹೆಸರು ಮತ್ತು ಪೊಟೊ ಪೇಪರಿನಲ್ಲಿ ಹಾಕಿದಾರಂತೆ- ಅಂದರು. ಅದಕ್ಕೆ ಅವರ ಜೊತೆ ನಿನ್ನದು ಬಂದಿದೆಯೆನೊ- ಅಂತ ಕೇಳಿದೆ. ಅಲ್ವೋ ಈ ಹಿಂದೆ ಸರಿಯಾಗಿ ಪುಸ್ತಕ ಓದಕ್ಕಾಗದೆ ಫೇಲಾಗಿದ್ದವ ನೀನು, ನೀ ಯಾಕೋ ಪುಸ್ತಕ ಬರೆದು ಇತಿಹಾಸ ನಿರ್ಮಾಣ ಮಾಡಕ್ಕೋದೆ? ಇತಿಹಾಸ ಬಲ್ಲವರು ಮಾತ್ರ ಇತಿಹಾಸ ನಿರ್ಮಿಸೋಕೆ ಸಾಧ್ಯ ಗೊತ್ತಾ ನಿನಗೆ?” ಅಂತಂದು ಮೂಗೇರಿಸಿಕೊಂಡರು. ನನಗೆ ಕೆಟ್ಟ ಕೋಪ ಬಂತು. ವಯಸ್ಸಾದ ಮೇಲೂ ಈ ಮೇಷ್ಟ್ರಿಗೆ ಬುದ್ಧಿ ಬಂದಿಲ್ಲವಲ್ಲ ಅಂತ ಮೈ-ಮನಸು ಕುದಿಯಿತು. ಕಲಿಸಿದ ಗುರುಗಳಲ್ಲವಾ ಅನ್ನುವ ಅನುಕಂಪಕ್ಕೆ ಸುಮ್ನೆ ಬಿಡಬೇಕಾಗಿದೆ, ಅಷ್ಟೆ. ಪೇಪರ ತೆಗೆದುಕೊಂಡು ಬಿರಬಿರನೆ ಮನೇಗೆ ಹೊರಟು ಬಂದೆ.ಇದಾದ ಮರುದಿನ ಬೆಳಿಗ್ಗೆ ಕಾಲೇಜಿಗೆ ಹೊರಟೆ. ದಿನಂಪ್ರತಿ ನನ್ನ ತರಗತಿಯಲಿ ಕಲಿಯುವ ವಿದ್ಯಾರ್ಥಿಗಳ ಗುಂಪು ನನ್ನ ಕಂಡು ಕೂಡಲೇ ಧಾವಿಸಿ ಬಳಿಬಂದರು.

“”ಕಂಗ್ರಾಟ್ಸ್‌ ಸರ್‌” ಅಂತ ಕೈ ಕುಲುಕಿದರು. “”ತುಂಬ ತಡವಾಗಿಯಾದರೂ ಸರಿ ನಿಮ್ಮನ್ನು ನಿಮ್ಮ ಸಾಹಿತ್ಯವನ್ನು ಗುರುತಿಸಿದರಲ್ಲ ಸರ್‌” ಅಂತ ಒಬ್ಬ ವಿದ್ಯಾರ್ಥಿ ಹೆಮ್ಮೆಯಿಂದ ನುಡಿದ.

“”ಹೌದಪ್ಪ ” ಅಂತ ನಾನು ತುಸು ಭಾವುಕನಾಗಿಯೆ ನುಡಿದೆ. ಮತ್ತೂಬ್ಬ , “”ಸರ್‌ಗೆ ಇದೇನ ಮಹಾ ಬಿಡ್ರೊ, ಅವರ ಪ್ರತಿಭೆಗೆ ಇದಕ್ಕಿಂತಲೂ ದೊಡ್ಡ ಪ್ರಶಸ್ತಿ ಬರಬೇಕಿತ್ತು”

“”ಹಾಗಲ್ಲ… ಬಂದುದನ್ನು…”

“”ಬಿಡಿ ಸಾರ್‌, ನಿಮ್ಮದು ದೊಡ್ಡ ಗುಣ. ನೀವು ಯಾವುದನ್ನೂ ಬಯಸದ ಸಾಧು ಜನ. ಈಗಿನ ಕಾಲದಲ್ಲಿ ನಿಷ್ಠಾವಂತರಿಗೆ ಬೆಲೆಯಿಲ್ಲ ಸಾರ್‌”””ಯಾಕಪ್ಪಾ ಏನಾಯ್ತು?” ಆತಂಕದಿಂದ ಕೇಳಿದೆ.

“”ನಿಮ್ಮನ್ನು ಇಲ್ಲಿಯವರೆಗೆ ಗುರುತಿಸದೇ ಇರೋದು ಅನ್ಯಾಯ ಅಲ್ವಾ ಸರ್‌?”

“”ಹೋಗ್ಲಿ ಬಿಡಿ, ಇವಾಗಲಾದ್ರು ಗುರುತಿಸಿ ನೀಡಿದರಲ್ಲ” ಅಂತ ನಾನೇ ಸಮಾಧಾನ ಹೇಳಹೊರಟೆ. ಹುಡುಗರಿಗೆ ನನ್ನ ಮೇಲಿರುವ ಅಭಿಮಾನ, ಭಕ್ತಿ, ಸಾತ್ತಿ$Ìಕ ಮಮತೆ ಕಾಳಜಿ ಕಂಡು ಬೆರಗಾಗಿ ಒಳಗೊಳಗೆ ಪುಳಕಿತನಾದೆ. ನನಗೆ ಆ ಪ್ರಶಸ್ತಿಗಿಂತಲೂ ಈ ಮಾತುಗಳೇ ತುಂಬಾ ಆಪ್ತವೆನಿಸಿದವು. ದೊಡ್ಡದಾಗಿ ಕಂಡವು. ಒಬ್ಬ ಹುಡುಗ ಮುಂದೆ ಬಂದು, “”ಸಾರ್‌, ನಮ್ಮ ಬೀದಿಲಿ ಗಣಪತಿ ಕೂಡ್ರಸತಿದಿ. ಒಂದ ಸಾವಿರ ರೂಪಾಯಿ ದೇಣಿಗೆ ಕೊಡಿ ಸಾರ್‌” ಅಂದ. ಆವಾಗಿನಿಂದ ರಂಜಿತವಾಗಿ ಹೊಗಳಿ ನನ್ನನು ಬಲೂನ ಮಾಡಿದ್ದು ಇದಕ್ಕೆ ಇರಬಹುದಾ,  ಅನಿಸಿತು.

“”ಅಷ್ಟೊಂದು ಯಾಕೆ, ನೂರು ರೂಪಾಯಿ ತಗೊಳ್ಳಿ?” ಅಂದೆ.

“”ನೂರ ರೂಪಾಯಿಗೆ ಒಂದ ಪಾಕೇಟ್‌ ಸಿಗರೇಟ ಬರಲ್ಲ ಸರ್‌” ಅಂದ. ನನಗೆ ರೇಗಿತು.

“”ಅಲ್ಲಯ್ಯ, ನೀವೇನು ತರೆಲà ಕೇಳತಿದಿರಿ ಅಂತ ಗೊತ್ತ ನಿಮಗೆ? ನಿಮ್ಮ ಬೀದಿಲಿ ಗಣಪತಿ ಕೂಡ್ರಿಸುವುದಕ್ಕೆ ನಾನು ಒಬ್ನೇ ಸಾವಿರ ರೂಪಾಯಿ ಕೊಡಬೇಕಾ? ನಿಮ್ಮ ಬೀದಿಯಲ್ಲೂ ಹಣ ಸಂಗ್ರಹಿಸಿ” ಅಂದೆ.

“”ಸಾರ್‌, ನಿಮಗೆ ಪ್ರಶಸ್ತಿ ಬಂದಿದೆ. ನಮ್ಮ ಬೀದಿಲಿ ಯಾರಿಗೂ ಬಂದಿಲ್ಲ”.

“”ಅದಕ್ಕೆ?”

“”ಪ್ರಶಸ್ತಿ ಜೊತೆ ನಿಮಗೆ ದುಡ್ಡು ಕೊಡತಾರಲ್ವಾ… ನೀವು ನಮಗೆ ಕೊಡಿ. ಅದರಲ್ಲಿನ ಒಂದ ಸಾವಿರ ರೂಪಾಯಿ ದೇವರಿಗೆ ಕೊಡಿ ಸಾರ್‌. ಮತ್ತೆ ಇಂತಹ ಪ್ರಶಸ್ತಿಗಳು ತುಂಬಾನೆ ಬರತಾವೇ ಮುಂದೆ”

“”ಬಾಯಿ ಮುಚಗೊಂಡ ಸುಮ್ನೆ ಹೋಗ್ರೊ ತರೆಲ ಮಾಡಬೇಡಿ, ಅಯೋಗ್ಯರಾ” ಅಂತ ದಬಾಯಿಸಿದೆ. ಅವರೊಳಗಿನ ಒಬ್ಬನಿಗೆ ರೇಗಿತು.

“”ಏನ್ಸಾರ್‌? ಹಿಂಗೆ ದಬಾಯಿಸ್ತಿರಾ? ಏನೋ ಪ್ರಶಸ್ತಿ ಬಂದಿದೆಯಲ್ಲ, ನಮ್ಮ ಮೇಷ್ಟ್ರು ಅಂತ ವಿಶ್‌ ಮಾಡೊಕೆ ಬಂದ್ರೆ ಹೀಗೆ ದಬಾಯಿಸೋದಾ? ನೊಬೆಲ್‌ ತಗೊಂಡವೆÅ, ಗಲ್ಲಿ ಗಲ್ಲಿ ತಿರಗಾಡತವೆÅ ಇನ್ನು ನಿಮಗೆ ಬಂದಿರೋ ಪುಟಗೋಸಿ ಪ್ರಶಸ್ತಿಗೆ ಈ ಜಂಬಾ ಬೇರೆ ಕೇಡು”- ಹೀಗೆ ನನಗೂ ಅವರಿಗೂ ತಲೆಬಿಸಿಯಾಗುವಂತೆ ಚರ್ಚೆ- ವಾಗ್ವಾದ ನಡೆದು ಕೊನೆಗೆ ಅವರೊಳಗಿನವ ಒಬ್ಬ ಮುಂದೆ ಬಂದು, “”ಇತ್ತೀಚೆಗೆ ಪ್ರಶಸ್ತಿಗಳ ಆಯ್ಕೆಯಲ್ಲಿ ಸರಿಯಾದ ಮಾನದಂಡವನ್ನು ಅನುಸರಿಸುತ್ತಿಲ್ಲ . ಪ್ರಶಸ್ತಿ ಬೆಲೆ ಗೊತ್ತಿಲ್ಲದವರೆಲ್ಲ ಪ್ರಶಸ್ತಿ ತಗೊತಿದಾರೆ. ಪಾಪ, ಒಳ್ಳೆ ಬರಹಗಾರರಿಗೆ ತುಂಬಾ ಅನ್ಯಾಯವಾಗುತ್ತಿದೆ. ಈ ವ್ಯವಸ್ಥೆ ವಿರುದ್ಧ ಹೋರಾಟ ಮಾಡಬೇಕು” ಎಂದ. “”ಹೌದು ಹೋರಾಟ ಮಾಡಬೇಕು” ಅಂತ ಉಳಿದವರು ಕೂಗತೊಡಗಿದರು.
ನಾನು ಬೆಪ್ಪನಾದೆ.

– ಬಸವಣ್ಣೆಪ್ಪ ಕಂಬಾರ

ಟಾಪ್ ನ್ಯೂಸ್

Kalaburagi-Acci

Kalaburagi: ಟಿಟಿ ಟಯರ್‌ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!

Jagadambika-Pal-(JPC)

Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Untitled-1

Kasaragod ಅಪರಾಧ ಸುದ್ದಿಗಳು: ವಿದ್ಯಾರ್ಥಿನಿಯರಿಗೆ ಕಿರುಕುಳ; ಕೇಸು ದಾಖಲು

Brahmavar

Brahmavar: ಆರೂರು; ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು

Kalaburagi-Acci

Kalaburagi: ಟಿಟಿ ಟಯರ್‌ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!

Jagadambika-Pal-(JPC)

Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.